ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದವಳ ಜುಟ್ಟು ಹಿಡಿದು, ಕಿರೀಟ ಕಿತ್ತು ಕಿರುಚಾಡಿದ್ದಾರೆ ರನ್ನರ್ ಅಪ್. ಇದರ ವಿಡಿಯೋ ವೈರಲ್ ಆಗಿದೆ.
ಎರಡು ಜಡೆಗಳು ಸೇರುವುದಿಲ್ಲ ಎನ್ನುವ ಮಾತು ತಲೆತಲಾಂತರಗಳಿಂದಲೂ ಚಾಲ್ತಿಯಲ್ಲಿ ಇವೆ. ಅಂದ ಮಾತ್ರ ಇಬ್ಬರು ಹೆಂಗಸರು ಒಟ್ಟಿಗೇ ಇರುವಲ್ಲಿ ಎಲ್ಲೆಡೆ ಗಲಾಟೆ ಆಗುತ್ತದೆ, ಗಂಡಸರು ಇರುವಲ್ಲಿ ಗಲಾಟೆ ನಡೆಯುವುದೇ ಇಲ್ಲ ಎಂದೇನೂ ಅರ್ಥವಲ್ಲ. ಒಟ್ಟಿನಲ್ಲಿ ಗಂಡಸರಿಗಿತಂಲೂ ಹೆಂಗಸರು ಒಟ್ಟಿಗೆ ಇದ್ದಾಗ ಕಿತ್ತಾಟ ಹೆಚ್ಚು ಎನ್ನುವ ಅರ್ಥದಲ್ಲಿ ಈ ಗಾದೆಯನ್ನು ಸೃಷ್ಟಿಮಾಡಲಾಗಿದೆ. ಅದರಲ್ಲಿಯೂ ಅಸೂಯೆಯ ವಿಷಯದಲ್ಲಿ ಗಂಡಸರಿಗಿಂತಲೂ ಹೆಂಗಸರೇ ಒಂದುಕೈ ಮೇಲೆ ಎನ್ನುವ ಗಂಭೀರ ಆರೋಪವೂ ಇದೆ. ಅದೇನೇ ಇರಲಿ, ಆದರೆ ಇಲ್ಲೊಂದು ವೇದಿಕೆಯಲ್ಲಿ ಸುಂದರಿಯೊಬ್ಬಳು ಇನ್ನೊಬ್ಬ ಸುಂದರಿಯ ಮೇಲೆ ಅದೆಷ್ಟು ಅಸೂಯೆ ಪಟ್ಟಳು ಎಂದರೆ, ತಾನು ಎಲ್ಲಿ ಇರುವುದು ಎನ್ನುವುದನ್ನೇ ಮರೆತು ಕಿತ್ತಾಡಿಸಿದ್ದಾಳೆ!
ಇಲ್ಲಿ ಸುಂದರಿ ಎನ್ನುವುದಕ್ಕೂ ಕಾರಣವಿದೆ. ಅದೇನೆಂದರೆ, ಇಲ್ಲಿ ನಡೆದಿದ್ದು ಸೌಂದರ್ಯ ಸ್ಪರ್ಧೆ. ಬ್ರೆಜಿಲಿಯನ್ ಸೌಂದರ್ಯ ಸ್ಪರ್ಧೆ ಇದಾಗಿದೆ. ಸುಂದರಿಯೊಬ್ಬಳಿಗೆ ಕಿರೀಟ ಸಿಗುತ್ತಿದ್ದಂತೆಯೇ ರನ್ನರ್ ಅಪ್ ಆಗಿದ್ದ ಇನ್ನೋರ್ವ ಸುಂದರಿಗೆ ಅದೇನಾಯ್ತೋ ಗೊತ್ತಿಲ್ಲ. ವೇದಿಕೆಯ ಮೇಲೆಯೇ ಮೈಮೇಲೆ ಬಂದವರಂತೆ ಗೆದ್ದವಳ ಜುಟ್ಟು ಹಿಡಿದು, ಕಿರೀಟ ಕಿತ್ತು ಬೀಸಾಕಿದ್ದಾಳೆ. ಅಷ್ಟಕ್ಕೂ ಅವಳಿಗೆ ತನ್ನ ಸೋಲನ್ನು ಒಪ್ಪಿಕೊಳ್ಳಲು ಆಗದೇ ಹೀಗೆ ಮಾಡಿದ್ದಾಳೆ.
ಪಾಕ್-ಭಾರತ ಕ್ರಿಕೆಟ್ ವೇಳೆ ಕಿಸ್ ಕೊಟ್ಟು ಹಾಟ್ ನಟಿಯ ಬುಟ್ಟಿಗೆ ಬೀಳಿಸಿಕೊಂಡ್ರಾ ಓರಿ! ಶೀಘ್ರದಲ್ಲಿ ಊರ್ವಶಿ ಮದ್ವೆ?
ಇದು ನಡೆದದ್ದು, ಅಮೆರಿಕದಲ್ಲಿ. ಮಿಸ್ ಅಮೆಜಾನ್ ಸೌಂದರ್ಯ ಸ್ಪರ್ಧೆಯಲ್ಲಿ ಈ ಘಟನೆ ಸಂಭವಿಸಿದೆ. 2015ರ ಘಟನೆ ಇದಾಗಿದ್ದು, ಪುನಃ ಅದು ಈಗ ವೈರಲ್ ಆಗಿದೆ. ಶೀಸ್ಲೇನ್ ಹಯಾಲ್ಲಾ ಎಂಬಾಕೆ ರನ್ನರ್ ಅಪ್ ಆಗಿದ್ದದಳು. ಕರೋಲ್ ಟೊಲೆಡೊ ಎಂಬಾಕೆ ಮಿಸ್ ಅಮೆಜಾನ್ ಕಿರೀಟ ಪಡೆದುಕೊಂಡಳು. ತಾನೇ ಮಿಸ್ ಅಮೆಜಾನ್ ಆಗುತ್ತೇನೆ ಎಂದು ಅಂದುಕೊಂಡಿದ್ದ ಶೀಸ್ಲೇನ್ ಹಯಾಲ್ಲಾಗೆ ಇದನ್ನು ಸಹಿಸಲು ಆಗಲಿಲ್ಲ. ಆಗ ಆಕೆ ಕರೋಲ್ ಟೊಲೆಡೊ ಕೂದಲು ಹಿಡಿದು ಕಿತ್ತಾಡಿ, ಕಿರೀಟ ಕಿತ್ತುಕೊಂಡಿದ್ದಾಳೆ!
ಅಷ್ಟಕ್ಕೂ ಈಕೆ ಹೈಡ್ರಾಮಾ ಮಾಡಿದ್ದಳು. ವಿಜೇತರ ಹೆಸರನ್ನು ಘೋಷಿಸುತ್ತಿದ್ದಂತೆ ಹಯಾಲ್ಲಾ ಆರಂಭದಲ್ಲಿ ಕರೋಲ್ ನನ್ನು ತಬ್ಬಿಕೊಂಡಳು. ಕೆಲವೇ ಸೆಕೆಂಡುಗಳ ನಂತರ ಆಕೆಯ ತಲೆಗೆ ಕಿರೀಟ ಇಡುತ್ತಿದ್ದಂತೆಯೇ,ಹಯಾಲ್ಲಾ ಗಲಾಟೆ ಆರಂಭಿಸಿದಳು. ಇದರ ವಿಡಿಯೋ ಈಗ ಪುನಃ ವೈರಲ್ ಆಗುತ್ತಿದೆ. ಅಂದಹಾಗೆ, ಮಿಸ್ ಅಮೆಜಾನ್ ವಿಜೇತರು ರಾಷ್ಟ್ರೀಯ ಮಿಸ್ ಬ್ರೆಜಿಲ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಾರೆ.
ಇವತ್ತಿನ ರಾತ್ರಿ... ಎನ್ನುತ್ತಲೇ ಕೆಲವೇ ನಿಮಿಷಕ್ಕೆ 7 ಕೋಟಿ ಪಡೆದ ಊರ್ವಶಿ ರೌಟೇಲಾ! ವಿಡಿಯೋ ವೈರಲ್
