Beauty Tips: ದಿನಾಲೂ ಮೇಕಪ್ ಮಾಡಿದರೆ ಹಾಳಾಗುತ್ತೆ ಚರ್ಮ, ಎಚ್ಚರ..!
ಚೆಂದ ಕಾಣ್ಬೇಕೆಂದು ಹುಡುಗಿಯರು ಮಾತ್ರವಲ್ಲ ಹುಡುಗ್ರೂ ಅನೇಕ ಕಸರತ್ತು ಮಾಡ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಅನೇಕ ಪ್ರಾಡಕ್ಟ್ ಬಳಕೆ ಮಾಡ್ತಾರೆ. ಆದ್ರೆ ಅದರ ಸರಿಯಾದ ಬಳಕೆ ತಿಳಿದುಕೊಳ್ಳದೆ ಮುಖದ ಅಂದ ಕೆಡಿಸಿಕೊಳ್ತಾರೆ.
ಸುಂದರವಾಗಿ ಕಾಣಲು ಬಹುತೇಕರು ಮೇಕಪ್ ಮೊರೆ ಹೋಗ್ತಾರೆ. ಮೇಕಪ್ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮೇಕಪ್ ಗೆ ವಯಸ್ಸಿನ ಮಿತಿಯಿಲ್ಲ. ಚಿಕ್ಕ ವಯಸ್ಸಿನಿಂದಲೇ ಮೇಕಪ್ ಮಾಡುವ ಅನೇಕರಿದ್ದಾರೆ. ಪ್ರತಿ ದಿನ ಮೇಕಪ್ ಇಲ್ಲದೆ ಮನೆಯಲ್ಲಿ ಕೆಲವರು ಹೊರಗೆ ಹೋಗೋದಿಲ್ಲ. ಮತ್ತೆ ಕೆಲವರು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಆಗಾಗ ಬ್ಯೂಟಿ ಪಾರ್ಲರ್ ಗೆ ಹೋಗಿ, ಸೌಂದರ್ಯ ವರ್ಧಕಗಳನ್ನು ಬಳಕೆ ಮಾಡ್ತಾರೆ. ಈ ಸೌಂದರ್ಯ ವರ್ಧಕಗಳಲ್ಲಿ ರಾಸಾಯನಿಕ ಅಂಶವಿರುತ್ತದೆ. ಇದು ನಮ್ಮ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಈ ವಿಷ್ಯ ಕೆಲವರಿಗೆ ತಿಳಿದಿದೆ. ಆದ್ರೆ ಇದ್ರ ಬಗ್ಗೆ ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಆ ಕ್ಷಣ ಸುಂದರವಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಮುಂದೆ ಬರುವ ಅಪಾಯವನ್ನು ನಿರ್ಲಕ್ಷ್ಯ ಮಾಡ್ತಾರೆ. ನೀವೂ ಪ್ರತಿ ದಿನ ಕೆಲ ಬ್ಯೂಟಿ ಪ್ರಾಡಕ್ಟ್ ಬಳಕೆ ಮಾಡ್ತಿದ್ದರೆ ಎಚ್ಚರವಾಗಿರಿ. ಯಾಕೆಂದ್ರೆ ಮುಂದೆ ಅದ್ರಿಂದ ಭಾರೀ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ. ಇಂದು ನಾವು ಯಾವ ಬ್ಯೂಟಿ ಐಟಂ ಬಳಕೆಯಿಂದ ಯಾವ ಸಮಸ್ಯೆ ಬರುತ್ತದೆ ಎಂಬುದನ್ನು ನಿಮಗೆ ಹೇಳ್ತೇವೆ.
ಬ್ಲೀಚ್ (Bleach) : ಬ್ಲೀಚ್‌ನಲ್ಲಿ ಅನೇಕ ರೀತಿಯ ರಾಸಾಯನಿಕ (Chemical) ಗಳು ಕಂಡುಬರುತ್ತವೆ. ಹಾಗಾಗಿಯೇ ಇರದ ಬಳಕೆಯಿಂದ ಮುಖ ಹೊಳೆಯುತ್ತದೆ. ಬ್ಲೀಚ್‌ನ ಅತಿಯಾದ ಬಳಕೆಯು ಮುಖದಲ್ಲಿರುವ ನೈಸರ್ಗಿಕ ಎಣ್ಣೆ (Natural oil ) ಯನ್ನು ಕಡಿಮೆ ಮಾಡುತ್ತದೆ. ಇದ್ರಿಂದ ಮುಖದಲ್ಲಿ ಎಣ್ಣೆಯಂಶ ಮಾಯವಾಗಿ ಚರ್ಮ ನಿರ್ಜೀವಗೊಳ್ಳುತ್ತದೆ. ಬ್ಲೀಚ್ ಮಾಡಿಸ್ಲೇಬೇಕು ಎನ್ನುವವರು ತಿಂಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಬ್ಲೀಚ್ ಮಾಡಿಸಬೇಡಿ.
Explained: ರಿವರ್ಸ್ ಹೇರ್ ವಾಶಿಂಗ್ ಎಂದರೇನು ಗೊತ್ತಾ?
ಲಿಪ್ ಗ್ಲಾಸ್ ಮತ್ತು ಲಿಪ್ಸ್ಟಿಕ್ : ಬೇರೆ ಯಾವುದೇ ಸೌಂದರ್ಯ ವರ್ಧಕ ಬಳಕೆ ಮಾಡಿಲ್ಲವೆಂದ್ರೂ ಬಹುತೇಕ ಮಹಿಳೆಯರು ಲಿಪ್ಸ್ಟಿಕ್ ಬಳಕೆಯನ್ನು ಪ್ರತಿ ದಿನ ಮಾಡ್ತಾರೆ. ತುಟಿಯ ಸೌಂದರ್ಯ ಹೆಚ್ಚಿಸುವ ಕೆಲಸವನ್ನು ಲಿಪ್ಸ್ಟಿಕ್ ಮಾಡುತ್ತದೆ. ಆದ್ರೆ ಪ್ರತಿ ದಿನ ಲಿಪ್ ಗ್ಲಾಸ್ ಮತ್ತು ಲಿಪ್ಟ್ಸಿಕ್ ಬಳಕೆ ಹಾನಿಕಾರಕವಾಗಿದೆ. ಲಿಪ್ ಗ್ಲಾಸ್ ಮತ್ತು ಲಿಪ್ ಲೈನರ್ ಕ್ಯಾಡ್ಮಿಯಮ್, ಅಲ್ಯೂಮಿನಿಯಂ, ಕ್ರೋಮಿಯಂ, ಸೀಸದಂತಹ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಇದು ನಿಮ್ಮ ತುಟಿಗಳ ಚರ್ಮವನ್ನು ಒಣಗಿಸುತ್ತದೆ. ಲಿಪ್ಸ್ಟಿಕ್ ನಲ್ಲಿ ಕಂಡುಬರುವ ಖನಿಜ ತೈಲವು ಮೂಲ ಚರ್ಮದ ರಂಧ್ರಗಳನ್ನು ಮುಚ್ಚುತ್ತದೆ. ಇದು ಚರ್ಮದ ಕೋಶಗಳ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆಯನ್ನು ತಡೆಯುತ್ತದೆ. ಇದ್ರಿಂದ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ.
ನೇಲ್ ಪಾಲಿಶ್ ಹಾಗೂ ನೇಲ್ ಪೇಂಟ್ : ಹುಡುಗಿಯರು ತಮ್ಮ ಉಗುರು ಸುಂದರವಾಗಿ ಕಾಣಲಿ ಎಂಬ ಕಾರಣಕ್ಕೆ ನೇಲ್ ಪೇಯಿಂಟ್ ಅಥವಾ ನೇಲ್ ಪಾಲಿಶ್ ಬಳಕೆ ಮಾಡ್ತಾರೆ. ಇದು ಉಗುರಿನ ಅಂದವನ್ನು ಹೆಚ್ಚಿಸುತ್ತದೆ ನಿಜ ಆದ್ರೆ ನೇಲ್ ಪಾಲಿಶ್ ಹಚ್ಚುವಾಗ ಅಜಾಗರೂಕತೆ ವಹಿಸಿದ್ರೆ ಸಮಸ್ಯೆಯಾಗುತ್ತದೆ. ಕಡಿಮೆ ಬೆಲೆಗೆ ಸಾಕಷ್ಟು ನೇಲ್ ಪಾಲಿಶ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದ್ರೆ ಇದ್ರ ಬಳಕೆಯಿಂದ ಉಗುರು ದುರ್ಬಲವಾಗುತ್ತದೆ. ಉಗುರಿನ ಬಣ್ಣ ಬದಲಾಗುತ್ತದೆ. ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಒಳ್ಳೆ ಗುಣಮಟ್ಟದ ನೇಲ್ ಪೇಯಿಂಟ್ ಬಳಕೆ ಮಾಡಿಲ್ಲವೆಂದಾದ್ರೆ ಉಗುರು ಹಾಳಾಗುತ್ತದೆ. ಹಾಗಾಗಿ ಪ್ರತಿ ದಿನ ನೇಲ್ ಪಾಲಿಶ್ ಬಳಕೆ ಮಾಡ್ಬೇಡಿ. ಜೊತೆಗೆ ಒಳ್ಳೆ ಗುಣಮಟ್ಟದ ಪಾಲಿಶ್ ಬಳಸಿ.
ಫೌಂಡೇಶನ್ ಅಥವಾ ಸಿಸಿ ಕ್ರೀಮ್ : ಮುಖಕ್ಕೆ ಮೇಕಪ್ ಮಾಡುವ ಮೊದಲು ಅನೇಕ ಹುಡುಗಿಯರು ಫೌಂಡೇಶನ್ ಅಥವಾ ಸಿಸಿ ಕ್ರೀಮ್ ಬಳಸ್ತಾರೆ. ಫೌಂಡೇಶನ್ ಪ್ರತಿ ದಿನ ಬಳಕೆ ಮಾಡುವ ಹುಡುಗಿಯರಿದ್ದಾರೆ. ಈ ಕ್ರೀಮ್‌ಗಳಲ್ಲಿ ಇರುವ ರಾಸಾಯನಿಕಗಳು ಚರ್ಮಕ್ಕೆ ಹಾನಿಕಾರಕ. ಮಲಗುವ ಮೊದಲು ಈ ಕ್ರೀಮ್ ಸ್ವಚ್ಛಗೊಳಿಸಬೇಕು. ಇಲ್ಲವೆಂದ್ರೆ ಕಲೆ, ಮೊಡವೆ, ತುರಿಕೆ ಸೇರಿದಂತೆ ಅನೇಕ ಸಮಸ್ಯೆ ಕಾಡಲು ಶುರುವಾಗುತ್ತದೆ.
ಐಬ್ರೋ ಹೇರ್ ಹೆಚ್ಚಿಸಲು ಈ ಎಣ್ಣೆ ಟ್ರೈ ಮಾಡಿ
ಕಾಡಿಗೆ : ಕಣ್ಣಿನ ಸೌಂದರ್ಯಕ್ಕೆ ಕಾಡಿಗೆ ಬೇಕು. ಇದನ್ನು ಕೂಡ ಪ್ರತಿ ದಿನ ಬಳಸುವ ಹುಡುಗಿಯರಿದ್ದಾರೆ. ಕಣ್ಣಿಗೆ ಹೆಚ್ಚು ಕಾಡಿಗೆ, ಮಸ್ಕರಾ, ಲೈನರ್ ಗಳಲ್ಲಿ ಕೆಮಿಕಲ್ ಇರುತ್ತದೆ. ಇದು ಕಣ್ಣಿಗೆ ಹಾನಿಯುಂಟು ಮಾಡುತ್ತದೆ.