Asianet Suvarna News Asianet Suvarna News

ಅಂಬಾನಿ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿದ ಛಾಯಾಗ್ರಾಹಕ ಇವರೇ, ಸಂಭಾವನೆ ಪಡೆದಿದ್ದೆಷ್ಟು?

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹ ಕಾರ್ಯಕ್ರಮದಲ್ಲಿ ಫೋಟೋ ತೆಗೆದವರು ಯಾರು ಎಂಬುದು ಕುತೂಹಲಕ್ಕೆ ತೆರ ಬಿದ್ದಿದೆ.

himanshu patel founder of Epic Stories  hired for Anant ambani and Radhika merchant grand wedding photography gow
Author
First Published Jul 21, 2024, 6:33 PM IST | Last Updated Jul 21, 2024, 6:33 PM IST

ಜುಲೈ 12, 13, 14ರಂದು ಮುಂಬೈನಲ್ಲಿ ನಡೆದ ವಿಶ್ವದ ಅತಿ ಶ್ರೀಮಂತ ಹಾಗೂ ಪ್ರತಿಷ್ಠಿತ ಅಂಬಾನಿ ಮನೆತನದ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹ ಕಾರ್ಯಕ್ರಮದಲ್ಲಿ ಫೋಟೋ ತೆಗೆದವರು ಯಾರು ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಈಗ ಈ ಕುತೂಹಲಕ್ಕೆ ತೆರೆಬಿದ್ದಿದೆ.

ಹೆಸರಾಂತ ಛಾಯಾಗ್ರಾಹಕ ತಂಡವೊಂದು ಅಂಬಾನಿ ಮದುವೆಯ ಪ್ರತಿಯೊಂದು ಕಾರ್ಯಕ್ರಮದ ಇಂಚಿಚೂ ಕ್ಷಣಗಳನ್ನು ಸೆರೆಹಿಡಿದಿದೆ.  ಅನಂತ್ ಮತ್ತು ರಾಧಿಕಾ ಅವರ ಮದುವೆಯ ಸಂಭ್ರಮವನ್ನು ಸೆರೆಹಿಡಿದ ಛಾಯಾಗ್ರಹಣ ಸಂಸ್ಥೆ "ಎಪಿಕ್ ಸ್ಟೋರೀಸ್". ಹಿಮಾಂಶು ಪಟೇಲ್ ಈ ಸಂಸ್ಥೆಯ ಸಂಸ್ಥಾಪಕನಾಗಿದ್ದು, ಅಂಬಾನಿ ಅದ್ದೂರಿ ಮದುವೆಯಲ್ಲಿನ ತಮ್ಮ ಕಾರ್ಯದ ಬಗ್ಗೆ, ಮತ್ತು ಅನುಭವಗಳನ್ನು ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿ ಹಂಚಿಕೊಂಡಿದ್ದಾರೆ.

ಅಂಬಾನಿ ಮದ್ವೆಯಲ್ಲಿ ಕಾಣಿಸಿಕೊಳ್ಳದ ತಾರೆಯರಿವರು, ಒಬ್ಬೊಬ್ಬರದು ಒಂದೊಂದು ನೆಪ! ಮತ್ತೋರ್ವನನ್ನು ಕರೆದೇ ಇಲ್ಲ!

ಪಟೇಲ್ ತಮ್ಮ ವೃತ್ತಿಜೀವನದ ಅತ್ಯಂತ ಮಹತ್ವದ ದಿನ ಮತ್ತು ಸಾಧನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಎಪಿಕ್ ಸ್ಟೋರೀಸ್ ಸಂಸ್ಥಾಪಕರಾಗಿ, ಹಿಮಾಂಶು ಪಟೇಲ್ ಸೆಲೆಬ್ರಿಟಿ ಮದುವೆಗಳ ಫೋಟೋಗಳನ್ನು ಸೆರೆ ಹಿಡಿಯುತ್ತಿರುವುದು ಇದು ಮೊದಲೇನಲ್ಲ. ಕರಿಷ್ಮಾ ತನ್ನಾ ಮತ್ತು ವರುಣ್ ಬಂಗೇರಾ, ಪ್ರಿನ್ಸ್ ನರುಲಾ ಮತ್ತು ಯುವಿಕಾ ಚೌಧರಿ ಮತ್ತು ಶ್ವೇತಾ ತ್ರಿಪಾಠಿ ಮತ್ತು ಚೈತನ್ಯ ಶರ್ಮಾ ಅವರಂತಹ  ಅನೇಕ ಬಾಲಿವುಡ್ ಜೋಡಿಗಳ ಮದುವೆಯಲ್ಲಿ ಇವರದ್ದೇ ಸಂಸ್ಥೆ ಫೋಟೋಗ್ರಫಿ ಮಾಡಿದೆ.

ಎಪಿಕ್ ಸ್ಟೋರೀಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅತ್ಯಂತ ಸುಂದರವಾದ ಅಂಬಾನಿ ಮದುವೆ ಕಾರ್ಯಕ್ರಮಗಳ ಫೋಟೋವನ್ನು ಹಂಚಿಕೊಂಡಿದೆ.  ಸೆಲೆಬ್ರಿಟಿಗಳ ಮದುವೆಗಳನ್ನು ಕವರ್ ಮಾಡಿದ ಅನುಭವ ತಂಡಕ್ಕಿದ್ದರೂ ಅನಂತ್ ಮತ್ತು ರಾಧಿಕಾ ಅವರ ಮದುವೆ ಸಮಾರಂಭದ ಫೋಟೋಗಳನ್ನು ಸೆರೆ ಹಿಡಿಯುವುದು. ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಪ್ರತಿಯೊಂದು ಕ್ಷಣವೂ ತುಂಬಾ ಅಗತ್ಯ ಎಂದು ಅಂಬಾನಿ ಕುಟುಂಬ ಹೇಳಿತ್ತು. ಹೀಗಾಗಿ ನಮಗೆ ಸಿಕ್ಕಿದ ಚಿಕ್ಕ ಕ್ಷಣವನ್ನು ಕೂಡ ಬಿಡದೆ ಪ್ರತಿಯೊಂದು ಸನ್ನಿವೇಶವನ್ನು ಸಾಧ್ಯವಾದಷ್ಟು ತೆಗೆಯಬೇಕು ಎಂದು ಯೋಚಿಸಿದ್ದೆವು. ಅತಿಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಈವೆಂಟ್‌ ನ ಪ್ರತಿಯೊಂದು ವಿಷಯವನ್ನು ಎಳೆಎಳೆಯಾಗಿ ಸೆರೆಹಿಡಿಯುವುದು ನಮ್ಮ ಗುರಿಯಾಗಿತ್ತು ಎಂದು ಹಿಮಾಂಶು ಪಟೇಲ್  ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಮಾವು ಬೆಳೆಗಾರ ಮುಕೇಶ್ ಅಂಬಾನಿ, ಇದರ ಹಿಂದಿದೆ ಒಂದು ರೋಚಕ ಕಥೆ!

ಈವೆಂಟ್‌ನ ಪ್ರತಿಯೊಂದು ಕ್ಷಣವನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ನೃತ್ಯ ಸಂಯೋಜಕರು, ಪ್ರೊಡಕ್ಷನ್ ತಂಡ,  ಶೋ ನಿರ್ವಹಣೆ ಮಾಡುವ ತಂಡ ಹೀಗೆ 50 ಕ್ಕೂ ಹೆಚ್ಚು ತಂಡಗಳನ್ನು ಭೇಟಿ ಮಾಡಿ ನಮ್ಮ ತಂಡ ಮಾತುಕತೆ ನಡೆಸಿತು. ಈ ಮೂಲಕ ನಿರ್ಣಾಯಕ ಕ್ಷಣಗಳನ್ನು ಸೆರೆಹಿಡಿಯಲು ಉತ್ತಮ ದಾರಿಯನ್ನು ಕಂಡುಕೊಂಡೆವು ಎಂದಿದ್ದಾರೆ. 

ದೂರದಿಂದ ಫೋಟೋಗಳನ್ನು ಸೆರೆ ಹಿಡಿಯುವುದು ಚಾಲೆಂಜಿಂಗ್, ಅಂತೆಯೇ ನವ ಜೋಡಿಗಳಿಗೆ ಕಿರಿಕಿರಿ ಕೂಡ ಆಗಬಾರದು ಈ ನಿಟ್ಟಿನಲ್ಲಿ ಅತ್ಯಂತ ಉತ್ತಮ, ಅನ್ಯೋನ್ಯ ಕ್ಷಣಗಳನ್ನು ಕ್ಲೂಸ್‌ ಅಪ್‌ ಶಾಟ್‌ಗಳಲ್ಲಿ ಸೆರೆ ಹಿಡಿಯಲು ವನ್ಯಜೀವಿಗಳನ್ನು ಸೆರೆ ಹಿಡಿಯಲು ಬಳಸುವ ಮಸೂರಗಳನ್ನು ಬಳಸಿದ್ದೆವು ಎಂದಿದ್ದಾರೆ. ಅನಂತ್ ಮತ್ತು ರಾಧಿಕಾ  ಅವರ ಅತ್ಯಂತ ಅನ್ಯೋನ್ಯವಾಗಿರುವ ಸುಂದರ ಫೋಟೋಗಳನ್ನು ಸೆರೆ ಹಿಡಿದಿದ್ದೇವೆ. ಹಲವಾರು ಕ್ಯಾಂಡಿಡ್‌ ಫೋಟೋಗಳಿವೆ. ವಿವಾಹಪೂರ್ವ ಆಚರಣೆಗಳಿಗೆ ಕೂಡ ಇವರೇ ಫೋಟೋಗ್ರಫಿ ಮಾಡಿದ್ದರು. ಸಾಮಾನ್ಯರ ಮದುವೆಗಳಿಗೆ ಇವರು ಒಂದು ದಿನಕ್ಕೆ ಕಮ್ಮಿ ಎಂದರೂ 2.50 ಲಕ್ಷ ಚಾರ್ಚ್ ಮಾಡುತ್ತಾರೆ. ಇನ್ನು ಅಂಬಾನಿ ಮಾದುವೆಗೆ ನೀವೇ ಲೆಕ್ಕ ಹಾಕಿ ದಿನವೊಂದಕ್ಕೆ ಎಷ್ಟು ಕೋಟಿಯಲ್ಲಿ ಚಾರ್ಚ್ ಮಾಡಿರಬಹುದು.

Latest Videos
Follow Us:
Download App:
  • android
  • ios