ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ಫೋಟೋ ವೈರಲ್ ಆದ ನಂತರ, ಅವರು ಧರಿಸಿದ್ದ ಬೂದು ಬಣ್ಣದ ನೈಕ್ ಟ್ರ್ಯಾಕ್‌ಸೂಟ್‌ಗೆ ಭಾರೀ ಬೇಡಿಕೆ ಸೃಷ್ಟಿಯಾಯಿತು. ಈ ಬೇಡಿಕೆಯಿಂದಾಗಿ ಕೆಲವೇ ನಿಮಿಷಗಳಲ್ಲಿ ಈ ನಿರ್ದಿಷ್ಟ ಟ್ರ್ಯಾಕ್‌ಸೂಟ್ ಸೋಲ್ಡ್ ಔಟ್ ಆಗಿದೆ.
ನವದೆಹಲಿ (ಜ.6): ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ನಂತರ, ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಫೋಟೋದಲ್ಲಿ, ಮಡುರೊ ಬೂದು ಬಣ್ಣದ ನೈಕ್ ಉಣ್ಣೆಯ ಟ್ರ್ಯಾಕ್‌ಸೂಟ್ ಧರಿಸಿರುವುದು ಕಂಡುಬಂದಿತ್ತು. ಫೋಟೋ ವೈರಲ್ ಆದ ತಕ್ಷಣ, ಜನರು ಮಡುರೊ ಧರಿಸಿದ್ದ ಟ್ರ್ಯಾಕ್‌ಸೂಟ್‌ನ ಮೇಲೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಜನರು ಮಡುರೊ ಧರಿಸಿದ್ದ ಟ್ರ್ಯಾಕ್‌ಸೂಟ್‌ಗಾಗಿ ಹುಡುಕಲು ಆರಂಭಿಸಿದ್ದರು. ಅದು ನೈಕ್ ಉಣ್ಣೆಯ ಟ್ರ್ಯಾಕ್‌ಸೂಟ್ ಎಂಬ ಸುದ್ದಿ ಹೊರಬಂದ ನಂತರ, ಜನರು ಅದನ್ನು ಖರೀದಿಸಲು ಪ್ರಾರಂಭಿಸಿದರು. ಟ್ರ್ಯಾಕ್‌ಸೂಟ್‌ಗೆ ಬೇಡಿಕೆ ಹೆಚ್ಚಾಗಿದ್ದರಿಂದ ಕೆಲವೇ ನಿಮಿಷದಲ್ಲಿ ಈ ಟ್ರ್ಯಾಕ್‌ಸೂಟ್ ಸೋಲ್ಡ್ ಔಟ್ ಆಗಿದೆ.
ಕಂಪನಿಯು ಟ್ರ್ಯಾಕ್‌ಸೂಟ್ ಅನ್ನು ಜಾಹೀರಾತು ಮಾಡುವ ಅಗತ್ಯ ಕೂಡ ಬರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಚಿತ್ರವು ಪ್ರಚಾರವಾಯಿತು. ನಿರ್ದಿಷ್ಟವಾಗಿ ಬೂದು ಬಣ್ಣದ ಟ್ರ್ಯಾಕ್‌ಸೂಟ್ ಹೆಚ್ಚು ಜನಪ್ರಿಯವಾಗಿತ್ತು. ಈ ನೈಕ್ ಉಣ್ಣೆಯ ಟ್ರ್ಯಾಕ್‌ಸೂಟ್ ಭಾರತದಲ್ಲಿ ₹6,000 ರಿಂದ ₹9,000 ರ ನಡುವೆ ಬೆಲೆಯಿದೆ. ಪ್ರಸ್ತುತ ಇತರ ಬಣ್ಣಗಳು ಲಭ್ಯವಿದೆ, ಆದರೆ ಬೂದು ಬಣ್ಣದ ಟ್ರ್ಯಾಕ್‌ಸೂಟ್ ಔಟ್ ಆಫ್ ಸ್ಟಾಕ್ ಆಗಿದೆ.
"ನೈಕ್ ಟೆಕ್" ಎಂಬ ಪದದ ಹುಡುಕಾಟದ ಆಸಕ್ತಿ ಗೂಗಲ್‌ನಲ್ಲಿ ಹೆಚ್ಚಾಗಿದೆ. ಇಡೀ ಜಗತ್ತನ್ನೇ ಬೆಚ್ಚಿಬೀಳಿಸುವಂಥ ಬಂಧನವಾಗಿದೆ ಆದರೆ, ಈ ಸಮಯದಲ್ಲಿ ಆತ ಧರಿಸಿದ್ದ ಬಟ್ಟೆ ಯಾವ ಬ್ರ್ಯಾಂಡ್ ಎನ್ನುವ ಹುಡುಕಾಟ ನಡೆಯುತ್ತಿರುವ ಸೋಶಿಯಲ್ ಮೀಡಿಯಾ ಟ್ರೆಂಡ್ ಬಗ್ಗೆ ಟಿಕ್‌ಟಾಕ್ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ಮೀಮ್‌ಗಳು ಬರಲು ಆರಂಭಿಸಿದವು.
ಈ ಟ್ರ್ಯಾಕ್‌ಸೂಟ್‌ನ ವಿಶೇಷತೆಯೇನು?
ನೈಕ್ ಟೆಕ್ ಫ್ಲೀಸ್ ಟ್ರ್ಯಾಕ್‌ಸೂಟ್ ಬ್ರ್ಯಾಂಡ್‌ನ ಪ್ರೀಮಿಯಂ ಟೆಕ್ ಫ್ಲೀಸ್ ಸಾಲಿನ ಭಾಗವಾಗಿದೆ. ಇದು ಅತ್ಯಂತ ಹಗುರವಾಗಿದ್ದು, ಡಬಲ್ ಲೇಯರ್ಡ್ ಬಟ್ಟೆಯನ್ನು ಹೊಂದಿದೆ. ಭಾರ ಎನಿಸಿದೆ ದೇಹದ ಉಷ್ಣತೆಯನ್ನು ಉಳಿಸಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. ಇದನ್ನು ಮರುಬಳಕೆಯ ಪಾಲಿಯೆಸ್ಟರ್ ಬಳಸಿ ತಯಾರಿಸಲಾಗುತ್ತದೆ ಮತ್ತು ಕಾಂಟ್ರಾಸ್ಟ್ ಪ್ಯಾನೆಲಿಂಗ್ ಮತ್ತು ಜಿಪ್ ಡಿಟೇಲಿಂಗ್‌ನೊಂದಿಗೆ ಸಿದ್ದ ಮಾಡಲಾಗಿದೆ. ಸಾಮಾನ್ಯವಾಗಿ ಜಿಪ್-ಅಪ್ ಹೂಡಿ ಮತ್ತು ಮ್ಯಾಚಿಂಗ್ ಜಾಗರ್‌ಗಳಾಗಿ ಮಾರಾಟವಾಗುವ ಈ ಸೆಟ್‌ನ ಬೆಲೆ US ನಲ್ಲಿ ಸುಮಾರು $140-$160 (ಸುಮಾರು ರೂ. 14,500) ಮತ್ತು ಇದನ್ನು ಅಥ್ಲೀಷರ್ ಉಡುಗೆ ಎಂದು ಪ್ರಚಾರ ಮಾಡಲಾಗುತ್ತದೆ.


