Flat Butt ಗೆ ಸುಂದರ ಶೇಪ್ ನೀಡ್ಬೇಕೆಂದ್ರೆ ಈ ಟ್ರಿಕ್ಸ್ ಫಾಲೋ ಮಾಡಿ
ದೇಹದ ಆಕಾರದ ಬಗ್ಗೆ ಕೀಳರಿಮೆ ಬೇಡ. ಹಾಗಂತ ಕೈಚೆಲ್ಲಿ ಕುಳಿತುಕೊಳ್ಳುವ ಅಗತ್ಯವಿಲ್ಲ. ಕೆಲ ಸುಲಭ ಉಪಾಯದ ಮೂಲಕ ನಿಮ್ಮ ದೇಹದ ಆಕಾರವನ್ನು ಬದಲಿಸಿಕೊಳ್ಳಬಹುದು. ಬಟ್ ಆಕಾರ ಚೇಂಜ್ ಮಾಡ್ಬೇಕು ಎನ್ನುವವರು ನಿಮ್ಮ ಜೀವನ ಶೈಲಿ ಬದಲಿಸಿ.
ಪ್ರತಿಯೊಬ್ಬರ ದೇಹದ ಆಕಾರ ಭಿನ್ನವಾಗಿರುತ್ತದೆ. ನಾವು ಹೇಗಿದ್ದೇವೋ ಹಾಗೆ ಸಂತೋಷವಾಗಿರಬೇಕು. ಯಾಕೆಂದ್ರೆ ನಮ್ಮ ದೇಹವನ್ನು ಬದಲಿಸಲು ಸಾಧ್ಯವಿಲ್ಲ. ಬೇರೆಯವರನ್ನು ನೋಡಿ ಅಸೂಯೆಪಟ್ಟುಕೊಳ್ಳುವುದ್ರಿಂದ ನಮ್ಮ ಸಂತೋಷ ಹಾಳಾಗುತ್ತದೆಯೇ ವಿನಃ ಅವರಿಗೆ ಯಾವುದೇ ನಷ್ಟವಿಲ್ಲ. ನಮ್ಮ ದೇಹದ ಒಂದು ಭಾಗದಲ್ಲಿ ಬಟ್ ಕೂಡ ಒಂದು. ಬಟ್ ಸೌಂದರ್ಯದ ಬಗ್ಗೆ ಅನೇಕರು ಗಮನ ಹರಿಸ್ತಾರೆ. ಸುಂದರ ಬಟ್ ಹೊಂದಿರುವ ಮಹಿಳೆಯರು ಎಲ್ಲರನ್ನು ಆಕರ್ಷಿಸುವುದು ನಿಜ. ಎಲ್ಲರ ಬಟ್ ಒಂದೇ ರೀತಿ ಇರುವುದಿಲ್ಲ. ಕೆಲವರು ದೊಡ್ಡ ಬಟ್ ಹೊಂದಿದ್ರೆ ಮತ್ತೆ ಕೆಲವರಿಗೆ ಅತಿ ಕಡಿಮೆ ಇರುತ್ತದೆ. ಈ ಎರಡೂ ಆತ್ಮವಿಶ್ವಾಸಕ್ಕೆ ಧಕ್ಕೆಯುಂಟು ಮಾಡುತ್ತದೆ ಎನ್ನುವವರಿದ್ದಾರೆ. ಬಟ್ ಸುಂದರವಾಗಿದ್ರೆ ಸೀರೆ ಹಾಗೂ ಜೀನ್ಸ್ ಧರಿಸಿದಾಗ ಹಿಂಭಾಗ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
ನಮ್ಮ ಬಟ್ (Butt) ಆಕಾರ ಕಳೆದುಕೊಂಡಿರಲು ಕೆಲ ಕಾರಣವಿದೆ. ಹುಟ್ಟಿದಾಗಿನಿಂದ ಬಂದ ಸಮಸ್ಯೆ ಪ್ರತ್ಯೇಕಗೊಳಿಸಿದ್ರೆ ನಾವು ಕುಳಿತುಕೊಳ್ಳುವ ಭಂಗಿ, ನಮ್ಮ ಆಹಾರ ಪದ್ಧತಿ (Diet) ಹಾಗೂ ತಪ್ಪಾದ ರೀತಿಯಲ್ಲಿ ನಾವು ಮಾಡುವ ವ್ಯಾಯಾಮ (exercise) ನಮ್ಮ ಬಟ್ ಆಕಾರವನ್ನು ಹಾಳು ಮಾಡುತ್ತದೆ.
ದೇಹದ ಪ್ರತಿಯೊಂದು ಭಾಗದ ಬಗ್ಗೆಯೂ ನಾವು ಗಮನ ನೀಡಬೇಕು. ಮುಖದ ಸೌಂದರ್ಯಕ್ಕೆ ಹೆಚ್ಚು ಖರ್ಚು ಮಾಡುವ ಜನರು ಬಟ್ ಬಗ್ಗೆ ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಬಟ್ ಸೌಂದರ್ಯ ವೃದ್ಧಿಗೂ ನೀವು ಪ್ರಯತ್ನ ಮಾಡುವ ಅಗತ್ಯವಿದೆ.
ಫ್ಲಾಟ್ ಬಟ್ ಗೆ ಶೇಪ್ ನೀಡಲು ಅನೇಕ ಮಹಿಳೆಯರು ಕಾಸ್ಮೆಟಿಕ್ ಸರ್ಜರಿ ಮೊರೆ ಹೋಗ್ತಾರೆ. ಎಲ್ಲರಿಗೂ ಕಾಸ್ಮೆಟಿಕ್ ಸರ್ಜರಿ ಸಾಧ್ಯವಿಲ್ಲ. ಹಾಗೆ ನೀವು ಸರ್ಜರಿ ಮೂಲಕವೇ ನಿಮ್ಮ ಬಟ್ ಆಕಾರ ಸುಧಾರಿಸಬೇಕು ಎಂದೇನಿಲ್ಲ. ಸರ್ಜರಿ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾಗಿ ನೀವು ಬಟ್ ಗೆ ಶೇಪ್ ನೀಡಲು ಕೆಲವೊಂದು ಸರಳ ವಿಧಾನಗಳನ್ನು ಬಳಸಬಹುದು. ಇದ್ರಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಹೆಚ್ಚು ಖರ್ಚು ಮಾಡುವ ಅಗತ್ಯವೂ ಇರುವುದಿಲ್ಲ.
ಫ್ಲಾಟ್ ಬಟ್ ನಿಂದ ಮುಕ್ತಿ ಬೇಕೆಂದ್ರೆ ಹೀಗೆ ಮಾಡಿ :
ವಾಕಿಂಗ್ : ಅನೇಕರು ವಾಕಿಂಗ್ ಮಾಡಿದ್ರೆ ಏನು ಪ್ರಯೋಜನ ಎಂದು ಕೇಳ್ತಾರೆ. ವಾಕಿಂಗ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ನೀವು ಕೆಲ ಗಂಟೆ ವಾಕಿಂಗ್ ಮಾಡೋದ್ರಿಂದ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗಬಹುದು. ವಾಕಿಂಗ್ ನಿಂದ ನಿಮ್ಮ ಫ್ಲಾಟ್ ಬಟ್ ಸಮಸ್ಯೆ ಕಡಿಮೆಯಾಗುತ್ತದೆ. ನೀವು ಪ್ರತಿ ದಿನ ಬೆಳಿಗ್ಗೆ ಅಥವಾ ರಾತ್ರಿ ಕೆಲ ಕಾಲ ವಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ದಿನವಿಡಿ ಕುಳಿತುಕೊಂಡು ಕೆಲಸ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಸ್ಕ್ವಾಟ್ಸ್ : ಬಟ್ ಗಾತ್ರ ಹೆಚ್ಚಿಸಲು ದಿ ಬೆಸ್ಟ್ ವ್ಯಾಯಾಮಗಳಲ್ಲಿ ಸ್ಕ್ವಾಟ್ಸ್ ಒಂದು. ಸ್ಕ್ವಾಟ್ಸ್ ವ್ಯಾಯಾಮ ಮಾಡುವುದ್ರಿಂದ ಬೆನ್ನಿನ ಕೆಳಭಾಗ, ಮಂಡಿರಜ್ಜು ಬಲ ಪಡೆಯುತ್ತದೆ. ನೀವು ಬಯಸಿದ್ರೆ ಡಂಬೆಲ್ ಹಿಡಿದು ಸ್ಕ್ವಾಟ್ಸ್ ಮಾಡಬಹುದು.
ಡೆಡ್ ಲಿಫ್ಟ್ : ಫ್ಲಾಟ್ ಬಟ್ ಹೋಗಲಾಡಿಸಿ, ಬಟ್ ಗೆ ಶೇಪ್ ನೀಡುವ ವ್ಯಾಯಾಮಗಳಲ್ಲಿ ಡೆಡ್ ಲಿಫ್ಟ್ ಕೂಡ ಬೆಸ್ಟ್ ಎನ್ನಬಹುದು. ಇದು ಮಂಡಿರಜ್ಜೆಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಮಹಿಳೆಯರೇ ಟೈಟ್ ಜೀನ್ಸ್ ಹಾಕುತ್ತೀರಾ? ಎಚ್ಚರ, ನಿಮಗೆ ಈ ಸಮಸ್ಯೆ ಕಾಡಬಹುದು.
ಆಹಾರದಲ್ಲಿ ಬದಲಾವಣೆ ಬಹಳ ಮುಖ್ಯ : ವ್ಯಾಯಾಮದ ಜೊತೆ ಪೌಷ್ಟಿಕ ಆಹಾರ ಸೇವನೆ ಕೂಡ ಮುಖ್ಯವಾಗುತ್ತದೆ. ಬರೀ ವ್ಯಾಯಾಮ ಮಾಡಿ ನೀವು ಸೂಕ್ತ ಆಹಾರ ಸೇವನೆ ಮಾಡಿಲ್ಲವೆಂದ್ರೆ ನಿಮ್ಮ ಶ್ರಮ ಹಾಳಾಗುತ್ತದೆ. ಸ್ನಾಯುಗಳನ್ನು ನಿರ್ಮಿಸಲು, ನಿಮ್ಮ ದೇಹಕ್ಕೆ ಪ್ರೋಟೀನ್ ಅಗತ್ಯವಿದೆ. ಆರೋಗ್ಯಕರ ಆಹಾರ ಹೆಚ್ಚುವರಿ ಕೊಬ್ಬನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಕಾಂಪ್ರೋಮೈಸ್ ಆಗಬೇಕು ನಿಜ, ಆದರೆ ಅದಕ್ಕೂ ಒಂದು ಇತಿ ಮಿತಿ ಬೇಡ್ವಾ?
ಮಾಂಸಹಾರಿಗಳಾಗಿದ್ದರೆ ನೀವು ಕೋಳಿ ಮತ್ತು ಮೀನನ್ನು ಸೇವನೆ ಮಾಡಬಹುದು. ಇದ್ರಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಇರುತ್ತದೆ. ಸಸ್ಯಹಾರಿಗಳಾಗಿದ್ದರೆ ಅಕ್ಕಿ, ಆಲೂಗಡ್ಡೆ ಮತ್ತು ಸಿಹಿ ಗೆಣಸುಗಳಂತಹ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಿಂದ ಕೂಡಿದ ಆಹಾರ ಸೇವನೆ ಮಾಡಬೇಕು. ಡ್ರೈ ಫ್ರೂಟ್ಸ್, ಆವಕಾಡೊ, ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದು. ಅದನ್ನು ಕೂಡ ನೀವು ಬಳಸಬಹುದು.