Asianet Suvarna News Asianet Suvarna News

Home Remedies : ನಿಮ್ಮ ಶೂನಿಂದ ವಾಸನೆ ಬರ್ತಿದ್ದರೆ ಚಿಂತೆ ಬೇಡ

ಶೂ (Shoe) ಧರಿಸುವುದು ಅನೇಕ ಕಂಪನಿಗಳಲ್ಲಿ ಕಡ್ಡಾಯ. ಬೇಸಿಗೆ (Summer)ಯಲ್ಲಿ ಶೂ ಧರಿಸೋದು ಸವಾಲಿನ ಕೆಲಸ. ಪಾದ ಧಗ ಧಗಿಸುವ ಜೊತೆಗೆ ವಾಸನೆ (Smell) ಬರ್ತಿರುತ್ತದೆ. ಇದ್ರಿಂದ ಮುಕ್ತಿ ಪಡೆಯೋದು ಸುಲಭ. ಮನೆಯಲ್ಲಿಯೇ ಕೆಲ ಸುಲಭ ಉಪಾಯದ ಮೂಲಕ ಶೂ ವಾಸನೆ ತೆಗೆಯಬಹುದು.
 

Home Remedies For Smelly Shoes And Smelly Feet
Author
Bangalore, First Published Apr 21, 2022, 6:49 PM IST

ಬೇಸಿಗೆ (Summer) ಯ ಧಗೆ ಶುರುವಾಗಿದೆ. ಸೂರ್ಯ (sun) ನ ಕಿರಣಕ್ಕೆ ಮೈ ಬೆವರುವುದು ಸಾಮಾನ್ಯ. ಕೆಲವರಿಗೆ ಬೇಸಿಗೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೈ ಬೆವರುತ್ತದೆ. ಈ ಬೆವರಿನಿಂದಾಗಿ ಅನೇಕರು ನಾಚಿಕೊಳ್ತಾಳೆ. ಮೈನಿಂದ ಬರುವ ವಾಸನೆ ಮುಜುಗರಕ್ಕೀಡು ಮಾಡುತ್ತದೆ. ಅದ್ರಲ್ಲೂ ದಿನವಿಡಿ ಶೂ (Shoes) ಧರಿಸುವವರು ಸಮಸ್ಯೆ ಎದುರಿಸುತ್ತಾರೆ. ಶೂನಲ್ಲಿ ವಿಪರೀತ ಬೆವರು ಬರುವುದ್ರಿಂದ ಗಬ್ಬು ವಾಸನೆ ಬರುತ್ತದೆ. ಮಹಿಳೆ ಮತ್ತು ಪುರುಷ ಇಬ್ಬರಿಗೂ ಈ ಸಮಸ್ಯೆ ಕಾಡುತ್ತದೆ. ನಿಮ್ಮ ಶೂ ನಿಂದಲೂ ವಾಸನೆ (smell) ಬರ್ತಿದ್ದು, ಮನೆಯಿಂದ ಹೊರಗೆ ಹೋಗೋದು ಕಷ್ಟ ಎನ್ನುವವರು ನೀವಾಗಿದ್ದರೆ ಕೆಲವೊಂದು ಉಪಾಯ ಮಾಡಬಹುದು. ಮನೆಯಲ್ಲಿಯೇ ಸುಲಭ ವಿಧಾನದ ಮೂಲಕ ವಾಸನೆಯಿಂದ ಮುಕ್ತಿ ಪಡೆಯಬಹುದು. ಶೂ ನಿಂದ ಬರುವ ವಾಸನೆ ತಡೆಯಲು ಇಂದು ನಾವು ಕೆಲ ಉಪಾಯಗಳನ್ನು ಹೇಳ್ತೇವೆ.

ಶೂನಿಂದ ಬರುವ ವಾಸನೆಯನ್ನು ಹೀಗೆ ಕಡಿಮೆ ಮಾಡಿ : 

ಶೂ – ಸಾಕ್ಸ್ ತೊಳೆಯಿರಿ : ಶೂ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಆಗಾಗ ಶೂ ತೊಳೆಯುತ್ತಿರಿ. ಹಾಗೆ ಪ್ರತಿ ದಿನ ಸಾಕ್ಸ್ ಕ್ಲೀನ್ ಮಾಡಿ. ಶೂ ತೊಳೆಯುತ್ತಿದ್ದರೆ ಅದು ಫ್ರೆಶ್ ಆಗಿರುತ್ತದೆ. ಇದ್ರಿಂದ ವಾಸನೆ ತಡೆಯಬಹುದು. ಶೂವನ್ನು ತಣ್ಣನೆಯ ನೀರು ಹಾಗೂ ಕೈನಿಂದ ತೊಳೆಯುವುದು ಬೆಸ್ಟ್. ಸೋಪ್ ಪುಡಿಯನ್ನು ಬಳಸ್ತೀರಿ ಎಂದಾದ್ರೆ ಲೈಸೋಲ್ ಅಥವಾ ಪೈನ್ ಸೋಲ್ ನಂತಹ  ಸೋಂಕುನಿವಾರಕವನ್ನು ಸಹ ಬಳಸಬಹುದು. ವಾಷಿಂಗ್ ಮೆಷಿನ್ ನಲ್ಲಿ ಶೂ ವಾಶ್ ಮಾಡುವ ಪ್ಲಾನ್ ಮಾಡಿದ್ದರೆ ಅದನ್ನು ಸೌಮ್ಯವಾಗಿಡಿ. ಶೂ ವಾಶ್ ಮಾಡಿದ ನಂತ್ರ ಅದನ್ನು ಗಾಳಿಯಾಡುವ ಜಾಗದಲ್ಲಿ ಇಟ್ಟು ಸರಿಯಾಗಿ ಒಣಗಿಸಿ. ಬಟ್ಟೆಯ ಡ್ರಾಯರ್ ನಲ್ಲಿ ಶೂ ಒಣಗಿಸಿದ್ರೆ ಅದು ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ದಿನ ಪೂರ್ತಿ ಫ್ರೆಶ್ ಸುವಾಸನೆ ಹೊಂದಿರಲು ಏನು ಮಾಡಬೇಕು ಗೊತ್ತಾ?

ದುರ್ವಾಸನೆ ತೆಗೆಯುತ್ತೆ ಹಣ್ಣಿನ ಸಿಪ್ಪೆ : ಯಸ್, ಇದು ಸತ್ಯ. ಶೂವಿನ ವಾಸನೆ ತೆಗೆಯಲು ಹಣ್ಣಿನ ಸಿಪ್ಪೆ ಪ್ರಯೋಜನಕಾರಿ. ಇದಕ್ಕಾಗಿ ನೀವು ಕಿತ್ತಳೆ, ನಿಂಬೆ ಹಣ್ಣನ್ನು ಬಳಸಬಹುದು. ಇದರ ಸಿಪ್ಪೆ ತೆಗೆದು ಅದನ್ನು ಶೂ ಒಳಗೆ ಹಾಕಿ ರಾತ್ರಿ ಪೂರ್ತಿ ಇಡಬೇಕು. ಬೆಳಿಗ್ಗೆ ಈ ಸಿಪ್ಪೆಗಳನ್ನು ಶೂನಿಂದ ಹೊರಗೆ ತೆಗೆಯಬೇಕು. ಹೀಗೆ ಮಾಡಿದ್ರೆ ಶೂನಿಂದ ವಾಸನೆ ಬರುವುದಿಲ್ಲ.

ಶೂ ವಾಸನೆ ತೆಗೆಯುತ್ತೆ ದೇವದಾರು ಮರ : ದೇವದಾರು ಮರದ ಎಂಟಿಫಂಗಲ್ ಗುಣವನ್ನು ಹೊಂದಿದೆ. ಶೂನಲ್ಲಿರುವ ಬ್ಯಾಕ್ಟೀರಿಯಾ ಹೋಗಲಾಡಿಸಲು ಹಾಗೂ ವಾಸನೆ ಬರದಂತೆ ತಡೆಯಲು ಶೂ ಒಳಗೆ ದೇವದಾರು ಮರದ ತುಂಡನ್ನು ರಾತ್ರಿ ಪೂರ್ತಿ ಇಡಬೇಕು. ಇದ್ರಿಂದ ವಾಸನೆ ಕಡಿಮೆಯಾಗುತ್ತದೆ. 

ಕಾಪರ್ ಫೈಬರ್ ಅಥವಾ ಹತ್ತಿ ಸಾಕ್ಸ್ ಧರಿಸಿ : ನೀವು ಟೈಟ್ ಶೂ ಧರಿಸುವವರಾಗಿದ್ದರೆ, ಅದ್ರಲ್ಲಿ ಸ್ವಲ್ಪವೂ ಗಾಳಿಯಾಡುವುದಿಲ್ಲ ಎಂದಾದ್ರೆ ನೀವು ಕಾಪರ್ ಫೈಬರ್ ಅಥವಾ ಹತ್ತಿ ಸಾಕ್ಸ್ ಧರಿಸಿ. ಇದು ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆಯುತ್ತದೆ. ಇದ್ರಿಂದ ವಾಸನೆ ಕೂಡ ಬರುವುದಿಲ್ಲ. ಎಂಟಿ ಬ್ಯಾಕ್ಟೀರಿಯಾ ಸಾಕ್ಸ್ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು ಕೂಡ ನೀವು ಬಳಸಬಹುದು.

Viral Video: ಬಾಯಲ್ಲಿ ನೀರೂರುವಂತೆ ಮಾಡೋ ಹೇರ್‌ಸ್ಟೈಲ್‌ !

ಚಪ್ಪಲಿಯ ಉಪಯೋಗ : ಕಚೇರಿಯಲ್ಲಿ ಶೂ ಬಳಸುವ ಅವಶ್ಯಕತೆಯಿಲ್ಲ ಎಂದಾದ್ರೆ ನೀವು ಚಪ್ಪಲಿ ಪ್ರಯೋಗ ಮಾಡಬಹುದು. ಒಂದು ವೇಳೆ ಇದು ಸಾಧ್ಯವಿಲ್ಲವೆಂದಾದ್ರೆ ಶೂಗೆ ಹಾಕುವ ಸೋಂಕುನಿವಾರಕ ಸ್ಪ್ರೇಯನ್ನು ಬಳಸಿ. ಇದ್ರಿಂದ ಬ್ಯಾಕ್ಟೀರಿಯಾ ನಷ್ಟವಾಗುತ್ತದೆ. ಇದ್ರಿಂದ ಶೂ ಫ್ರೆಶ್ ಆಗಿರುತ್ತದೆ. 

ಕಾಲಿಗೆ ಡಿಯೋಡರೆಂಟ್ ಹಾಕಿ : ಶೂನಿಂದ ವಾಸನೆ ಬರುತ್ತೆ ಎನ್ನುವವರು ಕಾಲಿಗೆ ಡಿಯೋಡರೆಂಟ್ ಹಾಕಬಹುದು. ಇದ್ರಿಂದ ವಾಸನೆ ಕಡಿಮೆಯಾಗುತ್ತದೆ. ಆದ್ರೆ ಒಳ್ಳೆ ಕಂಪನಿಯ ಡಿಯೋ ಬಳಸಲು ಮರೆಯಬೇಡಿ. 

Follow Us:
Download App:
  • android
  • ios