ಊರ್ವಶಿ ರೌಟೇಲಾ, ಏಳು ಕೋಟಿ ರೂಪಾಯಿಗೆ ನೃತ್ಯ ಪ್ರದರ್ಶನ ನೀಡಿದ ಮೊದಲ ಭಾರತೀಯ ನಟಿ ಎನಿಸಿಕೊಂಡಿದ್ದಾರೆ. ಕೋಲ್ಕತಾದಲ್ಲಿ ಹೊಸ ವರ್ಷದ ಕಾರ್ಯಕ್ರಮದಲ್ಲಿ ಈ ಪ್ರದರ್ಶನ ನಡೆಯಿತು. ವಿವಾದಗಳಿಂದಲೂ ಸುದ್ದಿಯಲ್ಲಿರುವ ಈ ನಟಿ, ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಚಿನ್ನದ ಐಫೋನ್ ಕಳೆದುಕೊಂಡಿದ್ದು, ಸ್ನಾನದ ವಿಡಿಯೋ ಲೀಕ್ ಮಾಡಿದ್ದು ಸೇರಿದಂತೆ ಹಲವು ಘಟನೆಗಳಿಂದ ಸುದ್ದಿ ಮಾಡಿದ್ದಾರೆ.
ಬಾಲಿವುಡ್ ನಟಿ ಊರ್ವಶಿ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ಸೈಫ್ ಅಲಿ ಖಾನ್ ಇರಿತದ ವಿಷಯದ ಬಗ್ಗೆ ಕೇಳಿದ್ರೆ, ತಮ್ಮ ಅಪ್ಪ-ಅಮ್ಮ ಕೊಡಿಸಿದ ವಜ್ರದ ವಾಚು, ಉಂಗುರದ ಬಗ್ಗೆ ಮಾತನಾಡಿ ಕೊನೆಗೆ ಕ್ಷಮೆ ಕೋರಿದ್ದ ನಟಿ, ಕೆಲ ಹಿಂದೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಚಿನ್ನದ ಐ ಫೋನ್ ಕಳೆದುಕೊಂಡೆ ಎಂದು ಹೇಳುವ ಮೂಲಕ ಸದ್ದು ಮಾಡಿದ್ದರು. ಅದಾದ ಬಳಿಕ ಈಕೆಯ ಹುಟ್ಟುಹಬ್ಬದಂದು ಗಾಯಕ ಯೋಯೋ ಸಿಂಗ್ ಚಿನ್ನದ ಕೇಕ್ ಮಾಡಿಸಿ ಸದ್ದು ಮಾಡಿದ್ದರು. ಆದರೆ ಈಕೆ ಸ್ನಾನಕ್ಕೆಂದು ಬಾತ್‌ರೂಮ್‌ಗೆ ಹೋಗಿರುವ ವಿಡಿಯೋ ಒಂದು ಕಳೆದ ಜುಲೈನಲ್ಲಿ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಲ್‌ಚಲ್ ಸೃಷ್ಟಿಸಿತ್ತು. ಕೊನೆಗೆ ನಿರ್ಮಾಪಕರು ಬೇಡಿಕೊಂಡಿದ್ದಕ್ಕೆ ನಾನೇ ವಿಡಿಯೋ ಲೀಕ್ ಮಾಡಿದ್ದೆ, ಇದು ಸಿನಿಮಾ ಶೂಟಿಂಗ್ ವೇಳೆ ತೆಗೆದದ್ದು ಎಂದರು.
ಹೀಗೆ ಆಗಾಗ್ಗೆ ಸದ್ದು ಮಾಡುತ್ತಿರುವ ನಟಿ, ಈಗ ಒಂದು ನೃತ್ಯಕ್ಕೆ ಏಳು ಕೋಟಿ ಪಡೆಯುವ ಮೂಲಕ, ಇಷ್ಟು ದುಬಾರಿ ಮೊತ್ತ ಪಡೆದ ಮೊದಲ ನಟಿ ಎನ್ನಿಸಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಇಷ್ಟೊಂದು ದೊಡ್ಡ ಮೊತ್ತ ಪಡೆದಿರುವುದು ಹೊಸ ವರ್ಷದ ಸಂದರ್ಭದಲ್ಲಿ ಕೋಲ್ಕತಾದಲ್ಲಿ ನಡೆದ ಕಾರ್ಯಕ್ರಮದಂದು. ಈಕೆ ಇಲ್ಲಿ ಕಾಬಿಲ್ ಮತ್ತು ಸ್ತ್ರೀ-2 ಚಿತ್ರದ ಹಾಡಿಗೆ ಸೊಂಟ ಬಳುಕಿಸಿದರು. ಅದರ ವಿಡಿಯೋ ಈಗ ವೈರಲ್ ಆಗಿದೆ. ಈ ರೀತಿಯ ಡಾನ್ಸ್ ಬಹುತೇಕ ನಟಿಯರು ಮಾಡುತ್ತಾರೆ, ಬೇಕಿದ್ದರೆ ಕೆಲವು ನಟಿಯರು ಬಟ್ಟೆಯನ್ನೂ ಎಷ್ಟು ಬೇಕೋ ಅಷ್ಟು ಬಿಚ್ಚಲು ರೆಡಿಯಿದ್ದಾರೆ. ಆದರೆ ಊರ್ವಶಿ ರೌಟೇಲಾ ಹೆಸರಿನಿಂದಲೇ ಜನರು ಹುಚ್ಚೆದ್ದು ಕುಣಿಯುತ್ತಾರೆ ಎನ್ನುವ ಕಾರಣಕ್ಕೆ ಈಕೆಗೆ ಇಷ್ಟು ಹಣವನ್ನು ನೀಡಲಾಗಿದೆ ಎಂದು ವರದಿಯಾಗಿದೆ. ಆಜ್ ಕೀ ರಾತ್ ಹಾಡಿಗೆ ಇವರು ನರ್ತಿಸಿದ್ದಾರೆ. ಮೂಲತಃ ಈ ಹಾಡಿಗೆ ತಮನ್ನಾ ನರ್ತಿಸಿದ್ದು, ಅವರು ಒಂದು ಕೋಟಿ ಪಡೆದಿದ್ದಾರೆ.
ನಿರ್ಮಾಪಕರಿಗಾಗಿ ಸ್ನಾನದ ವಿಡಿಯೋ ಲೀಕ್ ಮಾಡಿದ್ದೆ, ಆದ್ರೆ... ಊರ್ವಶಿ ರೌಟೇಲಾ ಶಾಕಿಂಗ್ ಸುದ್ದಿ ರಿವೀಲ್!
ಅಂದಹಾಗೆ, ಊರ್ವಶಿ ರೌಟೇಲಾ, 2013 ರಲ್ಲಿ ಸನ್ನಿ ಡಿಯೋಲ್ ಅವರ ಸಿಂಗ್ ಸಾಬ್ ದಿ ಗ್ರೇಟ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ನಂತರ ಅವರು ಭಾಗ್ ಜಾನಿ, ಸನಮ್ ರೇ, ಗ್ರೇಟ್ ಗ್ರ್ಯಾಂಡ್ ಮಸ್ತಿ, ಹೇಟ್ ಸ್ಟೋರಿ 4, ಮತ್ತು ಪಗಲ್ಪಂತಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು. ಹೆಚ್ಚುವರಿಯಾಗಿ, ಅವರು ಕನ್ನಡ, ಬಂಗಾಳಿ, ತಮಿಳು ಮತ್ತು ತೆಲುಗು ಮುಂತಾದ ವಿವಿಧ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ವರ್ಷಗಳಲ್ಲಿ, ಊರ್ವಶಿ ಅನೇಕ ಚಿತ್ರಗಳಲ್ಲಿ ಭಾಗವಾಗಿದ್ದರೂ, ಅವುಗಳಲ್ಲಿ ಯಾವುದೂ ನಾಯಕ ನಟಿಯಾಗಿ ಕಾಣಿಸಿಕೊಂಡಿಲ್ಲ. ಊರ್ವಶಿ ಅವರ ಇತ್ತೀಚಿನ ಬಿಡುಗಡೆಯ ಕುರಿತು ಹೇಳುವುದಾದರೆ, ನಟಿ ಡಾಕು ಮಹಾರಾಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಮಾತುಗಳಿಂದಲೇ ವಿವಾದ ಸೃಷ್ಟಿಸುವ ನಟಿ, ಸ್ಟೇಜ್ ಷೋಗಳಿಂದಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ್ಗೆ ಇಂಥ ವಿಡಿಯೋ ಶೇರ್ ಮಾಡುವ ನಟಿ 100 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕ ಹೆಚ್ಚು ಫಾಲೋ ಮಾಡುತ್ತಿರುವ ಭಾರತೀಯ ಸೆಲೆಬ್ರಿಟಿಗಳಲ್ಲಿ ಒಬ್ಬರು ಎನ್ನಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಅತ್ಯಂತ ಕಿರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಹೆಸರನ್ನು ಸೇರಿಸಲಾಗಿದೆ. ಅಂದಹಾಗೆ ನಟಿಗೆ ಈಗ 30 ವರ್ಷ ವಯಸ್ಸು.
ಪ್ಲೀಸ್ ಕ್ಷಮಿಸಿ, ಸೈಫ್ ಇರಿತದ ವಿಷ್ಯದಲ್ಲಿ ದೊಡ್ಡ ತಪ್ಪು ಮಾಡಿದೆ: ಅಂಗಲಾಚಿ ಕ್ಷಮೆ ಕೋರಿದ ನಟಿ ಊರ್ವಶಿ ರೌಟೇಲಾ!
