ಮುಖದ ಅಂದ ಹೆಚ್ಚಿಸುತ್ತೆ ಮನೆಯಂಗಳದಲ್ಲಿರುವ ತುಳಸಿ, ಬಳಸೋದು ಹೇಗೆ?

ಸುಂದರವಾಗಿ ಕಾಣ್ಬೇಕು ಅಂತಾ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಮನೆಯಲ್ಲೇ ಸಿಗುವ ವಸ್ತು ಬಳಸಿ ನಿಮ್ಮ ಸೌಂದರ್ಯ ಕಾಪಾಡ್ಕೊಳ್ಳಿ. ತುಳಸಿ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಲು ಸಹಕಾರಿ. ಇದು  ಚರ್ಮಕ್ಕೆ ಯಾವುದೇ ಹಾನಿ ಮಾಡೋದಿಲ್ಲ. 
 

How To Apply Tulasi On Face roo

ಮಹಿಳೆ ಇರಲಿ ಇಲ್ಲ ಪುರುಷ. ತ್ವಚೆಯ ಸೌಂದರ್ಯ ಈಗ ಎಲ್ಲರಿಗೂ ಮುಖ್ಯ. ಚರ್ಮದ ಅಂದವನ್ನು ಹೆಚ್ಚಿಸಿಕೊಳ್ಳಲು ನಾನಾ ಬಗೆಯ ಕಸರತ್ತುಗಳನ್ನು ಜನರು ಮಾಡ್ತಾರೆ. ಬ್ಯೂಟಿ ಪ್ರೊಡಕ್ಟ್ ಗಳ ಬಳಕೆ ಹೆಚ್ಚಾದಂತೆ ಚರ್ಮದ ಆರೋಗ್ಯ ಸಮಸ್ಯೆ ಹೆಚ್ಚಾಗ್ತಿದೆ ಅಂದ್ರೆ ಅತಿಶಯೋಕ್ತಿಯಲ್ಲ.

ಫ್ಯಾಷನ್ (Fashion) ಪ್ರಿಯರು ಸುಂದರವಾಗಿ ಕಾಣಿಸಬೇಕು ಎನ್ನುವ ಕಾರಣಕ್ಕೆ ಮುಖಕ್ಕೆ ಅನೇಕ ಬಗೆಯ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಕೆಲವರು ಬ್ಯೂಟಿ ಪಾರ್ಲರ್ (Beauty parlour) ಗಳಿಗೆ ಹೋಗಿ ನಾನಾ ಬಗೆಯ ಫೇಶಿಯಲ್ ಗಳನ್ನು ಮಾಡಿಸಿಕೊಳ್ಳುತ್ತಾರೆ. ಇಂತಹ ಸೌಂದರ್ಯ ವರ್ಧಕಗಳು ಮಾರುಕಟ್ಟೆಯಲ್ಲಿ ಕೂಡ ಸುಲಭವಾಗಿ ಸಿಗುತ್ತವೆ.  ರಾಸಾಯನಿಕಗಳನ್ನು ಬಳಸಿದ ಬ್ಯೂಟಿ ಪ್ರೊಡಕ್ಟ್ ಗಳನ್ನು ಬಳಸೋದ್ರಿಂದ ತ್ವಚೆ (skin) ಯ ಆರೋಗ್ಯ ಕೆಡುತ್ತದೆ. ಇಂತಹ ಕೆಮಿಕಲ್ ಮಿಶ್ರಿತ ಪ್ರೊಡಕ್ಟ್ ಗಳನ್ನು ಬಳಸುವುದರ ಬದಲಾಗಿ ಮನೆಯಲ್ಲೇ ಕೆಲವು ಸೌಂದರ್ಯವರ್ಧಕಗಳನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಅನೇಕ ಮಂದಿ ತ್ವಚೆಯ ರಕ್ಷಣೆಗಾಗಿ ಇಂತಹ ಮನೆಮದ್ದುಗಳ ಉಪಯೋಗ ಮಾಡಿಕೊಳ್ಳುತ್ತಾರೆ. ಮನೆಯಲ್ಲೇ ಸಿಗುವ ಕೆಲವು ವಸ್ತುಗಳಿಂದ ಫೇಸ್ ಪ್ಯಾಕ್ ಮುಂತಾದವುಗಳನ್ನು ಮಾಡಿಕೊಳ್ಳುತ್ತಾರೆ. ಎಲ್ಲ ಪೇಸ್ ಪ್ಯಾಕ್ ಗಳಂತೆಯೇ ತುಳಸಿ ಕೂಡ ತ್ವಚೆಯ ಆರೋಗ್ಯವನ್ನು ಇಮ್ಮಡಿಗೊಳಿಸುತ್ತದೆ. ಇದರಿಂದ ಚರ್ಮಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ.

ಐಶ್ವರ್ಯಾ ರೈ ಹೋಲಿಕೆಯಿರುವ ನೀಲಿ ಚಿತ್ರದ ನಟಿ ಅಂಜಲಿ ಶಿವರಾಮನ್ ಯಾರಿದು?

ತುಳಸಿಯ ಫೇಸ್ ಪ್ಯಾಕ್ ನಿಂದ ಎಷ್ಟು ಲಾಭವಿದೆ ಗೊತ್ತಾ? : ಅನಾದಿ ಕಾಲದಿಂದಲೂ ತುಳಸಿಗೆ ಅದರದೇ ಆದ ಪ್ರಾಮುಖ್ಯತೆ ಇದೆ. ತುಳಸಿ ಆರೋಗ್ಯವನ್ನು ನೀಡುವುದರ ಜೊತೆಗೆ ಪೂಜನೀಯವೂ ಆಗಿದೆ. ಬಹುತೇಕ ಮನೆಗಳಲ್ಲಿ ಪ್ರತಿನಿತ್ಯವೂ ತುಳಸಿಯನ್ನು ಪೂಜಿಸಲಾಗುತ್ತದೆ. ತುಳಸಿಯ ಎಲೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರಮಾಡುತ್ತದೆ.

ಕಡಲೆಹಿಟ್ಟು, ತುಳಸಿಯ ಎಲೆ, ಜೇನುತುಪ್ಪವನ್ನು ಬಳಸಿ ತುಳಸಿಯ ಫೇಸ್ ಪ್ಯಾಕ್ ತಯಾರಿಸಬಹುದು. ತುಳಸಿ ಎಲ್ಲ ರೀತಿಯ ಸ್ಕಿನ್ ಇನ್ಫೆಕ್ಷನ್ ಗಳಿಂದ ರಕ್ಷಣೆ ಕೊಡುತ್ತದೆ. ಇದು ತ್ವಚೆಯನ್ನು ಆಳದಿಂದ ಸ್ವಚ್ಛಗೊಳಿಸಿ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಈ ಫೇಸ್ ಪ್ಯಾಕ್ ನಲ್ಲಿ ಬಳಸಲಾಗುವ ಜೇನುತುಪ್ಪ ತ್ವಚೆಯನ್ನು ನೈಸರ್ಗಿಕವಾಗಿ ಕ್ಲೀನ್ ಮಾಡುತ್ತದೆ ಮತ್ತು ತ್ವಚೆಯ ಮೇಲಿನ ರಂದ್ರಗಳನ್ನು ಹೋಗಲಾಡಿಸುತ್ತದೆ. ಜೇನುತುಪ್ಪ ತ್ವಚೆಯನ್ನು ಮಾಯಿಶ್ಚರೈಸ್ ಮಾಡಲು ಸಹಾಯ ಮಾಡುತ್ತದೆ.

ಈ ಎರಡು ಜ್ಯೂಸ್ ಕೇವಲ 15 ದಿನಗಳಲ್ಲಿ ಮುಖದ ಕಲೆ ಮಾಯವಾಗಿಸುತ್ತೆ!

ತುಳಸಿಯ ಫೇಸ್ ಪ್ಯಾಕ್ ನಲ್ಲಿ ಬಳಸಲಾಗುವ ಕಡಲೆಹಿಟ್ಟಿನಿಂದ ಚರ್ಮದ ಮೇಲಿನ ಟ್ಯಾನಿಂಗ್ ಗಳು ಕಡಿಮೆಯಾಗುತ್ತದೆ. ಕಡಲೆಹಿಟ್ಟು ಚರ್ಮಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕಾಗಿಯೇ ಪುಟ್ಟ ಮಕ್ಕಳಿಗೆ ಕಡಲೆಹಿಟ್ಟಿನಿಂದಲೇ ಸ್ನಾನ ಮಾಡಿಸುತ್ತಾರೆ. ಕಡಲೆಹಿಟ್ಟು  ಚರ್ಮದ ಅಲರ್ಜಿಗಳಿಂದ ನಮ್ಮ ಚರ್ಮವನ್ನು ರಕ್ಷಿಸುತ್ತದೆ. ಇದರ ಬಳಕೆಯಿಂದ ಚರ್ಮದ ಮೇಲೆ ರಂದ್ರಗಳು ಕೂಡ ಉಂಟಾಗುವುದಿಲ್ಲ.

ತುಳಸಿ ಫೇಸ್ ಪ್ಯಾಕ್ ಹೀಗೆ ತಯಾರಿಸಿ : ಮಾರುಕಟ್ಟೆಯಲ್ಲಿ ದೊರೆಯುವ ಕೆಮಿಕಲ್ ಮಿಶ್ರಿತ ಸೌಂದರ್ಯ ವರ್ಧಕಗಳನ್ನು ಬಳಸುವುದರ ಬದಲಾಗಿ ಮನೆಯಲ್ಲೇ ಸುಲಭವಾಗಿ ಸಿಗುವ ತುಳಸಿ, ಜೇನುತುಪ್ಪ ಹಾಗೂ ಕಡಲೆಹಿಟ್ಟಿನಿಂದ ಆರೋಗ್ಯಕರ ಫೇಸ್ ಪ್ಯಾಕ್ ಅನ್ನು ತಯಾರಿಸಬಹುದು.

ಮೊದಲು ತುಳಸಿಯ ಎಲೆಗಳನ್ನು ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ 2 ಚಮಚ ಕಡಲೆಹಿಟ್ಟು ಹಾಗೂ 2 ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ. ತುಳಸಿಯ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮುಖದ ಮೇಲೆ ಹಚ್ಚಿಕೊಂಡ ತುಳಸಿಯ ಪೇಸ್ಟ್ ಚೆನ್ನಾಗಿ ಒಣಗುವವರೆಗೂ ಅದನ್ನು ಹಾಗೇ ಬಿಡಿ. ನಂತರ ಶುದ್ಧವಾದ ನೀರು ಮತ್ತು ಕಾಟನ್ ನಿಂದ ಮುಖವನ್ನು ಸ್ವಚ್ಛಗೊಳಿಸಿ. ತುಳಸಿಯ ಈ ಪೇಸ್ ಪ್ಯಾಕ್ ಅನ್ನು ನೀವು ವಾರದಲ್ಲಿ ಎರಡು ಅಥವಾ ಮೂರು ದಿನ ಮಾಡಿಕೊಳ್ಳಬಹುದು. ನಿರಂತರವಾಗಿ ತುಳಸಿಯ ಪೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
 

Latest Videos
Follow Us:
Download App:
  • android
  • ios