ಸೌಂದರ್ಯ ಹೆಚ್ಚಿಸುತ್ತೆ, ಕಾನ್ಫೆಡನ್ಸ್ ಕೊಡುತ್ತೆ ಅನ್ನೋ ಕಾರಣಕ್ಕೆ ಹೈ ಹೀಲ್ಸ್ ಧರಿಸೋ ಮುನ್ನ!
ಫ್ಯಾಷನ್ ದಿನ ದಿನಕ್ಕೂ ಬದಲಾಗ್ತಿರುತ್ತದೆ. ಹೈ ಹೀಲ್ಸ್ ಕೂಡ ಒಂದು ಫ್ಯಾಷನ್. ಮಹಿಳೆಯರು ಇದ್ರಿಂದ ಹೊರ ಬರಲು ಸಾಧ್ಯವಿಲ್ಲ. ಅನಿವಾರ್ಯ ಎಂದಾಗ ಮಹಿಳೆಯರು ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
ಹೈ ಹೀಲ್ಸ್ ಧರಿಸೋದು ಈಗ ಫ್ಯಾಷನ್. ಸಭೆ, ಪಾರ್ಟಿಗಳಿಗೆ ಮಾತ್ರವಲ್ಲ ನಿತ್ಯ ಅನೇಕ ಮಹಿಳೆಯರು ಹೈ ಹೀಲ್ಸ್ ಧರಿಸ್ತಾರೆ. ಇದು ಮಹಿಳೆಯರ ನೋಟವನ್ನು ಇನ್ನಷ್ಟು ಆಕರ್ಷಕಗೊಳಿಸುತ್ತದೆ. ಕಚೇರಿಗೆ ಹೋಗುವ ಅನೇಕ ಮಹಿಳೆಯರು ಪ್ರತಿ ದಿನ ಹೀಲ್ಸ್ ಧರಿಸೋದು ಮಾಮೂಲಿಯಾಗಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ನಾನಾ ರೀತಿಯ ಹೈ ಹೀಲ್ಸ್ ಗಳನ್ನು ನೀವು ನೋಡ್ಬಹುದು. ಆದ್ರೆ ಮಹಿಳೆ ನೋಟ ಹೆಚ್ಚಿಸುವ ಈ ಹೈ ಹೀಲ್ಸ್ ಆರೋಗ್ಯವನ್ನು ಹಾಳು ಮಾಡುತ್ತದೆ. ಈ ವಿಷ್ಯ ಬಹುತೇಕ ಮಹಿಳೆಯರಿಗೆ ತಿಳಿದಿದೆ. ಆದ್ರೆ ಫ್ಯಾಷನ್ ಗುಂಗಿನಲ್ಲಿ ಆರೋಗ್ಯ ಮರೆಯುತ್ತಿದ್ದಾರೆ.
ಹೈ ಹೀಲ್ಸ್ (High Heels) ಹೇಗೆ ಆರೋಗ್ಯ (Health) ದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಅನೇಕ ಸಮೀಕ್ಷೆ (Survey) ಗಳು ನಡೆದಿವೆ. ಸಮೀಕ್ಷೆ ಪ್ರಕಾರ, ಹೈ ಹೀಲ್ಸ್ ಧರಿಸುವ ಶೇಕಡಾ 90ರಷ್ಟು ಮಹಿಳೆಯರು ಮೊಣಕಾಲು, ಸೊಂಟ, ಭುಜ ಮತ್ತು ಕೀಲು ನೋವಿ (Pain) ನಿಂದ ಬಳಲುತ್ತಾರಂತೆ. ಹೈ ಹೀಲ್ಸ್ ಧರಿಸುವುದ್ರಿಂದ ಕೀಲು ನೋವು, ನರಗಳ ಹಿಗ್ಗುವಿಕೆ, ಸೊಂಟದ ಸುತ್ತ ಕೊಬ್ಬು ಹೆಚ್ಚಾಗುವ ಸಾಧ್ಯತೆಯಿರುತ್ತದೆ.
ಸ್ಪರ್ಮ್, ಪಿರಿಯಡ್ಸ್ ರಕ್ತದಿಂದಲೂ ಫೇಶಿಯಲ್… ಸುಂದರವಾಗಿ ಕಾಣಲು ಇವೆಲ್ಲಾ ಮಾಡ್ತಾರಾ ಜನ?
ಚಿಕ್ಕ ವಯಸ್ಸಿನಲ್ಲಿಯೇ ಹೈ ಹೀಲ್ಸ್ ಧರಿಸಿದ್ದರಿಂದ ಮೊಣಕಾಲು ಚಿಪ್ಪು ಬದಲಿಸದ ಪ್ರಕರಣಗಳು ಸಾಕಷ್ಟಿವೆ. ಸಮೀಕ್ಷೆ ಪ್ರಕಾರ, 10 ರಲ್ಲಿ ಒಬ್ಬ ಮಹಿಳೆ ವಾರಕ್ಕೆ ಕನಿಷ್ಠ 3 ಬಾರಿ ಹೈ ಹೀಲ್ಸ್ ಧರಿಸುತ್ತಾಳಂತೆ. ಆಕೆಯ ದೇಹದ ಆಕಾರ ಬದಲಾಗುತ್ತದೆ. ಪಾದ ಮತ್ತು ಕಾಲು ನೋವು, ಮೊಣಕಾಲು ನೋವು ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ. ಹೈ ಹೀಲ್ಸ್ ಧರಿಸುವುದು ಅನಿವಾರ್ಯ ಎನ್ನುವ ಮಹಿಳೆಯರು ಇದನ್ನು ಖರೀದಿ ಮಾಡುವ ಮುನ್ನ ಕೆಲವೊಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಕಡಿಮೆ ಎತ್ತರದ ಹೀಲ್ಸ್ ಗೆ ಆದ್ಯತೆ ನೀಡಿ : ಹೈ ಹೀಲ್ಸ್ ಧರಿಸಲೇಬೇಕು ಎನ್ನುವ ಮಹಿಳೆಯರು ಕಡಿಮೆ ಎತ್ತರದ ಹೀಲ್ಸ್ ಬಳಸಿ. ನೀವು ಒಂದರಿಂದ ಒಂದುವರೆ ಇಂಚ್ಚು ಎತ್ತರದ ಹೀಲ್ಸ್ ಧರಿಸಿ. ಇದ್ರಿಂದ ಹೆಚ್ಚು ತೊಂದರೆ ನಿಮ್ಮನ್ನು ಕಾಡುವುದಿಲ್ಲ. ಆದರೆ ನೀವು ನಾಲ್ಕರಿಂದ ಐದು ಇಂಚು ಎತ್ತರದ ಹೀಲ್ಸ್ ಧರಿಸಿದರೆ ಸಮಸ್ಯೆ ಖಂಡಿತ ನಿಮ್ಮನ್ನು ಕಾಡುತ್ತದೆ. ನೀವು ಅಪರೂಪಕ್ಕೆ ಅಪರೂಪ ಎನ್ನುವ ಸಂದರ್ಭದಲ್ಲಿ ಮಾತ್ರ ನಾಲ್ಕರಿಂದ ಐದು ಇಂಚಿನ ಹೀಲ್ಸ್ ಧರಿಸಿ.
ಹೀಲ್ಸ್ ಯಾವಾಗ ಧರಿಸಬೇಕು ಗೊತ್ತಾ? : ಪ್ರತಿ ದಿನ ಕಚೇರಿಗೆ ಹೋಗುವಾಗ ನೀವು ಹೀಲ್ಸ್ ಧರಿಸುವ ಅಗತ್ಯವಿಲ್ಲ. ಹಾಗೆಯೇ ಶಾಪಿಂಗ್ ಗೆ ಹೋಗುವ ಸಂದರ್ಭದಲ್ಲಿಯೂ ನೀವು ಹೀಲ್ಸ್ ಧರಿಸಬೇಡಿ. ಕಡಿಮೆ ತಿರುಗಾಟದ ಸಮಯದಲ್ಲಿ ಹೀಲ್ಸ್ ಧರಿಸಿ. ಪಾರ್ಟಿ, ಮದುವೆ ಸಮಾರಂಭದಲ್ಲಿ ಮಾತ್ರ ಹೀಲ್ಸ್ ಆಯ್ಕೆ ಮಾಡಿಕೊಳ್ಳಿ. ತುಂಬಾ ನಡೆದಾಡಬೇಕಾದ ಸ್ಥಳಗಳಲ್ಲಿ ನೀವು ಹೀಲ್ಸ್ ಧರಿಸುವ ಸಾಹಸ ಮಾಡ್ಬೇಡಿ.
ಪೆನ್ಸಿಲ್ ಹೀಲ್ಸ್ ಪಾದಗಳ ಮೇಲೆ ದೇಹದ ಎಲ್ಲ ತೂಕ ಬೀಳುವಂತೆ ಮಾಡುತ್ತದೆ. ಇದು ಸೊಂಟದ ನೋವನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ನೀವು ಅತಿ ಕಡಿಮೆ ಸಂದರ್ಭದಲ್ಲಿ ಹೀಲ್ಸ್ ಧರಿಸೋದು ಒಳ್ಳೆಯದು. ಕಚೇರಿಗೆ ಪ್ರತಿ ದಿನ ಹೀಲ್ಸ್ ಹಾಕಿಕೊಂಡು ಹೋಗುವವರು ನೀವಾಗಿದ್ದರೆ ದಿನಪೂರ್ತಿ ಅದ್ರಲ್ಲಿ ಇರಬೇಡಿ. ಸ್ವಲ್ಪ ಸಮಯ ಹೀಲ್ಸ್ ತೆಗೆದಿಡಿ.
ಫ್ಯಾಷನ್‌ಗೆ ತಕ್ಕಂತೆ ಅಪ್‌ಡೇಟ್ ಆದ್ರೆ ಅರ್ನ್ ಮಾಡಬಹುದು ನೋಡಿ!
ಹೀಲ್ಸ್ ಖರೀದಿಸುವಾಗ ನಿಮಗೆ ಅದು ಆರಾಮದಾಯಕವಾಗಿದೆಯೇ ಎಂಬುದನ್ನು ಪರೀಕ್ಷಿಸಿ. ನಿಮ್ಮ ಕಾಲಿಗೆ ಹೀಲ್ಸ್ ಸುಂದರವಾಗಿ ಕಾಣ್ತಿದೆ ಎನ್ನುವ ಕಾರಣಕ್ಕೆ ಖರೀದಿ ಮಾಡ್ಬೇಡಿ. ಬ್ರ್ಯಾಂಡ್ ಹೀಲ್ಸ್ ಧರಿಸಿದ್ರೆ ಕಾಲು ನೋವಾಗುವುದಿಲ್ಲ ಎನ್ನುವುದು ಸುಳ್ಳು. ಹೀಲ್ಸ್ ಧರಿಸಿದ್ರೆ ಕಾಲು ನೋವು ಬರ್ತಿದೆ ಎನ್ನುವವರು ಮತ್ತೆ ಮತ್ತೆ ಅದನ್ನು ಧರಿಸುವ ಸಹವಾಸಕ್ಕೆ ಹೋಗ್ಬೇಡಿ. ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ.