Asianet Suvarna News Asianet Suvarna News

ಕೊಳಕಾದ ಕನ್ನಡಕ ಹೀಗೆ ಕ್ಲೀನ್ ಮಾಡೋದು ಸುಲಭ

ಕನ್ನಡ ಧರಿಸಿದ್ಮೇಲೆ ಅದ್ರ ಕ್ಲೀನಿಂಗ್ ಬಗ್ಗೆಯೂ ಗಮನ ನೀಡ್ಬೇಕು. ಧೂಳಿನಲ್ಲಿರುವ ಜನರು ಪದೇ ಪದೇ ಕನ್ನಡಕದ ಗ್ಲಾಸ್ ಸ್ವಚ್ಛಗೊಳಿಸ್ತಾರೆ. ಕೆಲವೊಮ್ಮೆ ಅದ್ರ ಕಲೆ ಎಷ್ಟು ಉಜ್ಜಿದ್ರೂ ಹೋಗೋದಿಲ್ಲ. ಹಾಗಿರುವಾಗ ಸುಲಭ ಕ್ಲೀನಿಂಗ್ ಟ್ರಿಕ್ಸ್ ಟ್ರೈ ಮಾಡ್ಬಹುದು.
 

How To Make Cleaner For Eyeglasses easy home hacks
Author
First Published Aug 25, 2022, 6:14 PM IST

ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕನ್ನಡ ಧರಿಸುವುದು ಅನಿವಾರ್ಯವಾಗಿದೆ. ಹೆಚ್ಚು ಗೆಜೆಟ್ ಬಳಕೆ ಸೇರಿದಂತೆ ಅನೇಕ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಗ್ಲಾಸ್ ಬರುತ್ತದೆ. ಕನ್ನಡಕ ಧರಿಸುವುದು ಕಿರಿಕಿರಿಯುಂಟು ಮಾಡುವ ಕೆಲಸ. ಕನ್ನಡಕದ ಗ್ಲಾಸ್ ಗೆ ಸಣ್ಣ ಕಲೆಯಾದ್ರೂ ದೃಷ್ಟಿ ಅಸ್ಪಷ್ಟವಾಗುತ್ತದೆ. ಅಪ್ಪಿತಪ್ಪಿ ಕನ್ನಡಕವನ್ನು ಎಲ್ಲಾದ್ರೂ ಇಟ್ಟಾಗ ಕೊಳಕು ಅದಕ್ಕೆ ಸೇರುತ್ತದೆ. ಟೀ ಸೇವನೆ ಅಥವಾ ಅಡುಗೆ ಮಾಡುವಾಗ ಹವೆ ಕನ್ನಡವನ್ನು ಸೇರುತ್ತದೆ. ಕನ್ನಡಕ ಹಾಕಿಕೊಂಡವರಿಗೆ ಕನ್ನಡಕ ಶುಚಿಗೊಳಿಸುವುದು ಕೂಡ ಚೆನ್ನಾಗಿ ಗೊತ್ತಿರಬೇಕು.

ಕೆಲವೊಮ್ಮೆ ಗ್ಲಾಸ್‌ (Glass) ಗಳ ಮೇಲೆ ಎಣ್ಣೆ (Oil) ಯ ಕಲೆಗಳು ಗೋಚರಿಸುತ್ತವೆ. ಕೆಲವೊಮ್ಮೆ ಧೂಳು, ಕೆಲವೊಮ್ಮೆ ಗ್ರೀಸ್, ಕೆಲವೊಮ್ಮೆ ಫಿಂಗರ್‌ಪ್ರಿಂಟ್ (Fingerprint) ಮತ್ತು ಕೆಲವೊಮ್ಮೆ ಮಂಜು ಕೂಡ ಕನ್ನಡಕವನ್ನು ಕೊಳಕು ಮಾಡುತ್ತದೆ. ಗ್ಲಾಸ್ ಬಾಕ್ಸ್ ನಲ್ಲಿರುವ ಕರವಸ್ತ್ರ (Napkin) ದಿಂದ ಮಾತ್ರ ಇವೆಲ್ಲವನ್ನೂ ಸ್ವಚ್ಛ (Clean) ಗೊಳಿಸಲು ಸಾಧ್ಯವಿಲ್ಲ. ಸ್ಪಷ್ಟವಾಗಿ ಕಾಣಬೇಕೆಂದ್ರೆ ಕನ್ನಡಕವನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಅವಶ್ಯಕ. ಕರವಸ್ತ್ರವಲ್ಲದೆ ಮನೆಯಲ್ಲಿಯೇ ನಿಮ್ಮ ಕನ್ನಡಕವನ್ನು ಬೇರೆ ಬೇರೆ ವಿಧಾನಗಳಿಂದ ಸ್ವಚ್ಛಗೊಳಿಸಬಹುದು.  

ಮನೆಯಲ್ಲಿಯೇ ಕನ್ನಡವನ್ನು ಹೀಗೆ ಸ್ವಚ್ಛಗೊಳಿಸಿ : 
ಸೋಪ್ (Soap) ನೀರು :
ಕನ್ನಡಕದ ಗ್ಲಾಸ್ ಸ್ವಚ್ಛಗೊಳಿಸಲು ಸೋಪ್ ನೀರನ್ನು ನೀವು ಬಳಸಬಹುದು. ಮೊದಲು ಸೋಫ್ ಅಥವಾ ಲಿಕ್ವಿಡ್ ಡಿಟರ್ಜೆಂಟ್ (Liquid detergent) ತೆಗೆದುಕೊಳ್ಳಿ. ನಂತ್ರ ಒಂದು ಬಟ್ಟಲಿಗೆ ಸಮಾನ ಪ್ರಮಾಣದ ನೀರು ಹಾಗೂ ಸೋಪ್ ಪುಡಿಯನ್ನು  ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಆ ನೀರಿನಲ್ಲಿ ಕನ್ನಡಕದ ಗಾಜುಗಳನ್ನು ಸ್ವಚ್ಛಗೊಳಿಸಿ. ಇದೇ ನೀರಿನಲ್ಲಿ ನೀವು ಕನ್ನಡಕದ ಚೌಕಟ್ಟನ್ನು ಸಹ ಸ್ವಚ್ಛಗೊಳಿಸಬಹುದು.

ಬಿಸಿ ನೀರು (Hot Water) :  ಸಾಮಾನ್ಯ ನೀರಿಗಿಂತ ಬೆಚ್ಚಗಿನ ನೀರು ಗ್ಲಾಸ್ ಸ್ವಚ್ಛಗೊಳಿಸಲು ಪರಿಣಾಮಕಾರಿ. ಕನ್ನಡಕದಲ್ಲಿನ ಕಲೆಗಳನ್ನು ಸಹ ಬಿಸಿ ನೀರಿನಿಂದ ಸುಲಭವಾಗಿ ತೆಗೆದುಹಾಕಬಹುದು. ಗ್ಲಾಸಿನ ಮೇಲಿರುವ ಜಿಡ್ಡನ್ನು ಕೂಡ ಬಿಸಿ ನೀರು ಸುಲಭವಾಗಿ ತೆಗೆದು ಹಾಕುತ್ತದೆ. ಮೊದಲು ನೀರನ್ನು ಸ್ವಲ್ಪ ಬಿಸಿ ಮಾಡಿ. ನಂತ್ರ ಹತ್ತಿಯ ತುಂಡನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ ನಂತ್ರ ಗ್ಲಾಸ್ ಸ್ವಚ್ಛಗೊಳಿಸಿ.  

ಬೇಬಿ ವೈಪ್ಸ್ (Baby wipes) : ಮಕ್ಕಳಿಗಾಗಿ ಮೀಸಲಿರುವ ಬೇಬಿ ವೈಪ್ಸ್ ಕೂಡ ಕನ್ನಡ ಒರೆಸಲು ಪರಿಣಾಮಕಾರಿ. ಕನ್ನಡಕದ ಚೌಕಟ್ಟು, ಕನ್ನಡಿ ಹಾಗೂ ಮೂಗಿನ ಬಳಿ ಇರುವ ಭಾಗವನ್ನು ಕೂಡ ಬೇಬಿ ವೈಪ್ಸ್ ನಿಂದ ಕ್ಲೀನ್ ಮಾಡಬಹುದು. 

ಬಿಳಿ ವಿನೆಗರ್ (White vinegar): ಒಂದು ಬಟ್ಟಲಿನಲ್ಲಿ ಅರ್ಧದಷ್ಟು ವಿನೆಗರ್ ತೆಗೆದುಕೊಳ್ಳಿ. ಅದಕ್ಕೆ ಅನುಗುಣವಾಗಿ ನೀರನ್ನು ತೆಗೆದುಕೊಳ್ಳಿ. ಎರಡನ್ನೂ ಸರಿಯಾಗಿ ಮಿಕ್ಸ್ ಮಾಡಿ. ನಂತ್ರ ಈ ಮಿಶ್ರಣವನ್ನು ಸ್ಪ್ರೇ ಬಾಟಲಿಗೆ ತುಂಬಿಸಿ. ಕನ್ನಡಕ ಸ್ವಚ್ಛಗೊಳಿಸಲು ನೀವು ಈ ಸ್ಪ್ರೇ ಬಳಸಬಹುದು. ಗ್ಲಾಸ್ ಗೆ ಸ್ಪ್ರೇ ಹಾಕಿ ನಂತ್ರ ಶುದ್ಧ ಬಟ್ಟೆಯಿಂದ ಒರೆಸಬೇಕು.

ತರಕಾರಿ ಬೀಜ ಎಸಿಬೇಕಾಗಿಲ್ಲ, ಸ್ಟೈಲಿಶ್ ಆಭರಣ ತಯಾರಿಸ್ಬೋದು

ರಬ್ಬಿಂಗ್ ಆಲ್ಕೋಹಾಲ್ (Rubbing Alchohol) : ರಬ್ಬಿಂಗ್ ಆಲ್ಕೋಹಾಲ್ ಅನ್ನು ಮಾರುಕಟ್ಟೆಯಿಂದ ಅತ್ಯಂತ ಅಗ್ಗವಾಗಿ ಖರೀದಿಸಬಹುದು. 3 ಚಮಚ  ರಬ್ಬಿಂಗ್ ಆಲ್ಕೋಹಾಲ್ ತೆಗೆದುಕೊಂಡರೆ ಅದಕ್ಕೆ ಒಂದು ಭಾಗ ನೀರು ಮತ್ತು ಸುಮಾರು 2 ಹನಿ ಸೋಪ್ ನೀರನ್ನು ಸೇರಿಸಬೇಕು. ಈ ದ್ರಾವಣದಲ್ಲಿ ಹತ್ತಿಯನ್ನು ಅದ್ದಿ ಕನ್ನಡಕವನ್ನು ಸ್ವಚ್ಛಗೊಳಿಸಬಹುದು.

ಸ್ಕಿನ್ನಿ ಜೀನ್ಸ್ ಹಾಕ್ತೀರಾ ? ಪ್ಯಾರಾಲಿಸಿಸ್‌ಗೂ ಕಾರಣವಾಗ್ಬೋದು ಜೋಕೆ !

ಶೇವಿಂಗ್ ಕ್ರೀಮ್ (Shaving Cream) : ಶೇವಿಂಗ್ ಕ್ರೀಮ್ ಕೂಡ ಕನ್ನಡಕ ಸ್ವಚ್ಛಗೊಳಿಸಲು ಬಳಸಬಹುದು. ಶೇವಿಂಗ್ ಕ್ರೀಮ್ ಕನ್ನಡಕದ ಗ್ಲಾಸ್ ಹೊಳೆಯುವಂತೆ ಮಾಡುತ್ತದೆ. ಶೇವಿಂಗ್ ಕ್ರೀಮ್ ಅನ್ನು ಕನ್ನಡಕದ ಮೇಲೆ ಲಘುವಾಗಿ ಅನ್ವಯಿಸಿದ ಸ್ವಚ್ಛಗೊಳಿಸಬೇಕು. ಇದು ಗ್ಲಾಸ್ ಮೇಲೆ ಹವೆ ನಿಲ್ಲದಂತೆ ತಡೆಯುತ್ತದೆ. 

Follow Us:
Download App:
  • android
  • ios