ಫ್ಯಾಷನ್ ಜಗತ್ತು ಯಾವಾಗಲೂ ವಿಭಿನ್ನತೆಯನ್ನು ಹುಡುಕುತ್ತದೆ. ಒಂದಕ್ಕಿಂತ ಒಂದು ವಿಭಿನ್ನವಾಗಿರಬೇಕು. ಆದರೆ ಅದಕ್ಕೆ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ. ಈಗ ಫ್ಯಾಷನ್ ಜಗತ್ತನ್ನು ಆಳುತ್ತಿರುವುದು ಒಂದೇ ಕಾಲಿನ ಜೀನ್ಸ್!

ಸಾಮಾಜಿಕ ಜಾಲತಾಣದಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಶುರುವಾಗಿದೆ. ಅದೇ ಒನ್ ಲೆಗ್ಡ್ ಜೀನ್ಸ್ (one legged jeans). ಬೆಲೆ ಸ್ವಲ್ಪ ಜಾಸ್ತಿನೇ, 38,330 ರೂಪಾಯಿ (ಅಂದ್ರೆ 440 ಡಾಲರ್) ಅಷ್ಟೇ. ಫ್ರೆಂಚ್ ಫ್ಯಾಷನ್ ಬ್ರ್ಯಾಂಡ್ ಕೋಪರ್ನಿ ಫ್ಯಾಷನ್ ಪ್ರಿಯರಿಗಾಗಿ ಈ ಒನ್ ಲೆಗ್ಡ್ ಜೀನ್ಸ್ ತಂದಿದೆ. ಆದರೆ, ಇದು ಅಷ್ಟಾಗಿ ಉಪಯೋಗಕ್ಕೆ ಬರುತ್ತಾ ಅಂತ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಬಾಳಿಕೆ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ.

Add Asianetnews Kannada as a Preferred SourcegooglePreferred

ಟಿಕ್ ಟಾಕ್‌ನಲ್ಲಿ 16 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 7 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಸ್ಟಿ ಸಾರಾ, ಈ ಒಂದೇ ಕಾಲಿನ ಜೀನ್ಸ್‌ನ್ನು ಸಾಮಾಜಿಕ ಜಾಲತಾಣಕ್ಕೆ ಪರಿಚಯಿಸಿದ್ದಾರೆ. 'ಇಂಟರ್ನೆಟ್‌ನ ಅತ್ಯಂತ ವಿವಾದಾತ್ಮಕ ಜೀನ್ಸ್' ಎಂದು ಜೀನ್ಸ್‌ಗೆ ಹೆಸರಿಸಿದ್ದಾರೆ. ಕ್ರಿಸ್ಟಿ ಜೀನ್ಸ್ ಪರಿಚಯಿಸುವಾಗ ಆಕೆಯ ಗಂಡ ಜೀನ್ಸ್ ವಿರುದ್ಧ ಮಾತನಾಡಿದ್ದಾರೆ. ಇದನ್ನು ಯಾರೂ ಹಾಕಿಕೊಳ್ಳಲ್ಲ ಅಂತ ಅವರಿಗೆ ಗ್ಯಾರಂಟಿ ಇದೆಯಂತೆ. ತುಂಬಾ ಜನ ಕ್ರಿಸ್ಟಿ ಗಂಡನ ಮಾತಿಗೆ ಸಮ್ಮತಿಸಿದ್ದಾರೆ. ಇದು ವಿಚಿತ್ರ ಮತ್ತು ಹಾಸ್ಯಾಸ್ಪದ ಅಂತ ಕಾಮೆಂಟ್ ಮಾಡಿದ್ದಾರೆ.

Read More:ರೈಲಿನಲ್ಲಿ 5 ಸೌಲಭ್ಯಗಳು ಸಂಪೂರ್ಣ ಉಚಿತ, 99% ಪ್ರಯಾಣಿಕರಿಗೆ ಇದು ತಿಳಿದಿಲ್ಲ!

View post on Instagram

Read More: ರಸ್ತೆಯಲ್ಲಿ ಕಾರ್‌ ನಿಲ್ಲಿಸಿ ಮೂತ್ರ ಮಾಡಿದ, ಪ್ರಶ್ನಿಸಿದ್ದಕ್ಕೆ ಮರ್ಮಾಂಗ ತೋರಿಸಿದ; BMW ಬಾಯ್‌ಗೆ ಬಲೆ ಬೀಸಿದ ಪೊಲೀಸ್‌!

ರುಪಾಲ್ಸ್ ಡ್ರ್ಯಾಗ್ ರೇಸ್, ಕ್ವೀರ್ ಐ ಫಾರ್ ದಿ ಸ್ಟ್ರೈಟ್ ಗೈ ಮೂಲಕ ಫೇಮಸ್ ಆದ ಎಮ್ಮಿ ಅವಾರ್ಡ್ ವಿನ್ನರ್ ಸ್ಟೈಲಿಸ್ಟ್ ಕಾರ್ಸನ್ ಕ್ರೆಸ್ಲಿ ಕೂಡ ಇದೇ ಅಭಿಪ್ರಾಯ ಪಟ್ಟಿದ್ದಾರೆ. ಆ ಜೀನ್ಸ್‌ನಲ್ಲಿ ನಿಲ್ಲೋಕೆ ಒಂದು ಕಾಲು ಕೂಡ ಇರಲ್ಲ ಅಂತ ಕಾರ್ಸನ್ ನ್ಯೂಯಾರ್ಕ್ ಪೋಸ್ಟ್‌ಗೆ ಹೇಳಿದ್ದಾರೆ. ಆದ್ರೆ ಫ್ರೆಂಚ್ ಲಕ್ಸುರಿ ಬ್ರ್ಯಾಂಡ್ ಕೋಪರ್ನಿ "ಒನ್-ಲೆಗ್ ಡೆನಿಮ್ ಟ್ರೌಸರ್" ಹೆಸರಲ್ಲಿ ಡೆನಿಮ್ ಪೀಸ್‌ನ ಎಲ್ಲಾ ಸೈಜ್‌ನಲ್ಲೂ ಮಾರ್ಕೆಟ್‌ಗೆ ತಂದು ಮಾರಾಟ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಬಂದ್ರೂ ಈ ತರ ಅರ್ಧಂಬರ್ಧ ಬಟ್ಟೆಗಳಿಗೆ ಫ್ಯಾಷನ್ ಮಾರ್ಕೆಟ್‌ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.