ವಾಷಿಂಗ್ಟನ್‌ನಲ್ಲಿ ನಡೆದ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸಮಾರಂಭದಲ್ಲಿ ನೀತಾ ಅಂಬಾನಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸೀರೆ ಧರಿಸಿ ಮಿಂಚಿದರು. ಜಮೇವಾರ್ ರೇಷ್ಮೆ ಸೀರೆ, ಚಿನ್ನದ ಕಸೂತಿ, ಹಾಗೂ ವಜ್ರ-ಮುತ್ತಿನ ಆಭರಣಗಳಿಂದ ಅಲಂಕೃತರಾಗಿದ್ದರು. ಕಾಂಚೀಪುರಂ ಸೀರೆಯಲ್ಲೂ ಕಾಣಿಸಿಕೊಂಡಿದ್ದ ಅವರ ಉಡುಗೆ ತೊಡುಗೆಗಳು ಭಾರತೀಯ ಸಂಪ್ರದಾಯದ ಪ್ರತೀಕವಾಗಿದ್ದವು.

ಅಮೆರಿಕಾದ ವಾಷಿಂಗ್ಟನ್ (USA Washington) ನಲ್ಲಿ ನಡೆದ ಡೊನಾಲ್ಡ್ ಟ್ರಂಪ್ (Donald Trump) ಪ್ರಮಾಣ ವಚನ ಕಾರ್ಯಕ್ರಮದಲ್ಲಿ ರಿಲಾಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ (Reliance Industries chief Mukesh Ambani) ಪತ್ನಿ ಹಾಗೂ ಉದ್ಯಮಿ ನೀತಾ ಅಂಬಾನಿ (Nita Ambani) ಮಿಂಚಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನೀತಾ, ಭಾರತೀಯ ಸಂಸ್ಕೃತಿಯನ್ನು ಸಾರುವ ಸೀರೆ ಧರಿಸಿದ್ದರು. ನೀತಾ ಅಂಬಾನಿ ಸೀರೆ ಮಾತ್ರವಲ್ಲದೆ ಅವರು ಧರಿಸಿದ್ದ ಪಚ್ಚೆ, ಮಾಣಿಕ್ಯ ಹಾಗೂ ವಜ್ರದ ಆಭರಣಗಳು ಎಲ್ಲರ ಗಮನ ಸೆಳೆದಿವೆ. 

ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಫ್ಯಾಷನ್ ಐಕಾನ್. ಅವರು ಎಲ್ಲೇ ಹೋದ್ರೂ ಸುದ್ದಿ ಮಾಡ್ತಾರೆ. ಅಮೆರಿಕಾದಲ್ಲಿ ಎರಡನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ಹಿಡಿದಿರುವ ಡೋನಾಲ್ಡ್ ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಅದ್ರಲ್ಲಿ ನಮ್ಮ ಭಾರತದ ಮಹಿಳೆ ನೀತಾ ಎಲ್ಲರನ್ನು ಆಕರ್ಷಿಸಿದ್ದಾರೆ. ಅವರು ಧರಿಸಿದ್ದ ಸೀರೆ ಹಾಗೂ ಅದ್ರ ಮೇಲಿದ್ದ ಡಿಸೈನ್ ಜೊತೆ ಆಭರಣಗಳು ಕಣ್ಣು ಕುಕ್ಕಿವೆ. 

ಅಮೆರಿಕದಲ್ಲಿ ಕಾಂಚಿಪುರಂ ಸೀರೆಯುಟ್ಟು ಭಾರತದ ಸಂಪ್ರದಾಯ ಮೆರೆಸಿದ ನೀತಾ ಅಂಬಾನಿ!

ಕ್ಯಾಂಡಲ್ ಲೈಟ್ ಡಿನ್ನರ್ ನಲ್ಲೂ ಸೀರೆ ಮೆರಗು : ನೀತಾ ಅಂಬಾನಿ, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕಾಂಚಿಪುರಂ ಸೀರೆ ಧರಿಸಿದ್ದರು. ಅದ್ರ ಜೊತೆ 200 ವರ್ಷಗಳ ಹಳೆಯ ಪಜ್ಜೆ ಹಾಗೂ ವಜ್ರದಿಂದ ಮಾಡಿದ್ದ ಆಭರಣವನ್ನು ಹಾಕಿದ್ದರು. ಪ್ರಮಾಣ ವಚನದಲ್ಲಿ ಮಾತ್ರವಲ್ಲ ಟ್ರಂಪ್ ಕ್ಯಾಂಡಲ್ ಲೈಟ್ ಡಿನ್ನರ್ ನಲ್ಲಿಯೂ ನೀತಾ ಸೀರೆಯುಟ್ಟಿದ್ದು ಮತ್ತಷ್ಟು ಗಮನ ಸೆಳೆದಿದೆ. ನೀತಾ ಮಾಡರ್ನ್ ಡ್ರೆಸ್ ನಲ್ಲಿ ಮಿಂಚುವ ಅವಕಾಶವಿತ್ತು. ಆದ್ರೆ ಭಾರತದ ಸಂಪ್ರದಾಯ ಸಾರುವ ಸೀರೆಯನ್ನು ಅವರು ಧರಿಸಿದ್ದರು. ಈ ಸೀರೆ ಸಾಕಷ್ಟು ವಿಶೇಷತೆಯನ್ನು ಹೊಂದಿದೆ.

ನೀತಾ ಅಂಬಾನಿ, ತರುಣ್ ತಹಿಲಿಯಾನಿ ಡಿಸೈನ್ ಮಾಡಿರುವ ಜಮೇವಾರ್ ಸೀರೆಯಲ್ಲಿ ಸುಂದರವಾಗಿ ಕಾಣ್ತಿದ್ದರು. ಚಿನ್ನದ ಕಸೂತಿಯಿಂದ ಈ ಸೀರೆ ಸಿದ್ಧವಾಗಿದೆ. ಅದಕ್ಕೆ ಕ್ಲಾಸಿಕ್ ಆರಿ ಕೆಲಸ ಮತ್ತು ಫ್ರೆಂಚ್ ಗಂಟುಗಳ ಕಸೂತಿ ಇದೆ. ಬಾರ್ಡರ್ ಗೆ ಗೋಲ್ಡ್ ಸ್ಪರ್ಶ ನೀಡುವ ಮೂಲಕ ಹೈಲೈಟ್ ಮಾಡಲಾಗಿದೆ. ನೀತಾ ಅಂಬಾನಿ ಈ ಸೀರೆಗೆ ಹಾಪ್ ಸ್ಲೀವ್ ಮ್ಯಾಂಡರಿನ್ ಕಾಲರ್ ಶೈಲಿಯ ಬ್ಲೌಸ್ ಧರಿಸಿದ್ದರು. ಇದಕ್ಕೂ ಗೋಲ್ಡ್ ಕಸೂರಿ ಸ್ಪರ್ಶವನ್ನು ನೀಡಲಾಗಿದೆ. ಸೀರೆಗೆ ಹೊಂದುವ ಬ್ಲೌಸ್, ನೀತಾ ಅಂಬಾನಿ ಸೌಂದರ್ಯವನ್ನು ದುಪ್ಪಟ್ಟು ಮಾಡಿತ್ತು. ಈ ಸೀರೆ ಮತ್ತು ಬ್ಲೌಸ್ ತಯಾರಿಸಲು 1900 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ.

ಟ್ರಂಪ್ ಪ್ರೀ ಇನೋಗ್ರೇಶನ್‌ ಪಾರ್ಟಿಯಲ್ಲಿ ಭಾಗವಹಿಸಿದ ಮುಖೇಶ್ ಅಂಬಾನಿ-ನೀತಾ

ನೀತಾ ಅಂಬಾನಿ ಸೀರೆಗಿಂತ ಅವರ ಆಭರಣಗಳು ಹೈಲೈಟ್ ಆಗಿದ್ದು ಸುಳ್ಳಲ್ಲ. ವಜ್ರ ಮತ್ತು ಮುತ್ತಿನ ಆಭರಣಗಳನ್ನು ನೀತಾ ಧರಿಸಿದ್ದರು. ಅವರ ಅದ್ಭುತ ಕಿವಿಯೋಲೆ ಅಥವಾ ಬಳೆ ಅವರನ್ನು ಪರಿಪೂರ್ಣಗೊಳಿಸಿತ್ತು. ಹಣೆಯ ಮೇಲಿನ ಬಿಂದಿ ಹಾಗೂ ತೆರೆದ ಕೂದಲು ನೀತಾ ಅಂಬಾನಿ ಅಂದವನ್ನು ಹೆಚ್ಚಿಸಿತ್ತು. 

ಅದಕ್ಕೂ ಮುನ್ನ ನೀತಾ ಅಂಬಾನಿ ಕಾಂಚಿಪುರಂ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಮನೀಶ್ ಮಲ್ಹೋತ್ರಾ ಅವರು ಸ್ವದೇಶ್ ಇಂಡಿಯಾದ ಸಹಯೋಗದೊಂದಿಗೆ ವಿನ್ಯಾಸಗೊಳಿಸಿದ್ದರು. ಆ ಸೀರೆಗೆ ಅವರು ಪಚ್ಚೆ, ಮಾಣಿಕ್ಯ ಮತ್ತು ವಜ್ರದ ಆಭರಣ ಧರಿಸಿದ್ದರು. ನೀತಾರ ಗಿಳಿಯ ಆಕಾರದ ಪೆಂಡೆಂಟ್ ಕ್ಲಾಸಿ ಮತ್ತು ರಾಯಲ್ ಲುಕ್ ನೀಡಿತ್ತು. ನೀತಾ ಅಂಬಾನಿ ಭಾರತೀಯ ವಸ್ತುಗಳನ್ನು ಪ್ರೀತಿಸ್ತಾರೆ ಹಾಗೆ ಭಾರತೀಯ ಸಂಪ್ರದಾಯವನ್ನು ಪಾಲಿಸ್ತಾರೆ. ಜಮೇವಾರ್ ಮತ್ತು ಪಾರಂಪರಿಕ ಜವಳಿಗಳ ಅದ್ಭುತ ಸಂಗ್ರಹವನ್ನು ಅವರು ಹೊಂದಿದ್ದಾರೆ.