Asianet Suvarna News Asianet Suvarna News

ಅನಂತ್ 'ಹಳದಿ'ಗೆ ಸಲ್ಮಾನ್ ಖಾನ್ ತೊಟ್ಟ ವಾಚ್ ಬೆಲೆ ಕೇಳಿದ ಫ್ಯಾನ್ಸ್ ಹೇಳಿದ್ದು- ಇದು ಅಪ್ಪಟ 'ಅಂಬಾನಿ ಲೆವೆಲ್'!

ಸಲ್ಮಾನ್ ಖಾನ್ ಮುಖೇಶ್ ಅಂಬಾನಿಯ ಕಿರಿಯ ಮಗ ಅನಂತ್ ಅಂಬಾನಿಯ ಹಳದಿ ಕಾರ್ಯಕ್ರಮಕ್ಕೆ ಬಂದಾಗ ಕೈಲಿದ್ದ ರೇನ್‌ಬೋ ವಾಚ್ ಎಲ್ಲರ ಕಣ್ಣು ಕುಕ್ಕಿತು. ಇದರ ಬೆಲೆ ಕೇಳಿದ್ರೆ ಹೌಹಾರ್ತೀರಿ..

Salman Khan Flaunts An Aquanaut Luce Rainbow Watch At Anant Ambanis Haldi skr
Author
First Published Jul 10, 2024, 11:45 AM IST

ಸಲ್ಮಾನ್ ಖಾನ್ ಪ್ರತಿ ಅಂಬಾನಿ ಮನೆಯ ಕಾರ್ಯಕ್ರಮಗಳ ಭಾಗವಾಗಿದ್ದಾರೆ. ಅನಂತ್ ಅಂಬಾನಿಯ ಜಾಮ್ನಗರ್, ಕ್ರೂಸ್ ವಿವಾಹಪೂರ್ವ  ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹಿಡಿದು ವರನ ಜೊತೆ ತನ್ನ ಸಿನಿಮಾಗಳ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆಯುವವರೆಗೆ, ಅಂಬಾನಿ ಪಾರ್ಟಿಗಳಲ್ಲಿ ಸಲ್ಮಾನ್ ಅತ್ಯುತ್ತಮವಾಗಿ ಆನಂದಿಸುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಅಂಬಾನಿಗಳಂತೆ, ಬಾಲಿವುಡ್ ಸೂಪರ್‌ಸ್ಟಾರ್ ಕೂಡ ಪುರುಷರಿಗೆ ಪ್ರಮುಖ ಫ್ಯಾಷನ್ ಗುರಿಗಳನ್ನು ನೀಡುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ.

ಇತ್ತೀಚೆಗಷ್ಟೇ ಅನಂತ್ ಅಂಬಾನಿಯ ಹಳದಿ ಸಮಾರಂಭಕ್ಕೆ ಸಲ್ಮಾನ್ ಖಾನ್ ಕಪ್ಪು ಸೂಟ್‌ನಲ್ಲಿ ಬಂದಾಗ, ಅವರ ನೋಟಕ್ಕೆ ಫ್ಯಾಶನ್ ಸ್ಟೇಟ್‌ಮೆಂಟ್ ನೀಡಲು ವಾಚೊಂದನ್ನು ಧರಿಸಿದ್ದರು. ವಾಚ್ ಬಟ್ಟೆಯಿಂದ ಹೊರಗೇ ಸ್ವಲ್ಪವೇ ಇಣುಕಿದರೂ ಅದರ ಬೆಲೆಗಾಗಿ ದೊಡ್ಡ ಸದ್ದು ಮಾಡುತ್ತಿದೆ.

ದಾವೂದ್ ಇಬ್ರಾಹಿಂ ಗರ್ಲ್‌ಫ್ರೆಂಡ್, ಈ ಸ್ಟಾರ್ ನಟಿ ಬಾಲಿವುಡ್ ತೊರೆದಿದ್ದೇಕೆ?
 

ಹೌದು, ಸಲ್ಮಾನ್ ಐಷಾರಾಮಿ ಕೈಗಡಿಯಾರ PATEK PHILIPPEನ Aquanaut Luce Rainbow Minute Repeater Haute Joaillerie ವಾಚ್ ಧರಿಸಿದ್ದರು. ಇದು ಅನೇಕ ವೈಶಿಷ್ಟ್ಯಗಳನ್ನು ಹೊಂದಿದ್ದು, ವಾಚ್‌ನ ಬೆಲೆ USD 28,08,901 ಆಗಿದೆ, ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ ಬರೋಬ್ಬರಿ ರೂ. 23,45,12,054 ಆಗಿದೆ-ಅಂದರೆ ಇಪ್ಪತ್ಮೂರೂವರೆ ಕೋಟಿ ರೂಪಾಯಿಗಳು!

Salman Khan Flaunts An Aquanaut Luce Rainbow Watch At Anant Ambanis Haldi skr

ಬೆಲೆ ಕೇಳಿದ ನೆಟಿಜನ್ಸ್- ಇದಪ್ಪಾ, ಅಂಬಾನಿ ಮನೆ ಕಾರ್ಯಕ್ರಮಕ್ಕೆ 'ಅಂಬಾನಿ ಲೆವೆಲ್‌'ನಲ್ಲೇ ಹೋಗಬೇಕು ಎನ್ನುತ್ತಿದ್ದಾರೆ. ಮತ್ತೊಬ್ಬರು, ಅದೊಂದೇ ವಾಚ್ ನನಗೆ ಉಡುಗೊರೆಯಾಗಿ ಕೊಟ್ಟರೆ ಈ ಜೀವನ ಪೂರ್ತಿ ಒಂದೂ ಕೆಲಸ ಮಾಡದೆ ಐಶಾರಾಮಿಯಾಗಿ ಬದುಕಬಲ್ಲೆ ಎಂದಿದ್ದಾರೆ. 

ಅನಂತ್ ರಾಧಿಕಾ ಮದುವೆ ಆಮಂತ್ರಣ ಪತ್ರಿಕೆಯೊಂದರ ಬೆಲೆ ಭಾರತದಲ್ಲಿ ಬಹುತೇಕರ ವಾರ್ಷಿಕ ಸಂಬಳಕ್ಕೆ ಸಮ!
 

ಹೆಂಡತಿಗೆ ಖರ್ಚು ಮಾಡುವುದನ್ನೆಲ್ಲ ಉಳಿಸಿದ ಮೇಲೆ ಆ ದುಡ್ಡನ್ನು ಹೀಗೆಯೇ ಬಳಸಬೇಕು ಎಂದು ಭಾಯಿಜಾನ್ ಕಾಲೆಳೆದಿದ್ದಾರೆ ಮತ್ತೊಬ್ಬರು. 

Latest Videos
Follow Us:
Download App:
  • android
  • ios