Beauty Tips : ಈ ಹರ್ಬಲ್ ಶ್ಯಾಂಪೂ ಬಳಸಿ, ಸೈಡ್ ಎಫೆಕ್ಟ್ಸ್ ತಲೆ ಬಿಸಿ ಬಿಟ್ಹಾಕಿ!

ಅಂದದ ಕೂದಲಿಗೆ ಚೆಂದದ ಆರೈಕೆ ಅಗತ್ಯ. ಬೇಕಾಬಿಟ್ಟಿ ಅದನ್ನು ನೋಡಿಕೊಂಡ್ರೆ ಕೂದಲು ನೀವಂದುಕೊಂಡಂತೆ ಬೆಳೆಯೋದಿಲ್ಲ. ನಮ್ಮ ಉಳಿದ ಅಂಗಗಳ ಬಗ್ಗೆ ಎಷ್ಟು ಕಾಳಜಿವಹಿಸ್ತಿವೋ ಅಷ್ಟೆ ಮುತುವರ್ಜಿಯಲ್ಲಿ, ಅಷ್ಟೇ ಎಚ್ಚರಿಕೆಯಿಂದ ಕೂದಲ ಆರೈಕೆ ಮಾಡ್ಬೇಕು. ಕೆಮಿಕಲ್ ಬದಲು ಆಯುರ್ವೇದಿಕ್ ಶಾಂಪೂ ಬಳಸಿದ್ರೆ ಸಿಕ್ಕಾಪಟ್ಟೆ ಲಾಭವಿದೆ. 
 

Know The Amazing Benefits Of Using Herbal Shampoo

ಈಗ ಮಹಿಳೆಯರಾಗಲೀ ಪುರುಷರಾಗಲೀ ಕೂದಲಿನ ಆರೈಕೆಗೆ ಎಷ್ಟೆಲ್ಲ ಕಸರತ್ತು ಮಾಡ್ತಾರೆ. ಕೂದಲು ಉದುರುವ ಸಮಸ್ಯೆ, ಹೊಟ್ಟಿನ ಸಮಸ್ಯೆ, ಬಿಳಿ ಕೂದಲ ಸಮಸ್ಯೆ ಹೀಗೆ ಒಬ್ಬೊಬ್ಬರು ಒಂದು ರೀತಿಯ ಸಮಸ್ಯೆ ಪರಿಹಸಿರಿಕೊಳ್ಳಲು ಕೂದಲಿನ ಆರೈಕೆಯಲ್ಲಿ ತೊಡಗುತ್ತಾರೆ. ಹೆಚ್ಚುತ್ತಿರುವ ವಾಯುಮಾಲಿನ್ಯ, ಬದಲಾಗುತ್ತಿರುವ ಜೀವನಶೈಲಿ, ಒತ್ತಡ ಮತ್ತು ಆಹಾರದಿಂದ ಕೂಡ ಕೂದಲಿನ ಸಮಸ್ಯೆಗಳು ತಲೆದೋರುತ್ತವೆ. ವಿವಿಧ ರೀತಿಯ ಕೇಶ ವಿನ್ಯಾಸಗಳ ಬಳಕೆಯಲ್ಲಿ ಬಳಸುವ ಕೆಮಿಕಲ್ ಹೊಂದಿದ ಶಾಂಪೂ, ಹೇರ ಸ್ಪ್ರೇ ಮುಂತಾದ ಹೇರ್ ಅಕ್ಸೆಸರಿಸ್ ಗಳಿಂದ ಕೂಡ ಕೂದಲು ಹಾಳಾಗುತ್ತದೆ.

ಮಾರುಕಟ್ಟೆ (Market) ಯಲ್ಲಿ ಸಿಗುವ ವಿವಿಧ ರೀತಿಯ ಶ್ಯಾಂಪೂ (Shampoo), ಸ್ಪ್ರೇ, ಹೇರ್ ಕಲರ್, ಹೇರ್ ಕಂಡೀಶನರ್ ಗಳು ಕೂದಲಿಗೆ ಮಾರಕವೇ ಆಗಿದೆ. ಕೆಲವು ಮಂದಿ ಕೂದಲಿ (Hair) ನ ಆರೈಕೆಗೆ ಆಯುರ್ವೇದ (Ayurveda) ಪದ್ಧತಿಯನ್ನು ಬಳಸುತ್ತಾರೆ. ಇದರಿಂದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ. ಸಾಮಾನ್ಯವಾಗಿ ನಾವು ತಲೆ ಸ್ನಾನ ಮಾಡುವಾಗ ಶ್ಯಾಂಪೂ ಅಥವಾ ಸೋಪನ್ನು ಬಳಸುತ್ತೇವೆ. ಅಂತಹ ಶಾಂಪೂವಿನಲ್ಲಿರುವ ಹಾನಿಕಾರಕ ಕೆಮಿಕಲ್ (Chemical ) ಗಳು ಕೂದಲಿಗೆ ಒಳ್ಳೆಯದರ ಬದಲು ಕೆಟ್ಟದ್ದನ್ನೇ ಹೆಚ್ಚು ಮಾಡುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಅಂತಹ ಶ್ಯಾಂಪೂವಿನ ಬದಲು ನೀವು ಹರ್ಬಲ್ ಶಾಂಪೂವನ್ನು ಬಳಸಬಹುದು. ಇದರಿಂದ ನಿಮ್ಮ ಕೂದಲಿಗೆ ಹಲವು ಪ್ರಯೋಜನಗಳಾಗುತ್ತದೆ.

ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಅಂದ್ರೆ ಇಷ್ಟುದ್ದ ಮೀಸೆ ಬಿಡೋದ?

ಹಾನಿಕಾರಕ ಕೆಮಿಕಲ್ ನಿಂದ ದೂರವಾಗಿದೆ ಈ ಹರ್ಬಲ್ ಶಾಂಪೂ : ಹರ್ಬಲ್ ಶ್ಯಾಂಪೂ ವಿವಿಧ ಗಿಡಮೂಲಿಕೆಗಳು, ಹೂವುಗಳು ಮತ್ತು ಎಲೆಗಳ ಮೂಲಕ ಸಿದ್ಧವಾಗುತ್ತೆ. ಆದ್ದರಿಂದ ಇದು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ರಾಸಾಯನಿಕ ಶಾಂಪೂಗಳು ಒಮ್ಮೆ ನಿಮ್ಮ ಕೂದಲನ್ನು ಸ್ವಚ್ಛಗೊಳಿಸಿದಂತೆ ಕಾಣಿಸಿದರೂ ನಂತರದಲ್ಲಿ ಅದರಿಂದ ಕೂದಲು ಉದುರುವುದು ಮತ್ತು ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಹರ್ಬಲ್ ಶಾಂಪೂವಿನಲ್ಲಿ ಗಿಡಮೂಲಿಕೆಗಳನ್ನು ಬಳಸುವುದರಿಂದ ನಿಮ್ಮ ಕೂದಲು ಮತ್ತು ನೆತ್ತಿಯು ಸಲ್ಫೇಟ್ ಗಳು ಮತ್ತು ಪ್ಯಾರಾಬೆನ್ ಗಳಿಂದ ಉಂಟಾಗುವ ನಷ್ಟವನ್ನು ತಡೆಯುತ್ತವೆ.

ಪಾಕೆಟ್ ಫ್ರೆಂಡ್ಲಿ ಶಾಂಪೂ  (Pocket Friendly Shampoo) : ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಶಾಂಪೂಗಳು ಹೆಚ್ಚಿನ ಬೆಲೆಯದ್ದಾಗಿರುತ್ತೆ. ಅದರ ಬದಲಾಗಿ ನೀವು ಹರ್ಬಲ್ ಶಾಂಪೂವನ್ನು ಖರೀದಿಸಬಹುದು. ಮನೆಯಲ್ಲೇ ನೀವು ಹರ್ಬಲ್ ಶಾಂಪೂ ತಯಾರಿಸಿಕೊಂಡರೆ ಬಹಳ ಒಳ್ಳೆಯದು.

ಶಾಂಪೂ ಕಂಡೀಶನರ್ (Hair Conditioner) ಎರಡೂ ಇದರಲ್ಲೇ ಸಿಗುತ್ತೆ : ಸಾಮಾನ್ಯವಾಗಿ ನೀವು ಕೆಮಿಕಲ್ ಸೇರಿದ ಶಾಂಪೂ ಬಳಸಿದ ನಂತರ ಕಂಡೀಶನರ್ ಗಳನ್ನು ಬಳಸಬೇಕಾಗುತ್ತದೆ. ಆದರೆ ಈ ಹರ್ಬಲ್ ಶಾಂಪೂ ಬಳಸಿದರೆ ತಲೆಸ್ನಾನವಾದ ಬಳಿಕ ಮತ್ತೆ ಕಂಡೀಶನರ್ ಬಳಸುವ ಅವಶ್ಯಕತೆ ಇರುವುದಿಲ್ಲ. ಹರ್ಬಲ್ ಶಾಂಪೂ ಕಂಡೀಶನರ್ ನಂತೆಯೂ ಕೆಲಸ ಮಾಡುತ್ತದೆ.

ಪಿಎಚ್ ಮಟ್ಟವನ್ನು ಕಾಪಾಡುತ್ತೆ : ಆಯುರ್ವೇದ ಮೂಲದ ಹರ್ಬಲ್ ಶಾಂಪೂವನ್ನು ಕೂದಲಿಗೆ ಬಳಸುವುದರಿಂದ ನಮ್ಮ ನೆತ್ತಿ ಮತ್ತು ಕೂದಲಿನ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ. ಇದರಿಂದಾಗಿ ನೆತ್ತಿಯ ಮೇಲೆ ತೈಲದ ಮಟ್ಟವು ಸರಿಯಾಗಿರುತ್ತೆ.

ಬೇಸಿಗೆ ಶುರವಾಯಿತು, ಇನ್ನು ಬೆವರಿನದ್ದೇ ಕಾರುಬಾರು, ವಾಸನೆ ಹೋಗಿಸಲು ಹೀಗ್ ಮಾಡಿ

ಕೂದಲಿಗೆ ಹೆಚ್ಚಿನ ಪೋಷಣೆ ಸಿಗುತ್ತೆ : ಹರ್ಬಲ್ ಶಾಂಪೂ ಕೂದಲನ್ನು ಸ್ವಚ್ಛ ಮಾಡುವುದರ ಜೊತೆಗೆ ಕೂದಲಿಗೆ ಹೆಚ್ಚಿನ ಪೋಷಣೆಯನ್ನೂ ಕೊಡುತ್ತದೆ. ಹರ್ಬಲ್ ಶಾಂಪೂವಿನಿಂದ ಕೂದಲು ಮತ್ತು ನೆತ್ತಿಗೆ ಬೇಕಾದ ಜೀವಸತ್ವಗಳು ಮತ್ತು ಖನಿಜಾಂಶಗಳು ದೊರೆಯುತ್ತವೆ. ಕೆಮಿಕಲ್ ಶಾಂಪೂವನ್ನು ಬಳಸಿ ಸ್ವಲ್ಪ ದಿನಗಳು ಕಳೆದ ಮೇಲೆ ಕೂದಲಿನ ಬಣ್ಣ ಮಾಸಿಹೋಗುತ್ತದೆ. ಆದರೆ ಹರ್ಬಲ್ ಶಾಂಪೂವಿನಿಂದ ಕೂದಲಿನ ಬಣ್ಣ ಮಾಸುವುದಿಲ್ಲ. ಇದು ಕೂದಲಿಗೆ ಪ್ರಾಕೃತಿಕ ಬಣ್ಣವನ್ನು ಕೊಟ್ಟು, ಕೂದಲು ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ನೀವು ಕೆಮಿಕಲ್ ಮಿಶ್ರಿತ ಶಾಂಪೂವಿನ ಬದಲು ನೈಸರ್ಗಿಕ ಶಾಂಪೂವನ್ನು ಬಳಸಿ ಕೂದಲನ್ನು ಆರೈಕೆ ಮಾಡಿ.

Latest Videos
Follow Us:
Download App:
  • android
  • ios