6 ಕೋಟಿಗೂ ಅಧಿಕ ಬೆಲೆಗೆ ಹರಾಜಾದ ಮುತ್ತಿನ ನೆಕ್ಲೇಸ್: ಅಷ್ಟಕ್ಕೂ ಅಂಥದ್ದೇನಿದೆ ಇದರಲ್ಲಿ?

ಆನ್‌ಲೈನ್ ಹರಾಜೊಂದರಲ್ಲಿ ಅಪರೂಪದ, ನೈಸರ್ಗಿಕ ಮುತ್ತಿನ ಹಾರವೊಂದು 6 ಕೋಟಿಗೂ ಹೆಚ್ಚು ಬೆಲೆಗೆ ಮಾರಾಟವಾಗಿದೆ. ಇವುಗಳು ಅತೀ ಅಪರೂಪಗಳಾಗಿರುವುದರಿಂದ ನೈಸರ್ಗಿಕ ಮುತ್ತುಗಳ ಆಭರಣಗಳು ವಿಂಟೇಜ್ ಮತ್ತು ಚರಾಸ್ತಿ ಆಭರಣಗಳ ಸಂಗ್ರಹಕಾರರಿಂದ ಹೆಚ್ಚು ಬೇಡಿಕೆಯಲ್ಲಿವೆ.

natural pearl necklace at online auction sells for over 6 crores akb

ಆನ್‌ಲೈನ್ ಹರಾಜೊಂದರಲ್ಲಿ ಅಪರೂಪದ, ನೈಸರ್ಗಿಕ ಮುತ್ತಿನ ಹಾರವೊಂದು 6 ಕೋಟಿಗೂ ಹೆಚ್ಚು ಬೆಲೆಗೆ ಮಾರಾಟವಾಗಿದೆ. ಇವುಗಳು ಅತೀ ಅಪರೂಪಗಳಾಗಿರುವುದರಿಂದ ನೈಸರ್ಗಿಕ ಮುತ್ತುಗಳ ಆಭರಣಗಳು ವಿಂಟೇಜ್ ಮತ್ತು ಚರಾಸ್ತಿ ಆಭರಣಗಳ ಸಂಗ್ರಹಕಾರರಿಂದ ಹೆಚ್ಚು ಬೇಡಿಕೆಯಲ್ಲಿವೆ.

ಏನಿದರ ಮಹತ್ವ

ಈ ಮೂರು ಸಾಲಿನ ನೈಸರ್ಗಿಕ ಮುತ್ತಿನ ಹಾರ 6,24,91,000 ರೂ.ಗೆ ಹರಾಜಾಗಿದೆ. ಈ ನೆಕ್ಲೇಸ್‌ ಅಸ್ತಾಗುರು(AstaGuru) ಹೇರ್‌ಲೂಮ್‌ ಆಭರಣದ ಭಾಗವಾಗಿದೆ. ಅಸ್ತಾಗುರು ಅವರ ಚರಾಸ್ತಿ ಆಭರಣ ಇದಾಗಿದೆ. ಬೆಳ್ಳಿ ಮತ್ತು ಟೈಮ್‌ಪೀಸ್‌ಗಳು ಈ ನೆಕ್ಲೇಸ್‌ನ ಭಾಗವಾಗಿದ್ದು, ಹಳೆಯ ಕಟ್ ವಜ್ರಗಳ ಜೊತೆ ಚಿನ್ನದ ಕೊಕ್ಕೆ, ಮುಖದ ಸ್ಫಟಿಕ ಡಿಸ್ಕ್‌ಗಳು ಹಾಗೂ ಅಂತರ್ಗತವಾಗಿರುವ ನೈಸರ್ಗಿಕ ಉಪ್ಪು ನೀರಿನ ಮುತ್ತುಗಳನ್ನು ಈ ನೆಕ್ಲೇಸ್‌ ಒಳಗೊಂಡಿದೆ.

ಎರಡು ವಿಭಿನ್ನ ಬಣ್ಣಗಳನ್ನು ಹೊಂದಿರುವ ಈ  ನೈಸರ್ಗಿಕ ಮುತ್ತುಗಳನ್ನು ತುಂಬಾ ಅಪರೂಪದ ಶೋಧನೆ ಎಂದು ಪರಿಗಣಿಸಲಾಗುತ್ತಿದೆ. ಇಂಡಿಯನ್‌ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಈ ಮುತ್ತುಗಳು ಅವುಗಳ ಕೊರತೆಯಿಂದಾಗಿಯೇ, ನೈಸರ್ಗಿಕ ಮುತ್ತುಗಳ ಆಭರಣಗಳು ವಿಂಟೇಜ್ ಮತ್ತು ಚರಾಸ್ತಿ ಆಭರಣಗಳ ಸಂಗ್ರಹಕಾರರಿಂದ ಇವುಗಳಿಗೆ ಹೆಚ್ಚು ಬೇಡಿಕೆ ಇದೆ. ಇದು ನೆಕ್ಲೇಸ್ ಹರಾಜಿನಲ್ಲಿಯೇ ಅತ್ಯಂತ ಮಹತ್ವದ ಮಾರಾಟವಾಗಿದೆ. ಇದು ಹರಾಜು ಕ್ಯಾಟಲಾಗ್‌ನ (auction catalogue) ಮುಖಪುಟದಲ್ಲಿಯೂ ಕಾಣಿಸಿಕೊಂಡಿದೆ.

ಬಿಂದಿ ಇಲ್ಲದೆ ಕಾಣಿಸಿಕೊಂಡ ಕರೀನಾ: ಮಲಬಾರ್‌ ಗೋಲ್ಡ್‌ ಬಹಿಷ್ಕರಿಸುವಂತೆ ಆನ್‌ಲೈನ್‌ ಟ್ರೆಂಡ್

ಈ ಹರಾಜಿನಲ್ಲಿ 1,48,00,500 ರೂ.ಗಳಲ್ಲಿ ಸ್ವಾಧೀನಪಡಿಸಿಕೊಂಡ ಮತ್ತೊಂದು ಸೊಗಸಾದ ಐದು ಸಾಲುಗಳ ನೈಸರ್ಗಿಕ ಮುತ್ತಿನ ಹಾರವನ್ನು ಪ್ರದರ್ಶಿಸಲಾಯಿತು. ಈ ನೆಕ್ಲೇಸ್ ಅನ್ನು 453 ನೈಸರ್ಗಿಕ ಮುತ್ತುಗಳನ್ನು ಬಳಸಿ ನಿರ್ಮಿಸಲಾಗಿದೆ. ಅದು ಸ್ವರದೊಂದಿಗೆ ಅತ್ಯಂತ ಉತ್ತಮವಾಗಿ ಹೊಂದಿಕೆಯಾಗುತ್ತದೆ. ಈ ಆರ್ಟ್ ಡೆಕೊ ಚಿನ್ನದ  ವಜ್ರಗಳೊಂದಿಗೆ ಹೊಂದಿಸಲಾಗಿದೆ. ಈ ನೈಸರ್ಗಿಕ ಮುತ್ತಿನ ತೂಕ 619.50 ಚೌ/448 ಪಿಸಿಗಳು ಆಗಿದೆ.

ಬರೋಬ್ಬರಿ 14 ಕೋಟಿ ರೂಗೆ ಮಾರಾಟವಾದ ಒಂಟೆ

ಮಾರ್ಚ್‌ನಲ್ಲಿ ಈದ್ ಸಂದರ್ಭದಲ್ಲಿ ಸೌದಿ ಅರೆಬಿಯಾದಲ್ಲಿ ಬರೋಬ್ಬರಿ 14 ಕೋಟಿ ರೂಪಾಯಿಗೆ ಒಂದು ಒಂಟೆ ಹರಾಜಾಗಿತ್ತು. ಈದ್ ಹಬ್ಬದ ದಿನ ಸೌದಿ ಅರೇಬಿಯಾದಲ್ಲಿ ಒಂಟೆಗಳನ್ನು ಬಲಿ ಕೊಡಲಾಗುತ್ತದೆ. ಹೀಗಾಗಿ ಈ ಸಂದರ್ಭಗಳಲ್ಲಿ ಒಂಟೆ ಹರಾಜು ಸಾಮಾನ್ಯವಾಗಿರುತ್ತದೆ. ಸೌದಿ ಅರೇಬಿಯಾದಲ್ಲಿ ಸ್ಥಳೀಯರು ಈ ಹರಾಜಿನಲ್ಲಿ ಪಾಲ್ಗೊಂಡು ಒಂಟೆಗಳನ್ನು ಖರೀದಿಸುತ್ತಾರೆ. ಈ ಬಾರಿ ವಿಶೇಷ ತಳಿಯ ಹಾಗೂ ದೊಡ್ಡ ಗಾತ್ರದ ಒಂಟೆಗಳ ಹರಾಜು ನಡೆದಿತ್ತು. ನೋಟದಲ್ಲಿ ಸಾಮಾನ್ಯದಂತೆ ಕಂಡು ಬಂದ ಅರಬ್ ವ್ಯಕ್ತಿ ಸಾಂಪ್ರದಾಯಿಕ ಧಿರಿಸು ಹಾಕಿಕೊಂಡು ಹರಾಜಿನಲ್ಲಿ ಪಾಲ್ಗೊಂಡಿದ್ದ. ಹರಾಜಿನಲ್ಲಿ 7 ಮಿಲಿಯನ್ ಸೌದಿ ರಿಯಾಲ್ ನೀಡಿ ಅಂದರೆ ಭಾರತೀಯ ರೂಪಾಯಿಗಳಲ್ಲಿ 14.23 ಕೋಟಿ ರೂಪಾಯಿ ನೀಡಿ ಒಂಟೆ ಖರೀದಿಸಿದ್ದ.

ಟಿಪ್ಪು ಐತಿಹಾಸಿಕ ವಿಜಯದ ವರ್ಣಚಿತ್ರ 6 ಕೋಟಿಗೆ ಹರಾಜು

ವಿಶೇಷ ತಳಿಯ ಒಂಟೆಯಾಗಿರುವ ಕಾರಣ ಹರಾಜು ಆರಂಭಗೊಂಡಿದ್ದೆ 5 ಮಿಲಿಯನ್ ಸೌದಿ ರಿಯಾಲ್‌ ಅಂದರೆ 10.16 ಕೋಟಿ ರೂಪಾಯಿಯಿಂದ. ಹರಾಜು ಆರಂಭಗೊಂಡ ಬೆನ್ನಲ್ಲೇ 10 ರಿಂದ 12 ಕೋಟಿಗೆ ಇದು ಏರಿಕೆ ಕಂಡಿತ್ತು. ಆದರೆ ಪಟ್ಟು ಬಿಡದ ವ್ಯಕ್ತಿ 14.23 ಕೋಟಿ ರೂಪಾಯಿಗೆ ಬಿಡ್ ಮಾಡಿ ಒಂಟೆ ಖರೀದಿಸಿದ್ದಾನೆ. ಈ ಹರಾಜಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವಿಶ್ವದಲ್ಲೇ ಅತಿ ವಿರಳ ಪ್ರಬೇಧದ ಒಂಟೆ ತಳಿ ಇದಾಗಿದೆ. ಸೌದಿ ಅರೇಬಿಯಾ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಈ ಒಂಟೆಯ ಮಾಂಸಕ್ಕೆ ಭಾರಿ ಬೇಡಿಕೆ ಇದೆ. ಹೀಗಾಗಿ ಇದರ ಹರಾಜಿನ ಬೆಲೆ 10 ಕೋಟಿ ರೂಪಾಯಿಯಿಂದ ಆರಂಭಗೊಂಡಿದೆ. 11 ಕೋಟಿ ರೂಪಾಯಿ ವರೆಗೂ ಬಿಡ್ ಆಗಿರುವ ಉದಾಹರಣೆಗಳಿವೆ ಎಂದು ಆಯೋಜಕರು ಹೇಳಿದ್ದಾರೆ. ಆದರೆ ಇದೇ ಮೊದಲ ಬಾರಿಗೆ 14.23 ಕೋಟಿ ರೂಪಾಯಿಗೆ ಇದು ಬಿಡ್ ಆಗಿದೆ. ಇದು ದಾಖಲೆ ಎಂದು ಆಯೋಜಕರು ಹೇಳಿದ್ದರು.

ಈದ್ ಹಬ್ಬಕ್ಕೆ ಆಯೋಜಿಸುವ ಒಂಟೆ ಹರಾಜಿನಲ್ಲಿ ಪಾಲ್ಗೊಂಡು ಹೆಚ್ಚಿನ ಮೊತ್ತಕ್ಕೆ ಹರಾಜು ಮಾಡುವುದು ಅಲ್ಲಿನ ವಾಡಿಕೆ. ಹೀಗಾಗಿ ಹಲವು ಪ್ರತಿಷ್ಠಿತ ಕುಟುಂಬಗಳು ಜಿದ್ದಿಗೆ ಬಿದ್ದು ಕೋಟಿ ಕೋಟಿ ರೂಪಾಯಿಗೆ ಒಂಟೆ ಖರೀದಿಸಿದ ಉದಾಹರಣೆಗಳು ಇವೆ ಎಂದು ಆಯೋಜಕರು ಹೇಳಿದ್ದಾರೆ.

Latest Videos
Follow Us:
Download App:
  • android
  • ios