ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಮಾಡೆಲ್ ಬಿಯಾಂಕಾ ಸೆನ್ಸೋರಿ ಚರ್ಮದ ಬಣ್ಣದ ಉಡುಪು ಧರಿಸಿ ಬೆತ್ತಲಾಗಿರುವಂತೆ ಕಾಣಿಸಿಕೊಂಡು ಸಂಚಲನ ಮೂಡಿಸಿದರು. ಕೆಲವರು ಇದನ್ನು ಅಸಭ್ಯ ನಡವಳಿಕೆ ಎಂದು ಟೀಕಿಸಿದರು. ಆಯೋಜಕರು ಅವರನ್ನು ಮತ್ತು ಪತಿ ಕಾನ್ಯೆ ವೆಸ್ಟ್‌ರನ್ನು ಕಾರ್ಯಕ್ರಮದಿಂದ ಹೊರಹಾಕಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅವಾರ್ಡ್​ ಕಾರ್ಯಕ್ರಮಗಳಿಗೆ ಹೋಗುವಾಗ ಸೆಲೆಬ್ರಿಟಿಗಳು ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಬಟ್ಟೆ, ಆಭರಣಗಳನ್ನು ತೊಟ್ಟು ಹೋಗುವುದು ಮಾಮೂಲು. ಆದರೆ ಇಲ್ಲೊಬ್ಬ ಮಾಡೆಲ್​ ಸಂಪೂರ್ಣ ಬೆತ್ತಲಾಗಿ ಹೋಗಿ ಕೋಲಾಹಲ ಸೃಷ್ಟಿಸಿದ್ದಾಳೆ! ಅದು ಅಂತಿಂಥ ಕಾರ್ಯಕ್ರಮವಲ್ಲ, ಬದಲಿಗೆ ಗ್ರ್ಯಾಮಿ ಅವಾರ್ಡ್​ ಫಂಕ್ಷನ್​ನಲ್ಲಿ! ಹೀಗೆ ಬೆತ್ತಲಾಗಿ ಹೋಗಿ ಸಂಚಲನ ಸೃಷ್ಟಿಸಿದಾಕೆ ಆಸ್ಟ್ರೇಲಿಯಾದ ಮಾಡೆಲ್ ಬಿಯಾಂಕಾ ಸೆನ್ಸೋರಿ. ಇದರ ವಿಡಿಯೋ ವೈರಲ್​ ಆಗುತ್ತಿದ್ದು, ಅಬ್ಬಬ್ಬಾ ಎನ್ನುವಂತಿದೆ!

ಅಷ್ಟಕ್ಕೂ ಆಗಿದ್ದೇನೆಂದರೆ, ಅವಾರ್ಡ್​ ಕಾರ್ಯಕ್ರಮದಲ್ಲಿ ಅಮೆರಿಕನ್ ರ‍್ಯಾಪರ್ ಕಾನ್ಯೆ ವೆಸ್ಟ್ ಮತ್ತು ಅವರ ಪತ್ನಿ ಬಿಯಾಂಕಾ ಸೆನ್ಸೋರಿ ರೆಡ್ ಕಾರ್ಪೆಟ್ ಮೇಲೆ ಬಂದರು. ಆ ಸಂದರ್ಭದಲ್ಲಿ ಬಿಯಾಂಕಾ ಕಪ್ಪು ಉದ್ದನೆಯ ಕೋಟ್‌ ಧರಿಸಿದ್ದರು. ಆಗ ಒಳಗೆ ಏನಿದೆ ಎನ್ನುವುದು ಯಾರಿಗೂ ಕಾಣಿಸುತ್ತಿರಲಿಲ್ಲ. ಇದೇ ಉಡುಪಿನಲ್ಲಿ ಕಾನ್ಯೆ ವೆಸ್ಟ್ ಜೊತೆ ಫೋಟೋಗಳಿಗೆ ಪೋಸ್​ ಕೊಟ್ಟರು. ಕೆಲವೇ ನಿಮಿಷಗಳ ಬಳಿಕ ಅವರು ಅಸಲಿ ರೂಪ ತೋರಿಸಿದರು. ಹಿಂದಕ್ಕೆ ತಿರುಗಿ ಆ ಕಪ್ಪನೇ ಕೋಟ್​ ತೆಗೆಯುತ್ತಿದ್ದಂತೆಯೇ ಕ್ಯಾಮೆರಾಮೆನ್​ಗಳು ಓಡೋಡಿ ಬಂದು ಚಕಚಕಚಕ ಎಂದು ಫೋಟೋ ಕ್ಲಿಕ್ಕಿಸಿದರು. ಇದಕ್ಕೆ ಕಾರಣ, ಅವರು ಸಂಪೂರ್ಣ ಬೆತ್ತಲಾಗಿರುವಂತೆ ಕಂಡದ್ದು! ದೇಹದ ಎಲ್ಲಾ ಭಾಗಗಳೂ ಕಾಣಿಸುತ್ತಿದ್ದುದರಿಂದ ಅವರು ಸಂಪೂರ್ಣವಾಗಿ ಬೆತ್ತಲಾಗಿಯೇ ಬಂದಿದ್ದಾರೆ ಎಂದು ಅಂದುಕೊಂಡವರೇ ಎಲ್ಲಾ.

ಈ ಬ್ಯೂಟಿ ನೋಡಿ ಎಲ್ಲೆಲ್ಲೋ ಚಿವುಟಿದ್ರು, ಬೇರೆ ಬೇರೆ ಪ್ರೊಡ್ಯೂಸರ್ಸ್​ ಬಂದು... ನಟ ದೀಪಕ್​ ಹೇಳಿದ್ದೇನು ಕೇಳಿ...

ಅಸಲಿಗೆ ಇದು ಹೇಳಿಕೊಳ್ಳಲು ಬೆತ್ತಲೆಯಲ್ಲ. ಏಕೆಂದರೆ ಅವರು ಚರ್ಮದ ಬಣ್ಣದ ಮೈಗೆ ಅಂಟುವ ಉಡುಪು ಧರಿಸಿ ಎಲ್ಲಿ ಬೇಕೋ ಅಲ್ಲಿ ಮುಚ್ಚಿಕೊಂಡಿದ್ದರು. ಆದರೆ ಅದು ಹೆಸರಿಗೆ ಮಾತ್ರ ಬಟ್ಟೆಯಾಗಿತ್ತೇ ವಿನಾ ಅದನ್ನು ಆ ಅವಾರ್ಡ್​ ಫಂಕ್ಷನ್​ ಬೆಳಕಿನಲ್ಲಿ ನೋಡಿದರೆ ಸಂಪೂರ್ಣ ಬೆತ್ತಲ ಅವತಾರವೇ ಆಗಿತ್ತು. ಇದರಿಂದಾಗಿ ಅಲ್ಲಿ ಕೆಲ ಕ್ಷಣ ಕೋಲಾಹಲ ಸೃಷ್ಟಿಯಾಯಿತು. ಕೆಲವೇ ಕ್ಷಣಗಳಲ್ಲಿ ಬಹುತೇಕ ಮಂದಿ ತಮ್ಮ ಮೊಬೈಲ್​ ಫೋನ್​ ಎತ್ತಿಕೊಂಡು ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾಗಳಲ್ಲಿಯೂ ಹರಿಬಿಟ್ಟರು! 

ಅಲ್ಲಿ ಬಹುತೇಕ ಮಂದಿ ಇದರಿಂದ ಶಾಕ್​ಗೆ ಒಳಗಾದರು. ಗಲಾಟೆ ಆರಂಭವಾಯಿತು. ಟೀಕೆಗಳು ಕೇಳಿಬಂದವು. ಇಂಥ ದೊಡ್ಡ ಅವಾರ್ಡ್​ ಫಂಕ್ಷನ್​ನಲ್ಲಿ ಈ ರೀತಿಯ ಅಸಭ್ಯ ನಡವಳಿಕೆಯನ್ನು ಸಹಿಸಲು ಆಯೋಜಕರು ಕಾನ್ಯೆ ಮತ್ತು ಅವರ ಪತ್ನಿಯನ್ನು ಪ್ರಶಸ್ತಿ ಪ್ರದಾನ ಸಮಾರಂಭದಿಂದ ಹೊರಹಾಕಿ ಮುಂದಿನ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು. ಆದರೆ ಈ ವಿಡಿಯೋ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಥಹರೇವಾರಿ ಶೀರ್ಷಿಕೆ, ಕಮೆಂಟ್ಸ್​ ಜೊತೆ ಹರಿದಾಡುತ್ತಲೇ ಇದೆ. 

ಮಗಳ ಹೊಕ್ಕಳು ಕಾಣದಂತೆ ವೇದಿಕೆ ಮೇಲೆಯೇ ಶಾರುಖ್​ ಏನ್​ ಮಾಡಿದ್ರು ನೋಡಿ! ನಟನಿಗೆ ಅಪಾರ ಮೆಚ್ಚುಗೆ

Scroll to load tweet…