ನಿಮ್ಮ ಹೇರ್‌ಸ್ಟೈಲ್‌ಗೆ ನ್ಯಾಚುರಲ್ ಮತ್ತು ಸುಂದರವಾದ ಲುಕ್ ನೀಡಲು, ಪೂರ್ತಿ ಹೂವುಗಳ ಬದಲು ಹೂವಿನ ಎಸಳುಗಳನ್ನು ಬಳಸುವುದು ಈಗ ಹೊಸ ಟ್ರೆಂಡ್. ಇದು ನಿಮ್ಮ ಕೇಶವಿನ್ಯಾಸವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
fashion Mar 12 2026
Author: Govindaraj S Image Credits:Gemini/al
Kannada
ಗುಲಾಬಿ ಎಸಳುಗಳನ್ನು ಬಳಸಿ ನೋಡಿ
ಹೂವಿನ ಬದಲು ನಟಿ ಅಶ್ನೂರ್ ಕೌರ್ ತಮ್ಮ ಜಡೆಗೆ ಗುಲಾಬಿ ಎಸಳುಗಳನ್ನು ಬಳಸಿದ್ದಾರೆ. ನೀವು ಕೂಡ ನಿಮ್ಮ ಹೇರ್‌ಸ್ಟೈಲ್‌ನಲ್ಲಿ ಈ ರೀತಿಯ ಲುಕ್ ಟ್ರೈ ಮಾಡಬಹುದು. ದಾರದ ಸಹಾಯದಿಂದ ಎಸಳುಗಳ ಸರ ಮಾಡಿ ಕೂದಲಿಗೆ ಸಿಕ್ಕಿಸಿ.
Image credits: Instagram
Kannada
ಬನ್‌ಗೆ ಗುಲಾಬಿ ಎಸಳಿನ ಸಿಂಗಾರ
ನೀವು ಬನ್ ಹಾಕುತ್ತಿದ್ದರೆ, ಹೂವಿನ ಬದಲು ಗುಲಾಬಿ ಎಸಳುಗಳನ್ನು ಬನ್ ನೆಟ್‌ಗೆ ಅಟ್ಯಾಚ್ ಮಾಡಿ ಕೂದಲಿಗೆ ಸಿಕ್ಕಿಸಿ. ಇದು ನೋಡಲು ತುಂಬಾನೇ ಸುಂದರವಾಗಿ ಕಾಣುತ್ತದೆ.
Image credits: Instagram
Kannada
ಫಿಶ್‌ಟೇಲ್‌ಗೆ ನೇರಳೆ ಬಣ್ಣದ ಎಸಳುಗಳು
ನೀವು ನೇರಳೆ ಬಣ್ಣದ ಹೂವಿನ ಎಸಳುಗಳನ್ನು ದಾರದಲ್ಲಿ ಪೋಣಿಸಿ. ನಂತರ ಫಿಶ್‌ಟೇಲ್ ಜಡೆಯ ಎರಡೂ ಬದಿಗೆ ಸಿಕ್ಕಿಸಿ. ಈ ಹೇರ್‌ಸ್ಟೈಲ್ ತುಂಬಾನೇ ಗಾರ್ಜಿಯಸ್ ಆಗಿ ಕಾಣುತ್ತದೆ.
Image credits: Instagram
Kannada
ಕಾರ್ನೇಷನ್ ಹೂವಿನ ಎಸಳುಗಳು
ಕಾರ್ನೇಷನ್ ಹೂವಿನ ಎಸಳುಗಳು ಲೇಯರ್‌ಗಳಲ್ಲಿ ಇರುತ್ತವೆ. ಇವುಗಳನ್ನು ಓಪನ್ ಹೇರ್ ಅಥವಾ ಮೆಸ್ಸಿ ಬನ್‌ನಲ್ಲಿ ಸುಲಭವಾಗಿ ಸಿಕ್ಕಿಸಬಹುದು.
Image credits: Instagram
Kannada
ಕಮಲದ ಎಸಳುಗಳನ್ನು ಬಳಸಿ
ನೀವು ಕಮಲದ ಹೂವಿನ ಎಸಳುಗಳನ್ನು ಕೂಡ ಬಳಸಬಹುದು. ಎಸಳುಗಳ ಆಕಾರ ದೊಡ್ಡದಿರುವುದರಿಂದ, ಕೂದಲಿನಲ್ಲಿ ನಿಮಗೆ ಇಷ್ಟವಾದಂತೆ ಸುಲಭವಾಗಿ ಇವನ್ನು ಸಿಕ್ಕಿಸಬಹುದು.
Image credits: Instagram
Kannada
ಚೆಂಡು ಹೂವಿನ ಎಸಳಿನಿಂದ ಅಲಂಕಾರ
ಕೂದಲಿಗೆ ನೀವು ಕೇವಲ ಚೆಂಡು ಹೂವನ್ನಷ್ಟೇ ಅಲ್ಲ, ಅದರ ಎಸಳುಗಳನ್ನೂ ಬಳಸಬಹುದು. ಇದಕ್ಕಾಗಿ ನೀವು ಗ್ಲೂ ಬಳಸಬೇಕಾಗಬಹುದು, ಆಗ ಎಸಳುಗಳು ಕೂದಲಿಗೆ ಚೆನ್ನಾಗಿ ಅಂಟಿಕೊಂಡಿರುತ್ತವೆ.