Longest Beard ಬಿಟ್ಟು ದಾಖಲೆ ಬರೆದ ವ್ಯಕ್ತಿ. ಮೆಂಟೈನ್ ಸೀಕ್ರೆಟ್ ಇದು

ಗಡ್ಡ ಬಿಟ್ರೆ ಆಗೋದಿಲ್ಲ, ಅದನ್ನು ಸರಿಯಾಗಿ ಮೆಂಟೇನ್ ಮಾಡ್ಬೇಕು. ಹೆಂಗೆಂಗೋ ಗಡ್ಡ ಬೆಳೆಸಿದ್ರೆ ನೋಡೋಕೆ ಚೆನ್ನಾಗಿ ಕಾಣೋದಿಲ್ಲ. ಗಡ್ಡ ಬೆಳೆಸಬೇಕೆಂಬ ಹುಡುಗ್ರು ಇವರನ್ನು ನೋಡಿ. ಶಾಂಪೂ, ಕಂಡೀಷನರ್ ಬಳಸುವ ವ್ಯಕ್ತಿ ಉದ್ದದ ಗಡ್ಡ ಬಿಟ್ಟು ಗಿನ್ನಿಸ್ ದಾಖಲೆ ಬರೆದಿದ್ದಾರೆ. 
 

Sarwan Singh Longest Beard Canadian Sikh Man Guinness World Record Viral Video

ಗಡ್ಡ ಬೆಳೆಸೋದು ಒಂದು ಫ್ಯಾಷನ್. ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಗಡ್ಡ ಬಿಡ್ತಿದ್ದಂತೆ ಯುವಕರು ಅವರನ್ನು ಫಾಲೋ ಮಾಡಿದ್ರು. ಕೊಹ್ಲಿಗಿಂತ ಮೊದಲೇ ಗಡ್ಡ ಬಿಟ್ಟೋರು ಬಹಳ ಮಂದಿ ಇದರೂ ಕೊಹ್ಲಿ ಲುಕ್ ನೋಡಿ ಅದನ್ನು ಅನುಸರಿಸಿದವರ ಸಂಖ್ಯೆ ಸಾಕಷ್ಟಿದೆ. ಈಗಿನ ದಿನಗಳಲ್ಲಿ ಉದ್ದದ ಗಡ್ಡ ಬಿಡುವ ಯುವಕರ ಸಂಖ್ಯೆ ಹೆಚ್ಚಾಗಿದೆ. 

ಉದ್ದವಾದ, ಕಪ್ಪನೆ ಗಡ್ಡ (Beard) ಕ್ಕಾಗಿಯೇ ಮಾರುಕಟ್ಟೆಯಲ್ಲಿ ಕೆಲ ಸೌಂದರ್ಯ (Beauty) ವರ್ದಕಗಳು ಸಿಗ್ತವೆ. ಗಡ್ಡದ ಶಾಂಪೂ, ಆಯಿಲ್ ಹೀಗೆ ನಾನಾ ರೀತಿಯ ವಸ್ತುಗಳು ಲಭ್ಯವಿದೆ. ಈ ಗಡ್ಡಕ್ಕೆ ಸಂಬಂಧಿಸಿದಂತೆ ಕೆಲ ಸ್ಪರ್ಧೆಗಳು ನಡೆಯೋದನ್ನು ನೀವು ನೋಡಿರಬಹುದು. ಯಾರದ್ದು ಉದ್ದದ ಗಡ್ಡ, ಯಾರದ್ದು ಸೊಂಪಾಗಿ ಬೆಳೆದ ಗಡ್ಡ ಹೀಗೆ ನಾನಾ ಸ್ಪರ್ಧೆಗಳು ನಡೆಯುತ್ತಿರುತ್ತವೆ. ಅದ್ರ ಜತೆಗೆ ಗಡ್ಡ ಬಿಟ್ಟ ಪುರುಷರು ಹುಡುಗಿಯರನ್ನು ಆಕರ್ಷಿಸ್ತಾರೆ ಎನ್ನುವ ಮಾತೂ ಆಗಾಗ ಕೇಳಿ ಬರುತ್ತದೆ. ಈ ಗಡ್ಡಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆ, ಸಮೀಕ್ಷೆ (Survey) ಗಳು ಕೂಡ ನಡೆದಿವೆ. ಅದೇನೇ ಇರಲಿ, ನಿಮಗೆ ಗೊತ್ತಿರುವಂತೆ ಸಿಖ್ (Sikh) ಸಮುದಾಯದ ಜನರು ಗಡ್ಡ ಬಿಡ್ತಾರೆ. ಇಲ್ಲೊಬ್ಬ ಸಿಖ್ ವ್ಯಕ್ತಿ, ಉದ್ದದ ಗಡ್ಡ ಬಿಟ್ಟು ತನ್ನ ದಾಖಲೆಯನ್ನು ತಾನೇ ಮುರಿದಿದ್ದಾನೆ. ನಾವಿಂದು ದಾಖಲೆ ಬರೆದ ಗಡ್ಡದ ವ್ಯಕ್ತಿ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಅನ್ಯಗ್ರಹ ಜೀವಿಯಂತೆ ಕಾಣಿಸಲು ತೋರು ಬೆರಳ ಕತ್ತರಿಸಿಕೊಂಡ ಭೂಪ!

ಉದ್ದದ ಗಡ್ಡ ಬಿಟ್ಟು ದಾಖಲೆ ಬರೆದ ವ್ಯಕ್ತಿ ಯಾರು ಗೊತ್ತಾ? : ಈಗಾಗಲೇ ಅತಿ ಉದ್ದದ ಗಡ್ಡಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದ ವ್ಯಕ್ತಿ ಕೆನಡಾದವರು. ಅವರ ಹೆಸರು ಸರ್ವಾನ್ ಸಿಂಗ್. ಸರ್ವಾನ್ ಸಿಂಗ್ ಗಡ್ಡ 2.54 ಮೀಟರ್ (8 ಅಡಿ 3 ಇಂಚು) ಉದ್ದವನ್ನು ಹೊಂದಿದೆ. ಸಿಂಗ್ 2008 ರಲ್ಲಿ ಮೊದಲ ಬಾರಿಗೆ ಗಿನ್ನಿಸ್ ದಾಖಲೆ ಬರೆದಿದ್ದರು. ಆಗ ಅವರ ಗಡ್ಡದ ಉದ್ದ 2.33 ಮೀಟರ್ (7 ಅಡಿ 8 ಇಂಚು) ಬೆಳೆದಿತ್ತು. ಆ ವೇಳೆ ಸರ್ವಾನ್ ಸಿಂಗ್, ಸ್ವೀಡನ್‌ನ ಬಿರ್ಗರ್ ಪೆಲ್ಲಾಸ್ ದಾಖಲೆ ಮುರಿದಿದ್ದರು. 2010 ರಲ್ಲಿ ಅವರ ಗಡ್ಡ 8 ಅಡಿ 2.5 ಇಂಚು ಉದ್ದ ಬೆಳೆದಿತ್ತು. ಅಕ್ಟೋಬರ್ 15, 2022 ರಂದು 2.54 ಮೀಟರ್ (8 ಅಡಿ 3 ಇಂಚು) ಬೆಳೆದಿತ್ತು. ಮೊದಲು ಕಪ್ಪಗಿದ್ದ ಸರ್ವಾನ್ ಗಡ್ಡ ಹನ್ನೆರಡು ವರ್ಷಗಳ ನಂತರ ಬೂದು ಬಣ್ಣಕ್ಕೆ ತಿರುಗಿದೆ.

17ನೇ ವಯಸ್ಸಿನಲ್ಲಿಯೇ ಶುರುವಾಯ್ತು ಈ ಹವ್ಯಾಸ : ಸರ್ವಾನ್ ಸಿಂಗ್ ತಮ್ಮ 17ನೇ ವಯಸ್ಸಿನಲ್ಲಿಯೇ ಗಡ್ಡ ಬೆಳೆಸಲು ಶುರು ಮಾಡಿದ್ದರು. ಆ ನಂತ್ರ ಅವರು ಒಂದು ಬಾರಿಯೂ ಗಡ್ಡವನ್ನು ಟ್ರಿಮ್ ಮಾಡಿಲ್ಲ. 

Summer Care: ಬಿಸಿಲಿನ ಶಾಖದಿಂದ ಮುಖ ಕೆಂಪಾಗಿದ್ಯಾ? ತಕ್ಷಣ ಪರಿಹಾರಕ್ಕೆ ಇಲ್ಲಿದೆ ಟಿಪ್ಸ್

ಗಡ್ಡದ ಬಗ್ಗೆ ಸರ್ವಾನ್ ಸಿಂಗ್ ಹೇಳೋದೇನು? : ಗಡ್ಡದ ಉದ್ದವನ್ನು ಅದು ಒದ್ದೆಯಾಗಿದ್ದಾಗ ಅಳೆಯಲಾಗುತ್ತದೆ. ಹಾಗಾಗಿ ಗಡ್ಡ ಕರ್ಲಿಯಾಗಿದ್ರೆ ಅದ್ರಿಂದ ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಾರೆ ಸರ್ವಾನ್ ಸಿಂಗ್. ಗಡ್ಡವನ್ನು ಟ್ರಿಮ್ ಮಾಡದೆ ಹೋದ್ರೂ, ಸಿಂಗ್ ಅವರ ಗಡ್ಡವನ್ನು ಪ್ರತಿ ದಿನ ಆರೈಕೆ ಮಾಡ್ತಾರೆ. ಶಾಂಪೂ ಮಾಡುವುದಲ್ಲದೆ ಕಂಡೀಷನರ್ ಬಳಸ್ತಾರೆ. ಗಡ್ಡವನ್ನು ಒಣಗಿಸಿದ ನಂತರ ಎಣ್ಣೆ ಮತ್ತು ಜೆಲ್ ಹಚ್ಚಿ ಬಾಚುತ್ತಾರೆ. ಇದನ್ನು ದೇವರು ನೀಡಿದ ಉಡುಗೊರೆ ಎಂದು ಸರ್ವಾನ್ ಸಿಂಗ್ ಭಾವಿಸಿದ್ದಾರೆ. ಇದು ನನ್ನ ವೈಯಕ್ತಿಕ ಸಾಧನೆಯಲ್ಲ ಎಂದಿದ್ದಾರೆ. ದೇವರು ನೀಡಿದ್ದನ್ನು ಹಾಗೆಯೇ ಬಿಡಿ. ಗಡ್ಡ ಬೆಳೆಯುತ್ತಿದೆ ಎಂದಾದ್ರೆ ಬೆಳೆಯಲು ಬಿಡಿ ಎನ್ನುತ್ತಾರೆ ಸರ್ವಾನ್ ಸಿಂಗ್.  
 

Latest Videos
Follow Us:
Download App:
  • android
  • ios