Asianet Suvarna News Asianet Suvarna News

ಅಂಬಾನಿ ಮನೆಯಲ್ಲಿ ಕೆಂಪು ಬಣ್ಣದಲ್ಲಿ ಮಿಂದೆದ್ದ ಬಾಲಿವುಡ್‌ ಚೆಲುವೆಯರು

ಕೆಂಪು ಬಣ್ಣದ ಉತ್ಸಾಹವೇ ಬೇರೆ. ಸಂಭ್ರಮದ ಸಮಾರಂಭಕ್ಕೆ ವಿಶೇಷ ಲುಕ್‌ ನೀಡುತ್ತದೆ ಕೆಂಪು ಬಣ್ಣ. ಅಂಬಾನಿ ಕುಟುಂಬ ಏರ್ಪಡಿಸಿದ್ದ ಗಣಪತಿ ಪೂಜೆ ಕಾರ್ಯಕ್ರಮದಲ್ಲಿ ಬಾಲಿವುಡ್‌ ತಾರೆಯರು ಕೆಂಪು ಬಣ್ಣದೊಂದಿಗೆ ಮಿಂಚಿದ್ದು ವಿಶೇಷವಾಗಿತ್ತು.
 

These celebrities wear red color in Ambani program fashion sum
Author
First Published Sep 22, 2023, 5:09 PM IST

ಕೆಂಪು ಬಣ್ಣ ಸಂಭ್ರಮಾಚರಣೆಗೆ ವಿಶಿಷ್ಟ ಮೆರುಗನ್ನು ನೀಡುತ್ತದೆ. ಕೆಂಪು ಬಣ್ಣ ಉತ್ಸಾಹದ, ಪ್ರೀತಿಯ, ಶಕ್ತಿಯ ಪ್ರತೀಕ. ಇದು ಇಂದ್ರಿಯಗಳನ್ನು ಜಾಗ್ರತಗೊಳಿಸುತ್ತದೆ. ಕೆಂಪು ಬಣ್ಣ ಸೆಲೆಬ್ರಿಟಿಗಳನ್ನು ಸೆಳೆಯಲು ಇದರ ಮನಮೋಹಕ ಲುಕ್‌ ಕೂಡ ಕಾರಣ. ಅದ್ದೂರಿ ಕಾರ್ಯಕ್ರಮಕ್ಕೆ ಹೆಚ್ಚು ವೈಬ್ರೇಷನ್‌ ನೀಡುವ ಕೆಂಪು ಬಣ್ಣ ಸೆಲೆಬ್ರಿಟಿ ಸುಂದರಿಯರ ಇತ್ತೀಚಿನ ಆಯ್ಕೆಯಾಗಿದೆ. ಇದಕ್ಕೆ ಸಾಕ್ಷಿಯಾಗಿದ್ದು, ಮುಖೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಮುಂಬೈನ ತಮ್ಮ “ಆಂಟಿಲಿಯಾʼ ನಿವಾಸದಲ್ಲಿ ಹಮ್ಮಿಕೊಂಡಿದ್ದ ಗಣಪತಿ ಪೂಜೆ ಕಾರ್ಯಕ್ರಮ. ಅಂಬಾನಿ ಕುಟುಂಬ ಹಮ್ಮಿಕೊಂಡ ಕಾರ್ಯಕ್ರಮವೆಂದರೆ ಕೇಳಬೇಕೆ? ಬಾಲಿವುಡ್‌ ನ ನಟಿಮಣಿಯರ ದಂಡು ಅಲ್ಲಿ ಹಾಜರಿತ್ತು. ಇತ್ತೀಚೆಗೆ ವೈಭವೋಪೇತ ವಿವಾಹಗಳಲ್ಲಿಯೂ ವಧು ಕೆಂಪು ಬಣ್ಣದ ದುಬಾರಿ ಲೆಹೆಂಗಾ ಅಥವಾ ಡಿಸೈನರ್‌ ಉಡುಪುಗಳನ್ನು ಧರಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಹಾಗೆಯೇ, ಗಣಪತಿ ಪೂಜೆ ಕಾರ್ಯಕ್ರಮದಲ್ಲೂ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಕೆಂಪು ಬಣ್ಣದ ಸ್ಟೈಲಿಶ್‌ ಸೀರೆಯಲ್ಲಿ ಮಿಂಚಿದ್ದುದು ವಿಶೇಷ. ಹಬ್ಬಗಳ ಋತುವಿನ ಸಂಭ್ರಮಕ್ಕೆ ಕೆಂಪು ಸೀರೆಯ ನಾರಿಯರು ಸಾಕಷ್ಟು ಮೆರುಗು ತುಂಬಿದ್ದರು. ಯಾರೆಲ್ಲ ಕೆಂಪಿನ ದಿರಿಸನಲ್ಲಿ ಮಿಂಚಿದ್ದರು ನೋಡಿ.

•    ಆಲಿಯಾ ಭಟ್‌ (Alia Bhat)
ದಟ್ಟ ಕೆಂಪು (Red) ಬಣ್ಣದ, ಮಿರರ್‌ (Mirror) ಕೂಡ್ರಿಸಿರುವ ಹೊಳೆಯುವ (Glittering) ಬಾರ್ಡರ್‌ ನ ಸಿಂಪಲ್‌ (Simple) ಸೀರೆಯಲ್ಲಿ ಕಂಗೊಳಿಸಿದ್ದರು ಆಲಿಯಾ ಭಟ್.‌ ಇದು, ಅರ್ಪಿತಾ ಮೆಹ್ತಾ ಡಿಸೈನ್‌ (Design) ಮಾಡಿದ ಸೀರೆಯಾಗಿದ್ದು, ಕನ್ನಡಿಗಳನ್ನು ಹೊಂದಿರುವ ಮ್ಯಾಚಿಂಗ್‌ ಬ್ಲೌಸ್‌ ನಲ್ಲಿ ಮಿಂಚಿದ್ದರು ಆಲಿಯಾ.

ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

•    ಅನನ್ಯಾ ಪಾಂಡೆ (Annanya Pande)
ಆಳವಾದ (Deep) ಕೆಂಪು ಬಣ್ಣದ ಸೀರೆ ಧರಿಸಿದ್ದ ಅನನ್ಯಾ ಪಾಂಡೆ ಅವರ ಸೀರೆಯನ್ನೂ ಸಹ ಅರ್ಪಿತಾ ಮೆಹ್ತಾ ಡಿಸೈನ್‌ ಮಾಡಿದ್ದು, ಮೈ ತುಂಬ ವಿನ್ಯಾಸಗಳಿದ್ದವು. ಬಾರ್ಡರ್‌ ಗೆ ಕನ್ನಡಿಗಳನ್ನು ಕೂಡ್ರಿಸಲಾಗಿದ್ದು, ಫುಲ್‌ ಸ್ಲೀವ್‌ (Full Sleeve) ಧರಿಸಿದ್ದ ಅನನ್ಯಾ ಪಾಂಡೆ ಅದ್ಭುತವಾಗಿ ಮಿಂಚುವಲ್ಲಿ ಸಹಕಾರಿಯಾಗಿತ್ತು.

•    ಅಥಿಯಾ ಶೆಟ್ಟಿ (Athiya Shetty)
ದಟ್ಟ ಕೆಂಪು ಬಣ್ಣದ, ನೂತನ ವಧು (New Bride) ಧರಿಸುವಂತಹ ಗಾಢವಾದ ಸೀರೆ ಧರಿಸಿದ್ದವರು ಅಥಿಯಾ ಶೆಟ್ಟಿ. ಸೀರೆಯ ಮೈತುಂಬ ಗಾಢವಾದ ಡಿಸೈನ್‌ ಗಳಿದ್ದು, ಅದಕ್ಕೊಪ್ಪುವ ಹರಳಿನ ಬ್ಲೌಸ್‌ ಧರಿಸಿದ್ದರು. ಡಿಸೈನರ್‌ ತರುಣ್‌ ತಹಿಲಿಯಾನಿ ವಿನ್ಯಾಸ ಮಾಡಿರುವ ಈ ಸೀರೆಯ ಮೌಲ್ಯ 2.5 ಲಕ್ಷ ರೂಪಾಯಿ ಎನ್ನಲಾಗಿದೆ.

•     ಕರಿಷ್ಮಾ ಕಪೂರ್‌ (Karishma Kapoor)
ಸಾಂಪ್ರದಾಯಿಕ ಲೆಹೆಂಗಾ (Lehenga) ಧರಿಸಿದ್ದ ಕರಿಷ್ಮಾ ಕಪೂರ್‌, ಕೆಂಪು ಬಣ್ಣದಿಂದಾಗಿಯೇ ಅದ್ಭುತವಾಗಿ ಕಂಗೊಳಿಸಿದ್ದರು. ಗಾಢವಾದ ದೊಡ್ಡ ದೊಡ್ಡ ಹೂವಿನ (Floral) ವಿನ್ಯಾಸಗಳಿರುವ ಲೆಹೆಂಗಾ ನೋಡುಗರ ಕಣ್ಮನ ತಣಿಸುವಂತಿತ್ತು. ಇದನ್ನು ವಿನ್ಯಾಸ ಮಾಡಿದವರು ಅನಾಮಿಕಾ ಖನ್ನಾ. ಕೆಂಪು ಬಣ್ಣದ ಮೇಲೆ ತಿಳಿನೀಲಿ ಬಣ್ಣದ ಹೂವಿನ ಮಾದರಿಯ ಡಿಸೈನ್‌ ಗ್ರ್ಯಾಂಡ್‌ ಲುಕ್‌ (Grand Look) ನೀಡಿತ್ತು.

ಅಂಬಾನಿ ಗಣೇಶ ಪಾರ್ಟಿ, ಬಣ್ಣ ಬಣ್ಣದ ಉಡುಗೆಯಲ್ಲಿ ಮಿಂಚಿದ ಬಾಲಿವುಡ್ ತಾರೆಯರು!

•    ದೀಪಿಕಾ ಪಡುಕೋಣೆ (Deepika Padukone)
ಸಬ್ಯಸಾಚಿ ಡಿಸೈನ್‌ ಮಾಡಿರುವ ಗುಲಾಬಿ ಮಿಶ್ರಿತ ಕೆಂಪು ಬಣ್ಣದ ಕುರ್ತಾ (Kurta), ಕೆಂಪು ಬಣ್ಣದ ವೆಲ್ವೆಟ್‌ ಸಲ್ವಾರ್‌ ಧರಿಸಿದ್ದರು ದೀಪಿಕಾ ಪಡುಕೋಣೆ. ಗಾಢವಾದ ಚಿನ್ನದ (Gold) ಬಣ್ಣದಲ್ಲಿ ಹೊಳೆಯುವ ಸಾಮಗ್ರಿಗಳನ್ನು ಹೊಂದಿದ್ದ ಡ್ರೆಸ್‌ ಗೆ ಮ್ಯಾಚ್‌ ಎಂಬಂತೆ ಚಿನ್ನದ ಬಣ್ಣದ ಹೀಲ್ಸ್‌ ಧರಿಸಿ ಫ್ಯಾಷನ್‌ ಮೆರೆದರು. ಕೆಂಪು ಬಣ್ಣದ ಶಾಲ್‌ ಧರಿಸಿ ಜತೆಗಿದ್ದರು ರಣಬೀರ್‌ ಸಿಂಗ್.

* ನವ್ಯಾ ನಂದಾ (Navya Nanda)
ಅಮಿತಾಭ್‌ ಬಚ್ಚನ್‌ ಮೊಮ್ಮಗಳು ನವ್ಯಾ ನಂದಾ, ಕೆಂಪು- ಗುಲಾಬಿ ಮಿಶ್ರಿತ ಭಾರತೀಯ ಸಾಂಪ್ರದಾಯಿಕ (Traditional) ಕರಕುಶಲ ಕಲೆ ಬಿಂಬಿಸುವ ಹರಳುಗಳ್ಳ ಸೀರೆಯಲ್ಲಿ ಮಿಂಚಿದರು. ಇದು ಅಬು ಜಾನಿ ಸಂದೀಪ್‌ ಖೋಸ್ಲಾ ಅವರ ವಿನ್ಯಾಸದ ಸೀರೆ.

Follow Us:
Download App:
  • android
  • ios