Asianet Suvarna News Asianet Suvarna News

ಹೊಟ್ಟೆ ಮೇಲೆ ಕೂದಲು ಬೆಳಿತಿದ್ರೆ ಟೆನ್ಷನ್ ಬೇಡ, ಇಲ್ಲಿವೆ Beauty Tips

ದೇಹದ ಅನೇಕ ಕಡೆ ಅನಗತ್ಯ ಕೂದಲು ಬೆಳೆಯುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೆಲ ಸೌಂದರ್ಯ ವರ್ಧಕಗಳನ್ನು ಬಳಸಿ ಕೂದಲನ್ನು ತೆಗಿತಾರೆ. ಆದ್ರೆ ಇದು ಚರ್ಮಕ್ಕೆ ಹಾನಿ ಮಾಡುವ ಸಾಧ್ಯತೆಯಿರುತ್ತದೆ. ಈ ಅನಗತ್ಯ ಕೂದಲನ್ನು ಅಡುಗೆ ಮನೆಯಲ್ಲಿರುವ ವಸ್ತುಗಳಿಂದಲೇ ತೆಗೆದುಹಾಕ್ಬಹುದು.
 

How To Get Rid Of Stomach Hair beauty tips for women
Author
First Published Aug 29, 2022, 2:22 PM IST

ದೇಹದ ಪ್ರಮುಖ ಅಂಗಗಳಲ್ಲಿ ಹೊಟ್ಟೆ ಕೂಡ ಒಂದು. ಹೊಟ್ಟೆಯ ಸೌಂದರ್ಯಕ್ಕೆ ಮಹಿಳೆಯರು ಮಹತ್ವ ನೀಡ್ತಾರೆ. ಸೀರೆ ಉಟ್ಟಾಗ ಹಾಗೆ ನಾಬಿ ಕಾಣುವ ಡ್ರೆಸ್ ಧರಿಸಿದಾಗ ಹೊಟ್ಟೆ ಆಕರ್ಷಕವಾಗಿರಬೇಕು. ಹೊಕ್ಕಳಿನ ಸುತ್ತಮುತ್ತಲಿನ ಭಾಗ ಸ್ಟ್ರಚ್ ಮಾರ್ಕ್ ಹೊಂದಿದ್ರೆ ಅಥವಾ ಕಪ್ಪಾಗಿದ್ರೆ ನೋಡೋರನ್ನು ಆಕರ್ಷಿಸೋದಿಲ್ಲ. ಹಾಗೆ ಹೊಟ್ಟೆ ಮೇಲೆ ಕೂದಲು ಬೆಳೆದ್ರೆ ಕೂಡ ಮುಜುಗರಕ್ಕೀಡಾಗಬೇಕಾಗುತ್ತದೆ. ಕೆಲವರಿಗೆ ಹೊಟ್ಟೆ ಮೇಲೆ ಕೂದಲು ಬೆಳೆಯುತ್ತದೆ. ಇದಕ್ಕೆ ಹಾರ್ಮೋನ್ ನಲ್ಲಾಗುವ ಏರುಪೇರುಗಳು ಕಾರಣವಾಗಿರುತ್ತದೆ. ಇದ್ರಿಂದ ಅವರಿಗಿಷ್ಟವಾಗುವ ಡ್ರೆಸ್ ಅಥವಾ ಸೀರೆ ಧರಿಸಲು ಸ್ವಲ್ಪ ಹಿಂದೆ ಮುಂದೆ ನೋಡ್ತಾರೆ. ನಿಮ್ಮ ಹೊಟ್ಟೆ ಮೇಲೂ ಅನಗತ್ಯ ಕೂದಲಿದ್ರೆ ಚಿಂತಿಸುವ ಅಗತ್ಯವಿಲ್ಲ. ಕೆಲ ಮನೆ ಮದ್ದಿನ ಮೂಲಕವೇ ನೀವು ಈ ಕೂದಲನ್ನು ತೆಗೆದುಹಾಕಬಹುದು. ಇದು ನಾವು ಹೊಟ್ಟೆ ಸುತ್ತಮುತ್ತ ಇರುವ ಅನಗತ್ಯ ಕೂದಲನ್ನು ಹೇಗೆ ತೆಗೆಯೋದು ಎಂಬುದನ್ನು ಹೇಳ್ತೇವೆ.

ಬ್ಯೂಟಿಪಾರ್ಟರ್ ಗೆ ಹೋಗಿ ನೀವು ಅನಗತ್ಯ ಕೂದಲನ್ನು ತೆಗೆಸಿಕೊಂಡು ಬರಬಹುದು. ಕೆಲವರಿಗೆ ಇದು ಇಷ್ಟವಾಗುವುದಿಲ್ಲ. ಮತ್ತೆ ಕೆಲವರಿಗೆ ಅಲರ್ಜಿ ಸಮಸ್ಯೆ ಕಾಡುತ್ತದೆ. ಅಂಥವರು ಮನೆಯಲ್ಲಿಯೇ ಸುಲಭವಾಗಿ ಇವುಗಳನ್ನು ಟ್ರೈ ಮಾಡ್ಬಹುದು.

ಹೊಟ್ಟೆ (Stomach) ಮೇಲಿರುವ ಅನಗತ್ಯ ಕೂದಲು (Hair ತೆಗೆಯಲು ಮನೆ ಮದ್ದು (Home Remedy) :

ಮೊಟ್ಟೆ (Egg) : ಮೊಟ್ಟೆ ಬರೀ ಆಹಾರಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಒಳ್ಳೆಯದು. ಮೊಟ್ಟೆಯ ಬಿಳಿ ಭಾಗವನ್ನು ನೀವು ಅನಗತ್ಯ ಕೂದಲು ತೆಗೆಯಲು ಬಳಸಬಹುದು. ಮೊದಲು ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಳ್ಳಿ. ಅದಕ್ಕೆ ಕಾರ್ನ್ ಪೌಡರ್ ಹಾಗೂ ಸಕ್ಕರೆಯನ್ನು ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಕೂದಲಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಇದು ಒಣಗಿದ ಮೇಲೆ ನಿಧಾನವಾಗಿ ತೆಗೆಯಿರಿ. ನಂತ್ರ ಹೊಟ್ಟೆಯನ್ನು ಸ್ವಚ್ಛವಾಗಿ ಕ್ಲೀನ್ ಮಾಡಿ. ವಾರದಲ್ಲಿ ಎರಡು ಬಾರಿ ಹೊಟ್ಟೆಗೆ ಈ ಮಿಶ್ರಣ ಹಚ್ಚಿದ್ರೆ ಕೂದಲಿನ ಸಮಸ್ಯೆ ಕಾಡುವುದಿಲ್ಲ.

ಜೇನುತುಪ್ಪ (honey) : ಹೊಟ್ಟೆ ಮೇಲೆ ಅನಗತ್ಯ ಕೂದಲು ಬೆಳೆದಿದೆ ಎಂದಾದ್ರೆ ಅದಕ್ಕೆ ಜೇನುತುಪ್ಪ ಕೂಡ ಮದ್ದು. ಜೇನುತುಪ್ಪ, ಸಕ್ಕರೆ ಮತ್ತು ನಿಂಬೆ ರಸದ ಸಹಾಯದಿಂದ ನೀವು ಕೂದಲನ್ನು ತೆಗೆಯಬಹುದು. ಮೊದಲು ಒಂದು ಚಮಚ ಸಕ್ಕರೆ, ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಬೇಕು.  ಈ ಪೇಸ್ಟನ್ನು ಸ್ವಲ್ಪ ಬಿಸಿ ಮಾಡ್ಬೇಕು. ಆಗ ಅದು ಜೆಲ್ ರೂಪದಲ್ಲಿ ಬದಲಾಗುತ್ತದೆ. ಇದನ್ನು ತಣ್ಣಗಾಗಲು ಬಿಡಬೇಕು. ನಂತ್ರ ಕೂದಲಿರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ಪೇಸ್ಟ್ ಒಣಗಿದ ನಂತ್ರ ನಿಧಾನವಾಗಿ ತೆಗೆಯಬೇಕು.

ಕೊಳಕಾದ ಕನ್ನಡಕ ಹೀಗೆ ಕ್ಲೀನ್ ಮಾಡೋದು ಸುಲಭ 

ಕಡಲೆ ಹಿಟ್ಟು (Besan Flour) : ಕಡಲೆ ಹಿಟ್ಟಿಗೆ ಹಾಲು ಮತ್ತು ಅರಿಶಿನವನ್ನು ಸೇರಿಸಬೇಕು. ಈ ಪೇಸ್ಟನ್ನು ನೀವು ಹೊಟ್ಟೆಗೆ ಹಚ್ಬೇಕು. ವಾರದಲ್ಲಿ ಎರಡು ಬಾರಿ ಇದರ ಪ್ರಯೋಗ ಮಾಡಿದ್ರೆ ನಿಧಾನವಾಗಿ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ. 
ಅರಿಶಿನ ಪ್ರಯೋಗಿಸಿ ನೋಡಿ (turmeric) : ಅರಿಶಿನವನ್ನು ಕೂಡ ನೀವು ಅನಗತ್ಯ ಕೂದಲು ತೆಗೆಯಲು ಬಳಸಬಹುದು. ಒಂದು ಚಮಚ ಅರಿಶಿನಕ್ಕೆ ಸ್ವಲ್ಪ ಹಾಲನ್ನು ಹಾಕಿ ಮಿಕ್ಸ್ ಮಾಡಿ. ಈ ಪೇಸ್ಟನ್ನು ಕೂದಲಿರುವ ಜಾಗಕ್ಕೆ ಹಚ್ಚಿಕೊಳ್ಳಿ. ವಾರಕ್ಕೆ 2 -3 ಬಾರಿ ಇದನ್ನು ಮಾಡಿದ್ರೆ ಬೇಗ ಫಲಿತಾಂಶ ಸಿಗುತ್ತದೆ.

ಬೊಟೊಕ್ಸ್ ಟ್ರೀಟ್‌ಮೆಂಟ್‌ ಪಡ್ಕೊಂಡ್ರೆ ಮುಖ ಪ್ಲಾಸ್ಟಿಕ್‌ನಂತಾಗುತ್ತಾ ?

ಪಪ್ಪಾಯಿ ಕಾಯಿ : ಪಪ್ಪಾಯಿ ಕಾಯಿಯನ್ನು ಮೊದಲು ಸಿಪ್ಪೆ ತೆಗೆದು ರುಬ್ಬಿಕೊಳ್ಳಬೇಕು. ನಂತ್ರ ಅದಕ್ಕೆ ಅರಿಶಿನ ಮಿಕ್ಸ್ ಮಾಡ್ಬೇಕು. ಈ ಮಿಶ್ರಣವನ್ನು ಹೊಟ್ಟೆಗೆ ಹಚ್ಚಿಕೊಳ್ಳಬೇಕು. ಮಿಶ್ರಣ ಒಣಗಿದ ನಂತ್ರ ಅದನ್ನು ನಿಧಾನವಾಗಿ ಉಜ್ಜಿ ತೆಗೆಯಬೇಕು. ಪಪ್ಪಾಯಿ ಈ ಮಿಶ್ರಣ ಕೂಡ ಹೊಟ್ಟೆ ಮೇಲೆ ಬೆಳೆದ ಅನಗತ್ಯ ಕೂದಲನ್ನು ಕಡಿಮೆ ಮಾಡುತ್ತದೆ. 

Follow Us:
Download App:
  • android
  • ios