ಅಂಬಾನಿ ಭಾವೀ ಸೊಸೆ ಡೈಮಂಡ್ ನೆಕ್ಲೆಸ್ ಡಿಸೈನ್ ಕಾಪಿ ಮಾಡಿದ್ರಾ ಬಾರ್ಬಿ ಫೇಮ್ ಮಾರ್ಗಾಟ್ ರಾಬಿ!
ರಾಧಿಕಾ ಮರ್ಚೆಂಟ್ ಫ್ಯಾಷನ್ ಐಕಾನ್. ಅವರು ಧರಿಸುವ ಬಟ್ಟೆ, ಅಲಂಕಾರಿಕ ವಸ್ತುಗಳು ಎಲ್ಲರ ಗಮನ ಸೆಳೆಯುತ್ತವೆ. ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ಸೆಲೆಬ್ರಿಟಿಗಳು ಕೂಡ ರಾಧಿಕಾ ಫ್ಯಾಷನ್ ಗೆ ಅಟ್ರ್ಯಾಕ್ಟ್ ಆದಂತಿದೆ.
ಇಬ್ಬರು ದಿಗ್ಗಜ ಸೆಲೆಬ್ರಿಟಿಗಳು ಒಂದೇ ರೀತಿ ಆಭರಣ, ಬಟ್ಟೆ ಧರಿಸಿದ್ರೆ ಅದು ಸಾಕಷ್ಟು ಸುದ್ದಿಯಾಗುತ್ತದೆ. ಬಾಲಿವುಡ್ ನಟಿ ಹಾಗೂ ಹಾಲಿವುಡ್ ನಟಿಯರಿಬ್ಬರೂ ಒಂದೇ ಡಿಸೈನ್ ಬಟ್ಟೆ, ಆಭರಣ ಧರಿಸಿದಾಗ ಎಲ್ಲರ ಕಣ್ಣು ಅವರ ಮೇಲೆ ಹೋಗುತ್ತದೆ. ಆದ್ರೀಗ ಇಲ್ಲಿ ಬಾಲಿವುಡ್ ಸ್ಟಾರ್ ಬದಲು ಭಾರತದ ಬಿಲಿಯನೇರ್ ಅಂಬಾನಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಮತ್ತು ಬಾರ್ಬಿ ಖ್ಯಾತಿಯ ಮಾರ್ಗಾಟ್ ರಾಬಿ ಫ್ಯಾಶನ್ ಫೇಸ್ಆಫ್ ಸುದ್ದಿಯಾಗಿದೆ.
ಆಭರಣ ತಜ್ಞ ಜೂಲಿಯಾ ಚೇಫ್ ಇವರಿಬ್ಬರ ವಿಡಿಯೋ (Video) ವನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಮರ್ಚೆಂಟ್ (Radhika Merchant) ಹಾಗೂ ಮಾರ್ಗಾಟ್ ರಾಬಿ, ಬೇರೆ ಬೇರೆ ಇವೆಂಟ್ ನಲ್ಲಿ ಒಂದೇ ರೀತಿಯ ವಜ್ರ (Diamond)ದ ನೆಕ್ಲೆಸ್ ಧರಿಸಿದ್ದನು ಅವರು ವಿಡಿಯೋದಲ್ಲಿ ತೋರಿಸಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ರಾಧಿಕಾ ಮರ್ಚೆಂಟ್, ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಭಾವಿ ಸೊಸೆ. ತಮ್ಮ ಫ್ಯಾಶನ್ ಸೆನ್ಸ್ ನಿಂದ ರಾಧಿಕಾ ಮರ್ಚೆಂಟ್ ಆಗಾಗ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಕೌಟುಂಬಿಕ ಕಾರ್ಯಕ್ರಮಗಳು ಮತ್ತು ರೆಡ್ ಕಾರ್ಪೆಟ್ ಲುಕ್ ನಲ್ಲಿ ಅವರು ಎಲ್ಲರನ್ನು ಮಂತ್ರಮುಗ್ದಗೊಳಿಸ್ತಾರೆ. ಯಾವುದೇ ಫ್ಯಾಷನ್ ಕ್ವೀನ್ ಗೂ ರಾಧಿಕಾ ಮರ್ಚೆಂಟ್ ಕಡಿಮೆಯಿಲ್ಲ. ಫ್ಯಾಷನ್ ಲಲನೆಯರಿಗೆ ರಾಧಿಕಾ ಕಠಿಣ ಸವಾಲೊಡ್ಡುತ್ತಾರೆ. ಅದಕ್ಕೆ ಈ ಘಟನೆ ಕೂಡ ಸಾಕ್ಷ್ಯವಾಗಿದೆ.
ಮಹಿಳೆಯರು ವಾಷ್ರೂಮ್ನಲ್ಲಿ ಹೆಚ್ಚೊತ್ತು ಇರೋದ್ಯಾಕೆ: ಬಾತ್‌ರೂಮಲ್ಲೇ ವೀಡಿಯೋ ಮಾಡಿದ ಸತ್ಯ ಸೀರಿಯಲ್ ನಟಿ
ಎನ್‌ಎಂಎಸಿಸಿ ಗಾಲಾ ನೈಟ್‌ನಲ್ಲಿ ವಜ್ರಗಳಿಂದ ತಯಾರಿಸಿರುವ ನೆಕ್ಲೇಸ್ ಧರಿಸಿದ್ದ ರಾಧಿಕಾ ಮರ್ಚೆಂಟ್ : ರಾಧಿಕಾ ಮರ್ಚೆಂಟ್ ಗಾಲಾ ನೈಟ್ ನಲ್ಲಿ ಮಿಂಚಿದ್ದರು. ಅವರು ಪ್ರಸಿದ್ಧ ವಿನ್ಯಾಸಕ ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸ ಮಾಡಿದ ಡ್ರೆಸ್ ಧರಿಸಿದ್ದರು. ಆಕಾಶ ನೀಲಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದ ರಾಧಿಕಾ, ಸ್ಕರ್ಟ್ ಅನ್ನು ತೆಳುವಾದ ಪಟ್ಟಿಗಳೊಂದಿಗೆ ಸ್ಟಿಚ್ ಮಾಡಿದ್ದ ಮಿನುಗುವ ಬ್ಲೌಸ್ ನೊಂದಿಗೆ ಧರಿಸಿದ್ದರು. ಇದಕ್ಕೆ ರಾಧಿಕಾ ಹಾಕಿದ್ದ ದುಪಟ್ಟಾ ಅವರ ನೋಟಕ್ಕೆ ಮತ್ತಷ್ಟು ಸೌಂದರ್ಯವನ್ನು ತಂದುಕೊಟ್ಟಿತ್ತು. ಈ ಕಾರ್ಯಕ್ರಮದಲ್ಲಿ ರಾಧಿಕಾ ಮರ್ಚೆಂಟ್ ತಮ್ಮ ಸುಂದರ ಅಲಂಕಾರದಿಂದ ಎಲ್ಲರನ್ನು ಬೆರಗುಗೊಳಿಸಿದ್ದರು. ಬನ್ ನಲ್ಲಿ ಕೂದಲನ್ನು ಕಟ್ಟಿಕೊಂಡಿದ್ದ ರಾಧಿಕಾ ಮರ್ಚೆಂಟ್, ತಮ್ಮ ಲುಕ್ ಗೆ ಇನ್ನಷ್ಟು ಚೆಲುವನ್ನು ನೀಡಲು ವಜ್ರದ ಆಭರಣಗಳನ್ನು ಆಯ್ದುಕೊಂಡಿದ್ದರು. ಸಾಕಷ್ಟು ವಜ್ರಗಳಿಂದ ಮಾಡಿದ ನೆಕ್ಲೇಸ್ ಮತ್ತು ಕೆಲವು ವಜ್ರದ ಉಂಗುರಗಳನ್ನು ರಾಧಿಕಾ ಧರಿಸಿದ್ದರು. ರಾಧಿಕಾ ಐದು ಲೇಯರ್ ಡೈಮಂಡ್ ನೆಕ್ಲೇಸ್ ಧರಿಸಿ ಕ್ಯಾಮರಾ ಮುಂದೆ ಬಂದ್ರೆ ಎಲ್ಲರ ಕಣ್ಣು ನೆಕ್ಲೆಸ್ ಮೇಲಿತ್ತು.
ಕತ್ರಿನಾ ಕೈಫ್ ಮೂಗಿನ ಸರ್ಜರಿ ತಪ್ಪಾಯ್ತು! ಫ್ಯಾನ್ಸ್‌ಗೆ ಬೇಜಾರು, ನಟಿ ಟ್ರೋಲ್‌ಗೆ ಗುರಿ!
ಯಾವ ಕಾರ್ಯಕ್ರಮದಲ್ಲಿ ಮಾರ್ಗಾಟ್ ರಾಬಿ ಧರಿಸಿದ್ರು ನೆಕ್ಲೆಸ್? : ಮಾರ್ಗಾರ್ಟ್ ರಾಬಿ ಆಸ್ಟ್ರೇಲಿಯಾದ ನಟಿ ಹಾಗೂ ನಿರ್ಮಾಪಕಿ. 50 ಮಿಲಿಯನ್ ಡಾಲರ್ ಗಳಿಸುವ ಮಾರ್ಗಾಟ್ ಅಭಿನಯದ ಬಾರ್ಬಿ ಚಿತ್ರ ಭರ್ಜರಿ ಹಣ ಗಳಿಸ್ತಿದೆ. ಮಾರ್ಗಾಟ್ ರಾಬಿಗೆ 33 ವರ್ಷ ವಯಸ್ಸು. ದಕ್ಷಿಣ ಕ್ಯಾಲಿಫೋರ್ನಿಯಾದ ಮಾಲಿಬುನಲ್ಲಿ ತನ್ನ ಬಾರ್ಬಿ ಚಿತ್ರದ ಪ್ರಚಾರಕ್ಕೆ ಬಂದಾಗ ವಜ್ರದ ಹಾರ ಧರಿಸಿದ್ದರು ಮಾರ್ಗಾಟ್. ಕಪ್ಪು ಬಣ್ಣದ ಮಿನುಗುವ ಶಿಯಾಪರೆಲ್ಲಿ ಉಡುಪು ಧರಿಸಿದ್ದ ಮಾರ್ಗಾಟ್ ರಾಬಿ, ಸ್ಟ್ರಾಪ್‌ಲೆಸ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಅವರ ಈ ಡ್ರೆಸ್ ಗೆ ವಜ್ರದ ನೆಕ್ಲೆಸ್ ಪರ್ಫೆಕ್ಟ್ ಲುಕ್ ನೀಡ್ತಾ ಇತ್ತು. ರಾಧಿಕಾ ಮರ್ಚೆಂಟ್ ಹಾಗೂ ಮಾರ್ಗಾಟ್ ರಾಬಿ ಧರಿಸಿದ್ದ ವಜ್ರದ ನೆಕ್ಲೆಸ್ ನಲ್ಲಿ ಒಂದೇ ಒಂದು ವ್ಯತ್ಯಾಸವನ್ನು ನೀವು ಗುರುತಿಸಬಹುದು. ಅದೆಂದ್ರೆ ಮಾರ್ಗಾಟ್ ರಾಬಿ ಧರಿಸಿದ್ದ ನೆಕ್ಲೆಸ್ ಸ್ಟಾಕ್ ನಾಲ್ಕು ಪದರಗಳನ್ನು ಹೊಂದಿತ್ತು.