ಈಗ ಟ್ರೆಂಡ್ ಆಗ್ತಿರೋ ಸ್ಕಿನ್ ಫಾಸ್ಟಿಂಗ್ ಅಂದ್ರೇನು? ಸ್ಕಿನ್‌ಗೆಂಥ ಉಪವಾಸ?
ಚರ್ಮದ ಆರೈಕ ಬಹಳ ಮುಖ್ಯ. ನಾವು ಬಳಸುವ ಉತ್ಪನ್ನದಲ್ಲಿ ಸ್ವಲ್ಪ ಸಮಸ್ಯೆಯಿದ್ರೂ ಚರ್ಮದ ಆರೋಗ್ಯ ಹಾಳಾಗುತ್ತದೆ. ಸದಾ ಯಂಗ್ ಹಾಗೂ ಹೊಳೆಯುವ ಚರ್ಮ ಹೊಂದಬೇಕೆಂದ್ರೆ ಅದರ ಬಗ್ಗೆ ಹೆಚ್ಚುವರಿ ಕಾಳಜಿ ಅಗತ್ಯ.
ಪ್ರತಿ ದಿನ ಬೆಳೆಯುತ್ತಿರುವ ಉದ್ಯಮಗಳಲ್ಲಿ ಬ್ಯೂಟಿ ಇಂಡಿಸ್ಟ್ರಿ ಸೇರಿದೆ. ಇಲ್ಲಿ ನಾನಾ ಬಗೆಯ ಪ್ರಾಡಕ್ಟ್ ಗಳನ್ನು ನಾವು ಕಾಣ್ಬಹುದು. ಸೌಂದರ್ಯ ವರ್ದಕಗಳ ಸಂಖ್ಯೆ ಸಾಕಷ್ಟಿದೆ. ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳ ನಾನಾ ಉತ್ಪನ್ನಗಳನ್ನು ಜನರು ಬಳಕೆ ಮಾಡ್ತಿದ್ದಾರೆ. ಲಕ್ಷಾಂತರ ಬೆಲೆಯ ಉತ್ಪನ್ನಗಳು ಪ್ರತಿ ದಿನ ಮಾರಾಟವಾಗ್ತಿವೆ. ಬ್ಯೂಟಿ ವಿಷ್ಯ ಬಂದಾಗ ಮಹಿಳೆಯರು ಮುಂದೆ. ಮುಖ, ಕೂದಲು, ಕೈ, ಉಗುರು, ಕತ್ತು ಹೀಗೆ ದೇಹದ ಎಲ್ಲ ಭಾಗಗಳ ಸೌಂದರ್ಯ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ಮೊರೆ ಹೋಗುವ ಮಹಿಳೆಯರು, ಮನೆಯಲ್ಲೂ ಅನೇಕ ಉತ್ಪನ್ನಗಳನ್ನು ಬಳಸ್ತಾರೆ. ಬೆಳಿಗ್ಗೆ ಎದ್ದು ಮುಖ ವಾಶ್ ಮಾಡೋದ್ರಿಂದ ಹಿಡಿದು ರಾತ್ರಿ ಮಲಗುವ ಮುನ್ನ ಬಳಸುವ ಕ್ರೀಮ್ ವರೆಗೆ ಎಷ್ಟೊಂದು ಉತ್ಪನ್ನಗಳು ಮುಖವನ್ನು ಸ್ಪರ್ಶಿಸುತ್ತವೆ ಹೇಳಲು ಸಾಧ್ಯವಿಲ್ಲ. ಫೇಶಿಯಲ್, ಕ್ಲೆನ್ಸರ್, ಸ್ಕ್ರಬ್, ಮಾಯಿಶ್ವರ್ ಕ್ರೀಮ್, ಲಿಫ್ಟಿಕ್, ಐಲೈನರ್, ಕಾಜಲ್, ಐ ಶ್ಯಾಡೋ ಹೀಗೆ ನಾನಾ ಬ್ಯೂಟಿ ಪ್ರಾಡಕ್ಟ್ ಮುಖದ ಮೇಲಿರುತ್ತದೆ. ಹೊಸ ಹೊಸ ಟ್ರೆಂಡ್ ಬರ್ತಾನೆ ಇರುತ್ತೆ. ಈಗ ಹೊಸ ಟ್ರೆಂಡ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡ್ತಿದೆ. ಅದೆ ಸ್ಕಿನ್ ಫಾಸ್ಟಿಂಗ್. ಸ್ಕಿನ್ ಫಾಸ್ಟಿಂಗ್ ಅಂದ್ರೇನು? ಅದ್ರ ಪ್ರಯೋಜನ ಏನು ಅನ್ನೋದನ್ನು ನಾವು ಹೇಳ್ತೇವೆ.
ಸ್ಕಿನ್ ಫಾಸ್ಟಿಂಗ್ (Skin Fasting) ಅಂದ್ರೇನು? : ಸ್ಕಿನ್ ಫಾಸ್ಟಿಂಗ್ ಅಂದ್ರೆ ಚರ್ಮದ ಉಪವಾಸ ಎಂದಾಗುತ್ತದೆ. ಚರ್ಮದ ಉಪವಾಸ ಅಂದ್ರೆ ಹೊಟ್ಟೆ ಬದಲು ಚರ್ಮವನ್ನು ಖಾಲಿ ಬಿಡೋದಾಗಿದೆ. ನಾವು ದಿನದಲ್ಲಿ ಅಥವಾ ಒಂದೇ ಬಾರಿ ನಾಲ್ಕೈದು ಕ್ರೀಂ, ಸೌಂದರ್ಯ (Beauty) ವರ್ದಕಗಳನ್ನು ಚರ್ಮಕ್ಕೆ ಹಚ್ಚುತ್ತೇವೆ. ಆದ್ರೆ ಸ್ಕಿನ್ ಫಾಸ್ಟಿಂಗ್ ನಲ್ಲಿ ಅದನ್ನು ಹಚ್ಚದೆ ಇರೋದು. ಅಥವಾ ಅತಿ ಕಡಿಮೆ ಉತ್ಪನ್ನ (Products) ವನ್ನು ಬಳಸೋದು.
ಭರ್ಜರಿ ಬ್ಯಾಚುಲರ್ಸ್ ಏಂಜೆಲ್‌ಗಳ ಬಿಗಿದಪ್ಪಿದ ಕ್ರೇಜಿಸ್ಟಾರ್ ರವಿಚಂದ್ರನ್: ನಾಟಿ ರವಿಮಾಮ ಎಂದ ಫ್ಯಾನ್ಸ್
ಕೆಲವು ದಿನಗಳವರೆಗೆ ಸೀರಮ್, ಕ್ಲನ್ಸರ್, ಟೋನರ್ ಇತ್ಯಾದಿಗಳನ್ನು ಬಳಸದೆ ಇರುವುದು. ಬರೀ ಫೇಸ್ ವಾಶ್, ಮಾಯಿಶ್ಚರೈಸರ್ ಮತ್ತು ಸನ್‌ಸ್ಕ್ರೀನ್ ಬಳಸುವುದನ್ನು ಸ್ಕಿನ್ ಫಾಸ್ಟಿಂಗ್ ಎನ್ನಲಾಗುತ್ತದೆ. ಈ ಟ್ರೆಂಡ್ ನಲ್ಲಿ ಚರ್ಮದ ಮೇಲೆ ಕನಿಷ್ಠ ಉತ್ಪನ್ನಗಳನ್ನು ಅನ್ವಯಿಸಲಾಗುತ್ತದೆ. ಚರ್ಮ ಅನೇಕ ಉತ್ಪನ್ನಗಳ ಅಡಿಯಲ್ಲಿ ಅಡಗೋದನ್ನು ಇದು ತಪ್ಪಿಸುತ್ತದೆ. ಚರ್ಮಕ್ಕೆ ಸರಿಯಾಗಿ ಉಸಿರಾಡಲು ಅವಕಾಶ ಸಿಗುತ್ತದೆ.
ಸ್ಕಿನ್ ಫಾಸ್ಟಿಂಗ್ ಪ್ರಯೋಜನಗಳು :
• ಸ್ಕಿನ್ ಫಾಸ್ಟಿಂಗ್ ತ್ವಚೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಮೊದಲನೇಯದಾಗಿ ನಿಮ್ಮ ಚರ್ಮ ತಾಜಾಗೊಳ್ಳಲು ಇದು ನೆರವಾಗುತ್ತದೆ.
• ನೀವು ಕೆಲ ದಿನ ಅಥವಾ ಕೆಲ ವಾರಗಳ ಕಾಲ ಸ್ಕಿನ್ ಫಾಸ್ಟಿಂಗ್ ಮಾಡಿದ್ರೆ ಚರ್ಮ ತಾನಾಗಿಯೇ ಸಮತೋಲನಗೊಳ್ಳುತ್ತದೆ.
ಮುಖದ ಅಂದ ಹೆಚ್ಚಿಸುತ್ತೆ ಮನೆಯಂಗಳದಲ್ಲಿರುವ ತುಳಸಿ, ಬಳಸೋದು ಹೇಗೆ?
• ಸ್ಕಿನ್ ಫಾಸ್ಟಿಂಗ್ ನಿಂದ ಯಾವುದೇ ಅಡ್ಡಪರಿಣಾಮ ನಿಮಗೆ ಆಗುವುದಿಲ್ಲ. ನೀವು ಕೆಲವು ದಿನಗಳು ಅಥವಾ ವಾರಗಳವರೆಗೆ ಚರ್ಮದ ಉಪವಾಸವನ್ನು ಮಾಡಬಹುದು. ಇದು ನೈಸರ್ಗಿಕವಾಗಿದೆ.
• ಅನೇಕ ಬಗೆಯ ಸೌಂದರ್ಯ ವರ್ದಕಗಳನ್ನು ಬಳಸಿ ಚರ್ಮದ ಆರೋಗ್ಯ ಹಾಳಾಗಿರುತ್ತದೆ. ಅಂತವರು ಸ್ಕಿನ್ ಫಾಸ್ಟಿಂಗ್ ಮಾಡುವುದು ಉತ್ತಮ. ಇದ್ರಿಂದ ಸ್ಕಿನ್ ಆರೋಗ್ಯವು ನೈಸರ್ಗಿಕ ರೀತಿಯಲ್ಲಿ ಸುಧಾರಿಸಲು ಶುರುವಾಗುತ್ತದೆ.
• ನೀವು ಸ್ಕಿನ್ ಫಾಸ್ಟಿಂಗ್ ಮಾಡಿದ್ರೆ ನಿಮ್ಮ ಚರ್ಮದ ಸೂಕ್ಷ್ಮತೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ.
• ಸ್ಕಿನ್ ಫಾಸ್ಟಿಂಗ್ ಮಾಡುವ ಮೊದಲು ಕೆಲವೊಂದು ಸಂಗತಿಯನ್ನು ತಿಳಿಯಬೇಕಾಗುತ್ತದೆ. ನೀವು ಒಂದೇ ದಿನ ಸ್ಕಿನ್ ಫಾಸ್ಟಿಂಗ್ ಮಾಡಿದ್ರೆ ಈ ಎಲ್ಲ ಲಾಭ ನಿಮಗೆ ಸಿಗಲು ಸಾಧ್ಯವಿಲ್ಲ. ಹಾಗೇ ನೀವು ಸಿರಮ್ ಬಳಕೆ ಮಾಡ್ತಿದ್ದು ಏಕಾಏಕಿ ಫಾಸ್ಟಿಂಗ್ ಶುರು ಮಾಡಿದ್ರೆ ಚರ್ಮ ಶುಷ್ಕಗೊಳ್ಳುವ ಅಪಾಯವಿರುತ್ತದೆ.
ಮೊಡವೆ, ಪಿಗ್ಮೆಂಟೇಶನ್ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಸ್ಕಿನ್ ಫಾಸ್ಟಿಂಗ್ ಮಾಡುವಾಗ ಅಗತ್ಯ ಕ್ರೀಂ ಬಳಕೆ ಮಾಡದೆ ಹೋದ್ರೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.