Asianet Suvarna News Asianet Suvarna News

ಮತದಾನದ ವೇಳೆ ನೀತಾ ಅಂಬಾನಿ ಧರಿಸಿದ್ದ ದುಪಟ್ಟಟ್ಟಾಗಿದೆ ದಕ್ಷಿಣ ಭಾರತದ ನಂಟು!

ನೀತಾ ಅಂಬಾನಿ ಧರಿಸಿದ ದುಪ್ಪಟ್ಟ ಇದೀಗ ಭಾರಿ ಸದ್ದು ಮಾಡುತ್ತಿದೆ. ನೀತಾ ಅಂಬಾನಿಯ ದುಪ್ಪಟ್ಟಗೂ ದಕ್ಷಿಣ ಭಾರತಕ್ಕೂ ವಿಶೇಷ ನಂಟಿದೆ. ಇಷ್ಟೇ ಅಲ್ಲ ಶ್ರೀಮಂತ ಸಂಸ್ಕೃತಿಯ ಅನಾವರಣ ಈ ದುಪಟ್ಟದಲ್ಲಿದೆ.
 

Nita Ambani wears rich Indian tradition Handloom kalamkari dupatta during poll ckm
Author
First Published May 23, 2024, 7:04 PM IST

ಮುಂಬೈ(ಮೇ.23: ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಫ್ಯಾಶನ್ ಪ್ರತಿ ಬಾರಿ ಸಂಚಲನ ಮೂಡಿಸುತ್ತದೆ. ದುಬಾರಿ ಬೆಲೆಯ ಆಭರಣ, ಸೀರೆ ಸೇರಿದಂತೆ ನೀತಾ ಅಂಬಾನಿಯ ಫ್ಯಾಶನ್ ಪ್ರತಿಯೊಂದು ಸುದ್ದಿಯಾಗಿದೆ. ಇದೀಗ ಮಹಾರಾಷ್ಟ್ರದ ಮತದಾನದ ವೇಳೆ ನೀತಾ ಅಂಬಾನಿ ಧರಿಸಿದ ದುಪ್ಪಟ್ಟ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ನೀತಾ ಅಂಬಾನಿ ಮತದಾನಕ್ಕೆ ತೆರಳುವಾಗ ಕಲಂಕರಿ ದುಪ್ಪಟ್ಟಾ ಧರಿಸಿ ಎಲ್ಲರ ಗಮನಸೆಳೆದಿದ್ದಾರೆ. 

ಕಲಂಕರಿ ಸಂಪೂರ್ಣ ಸ್ವದೇಶಿ ದುಪ್ಪಟ್ಟ. ವಿಶೇಷ ಅಂದರೆ ಕಲಂಕರಿ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ವಸ್ತ್ರವಾಗಿದೆ.  ನಮ್ಮ ಜನಪದ ಸಂಪ್ರದಾಯಗಳ ಆಚರಣೆ ಹಾಗೂ ಪೀಳಿಗೆಗಳ ಕಲಾವಿದರ ಕೈಚಳಕದಿಂದ ಕಲಂಕರಿ ದುಪ್ಪಟ್ಟ ತಯಾರಾಗಿದೆ. ಕಲಂಕರಿ ಆಂಧ್ರ ಪ್ರದೇಶದ ಸಣ್ಣ ಪಟ್ಟಣ. ಇದು ಪರ್ಶಿಯನ್ ಮೂಲದ ಹೆಸರು. ಈ ಊರಿನಲ್ಲಿ ವಿಶೇಷವಾಗಿ ಕಾಟನ್ ಬಟ್ಟೆಗಳಲ್ಲಿ ವಿಶೇಷ ನಾಜೂಕಾಗಿ ತಯಾರಿಸುವ ಕಲಾಕೃತಿಗಳ ಹೂರಣದಿಂದ ಈ ಹೆಸರು ಬಂದಿದೆ. 

ದುಬೈನಲ್ಲಿ 650 ಕೋಟಿಯ ಬಂಗಲೆ, ಡೈಮಂಡ್ ನೆಕ್ಲೇಸ್‌; ಅಂಬಾನಿ ದಂಪತಿ, ಮಕ್ಕಳಿಗೆ ಕೊಟ್ಟಿರೋ ದುಬಾರಿ ಗಿಫ್ಟ್‌ಗಳಿವು!

ಇದು ಕೈಯಿಂದ ಚಿತ್ರಿಸಲಾದ  ವ್ಯಾಖ್ಯಾನವನ್ನು ಮತ್ತು ಭಾರತದ ರೋಮಾಂಚಕ ಕಥೆ ಹೇಳುವ ಪರಂಪರೆಯನ್ನು ಪ್ರದರ್ಶಿಸುತ್ತದೆ. ಅದು ಕೂಡ ಸಂಕೀರ್ಣವಾದ ನವಿಲು ಮತ್ತು ಹೂವಿನ ಸೊಗಸಾದ ನೇಯುವಿಕೆ ಮೂಲಕ ಉತ್ಕೃಷ್ಟತೆಯನ್ನು ಪ್ರದರ್ಶಿಸುತ್ತದೆ. ಅವುಗಳನ್ನು ಆಂಧ್ರಪ್ರದೇಶದ ಶ್ರೀಕಾಳಹಸ್ತಿಯ ಕಲಾವಿದರು ತುಂಬ ಪ್ರೀತಿ ಹಾಗೂ ಕಾಳಜಿಯಿಂದ ತಮ್ಮ ಕೈಯಿಂದ ರೂಪಿಸುತ್ತಾರೆ. 

ಈ ದುಪಟ್ಟಾದ ವಿಶೇಷ ಏನೆಂದರೆ, ಇದು ಸ್ವದೇಶ್‌ನ ಸಾರವನ್ನು ಒಳಗೊಂಡಿದೆ - ಭಾರತದ ಶ್ರೀಮಂತ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು, ಸಂಭ್ರಮಿಸಲು ಮತ್ತು ಉತ್ತೇಜಿಸಲು ಇದೊಂದು ವಿನಮ್ರ ಪ್ರಯತ್ನವಾಗಿದೆ. ನೀತಾ ಅಂಬಾನಿ ವಸ್ತ್ರವಿನ್ಯಾಸವು ಅತ್ಯುತ್ತಮ ಭಾರತೀಯ ಕರಕುಶಲತೆಯನ್ನು ಜಗತ್ತಿಗೆ ಪ್ರದರ್ಶಿಸುವ ಅವರ ಬದ್ಧತೆಯ ಮತ್ತೊಂದು ಸಂಕೇತವಾಗಿದೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಡ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮದ ಸಮಾರೋಪದಲ್ಲಿ ನೀತಾ ಅಂಬಾನಿ ಕಾಂಚಿಪುರಂ ಸೀರೆ ಧರಿಸಿದ್ದರು. ಈ ಸೀರೆಯಲ್ಲಿ  ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಇಬ್ಬರ ಹೆಸರಿನಲ್ಲಿನ ಇನಿಷಿಯಲ್  ಮುದ್ರಿತಗೊಂಡಿದೆ. ಪ್ರತಿ ಸೂಕ್ಷ್ಮವಾದ ವಿವರವು ದೇವಾಲಯಗಳ ಶ್ರೀಮಂತಿಕೆ, ಪವಿತ್ರ ಕಟ್ಟಡಗಳು ಹಾಗೂ ಶಿಲ್ಪಕಲೆಯ ಪ್ರತಿರೂಪಗಳು ಈ ಸೀರೆಯಲ್ಲಿ ಕಂಗೊಳಿಸುತ್ತಿದೆ.  ಕಾಂಚೀಪುರಂ ರೇಷ್ಮೆ ಸೀರೆ ಮಾದರಿಗಳಲ್ಲಿ ಕಾಣಸಿಗುವ 102 ವಿನ್ಯಾಸಗಳೂ ಇದರಲ್ಲಿದೆ. 

Anant Ambani-Radhika Merchant, ಸೆಕೆಂಡ್‌ ಗ್ರ್ಯಾಂಡ್ ಪ್ರಿ-ವೆಡ್ಡಿಂಗ್‌ಗೆ ಅಂಬಾನಿ ಫ್ಯಾಮಿಲಿ ಭರ್ಜರಿ ತಯಾರಿ!

Latest Videos
Follow Us:
Download App:
  • android
  • ios