Kannada

ದುಬಾರಿ ವಾಲ್‌ಪೇಪರ್‌ಗೆ ಗುಡ್‌ಬೈ! ಪುಟ್ಟಿಯಿಂದಲೇ ಲಿವಿಂಗ್ ರೂಮ್‌ಗೆ 7 ಡಿಸೈನ್

ಮನೆಗೆ ಹೊಸ ಲುಕ್ ನೀಡಲು ದುಬಾರಿ ವಾಲ್‌ಪೇಪರ್‌ಗಳ ಮೊರೆ ಹೋಗಬೇಕಿಲ್ಲ. ವಾಲ್ ಪುಟ್ಟಿಯನ್ನು ಬಳಸಿಕೊಂಡು ಗೋಡೆಗಳ ಮೇಲೆ ಸುಂದರವಾದ ಡಿಸೈನ್‌ಗಳನ್ನು ರಚಿಸಬಹುದು. ಇದು ನಿಮ್ಮ ಮನೆಗೆ ಪ್ರೀಮಿಯಂ ಲುಕ್ ನೀಡುತ್ತದೆ.

Kannada

ಜಪಾನೀಸ್ ಕ್ರೇನ್ ವಿತ್ ಸನ್‌ಸೆಟ್ ವಾಲ್‌ಪೇಪರ್

ನಿಸರ್ಗದಿಂದ ಪ್ರೇರಿತವಾದ ಈ ವಾಲ್ ಪುಟ್ಟಿ ಡಿಸೈನ್, ಲಿವಿಂಗ್ ರೂಮ್‌ಗೆ ಬೋಲ್ಡ್ ಲುಕ್ ನೀಡುತ್ತದೆ. ಇದರಲ್ಲಿ ಸೂರ್ಯೋದಯದ ಜೊತೆ ಕ್ರೇನ್ ಹಕ್ಕಿಯ ಕಾಂಬಿನೇಷನ್ ಇದೆ. ಇದು ಈಗಿನ ಟ್ರೆಂಡ್‌ಗೆ ಸರಿಹೊಂದುತ್ತದೆ. 

Image credits: pinterest
Kannada

ಕ್ಲಾಸಿಕ್ ವಿಕ್ಟೋರಿಯನ್ ಬಾರ್ಡರ್ ವಾಲ್‌ಪೇಪರ್

ಟೈಮ್‌ಲೆಸ್ ಹಾಗೂ ಕ್ಲಾಸಿಕ್ ಲುಕ್‌ಗಾಗಿ ಈ ಡಿಸೈನ್ ಸೂಕ್ತ. ಇದು ಮನೆಗೆ ಅರಮನೆಯಂತಹ ರಾಯಲ್ ನೋಟ ನೀಡುತ್ತದೆ. ಇದರಲ್ಲಿ ಸೂಕ್ಷ್ಮ ಕೆತ್ತನೆಗಳೊಂದಿಗೆ ವಿಕ್ಟೋರಿಯನ್ ಫ್ರೇಮ್ ಪುಟ್ಟಿ ವರ್ಕ್ ಇದೆ.

Image credits: pinterest
Kannada

ವೈಲ್ಡ್ ಫ್ಲವರ್ ರಾಸ್ಟಿಕ್ ಫಿನಿಶ್

ನ್ಯಾಚುರಲ್ ಹಾಗೂ ಹಳ್ಳಿಗಾಡಿನ ಸೊಗಡಿನ ವೈಬ್‌ಗಾಗಿ ಈ ವಿಂಟೇಜ್ ಚಾರ್ಮ್ ಟೆಕ್ಸ್ಚರ್ಡ್ ವಾಲ್ ಪರ್ಫೆಕ್ಟ್. ಇದರಲ್ಲಿ ಹಳದಿ ಮತ್ತು ಕಿತ್ತಳೆ ಬಣ್ಣದ ಪುಟ್ಟಿಯಿಂದ ಕಾಡು ಹೂವುಗಳನ್ನು ರಚಿಸಲಾಗಿದೆ.

Image credits: pinterest
Kannada

3D ಲೋಟಸ್ ಎಂಬಾಸ್ ಡಿಸೈನ್

ನಿಮ್ಮ ಕೋಣೆಯಲ್ಲಿ ಬಿಳಿ ಬಣ್ಣದ ಪೇಂಟ್ ಇದ್ದರೆ, ಈ 3D ವಾಲ್ ಪುಟ್ಟಿ ವಾಲ್‌ಪೇಪರ್ ಆಯ್ಕೆ ಮಾಡಿ. ಇದು ದೇವರ ಮನೆ ಅಥವಾ ಹಾಲ್‌ಗೆ ಪರ್ಫೆಕ್ಟ್ ಆಗಿದೆ. ಕಮಲವು ಶಾಂತಿ ಮತ್ತು ಭವ್ಯತೆಯ ಸಂಕೇತವಾಗಿದೆ.

Image credits: pinterest
Kannada

ಬ್ಯಾಕ್-ಲಿಟ್ ಲೀಫ್ ಡಿಸೈನ್

ದೊಡ್ಡ ಎಲೆಗಳಿರುವ ಈ ಪುಟ್ಟಿ ವಾಲ್‌ಪೇಪರ್, ಮನೆಗೆ ಲಕ್ಷುರಿ ಹಾಗೂ ಫ್ಯೂಚರಿಸ್ಟಿಕ್ ವೈಬ್ ನೀಡುತ್ತದೆ. ನೀವು ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರೆ ಇದು ನಂಬರ್ 1 ಆಯ್ಕೆಯಾಗಿದೆ.  

Image credits: pinterest
Kannada

ಕೃಷ್ಣ ಭಕ್ತಿ ಎಂಬಾಸ್ಡ್ ಮ್ಯೂರಲ್

ಕಲೆ ಮತ್ತು ಆಧ್ಯಾತ್ಮವನ್ನು ಒಟ್ಟಿಗೆ ತರಲು, ಪುಟ್ಟಿಯಿಂದ ಶ್ರೀಕೃಷ್ಣನ ಈ ಕಲಾಕೃತಿಯನ್ನು ಮಾಡಿಸಬಹುದು. ಇದರ ಜೊತೆಗೆ ಬ್ಯಾಕ್‌ಲಿಟ್ ಲೈಟಿಂಗ್, ಇದನ್ನು ಮುಖ್ಯ ದ್ವಾರಕ್ಕೆ ಪರ್ಫೆಕ್ಟ್ ಆಗಿ ಮಾಡುತ್ತದೆ.

Image credits: pinterest
Kannada

ರಾಯಲ್ ಲಿಲಿ ಫ್ಲವರ್ ಆರ್ಟ್

ಮನೆಗೆ ರಾಯಲ್ ಹಾಗೂ ಎಲಿಗೆಂಟ್ ಫೀಲ್ ನೀಡಲು ಪುಟ್ಟಿಯಿಂದ ಲಿಲಿ ಹೂವಿನ ಆರ್ಟ್ ಮಾಡಿಸಿ. ಇದು ರೂಮ್, ಹಾಲ್ ಹೀಗೆ ಎಲ್ಲೆಡೆ ಅಂದವಾಗಿ ಕಾಣುತ್ತದೆ. ಸಾಫ್ಟ್, ಮಿನಿಮಲಿಸ್ಟಿಕ್ ಲುಕ್‌ಗಾಗಿ ಉತ್ತಮ ಆಯ್ಕೆ.

Image credits: pinterest

ಮಕ್ಕಳ ಹಳೆ ನೋಟ್‌ಬುಕ್‌ ರದ್ದಿಗೆ ಹಾಕಬೇಡಿ, 6 ಕ್ರಿಯೇಟಿವ್ ಕ್ರಾಫ್ಟ್‌ ಮಾಡಿಸಿ

ಗಾಜು, ಅರಗಿನ ಬಳೆಗಿಂತ ಈಗ ರೆಸಿನ್ ಬ್ಯಾಂಗಲ್ಸ್ ಟ್ರೆಂಡ್! ಮುರಿಯೋ ಚಿಂತೆಯೇ ಇಲ್ಲ

Gen Z ಹೆಣ್ಮಕ್ಕಳಿಗಾಗಿ 1 ಗ್ರಾಂ ಗೋಲ್ಡ್‌ನಲ್ಲಿ ಮಾಡಿಸಿ 6 ಟ್ರೆಂಡಿ ಲಾಕೆಟ್‌ಗಳು!

ಹಳೆ ಕಾಲುಂಗುರವನ್ನು ಮತ್ತೆ ಬಳಸಲು ಇಲ್ಲಿದೆ 5 ಐಡಿಯಾಗಳು: ಹಣವೂ ಉಳಿತಾಯ