ಗುಜರಾತಿನ ಜಾಮ್‌ ನಗರದಲ್ಲಿ ನಡೆದ ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮದಲ್ಲಿ ವಿಐಪಿ ಅತಿಥಿಯಾಗಿ ಪಾಲ್ಗೊಂಡಿದ್ದ ಫೇಸ್‌ ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ ಬರ್ಗ್‌ ಅವರು ಧರಿಸಿದ್ದ ಟೀ ಶರ್ಟ್‌ ಈಗ ಎಲ್ಲರ ಗಮನ ಸೆಳೆದಿದೆ. ಟೈಗರ್‌ ಪ್ರಿಂಟ್‌ ಹೊಂದಿದ್ದ ಈ ಟೀ ಶರ್ಟ್‌ ಬೆಲೆ 1.6 ಲಕ್ಷ ರೂಪಾಯಿಯಾಗಿದ್ದರೂ ನೆಟ್ಟಿಗರು ಮಾತ್ರ ಇಂಪ್ರೆಸ್‌ ಆಗಿಲ್ಲ. 

ಪ್ರಖ್ಯಾತ ತಾರೆಯರು, ಉದ್ಯಮಿಗಳನ್ನು ಒಂದೆಡೆ ಸೇರಿಸಿದ್ದ ಗುಜರಾತಿನ ಜಾಮ್‌ ನಗರದಲ್ಲಿ ನಡೆದ ಕಾರ್ಯಕ್ರಮದ್ದೇ ಈಗ ಎಲ್ಲೆಡೆ ಸುದ್ದಿ. ಮುಖೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿಯ ವಿವಾಹಪೂರ್ವ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಜರುಗಿವೆ. ಮೂರು ದಿನಗಳ ಕಾಲ ನಡೆದ ವಿವಿಧ ಸಮಾರಂಭಗಳಲ್ಲಿ ಅನೇಕ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು. ವಿಐಪಿ ಅತಿಥಿಗಳ ಪೈಕಿ ಫೇಸ್‌ ಬುಕ್‌ ಸ್ಥಾಪಕ ಮಾರ್ಕ್‌ ಜುಕರ್‌ ಬರ್ಗ್‌ ಕೂಡ ಪ್ರಮುಖರಾಗಿದ್ದರು. ತಮ್ಮ ಪತ್ನಿ ಪ್ರಿಸಿಲ್ಲಾ ಚಾನ್‌ ಅವರೊಂದಿಗೆ ಆಗಮಿಸಿದ್ದ ಮಾರ್ಕ್‌ ಜುಕರ್‌ ಬರ್ಗ್‌ ಈ ಸಮಾರಂಭದಲ್ಲಿ ಟೈಗರ್‌ ಪ್ರಿಂಟ್‌ ಹೊಂದಿದ್ದ ಟೀ ಶರ್ಟ್‌ ನಲ್ಲಿ ಕಂಗೊಳಿಸಿದ್ದರು. ಅಚ್ಚರಿಯೆಂದರೆ, ಜುಕರ್‌ ಬರ್ಗ್‌ ಅವರ ಈ ಉಡುಗೆಯ ಬಗ್ಗೆ ಮೈಕ್ರೊಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಾಮಾನ್ಯವಾಗಿ ಎಷ್ಟೇ ದೊಡ್ಡ ಕಾರ್ಯಕ್ರಮವಾದರೂ ಗ್ರೇ ಬಣ್ಣದ ಟೀ ಶರ್ಟ್‌ ಧರಿಸುವ ಜುಕರ್‌ ಬರ್ಗ್‌ ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಮಾತ್ರ ಬೇರೆ ಬೇರೆ ಬಣ್ಣಗಳ ದಿರಿಸುಗಳನ್ನು ಧರಿಸಿ ಮೆರೆದಿದ್ದುದು ವಿಶೇಷವಾಗಿತ್ತು. ಇವುಗಳಲ್ಲಿ ಟೈಗರ್‌ ಪ್ರಿಂಟ್‌ ಇರುವ ಚಿನ್ನದ ವರ್ಣದ ಟೀ ಶರ್ಟ್‌ ಕೂಡ ಒಂದು. ಡಿಸೈನರ್‌ ರಾಹುಲ್‌ ಮಿಶ್ರಾ ವಿನ್ಯಾಸಗೊಳಿಸಿದ ಈ ಟೀ ಶರ್ಟ್‌ ಇದೀಗ ಎಲ್ಲರ ಗಮನ ಸೆಳೆದಿದೆ. ತಮ್ಮ ಚಿತ್ರವನ್ನು ಸೋಷಿಯಲ್‌ ಮೀಡಿಯಾ ಇನ್‌ ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಮಾಡಿದ್ದ ಜುಕರ್‌ ಬರ್ಗ್‌, “ಇಟ್ಸ್‌ ಗೆಟ್ಟಿಂಗ್‌ ವೈಲ್ಡ್‌ ಔಟ್‌ ಹಿಯರ್‌ʼ ಎಂದು ಕ್ಯಾಪ್ಷನ್‌ ನೀಡಿದ್ದರು. 


ಅಂಬಾನಿ ಕುಟುಂಬದ (Ambani Family) ಈ ಕಾರ್ಯಕ್ರಮದಲ್ಲಿ 3 ದಿನಗಳ ಕಾಲ ವಿವಿಧ ಈವೆಂಟ್‌ (Event) ಗಳಲ್ಲಿ ಪ್ರಮುಖರು ಧರಿಸಿದ್ದ ಉಡುಗೆ (Cloth) ತೊಡುಗೆಗಳ ಬಗ್ಗೆ ಸುದ್ದಿಯಾಗದೇ ಇರಲು ಸಾಧ್ಯವೇ? ಇಂತಹ ಡ್ರೆಸ್‌ ಗೆ ಇಷ್ಟು ಲಕ್ಷ, ಕೋಟಿಗಳ ಬಗ್ಗೆಯೇ ಮಾತು ಕೇಳಿಬರುತ್ತಿದೆ. ಅಂಥದ್ದರಲ್ಲಿ ವಿಶ್ವದ ಶ್ರೀಮಂತ (Wealthy) ವ್ಯಕ್ತಿಗಳಲ್ಲಿ ಒಂದಾದ ಮಾರ್ಕ್‌ ಜುಕರ್‌ ಬರ್ಗ್‌ ಧರಿಸಿದ್ದ ಬಟ್ಟೆಯ ದರವೆಷ್ಟು (Rate) ಎನ್ನುವ ಕುತೂಹಲ ಜನರಿಗೆ ಮೂಡದೇ ಇರುತ್ತದೆಯೇ? ಹೀಗಾಗಿ, ಅನೇಕರು ಕುತೂಹಲದಿಂದ ವಿಚಾರಿಸಿದಾಗ ಅವರಿಗೆ ಅಚ್ಚರಿಯಾಗಿದೆ. ಜುಕರ್‌ ಬರ್ಗ್‌ ಧರಿಸಿದ್ದ ಹುಲಿ ಪ್ರಿಂಟ್‌ (Tiger Print) ನ ಚಿನ್ನದ ಬಣ್ಣದ (Gold Color) ಟೀ ಶರ್ಟ್‌ ಬೆಲೆ 1.6 ಲಕ್ಷ ರೂಪಾಯಿ ಎನ್ನುವುದು ಬಹಿರಂಗವಾಗಿದೆ. ಇದರೊಂದಿಗೆ ಇಷ್ಟು ಕಡಿಮೆ ಬೆಲೆಯ ಟೀ ಶರ್ಟ್‌ ಧರಿಸಿದ್ದುದಕ್ಕೆ ಅಸಮಾಧಾನವೂ ವ್ಯಕ್ತವಾಗಿದೆ. 

Aaradhya New Hairstyle: ಕೊನೆಗೂ ಐಶ್ವರ್ಯಾ ಮಗಳ ಹಣೆ ನೋಡಾಯ್ತು: ಹೇರ್ ಸ್ಟೈಲ್ ಬದಲಿಸಿದ ಆರಾಧ್ಯ ಬಚ್ಚನ್ !

ದುಬಾರಿಯಲ್ಲ
ಒಬ್ಬರು ಇನ್‌ ಸ್ಟಾಗ್ರಾಮ್‌ ಬಳಕೆದಾರರು “ನಾನು ಜುಕರ್‌ ಬರ್ಗ್‌ ಅವರ ಶರ್ಟಿನ ಬೆಲೆಯ ಬಗ್ಗೆ ವಿಚಾರಿಸಿದೆ. ಪಶ್ಚಾತ್ತಾಪ ಪಟ್ಟೆʼ ಎಂದು ಹೇಳಿದ್ದಾರೆ. ಹಲವಾರು ಜನ ಮಾರ್ಕ್‌ ಧರಿಸಿದ್ದ ಟೀ ಶರ್ಟಿನ ದರದ ಬಗ್ಗೆ ಆಸಕ್ತಿ (Interest) ವಹಿಸಿರುವುದು ವಿಶೇಷ. ಅಲ್ಲದೆ, ಸೋಷಿಯಲ್‌ ಮೀಡಿಯಾ ಬಳಕೆದಾರರು ಟೀ ಶರ್ಟಿನ ಬೆಲೆಯ ಕುರಿತು ಇಂಪ್ರೆಸ್‌ (Impress) ಆಗಿಲ್ಲ ಎನ್ನುವುದು ಇನ್ನೂ ಅಚ್ಚರಿದಾಯಕ. ಎಲ್ಲರೂ ಅಷ್ಟೊಂದು “ದುಬಾರಿಯಲ್ಲʼ (Not Expensive) ಎಂದೇ ಕಾಮೆಂಟ್‌ ಮಾಡುತ್ತಿದ್ದಾರೆ. ಮಾರ್ಕ್‌ ಜುಕರ್‌ ಬರ್ಗ್‌ ಇನ್ನಷ್ಟು ದುಬಾರಿ ಬಟ್ಟೆ ಧರಿಸುತ್ತಾರೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರೋ ಏನೋ!\

ಅನಂತ್‌ ಅಂಬಾನಿ ವಾಚ್‌ ನೋಡಿ ದಂಗಾದ ಮಾರ್ಕ್ ಜುಕರ್‌ಬರ್ಗ್ ದಂಪತಿ, ಯಪ್ಪಾ..ಇದರ ಬೆಲೆ 10 ಕೋಟಿನಾ!

ವಿಧ ವಿಧ ಕಾಮೆಂಟ್ಸ್‌ (Comments) 
“ಇದರ ಬೆಲೆ ಅಷ್ಟೊಂದೇನಿಲ್ಲ. ಈಗ ಮೇಲ್ಮಧ್ಯಮ ವರ್ಗದ ಜನರೇ ವಿವಾಹದಂತಹ ಕಾರ್ಯಕ್ರಮಗಳಲ್ಲಿ ಲಕ್ಷ (Lakh) ರೂಪಾಯಿ ಬೆಲೆಯ ಉಡುಗೆ ಧರಿಸುತ್ತಾರೆ. ಇದು ಕೇವಲ ಅವರ 2ಎಕ್ಸ್‌ ಆಗಿದೆʼ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು, “ಈ ಟೀ ಶರ್ಟ್‌ (T Shirt) ಅತ್ಯಂತ ಚೀಪ್‌ ಆಗಿದೆʼ ಎಂದೂ ಹೇಳಿದ್ದಾರೆ. ಒಬ್ಬರಂತೂ, “ಕೆಲವೇ ದಿನಗಳಲ್ಲಿ ದೆಹಲಿಯ ಸರೋಜಿನಿ ಮಾರ್ಕೆಟ್‌ ನಲ್ಲಿ ಇಂಥ ಶರ್ಟನ್ನು ಕೇವಲ 500 ರೂಪಾಯಿಗೆ ಮಾರುತ್ತಾರೆʼ ಎಂದೂ ಹೇಳಿದ್ದಾರೆ.