Asianet Suvarna News Asianet Suvarna News

ವಿಶ್ವ ಮಿಸೆಸ್‌ ಇಂಡಿಯಾ ಸ್ಪರ್ಧೆ : ಕುಂಡಲಿನಿಚಕ್ರದಂತೆ ವಸ್ತ್ರ ಧರಿಸಿದ ಭಾರತದ ಕೌರ್‌ಗೆ ಪ್ರಶಸ್ತಿ

 

  • ವಿಶ್ವ ಮಿಸೆಸ್‌ ಇಂಡಿಯಾ  ಸ್ಪರ್ಧೆ 2022 
  • ಕುಂಡಲಿನಿಚಕ್ರದಂತೆ ವಸ್ತ್ರ ಧರಿಸಿದ ಭಾರತದ ಕೌರ್‌
  • ರಾಷ್ಟ್ರೀಯ ವೇಷಭೂಷಣ ರೌಂಡ್‌ನಲ್ಲಿ ಪ್ರಶಸ್ತಿ
     
Mrs India World 2022 Navdeep Kaur won Best National Costume award for dressed as Kundalini Chakra akb
Author
Bangalore, First Published Jan 16, 2022, 8:12 PM IST

ಲಾಸ್‌ವೇಗಸ್‌: ವಿವಾಹಿತ ಮಹಿಳೆಯರಿಗಾಗಿ ಆಯೋಜಿಸಿರುವ 2022ರ ವಿಶ್ವ ಮಿಸೆಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾರತದ ನವದೀಪ್‌ ಕೌರ್ ಅವರಿಗೆ ಅತ್ಯುತ್ತಮ ರಾಷ್ಟ್ರೀಯ ಧಿರಿಸು ಪ್ರಶಸ್ತ್ರಿ ದೊರಕಿದೆ. ಈಗಾಗಲೇ ಒಂದು ಬಾರಿ ಮಿಸೆಸ್‌ ವರ್ಲ್ಡ್‌ ಪ್ರಶಸ್ತಿ ಗೆದ್ದಿರುವ ನವದೀಪ್‌ ಕೌರ್‌ ಒಡಿಶಾದವರಾಗಿದ್ದು ಇವರಿಗೆ ಆರು ವರ್ಷದ ಮಗಳಿದ್ದಾಳೆ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಕೌರ್‌ ಎಂಬಿಎ ಮಾಡಿದ್ದು,  ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ದುಡಿದಿದ್ದರು. ಜೊತೆಗೆ ಸಹಾಯಕ ಪ್ರಾಧ್ಯಾಪಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. 

ಪ್ರತಿಯೊಂದು ಸೌಂದರ್ಯ ಸ್ಪರ್ಧೆಯಲ್ಲೂ ರಾಷ್ಟ್ರೀಯ ಉಡುಪು ಅಥವಾ ರಾಷ್ಟ್ರೀಯ ಧಿರಿಸಿನ ಅಥವಾ ವೇಷ ಭೂಷಣದ ಸುತ್ತು ಇರುವುದು. ಇದರಲ್ಲಿ ಭಾಗವಹಿಸುವವರು ತಮ್ಮ ವೇಷಭೂಷಣದ ಮೂಲಕ ತಮ್ಮ ತಾಯ್ನಾಡಿನ ಕೆಲವು ಸಾಂಸ್ಕೃತಿಕ ಅಥವಾ ಆಧ್ಯಾತ್ಮಿಕ ಅಂಶಗಳನ್ನು ಪ್ರಚಾರ ಮಾಡುತ್ತಾರೆ. ಈ ವರ್ಷ 2021ರ ಮಿಸೆಸ್ ಇಂಡಿಯಾ ವರ್ಲ್ಡ್ ಆಗಿರುವ ಶ್ರೀಮತಿ ನವದೀಪ್‌ ಕೌರ್ ಅವರು ಮಿಸೆಸ್ ವರ್ಲ್ಡ್ 2022 ರ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

 

ಅವರು ಅಮೆರಿಕಾದ ಲಾಸ್ ವೇಗಾಸ್‌ನಲ್ಲಿ (Las Vegas) ನಡೆದ ರಾಷ್ಟ್ರೀಯ ವೇಷ ಭೂಷಣ ಸ್ಪರ್ಧೆಯ ಕಾಸ್ಟ್ಯೂಮ್ ರೌಂಡ್‌ನಲ್ಲಿ  ಕುಂಡಲಿನಿ ಚಕ್ರದಂತೆ ಇರುವ ಧಿರಿಸನ್ನು ಧರಿಸಿದ್ದರು. ಈ ಬಗ್ಗೆ ಮಿಸೆಸ್ ಇಂಡಿಯಾದ ಅಧಿಕೃತ ಇನ್ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಹೃದಯವು ಕೃತಜ್ಞತೆಯಿಂದ ತುಂಬಿ ತುಳುಕುತ್ತಿದೆ.  ಭಾರತವನ್ನು ನಾವು ಆಯ್ಕೆ ಮಾಡಿದ್ದೇವೆ, ನಮ್ಮ ರಾಣಿ, 2021ರ ಮಿಸೆಸ್ ಇಂಡಿಯಾ ವರ್ಲ್ಡ್ ಅವರು ಮಿಸೆಸ್ ವರ್ಲ್ಡ್ 2022 ರಲ್ಲಿ  ರಾಷ್ಟ್ರೀಯ ವೇಷಭೂಷಣ ಸುತ್ತಿನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ ಎಂದು ಘೋಷಿಸಲು ನಮಗೆ ಸಂತೋಷವಾಗಿದೆ  ಎಂದು ಬರೆಯಲಾಗಿದೆ. 

Goa Beauty Contest: ಸೌಂದರ್ಯ ಸ್ಪರ್ಧೆಯಲ್ಲಿ ತಾಯಿ-ಮಗಳಿಗೆ ಅವಾರ್ಡ್!

ಇಲ್ಲಿ ಹಾಕಲಾದ ಪೋಸ್ಟ್‌ನಲ್ಲಿರುವ ಇತರ ಚಿತ್ರಗಳಲ್ಲಿ, ಕೌರ್ ತನ್ನ ಕುಂಡಲಿನಿ ಚಕ್ರ (ಅವಂತ್-ಗಾರ್ಡ್) ಉಡುಪಿನಲ್ಲಿ" ಪೋಸ್ ನೀಡಿದ್ದಾರೆ. ಇದು ಮೊದಲೇ ಹೇಳಿದಂತೆ, 'ಕುಂಡಲಿನಿ ಚಕ್ರದಿಂದ ಪ್ರೇರಿತವಾಗಿದೆ' ಇವು ಮನಸ್ಸಿನ ಮೂಲಕ ಮಾನವ ದೇಹದ ವಿವಿಧ ಸಕಾರಾತ್ಮಕ ಗುಣಲಕ್ಷಣಗಳನ್ನು ಪ್ರಚೋದಿಸುವ ಚಕ್ರಗಳಾಗಿವೆ.  ಇದಕ್ಕೆ ಆಧ್ಯಾತ್ಮದಲ್ಲಿ ವಿಶಾಲವಾದ ವಿವರಣೆ ಇದೆ.

ಬೆಂಗಳೂರಿನ ಮಾಧುರ್ಯಗೆ ಮಿಸೆಸ್ ಮೆಸ್ಮೆರೈಸಿಂಗ್ ಕಿರೀಟ

ಯೋಗದ ತಿಳುವಳಿಕೆಯ ಪ್ರಕಾರ, ಕುಂಡಲಿನಿಯು ದೇಹದ ಚಕ್ರ ಮತ್ತು ನಾಡಿಗಳಲ್ಲಿ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಕೌರ್ ಅವರ ಅಸಾಂಪ್ರದಾಯಿಕ ಧಿರಿಸು, ಸಾಂಪ್ರದಾಯಿಕ ಅರ್ಥದಲ್ಲಿದೆ. ದೇಹದಲ್ಲಿ ವಿವಿಧ ಶಕ್ತಿಗಳ ಚಲನೆಯನ್ನು ಉತ್ತೇಜಿಸುವ ಚಕ್ರಗಳನ್ನು ಪ್ರತಿನಿಧಿಸುತ್ತದೆ, ಬಲ ಕಾಲಿನ ಹೆಬ್ಬೆರಳಿನಿಂದ, ಬೆನ್ನುಮೂಳೆಯ ಮೂಲಕ ತಲೆಗೆ ಇದು ಶಕ್ತಿಯನ್ನು ನೀಡುತ್ತದೆ. ಕೌರ್ ಅವರ ಚಿನ್ನದಂತಹ ವೇಷಭೂಷಣವು ಕಲಾವಿದ ಎಗ್ಗೀ ಜಾಸ್ಮಿನ್ (Eggie Jasmin) ಅವರ ಪರಿಕಲ್ಪನೆಯಾಗಿದೆ.

Follow Us:
Download App:
  • android
  • ios