What's in My Bag; ಪತಿ ರಣಬೀರ್ ಕೊಟ್ಟ ಈ ಗಿಫ್ಟ್ ಆಲಿಯಾ ಬ್ಯಾಗಲ್ಲಿ ಸದಾ ಇರುತ್ತೆ!
ನಟಿ ಆಲಿಯಾ ಭಟ್ ಯುಟ್ಯೂಬ್ ಒಂದರಲ್ಲಿ ತಮ್ಮ ವ್ಯಾನಿಟಿ ಬ್ಯಾಗ್ನಲ್ಲಿ ಏನೇನಿದೆ ಎನ್ನುವ ಅಂಶವನ್ನು ಬಹಿರಂಗಪಡಿಸಿದ್ದಾರೆ. ಈ ವಿಡಿಯೋ ಸಕತ್ ವೈರಲ್ ಆಗಿದೆ.
ಬ್ಯಾಗ್ಗಳ ಮಾತನಾಡಲು ಸಾಧ್ಯವಾದರೆ, ಅವರು ತಮ್ಮ ಮಾಲೀಕರ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸುತ್ತವೆ ಅನ್ನುವ ಮಾತಿದೆ. ಏಕೆಂದರೆ ಬ್ಯಾಗ್ಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ಇಟ್ಟುಕೊಳ್ಳುವ ಬ್ಯಾಗ್ಗಳಲ್ಲಿ ಬ್ರಹ್ಮಾಂಡವೇ ಅಡಗಿರುತ್ತದೆ. ಈ ಬ್ಯಾಗ್ ಒಳಗೆ ಕೈಹಾಕಿದರೆ ಆ ಮಹಿಳೆಯ ಜಾತಕವನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳಬಹುದು ಎನ್ನುತ್ತಾರೆ. ಇದೀಗ ಆಲಿಯಾ ಭಟ್ (Alia Bhatt) ಬ್ಯಾಗ್ ಒಳಗೆ ಏನೆನಿದೆ ಎನ್ನುವ ಆಸಕ್ತದಾಯಕ ವಿಷಯ ಬಹಿರಂಗಗೊಂಡಿದೆ. ಆಲಿಯಾ ಭಟ್ ಪ್ರಕಾರ, ಆಕೆಯ ಬ್ಯಾಗ್ 'ಅವ್ಯವಸ್ಥೆಯ ಆಗರ'ವಂತೆ! ತಮ್ಮ ಬಳಿ ಇದ್ದ Gucci x ಅಡಿಡಾಸ್ ಬ್ಯಾಗ್ ಒಳಗೆ ಏನೇನಿದೆ ಎನ್ನುವುದನ್ನು ನಟಿ ಪರಿಚಯಿಸಿದ್ದಾರೆ. ಹೆಚ್ಚಿನ ಮಹಿಳೆಯರ ಬ್ಯಾಗ್ನಲ್ಲಿ ಇರುವುದೇ ಮೇಕಪ್ ಸಾಮಗ್ರಿಗಳು. ಇದನ್ನು ನಟಿಯರ ಬ್ಯಾಗ್ ಎಂದ ಮೇಲೆ ಕೇಳಬೇಕೆ? ಆಲಿಯಾ ಅವರ ಬ್ಯಾಗ್ನಲ್ಲಿಯೂ ಕೆಲವು ಮೇಕಪ್ ಸಾಮಗ್ರಿಗಳ ಜೊತೆ ಮಾಯಿಶ್ಚರೈಸರ್, ಸನ್‌ಸ್ಕ್ರೀನ್ ಮತ್ತು ಐ ಡ್ರಾಪ್‌ಗಳು ಇವೆ.
ಇವುಗಳ ಒಂದೊಂದೇ ಪರಿಚಯವನ್ನು ನಟಿ ಆಲಿಯಾ ಮಾಡಿಸಿದ್ದಾರೆ. ಸೌಂದರ್ಯದ ಅಗತ್ಯತೆಗಳಾದ ಕೆಲವು ಬಗೆಯ ಮಾಯಿಶ್ಚರೈಸರ್, ಸನ್‌ಸ್ಕ್ರೀನ್, ಲಿಪ್ ಬಾಮ್‌ಗಳು ಈ ಬ್ಯಾಗ್ನಿಂದ ಈಕೆ ಹೊರಕ್ಕೆ ತೆಗೆದಿದ್ದಾರೆ. ಇವುಗಳನ್ನು ಇಡುವುದಕ್ಕಾಗಿಯೇ ಪುಟ್ಟ ಬ್ಯಾಗ್ ಒಂದನ್ನು ದೊಡ್ಡ ಬ್ಯಾಗ್ನಲ್ಲಿ ಆಲಿಯಾ ಇಟ್ಟುಕೊಂಡಿದ್ದಾರೆ. ತಾವು ಮರೆಗುಳಿ ಆಗಿರುವ ಕಾರಣ, ಎಲ್ಲೆಂದರಲ್ಲಿ ಲಿಪ್ಬಾಮ್, ಸನ್ಸ್ಕ್ರೀನ್ಗಳನ್ನು ಬಿಟ್ಟುಬರುವ ಕಾರಣ, ಒಂದಕ್ಕಿಂತ ಹೆಚ್ಚು ಇಟ್ಟುಕೊಂಡಿರುವುದಾಗಿ ಆಲಿಯಾ ಹೇಳಿದ್ದಾರೆ. ಇದರ ಜೊತೆ ಐ ಡ್ರಾಪ್ (Eye Drop) ಕೂಡ ಇದೆ. ಇದರ ಬಗ್ಗೆ ತಿಳಿಸಿರುವ ನಟಿ, ಹೊರಗಡೆ ಧೂಳಿಗೆ ಅಥವಾ ಶೂಟಿಂಗ್ ಸಮಯದಲ್ಲಿ ಇರುವ ಪ್ರಖರ ಬೆಳಕಿಗೆ ಕಣ್ಣುಗಳು ಡ್ರೈ ಆಗುತ್ತಿವೆ. ಅದಕ್ಕಾಗಿ ಸದಾ ಐಡ್ರಾಪ್ ತಮ್ಮ ಬಳಿ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ. ಕುತೂಹಲದ ಅಂಶವೆಂದರೆ ಈ ವ್ಯಾನಿಟಿ ಬ್ಯಾಗ್ನಲ್ಲಿ ತಮ್ಮ ಜುಟ್ಟನ್ನು ಕಟ್ಟಿಕೊಳ್ಳಲು ಹಲವಾರು ರಬ್ಬರ್ ಬ್ಯಾಂಡ್ಗಳನ್ನು ಆಲಿಯಾ ಇಟ್ಟುಕೊಂಡಿದ್ದು, ಇದಕ್ಕೂ ಮರೆಗುಳಿತನದ ಕಾರಣ ನೀಡಿದ್ದಾರೆ. ಕೂದಲು ಬ್ರಷ್ ಮಾಡಲು ಬಾಚಣಿಕೆ ಇದ್ದು, ಇದು ಅಲಿಯಾ ಅವರು, ವಿಶ್ರಾಂತಿ ತೆಗೆದುಕೊಳ್ಳಬೇಕಾದರೆ ಮತ್ತು ಒತ್ತಡವನ್ನು ನಿವಾರಿಸಬೇಕಾದರೆ ಕೂದಲನ್ನು ಬ್ರಷ್ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ನನಗೆ ತುಂಬಾ ವಿಶ್ರಾಂತಿ ಸಿಗುತ್ತದೆ ಎಂದಿದ್ದಾರೆ.
ಚಿನ್ನದ ಬೆಲೆ ಗಗನ ಮುಟ್ಟಿದರೂ ಬ್ಯಾಗ್‌ಮೇಲೆ MR ಕೆತ್ತಿಸಿಕೊಂಡ ಮೇಘನಾ ರಾಜ್!
ಇಷ್ಟೇ ಅಲ್ಲದೇ, ಸೌಂದರ್ಯದ ಅಗತ್ಯತೆಗಳ ಜೊತೆಗೆ, ಆಲಿಯಾ ಭಟ್ ಇತ್ತೀಚೆಗೆ ತಮ್ಮ ವ್ಯಾನಿಟಿ ಕೇಸ್‌ನಲ್ಲಿ ಪತಿ ರಣಬೀರ್ ಕಪೂರ್ ನೀಡಿರುವ ಬಳೆಯನ್ನು ಇಟ್ಟುಕೊಂಡಿದ್ದು, ಇದು ಸದಾ ನನ್ನ ಬಳಿ ಇಡಲು ಇಷ್ಟಪಡುತ್ತೇನೆ ಎಂದಿದ್ದಾರೆ. ನಾನು ಚಲನಚಿತ್ರ ಅಥವಾ ಯಾವುದಾದರೂ ಚಿತ್ರೀಕರಣ ಮಾಡುತ್ತಿದ್ದರೆ ಇದು ನನ್ನ ಬಳಿ ಇದ್ದರೆ ಚೆನ್ನ ಎಂದಿದ್ದಾರೆ. ಆಲಿಯಾ ಮುದ್ದು ಮಗಳು ರಾಹಾಳ (Raha) ಅಮ್ಮ ಕೂಡ. ಇದೇ ಕಾರಣಕ್ಕೆ ಮಗಳನ್ನು ಕರೆದುಕೊಂಡು ಹೋಗುವಾಗ ಈ ಬ್ಯಾಗ್ ನನ್ನ ಬ್ಯಾಗ್ ಆಗಿರುವುದಿಲ್ಲ, ಇದು ರಾಹಾಳ ಬ್ಯಾಗ್ ಆಗಿರುತ್ತದೆ ಎಂದಿದ್ದಾಳೆ. ಮಗಳ ನ್ಯಾಪ್‌ಕಿನ್‌ಗಳಿಂದ ಹಿಡಿದು ಅವಳ ಹೆಚ್ಚುವರಿ ಜೋಡಿ ಕೈಗವಸುಗಳವರೆಗೆ ಎಲ್ಲವೂ ರಾಹಾ ಬ್ಯಾಗ್ ಆಗಿದೆ ಎಂದಿದ್ದಾರೆ. ಇದರ ಜೊತೆ ಸನ್‌ಗ್ಲಾಸ್‌ಗಳು, ಪೋರ್ಟಬಲ್ ವೈಫೈ ಕೂಡ ಇವರ ಬ್ಯಾಗ್ನಲ್ಲಿ ಇವೆ.
ಆಲಿಯಾರ ಬ್ಯಾಗ್ನಲ್ಲಿ ಏನೇನಿದೆ ಎಂದು ನೋಡಲು ಕಾತರರಾಗಿದ್ದ ಫ್ಯಾನ್ಸ್ ಒಹ್ ನೀವು ಕೂಡ ಸಾಮಾನ್ಯ ಮಹಿಳೆಯ ಹಾಗೆ ಇಷ್ಟೇ ಇಟ್ಟುಕೊಂಡಿರುವಿರಾ? ವಿಶೇಷವಾದದ್ದು ಏನೂ ಇಲ್ಲ ಎಂದಿದ್ದಾರೆ.
ಆಲಿಯಾಳನ್ನು ರಣಬೀರ್ ಸಿಂಗ್ ತಬ್ಬಿಕೊಂಡ್ರೆ ಫ್ಯಾನ್ಸ್ ಹೀಗ್ ಹೇಳೋದಾ?