Fashion Trend : ಸ್ಟೈಲಿಶ್ ಕಾಣೋ ಆತುರದಲ್ಲಿ ಏನೇನೋ ಯಡವಟ್ಟು ಮಾಡ್ಕೋಬೇಡಿ!

ಫ್ಯಾಷನ್ ಗೆ ತಕ್ಕಂತೆ ನಾವು ಬದಲಾಗ್ಬೇಕು ನಿಜ. ಹಾಗಂತ ಎಲ್ಲ ಫ್ಯಾಷನ್ ನಾವು ಟ್ರೈ ಮಾಡೋಕೆ ಹೋದ್ರೆ ತೊಂದ್ರೆ ಆಗ್ಬಹುದು. ಇರೋ ಸುಂದರ ಲುಕ್ ಹಾಳಾಗ್ಬಹುದು.  ಹಾಗಾಗಿ ಫ್ಯಾಷನ್ ಮಾಡೋ ಮೊದಲು ಅದ್ರ ಬಗ್ಗೆ ತಿಳಿಯೋದು ಮುಖ್ಯ. 
 

These Fashion Mistakes Can Spoil Your Entire Personality

ಗಂಟೆ, ದಿನ, ಋತು ಬದಲಾದಂತೆ ಫ್ಯಾಷನ್ ಕೂಡ ಬದಲಾಗ್ತಿರುತ್ತದೆ. ಈಗಿದ್ದ ಫ್ಯಾಷನ್ ನಾಳೆ ಇರುತ್ತೆ ಎನ್ನಲು ಸಾಧ್ಯವಿಲ್ಲ. ಯಾವಾಗ ಯಾವ ಫ್ಯಾಷನ್ ಕೂಡ ಟ್ರೆಂಡ್ ಆಗ್ಬಹುದು. ಯುವಜನತೆಗೆ ಫ್ಯಾಷನ್ ಬಗ್ಗೆ ಆಸಕ್ತಿ ಹೆಚ್ಚು. ಅದ್ರಲ್ಲೂ ಹುಡುಗಿಯರು ಹೊಸ ಫ್ಯಾಷನ್ ಮೇಲೆ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಹೊಸ ಫ್ಯಾಷನ್ ಬರ್ತಿದ್ದಂತೆ ಅದನ್ನು ಫಾಲೋ ಮಾಡಲು ನೋಡ್ತಾರೆ. ಅನೇಕ ಬಾರಿ ಫ್ಯಾಷನ್ ಬಗ್ಗೆ ಸರಿಯಾದ ಮಾಹಿತಿ ಇರೋದಿಲ್ಲ. ಅಲ್ಪಸ್ವಲ್ಪ ತಿಳಿದುಕೊಂಡು ಪ್ರಯತ್ನಕ್ಕೆ ಕೈ ಹಾಕಿ ಯಡವಟ್ಟು ಮಾಡಿಕೊಳ್ತಾರೆ. ಇದ್ರಿಂದಾಗಿ ಅವರ ಲುಕ್ ಸಂಪೂರ್ಣ ಹಾಳಾಗುತ್ತದೆ. ಫ್ಯಾಷನ್ ಫಾಲೋ ಮಾಡ್ತೇನೆ ಎನ್ನುವವರು ಅದಕ್ಕೆ ಸಂಬಂಧಿಸಿದ ಕೆಲ ಸಂಗತಿಯನ್ನು ಅವಶ್ಯಕವಾಗಿ ತಿಳಿದಿರಬೇಕು. ಆಗ ಹೊಸ ಟ್ರೆಂಡ್ ಗೆ ಹೊಂದಿಕೊಳ್ಳೋದು ಸುಲಭ. ಇಂದು ಫ್ಯಾಷನ್ ಅನುಸರಿಸುವಾಗ ಯಾವ ತಪ್ಪು ಮಾಡ್ಬಾರದು ಎಂಬುದನ್ನು ಹೇಳ್ತೇವೆ.

ಆ್ಯಕ್ಸಸರಿಸ್ (Accessories) : ನಾವು ಧರಿಸುವ ಬಟ್ಟೆ (Clothes) ಮಾತ್ರವಲ್ಲ ಅದಕ್ಕೆ ತಕ್ಕಂತೆ ನಾವು ಧರಿಸುವ ಕಿವಿಯೋಲೆ, ಬಳೆ, ಚಪ್ಪಲಿ, ಸರ ಎಲ್ಲವೂ ಇಲ್ಲಿ ಮಹತ್ವ ಪಡೆಯುತ್ತದೆ. ಆದ್ರೆ ಕೆಲವರು ಬಟ್ಟೆಗೆ ಮಾತ್ರ ಗಮನ ನೀಡ್ತಾರೆ. ಯಾವುದೋ ಡ್ರೆಸ್ ಗೆ ಇನ್ಯಾವುದೋ ಎಕ್ಸಸರಿಸ್ ಹಾಕಿದ್ರೆ ಅದು ಲುಕ್ ಹಾಳು ಮಾಡುತ್ತದೆ. ಸಿಲಿವರ್ ಡ್ರೆಸ್ ಗೆ ಗೋಲ್ಡ್ ಕಲರ್ ಎಕ್ಸಸರಿಸ್ ಹಾಕಿದ್ರೆ ನಿಮ್ಮ ಸೌಂದರ್ಯ ಹಾಳಾದಂತೆ. ಹಾಗಾಗಿ ಯಾವ ಡ್ರೆಸ್ ಗೆ ಯಾವ ಎಕ್ಸಸರಿಸ್ ಬಳಸ್ಬೇಕು ಎಂಬುದನ್ನು ತಿಳಿದಿರಿ. ಇದೇ ಎಂಬ ಕಾರಣಕ್ಕೆ ಯಾವ್ದ್ಯಾವ್ದೋ ಹಾಕ್ಬೇಡಿ.

ಕೊಳಕಾದ ಕನ್ನಡಕ ಹೀಗೆ ಕ್ಲೀನ್ ಮಾಡೋದು ಸುಲಭ

ಬಣ್ಣ : ಕೆಲವೊಮ್ಮೆ ಒಂದೊಂದು ಕಲರ್ (Color) ಟ್ರೆಂಡ್ ಮಾಡ್ತಿರುತ್ತದೆ. ಎಲ್ಲರು ಧರಿಸ್ತಾರೆ ಎನ್ನುವ ಕಾರಣಕ್ಕೆ ನಿಮಗೆ ಇಷ್ಟವಿಲ್ಲ ಅಥವಾ ನಿಮಗೆ ಹೊಂದಿಕೆಯಾಗ್ತಿಲ್ಲವೆಂದಾದ್ರೂ ಆ ಬಣ್ಣದ ಬಟ್ಟೆ ಧರಿಸಬೇಕಾಗಿಲ್ಲ. ನೀವು ಧರಿಸುವ ಬಟ್ಟೆಯಲ್ಲಿ ನೀವೆಷ್ಟು ಆರಾಮವಾಗಿರ್ತೀರಿ ಎನ್ನುವುದು ಮುಖ್ಯ. ಹಾಗೆ ಇದೇ ನಿಮ್ಮ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. 

ಬ್ರಾ ಸ್ಟ್ರಾಪ್ : ನೀವೆಷ್ಟು ದುಬಾರಿ ಡ್ರೆಸ್ ಧರಿಸಿರಿ, ನೀವು ಸಣ್ಣ ಪುಟ್ಟ ವಿಷ್ಯದಲ್ಲಿ ನಿರ್ಲಕ್ಷ್ಯ ಮಾಡಿದ್ರೆ ನಿಮ್ಮ ಸೌಂದರ್ಯ ಹಾಳಾದಂತೆ. ಇದ್ರಲ್ಲಿ ಬ್ರಾ ಕೂಡ ಒಂದು. ಸರಿಯಾದ ಬ್ರಾ ಆಯ್ಕೆ ಮಾಡಿಕೊಳ್ಳಬೇಕು. ಹಾಗೆ ಬ್ರಾ ಸ್ಟ್ರಾಪ್  ಕಾಣದಂತೆ ನೋಡಿಕೊಳ್ಳಬೇಕು. ಪಾರದರ್ಶಕ ಡ್ರೆಸ್ ನಲ್ಲಿ ಬ್ರಾ ಸ್ಟ್ರಾಪ್ ಕಂಡ್ರೆ ಅದು ನಿಮ್ಮ ಅಂದ ಹಾಳು ಮಾಡುತ್ತದೆ. ಹಾಗೆಯೇ ಒಳ ಉಡುಪು. ದಪ್ಪ ಎಲಾಸ್ಟಿಕ್ ಉಳ ಉಡುಪು ಅನೇಕ ಬಾರಿ ನಿಮ್ಮ ಡ್ರೆಸ್ ಗೆ ಬ್ಯಾಡ್ ಲುಕ್ ನೀಡುತ್ತದೆ. 

ಬ್ಲೌಸ್ (Blouse) : ಮಾಡೆಲ್ ಗಳು ಚೆಂದದ, ಸ್ಲಿವ್ ಲೆಸ್ ಬ್ಲೌಸ್ ಧರಿಸ್ತಾರೆ ಅಂತಾ ನೀವು ಪ್ರಯತ್ನಕ್ಕೆ ಹೋಗ್ಬೇಡಿ. ನಿಮಗೆ ಅಭ್ಯಾಸವಿಲ್ಲವೆಂದ್ರೆ ಈ ಬ್ಲೌಸ್  ನಿಮ್ಮ ಲುಕ್ ಹಾಳ್ಮಾಡುತ್ತೆ.

ಬಟ್ಟೆ (Clothes) : ಡ್ರೆಸ್ ವಿಷ್ಯದಲ್ಲೂ ಇದು ಸತ್ಯ. ಸಾರ್ವಜನಿಕ ಸ್ಥಳದಲ್ಲಿ ಮುಜುಗರ ತರಿಸುವ ಅಥವಾ ನಿಮಗೆ ಅಭ್ಯಾಸವಿಲ್ಲದ ಡ್ರೆಸ್ ಧರಿಸುವ ಪ್ರಯತ್ನ ಬೇಡ. ಕೆಲವರಿಗೆ ಶಾರ್ಟ್ ಸ್ಕರ್ಟ್ ಧರಿಸಿ ಅಭ್ಯಾಸವಿರುವುದಿಲ್ಲ. ಫ್ಯಾಷನ್ ಹೆಸರಿನಲ್ಲಿ ಈ ಡ್ರೆಸ್ ಧರಿಸಿ ಮುಜುಗರಕ್ಕೊಳಗಾಗ್ತಾರೆ. ಗಮನ ಪೂರ್ತಿ ಡ್ರೆಸ್ ಮೇಲಿರುತ್ತದೆ. 

ಲಿಕ್ವಿಡ್ ಲಿಪ್ ಸ್ಟಿಕ್ ಹಚ್ಚುವಾಗ ಈ ಮಿಸ್ಟೇಕ್ ಮಾಡ್ಬೇಡಿ

ಹೈ ಹೀಲ್ಸ್ (Heels) :  ಹೈ ಹೀಲ್ಸ್ ಲುಕ್ ಹೆಚ್ಚು ಮಾಡುತ್ತೆ ಎಂದು ಕೆಲ ಹುಡುಗಿರುವ ಅಂದುಕೊಂಡಿದ್ದಾರೆ. ಅದು ತಪ್ಪು. ಡ್ರೆಸ್ ಗೆ ಹೊಂದುವ ಚಪ್ಪಲಿಯನ್ನು ನೀವು ಧರಿಸ್ಬೇಕು. ಅಭ್ಯಾಸವಿಲ್ಲದವರು ಹೀಲ್ಸ್ ಧರಿಸಿ ಬಿದ್ರೆ ಎಲ್ಲರ ಮುಂದೆ ಅವಮಾನವಾಗೋದು ನಿಮಗೆ. 

Latest Videos
Follow Us:
Download App:
  • android
  • ios