ಬೆಂಗಳೂರು[ಆ.29] ಇತ್ತೀಚಿಗೆ ಇಲ್ಲಿ ನಡೆದ ಮಿಸೆಸ್ ಇಂಡಿಯಾ ಗ್ಯಾಲಕ್ಸಿ 2018 ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರು ಮೂಲದ ಮಾಧುರ್ಯ ಅಮರ್ ದೀಪ್ ಮಿಸೆಸ್ ಮೆಸ್ಮೆರೈಸಿಂಗ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಮಾಧುರ್ಯ ಅಮರ್ ದೀಪ್ ಅಮೆರಿಕಾದಲ್ಲಿ ಐಟಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಫ್ಯಾಷನ್ ಡಿಸೈನ್ ಹಾಗೂ ಮಾಡೆಲಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ಮಾಧುರ್ಯ ಫಿಟ್ ನೆಸ್ ಕಾಪಾಡಿಕೊಂಡು ಮಾಡೆಲಿಂಗ್ ನಲ್ಲೂ ಸೈ ಎನಿಸಿಕೊಂಡಿದ್ದಾರೆ. 

ಇತ್ತೀಚಿಗೆ ದೆಹಲಿಯಲ್ಲಿ ನಡೆದ ಮಿಸೆಸ್ ಇಂಡಿಯಾ ಗ್ಯಾಲಕ್ಸಿ 2018 ನಲ್ಲಿ ಭಾಗವಹಿಸಿ ಬೆಂಗಳೂರಿಗೆ ಹೆಮ್ಮೆ ತಂದಿದ್ದಾರೆ. ಈ ಸ್ಪರ್ಧೆಯಲ್ಲಿ ಮೆಸ್ಮೆರೈಸಿಂಗ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. 

ದೆಹಲಿಯ ತಿವೋಲಿ ಗಾರ್ಡನ್ ರೆಸಾರ್ಟ್ ನಲ್ಲಿ ಆಗಸ್ಟ್ 21 ರಲ್ಲಿ  ಮಿಸೆಸ್ ಇಂಡಿಯಾ ಗ್ಯಾಲಕ್ಸಿ 2018 ನ್ನು ಆಯೋಜಿಸಲಾಗಿತ್ತು. ಬೇರೆ ಸೌಂದರ್ಯ ಸ್ಪರ್ಧೆಗಳಿಗಿಂತ ವಿಭಿನ್ನವಾಗಿತ್ತು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಿ ಎಂದು ಜಾಗೃತಿ ಮೂಡಿಸಲಾಯ್ತು. ಇಂತದ್ದೊಂದು ಅಭೂತಪೂರ್ವ ಅವಕಾಶ ನೀಡಿದ್ದಕ್ಕೆ ಈ ಈವೆಂಟ್ ನ ನಿರ್ದೇಶಕರಿಗೂ, ನನ್ನ ಕುಟುಂಬದವರಿಗೂ, ಸ್ನೇಹಿತರಿಗೂ ಧನ್ಯವಾದಗಳನ್ನು ಮಾಧುರ್ಯ ಹೇಳಿದ್ದಾರೆ.