Asianet Suvarna News Asianet Suvarna News

2020 ಗೆ ಈ ಸೀರೆಗಳು ನಿಮ್ಮ ವಾರ್ಡ್‌ರೋಬ್‌ ತುಂಬಲಿ!

‘ಈ ಹುಡುಗೀರ ಆಡೋದು ಕಂಡ್ರೆ ತಲೆ ಕೆಟ್ಟೋಗುತ್ತೆ ಕಣೋ, ವಾರದ ಮುಂಚೆ ಥೂ, ನಾನ್‌ ಸೀರೆ ಉಟ್ಕೊಳ್ಳಲ್ಲಾ, ಆಂಟಿ ಥರಾ ಅಂತಿದ್ಲು ನನ್ನ ಹುಡುಗಿ. ಈಗ ನೋಡಿದ್ರೆ, ಇಷ್ಟೆಲ್ಲ ಹಬ್ಬ ಬಂದು ಹೋಯ್ತು, ನೀನು ನಂಗೊಂದೂ ಸೀರೇನೇ ಕೊಡಿಸಿಲ್ಲ ಅಂತ ಕಂಪ್ಲೇಂಟ್‌ ಮಾಡ್ತಿದ್ದಾಳೆ. ಇವ್ಳ ಜೊತೆ ಏಗೋದು ಕಷ್ಟಇದೆ ಕಣೋ..’ ಅಂತ ಫ್ರೆಂಡ್‌ ಒಬ್ಬ ಒದ್ದಾಡ್ತಿದ್ದ. ಅವನ ಸಮಸ್ಯೆ ಹೆಚ್ಚಿನೆಲ್ಲ ಸಂಸಾರಿಗಳ ಕಂ ಬಾವೀ ಸಂಸಾರಿಗಳ ಸಮಸ್ಯೆಯೂ ಆಗಿರುವ ಕಾರಣ ಆ ಕ್ಷಣಕ್ಕೆ ನಗು ಬಂದರೂ ನಮ್‌ ಪರಿಸ್ಥಿತಿ ಗಂಭೀರ ಇದೆ ಅಂತ ಅರ್ಥ ಆಯ್ತು. ಅಷ್ಟೊತ್ತಿಗೆ ಸರಿಯಾಗಿ ಸೋನಂ ಕಪೂರ್‌ ಚೆಂದದೊಂದು ಸೀರೆಯಲ್ಲಿ ಕಣ್ಣಿಗೆ ಬೀಳ್ಬೇಕಾ! ನನ್ನ ಫ್ರೆಂಡೂ ಸೇರಿದಂತೆ, ಇಂಡಿಯಾ ದೇಶದ ಅಮಾಯಕ ಗಂಡ್‌ ಹೈಕ್ಳಿಗೆ ಹಾಗೂ ಚಾಲೂಕಿನ ಹೆಣ್‌ ಹುಡುಗೀರಿಗಾಗಿ ಈ ಲೇಖನ.

Type of saree every fashionista should have in wardrobe for 2020
Author
Bangalore, First Published Jan 16, 2020, 9:37 AM IST
  • Facebook
  • Twitter
  • Whatsapp

ನಿಶಾಂತ್‌ ಕಮ್ಮರಡಿ

ಸೋನಂ ಕಪೂರ್‌ ಉಟ್ಟದೇಶಭಕ್ತಿಯ ಸೀರೆ

ಸ್ವಾತಂತ್ರ್ಯ ದಿನಾಚರಣೆ ಕಳೆದು ನಾಲ್ಕು ತಿಂಗಳಾಯ್ತು, ಇನ್ನೇನು ದೇಶಭಕ್ತಿಯ ಸೀರೆ.. ಅಂತ ಗೊಣಗೋ ಹಾಗಿಲ್ಲ. ಏಕೆಂದರೆ ಇದು ನಮ್ಮೊಳಗೆ ಸದಾ ಜಾಗೃತವಾಗಿರಬೇಕಾದ ವಿಷ್ಯ. ಹಾಗಿದ್ರೂ ಸಮಾಧಾನ ಆಗಿಲ್ಲ ಅಂದರೆ ಈ ತಿಂಗಳ ಕೊನೆಯಲ್ಲಿ ಗಣರಾಜ್ಯೋತ್ಸವ ಬರುತ್ತೆ, ಆ ದಿನದ ನೆವದಲ್ಲಿ ಈ ಸೀರೆ ಪ್ರಿಫರ್‌ ಮಾಡಬಹುದು. ಇಷ್ಟೆಲ್ಲ ಹೇಳೋದಕ್ಕೆ ಕಾರಣ ಸೋನಂ ಕಪೂರ್‌. ಹೌದು, ಇವರ ಇನ್ಸಾ$್ಟಗೆ ವಿಸಿಟ್‌ ಮಾಡಿದರೆ ಕ್ರೀಮ್‌ ಬಣ್ಣದ ಸಣ್ಣ ಸಣ್ಣ ತೆಳು ಎಂಬ್ರಾಯಿಡರಿ ಇರುವ ಲಿನಿನ್‌ ಸೀರೆ ಕಣ್ಣಿಗೆ ಬೀಳುತ್ತೆ. ಜೊತೆಗೆ ‘ನನ್ನ ಧರ್ಮ ನಿಂತಿರೋದು ಸತ್ಯ ಮತ್ತು ಅಹಿಂಸೆಯ ತಳಹದಿಯ ಮೇಲೆ..’ ಎಂಬ ಗಾಂಧೀಜಿ ಅವರ ವಾಕ್ಯ. ಗಂಭೀರ ನಿಲುವಿನ ಭಾರತೀಯ ನಾರಿಯಾಗಿ ಸೋನಂ ಹೊರ ಹೊಮ್ಮಿದ್ದಾರೆ. ಈ ಸೀರೆಗೊಂದು ಗಾಂಭೀರ್ಯ ಇದೆ. ಇದರ ಬ್ಲೌಸ್‌ ಓವರ್‌ ಕೋಟ್‌ ಡಿಸೈನ್‌ನಲ್ಲಿದೆ. ದೊಡ್ಡ ಬಟನ್‌ಗಳ ಆ ಬ್ಲೌಸ್‌ ಸೀರೆಯ ಗಾಂಭೀರ್ಯ ಹೆಚ್ಚಿಸೋ ಹಾಗಿದೆ. ನಿಮ್ಮನ್ನು ನೀವು ಗಂಭೀರ ಸ್ವಭಾವದ ಎಲಿಗೆಂಟ್‌ ಲುಕ್‌ನಲ್ಲಿ ನೋಡಬೇಕಾದರೆ ಈ ಸೀರೆ ಆಯ್ಕೆ ಮಾಡಬಹುದು. ಕಾಟನ್‌, ಲಿನಿನ್‌ ಸೀರೆಗೆ ಈ ಬಗೆಯ ಬ್ಲೌಸ್‌ ಡಿಸೈನ್‌ ಚೆನ್ನಾಗಿರುತ್ತೆ.

ಹಬ್ಬಕ್ಕೆ ಹೊಸ ಸೀರೆ ಬಂತು, ಬ್ಲೌಸ್‌ ಕಥೆ ಏನು?

ಕೆಂಪು ಗುಲಾಬಿಯುಟ್ಟದೀಪಿಕಾ

ದೀಪಿಕಾ ಪಡುಕೋಣೆ 2020 ಗೆ ಫೆä್ಲೕರಲ್‌ ಟಚ್‌ ಕೊಟ್ಟಿದ್ದಾರೆ. ದೀಪಿಕಾ ಉಟ್ಟಈ ಸೀರೆ ಡಿಸೈನ್‌ ಮಾಡಿರೋದು ನಂ.1 ಡಿಸೈನರ್‌ ಸಭ್ಯಸಾಚಿ ಮುಖರ್ಜಿ. ದೊಡ್ಡವಾದ ಅಗಲವಾದ ಕೆಂಪು ಗುಲಾಬಿ ಹೂವು ಸೀರೆಯುದ್ದಕ್ಕೂ ಅಲ್ಲಲ್ಲಿ ಇವೆ. ಉಳಿದಂತೆ ಗುಲಾಬಿಯ ರಂಗು ಸೀರೆಯನ್ನು ತುಂಬಿದೆ. ಸೀರೆಯ ಡಿಸೈನ್‌ನಲ್ಲಿ ಕಂಡೂ ಕಾಣದಂತೆ ಒಂದು ರಾಯಲ್‌ ಲುಕ್‌ ಇದೆ. ನೆಕ್‌ ಲೈನ್‌ ಬ್ಲೌಸ್‌ ಜೊತೆಗೆ ಈ ಸೀರೆ ಕಾಂಬಿನೇಶನ್‌ ಸಖತ್‌. ಆರು ಮೊಳದ ಈ ಸೀರೆಗೆ ಎಥ್ನಿಕ್‌ ಯಿಯರ್‌ ರಿಂಗ್‌ಗಳಿವೆ. ಬನ್‌ ಮಾಡಿದ ಕೂದಲಲ್ಲೂ ಗುಲಾಬಿ ನಗುತ್ತಿವೆ. ಕೂದಲು ಬನ್‌ ಮಾಡಿದೆ. ಬೆನ್ನು ಬೆತ್ತಲಾಗಿದೆ. ಚೆಲುವು ಮೈದುಂಬಿದೆ.

ಫ್ಯಾಷನ್ ಅಂತ ಸೀರೆಗೆ ಬಿಕಿನಿ ಬ್ಲೌಸ್ ಬೇಕಾ?

ಬಾಲಿವುಡ್‌ ಬೆಳಗುತ್ತಿರುವ ಶಿಮ್ಮರಿ ಸೀರೆ

ಮನೀಶ್‌ ಮಲ್ಹೋತ್ರ ಡಿಸೈನ್‌ ಮಾಡಿರೋ ಶಿಮ್ಮರಿ ಸೀರೆಗಳು ಪಾರ್ಟಿಗೆ ಹೇಳಿ ಮಾಡಿಸಿದ ಹಾಗಿವೆ. ಮೈಯೆಲ್ಲ ಮಿರ ಮಿರ ಮಿಂಚುವ, ಮೀನಿನಂತೆ ಜಾರುವ, ಹೊಳೆಯುವ ಮೈಮಾಟವನ್ನು ಬಿಂದಾಸ್‌ ಆಗಿ ಕಾಣುವಂತೆ ಮಾಡುವ ಮಾಡರ್ನ್‌ ಸೀರೆಗಳಿವು. ಇದರ ಬ್ಲೌಸ್‌ ಡಿಸೈನ್‌ ಸಖತ್‌ ಬೋಲ್ಡ್‌. 2020 ಯಲ್ಲಿ ಈ ಬಗೆಯ ಸೀರೆಗಳು ನಿಮ್ಮ ವಾರ್ಡ್‌ರೋಬ್‌ನಲ್ಲಿರಲಿ. ಬೋಲ್ಡ್‌ ಲುಕ್‌ನ ಸಿಂಗಲ್‌ ಸ್ಟೆ್ರೖಪ್‌ ಬ್ಲೌಸ್‌ ತೊಟ್ಟರೆ ಚೆಂದ. ಕೃತಿ ಸನೂನ್‌, ಜಾನ್ವಿ ಕಪೂರ್‌, ಕರೀನಾ ಕಪೂರ್‌ ಈ ಸೀರೆ ಉಟ್ಟು ಮಿಂಚಿದ್ದೇ ಮಿಂಚಿದ್ದು. ಇತರೇ ಸೆಲೆಬ್ರಿಟಿಗಳೂ ಇದಕ್ಕೆ ಫಿದಾ ಆಗಿದ್ದಾರೆ.

ಸೀರೆ ಉಟ್ಟರೆ ನಾರಿ, ಮಂದಿ ಹೇಳಬೇಕು ಅಬ್ಬಾ ರೀ

ಇದರ ಜೊತೆಗೆ ಬೆಲ್ಟ್‌ ಬ್ಲೌಸ್‌ ವಿನ್ಯಾಸ ಇರುವ ರಫೆಲ್‌ ಸೀರೆಯನ್ನ ಮಿಸ್‌ ಮಾಡೋ ಹಾಗಿಲ್ಲ. ಈ ಸೀರೆಗಳ ಬಗ್ಗೆ 2019ನಲ್ಲೇ ಸಾಕಷ್ಟುಬಾರಿ ಬರೆದಾಗಿದೆ. ಈಗಂತೂ ಚಿಕ್ಕ ಚಿಕ್ಕ ಶಾಪ್‌ಗಳಲ್ಲೂ ರಫೆಲ್‌ ಸೀರೆ ಸಿಗುತ್ತೆ. ಜೊತೆಗೆ ನೆಟ್‌ ಸೀರೆಗಳು, ವೆಲ್ವೆಟ್‌ ಕಾಂಬಿನೇಶನ್‌ ಇರೋ ಸೀರೆಗಳ ಟ್ರೆಂಡ್‌ ಮುಂದುವರಿದಿದೆ.

Follow Us:
Download App:
  • android
  • ios