ಮೆಹೆಂದಿಯ ಚಿತ್ತಾರ ಕೈಗಳಲ್ಲಿ ಮೂಡಿದಾಗಲೇ ಮದುಮಗಳಿಗೆ ನೆಮ್ಮದಿ. ಅಷ್ಟರಮಟ್ಟಿಗೆ ಮೆಹೆಂದಿಗೂ ಮದುವೆಗೂ ಸಂಬಂಧವಿದೆ. ನಮ್ಮ ಬಾಲಿವುಡ್ ತಾರೆಯರೂ ಇದರಲ್ಲಿ ಹಿಂದುಳಿದಿಲ್ಲ. 

ವಿವಾಹದ ಉತ್ಸವಕ್ಕೆ ಮತ್ತಷ್ಟು ಮೆರಗು ನೀಡುವುದೇ ಮೆಹೆಂದಿ (Mehendi). ಮೆಹೆಂದಿ ಮದುವೆಯ ಪವಿತ್ರ (Holy) ಬಂಧಕ್ಕೆ ಸಾಕ್ಷಿಯಾಗುತ್ತದೆ. ನಮ್ಮ ಭಾರತೀಯ ಮದುವೆಗಳಲ್ಲಂತೂ ಮೆಹೆಂದಿ ಕಾರ್ಯಕ್ರಮವಿಲ್ಲದೆ ಮದುವೆಯ ಸಡಗರ ಆರಂಭವಾಗುವುದಿಲ್ಲ. ಮದುವೆಗೆ ಎರಡು ದಿನಗಳಿರುವಾಗ ಮೆಹೆಂದಿಯ ಸಂಭ್ರಮ ಆರಂಭವಾದಾಗಲೇ ಮದುಮಗಳಿಗೂ ಹೊಸ ಲುಕ್ ಬರುತ್ತದೆ. 
ಹಿಂದೆಲ್ಲ ಮದರಂಗಿಯನ್ನು ಮನೆಯಲ್ಲೇ ತಯಾರಿಸಿ ಹಚ್ಚಿಕೊಳ್ಳಲಾಗುತ್ತಿತ್ತು. ಹೆಚ್ಚಿನ ಡಿಸೈನ್ (Design) ಆಯ್ಕೆಗಳೂ ಇರಲಿಲ್ಲ. ಆದರೆ, ಮದುವೆಗೆ ಮದರಂಗಿಯಂತೂ ಬೇಕಾಗಿತ್ತು. ಈಗ ಹಾಗಲ್ಲ. ಹಿಂದಿನ ಸಾಂಪ್ರದಾಯಿಕತೆಯ ಸೀಮಿತ ಅರ್ಥವನ್ನು ಮೀರಿ ಮೆಹೆಂದಿ ಕಾರ್ಯಕ್ರಮವೂ ಜೋರಾಗಿ ನಡೆಯುತ್ತದೆ. ಮೆಹೆಂದಿಯ ಆಕರ್ಷಣೆ (Attraction) ನಮ್ಮ-ನಿಮ್ಮಂತ ಸಾಮಾನ್ಯರಿಗೆ ಮಾತ್ರವಲ್ಲ. ನಮ್ಮ ಬಾಲಿವುಡ್ (Bollywood) ತಾರೆಯರಿಗೂ ತಮ್ಮ ವಿವಾಹದ ಸಮಯದಲ್ಲಿ ಸಾಮಾನ್ಯರಿಗಿಂತಲೂ ಅದ್ದೂರಿಯಾಗಿ ಮೆಹೆಂದಿ ಹಾಕಿಸಿಕೊಂಡು ಮೆರೆದಿದ್ದಾರೆ. ಅವರಲ್ಲಿ ಇತ್ತೀಚೆಗೆ ಮದುವೆಯಾದ ಮೌನಿ ರಾಯ್, ಕತ್ರೀನಾ ಕೈಫ್ ಸೇರಿದಂತೆ ಆರು ತಾರೆಯರ ಮೆಹೆಂದಿ ಡಿಸೈನ್ ಗಳು ಗಮನ ಸೆಳೆದಿವೆ.

ಮೌನಿ ರಾಯ್ (Mouni Roy)
ಮೆಹೆಂದಿ ಕಾರ್ಯಕ್ರಮದಲ್ಲಿ ತಿಳಿಹಳದಿ ಬಣ್ಣದ ದಿರಿಸಿನಲ್ಲಿ ಮೌನಿ ರಾಯ್ ಮಿಂಚಿದ್ದರು. ಹಸ್ತ, ಪಾದಗಳು, ಕೈ ತೋಳುಗಳಿಗೆ ಮೆಹೆಂದಿ ಹಾಕಿಸಿಕೊಂಡಿದ್ದ ಫೋಟೋ ಅವರ ವೆಡ್ಡಿಂಗ್ ಆಲ್ಬಮ್ ನಲ್ಲಿ ಆಕರ್ಷಕವೆನಿಸುತ್ತದೆ. ತಮ್ಮ ಪತಿ ಸೂರಜ್ ನಂಬಿಯಾರ್ ಹೆಸರನ್ನು ಕೈಗಳ ಮೇಲೆ ಚಿತ್ತಾರ ಹಾಕಿಸಿಕೊಂಡಿದ್ದರು. ಎಸ್ ಎನ್ ಎನ್ನುವ ಅಕ್ಷರಗಳನ್ನು ಕೈಮೇಲೆ ಹಾಕಿಸಿಕೊಂಡು ವಿಭಿನ್ನತೆ ಮೆರೆದಿದ್ದರು.

View post on Instagram

ಅಂಕಿತಾ ಲೋಖಂಡೆ (Ankita Lokhande)
ಟಿವಿ ಸ್ಟಾರ್ ಅಂಕಿತಾ ಲೋಖಂಡೆ ಅವರ ಮೆಹೆಂದಿ ಡಿಸೈನ್ ಸೋಷಿಯಲ್ ಮೀಡಿಯಾಗಳಲ್ಲಿ ಹವಾ ಸೃಷ್ಟಿಸಿತ್ತು. ಸುಂದರವಾದ ಮೆಹೆಂದಿ ವಿನ್ಯಾಸ ಅವರ ಹುರುಪು ಮತ್ತು ಅಭಿರುಚಿಯನ್ನು ಬಿಂಬಿಸುವಂತಿತ್ತು. ಮದರಂಗಿಯಿಂದ ಅಂಕಿತಾ ಕೈಗಳ ಮೇಲೆ ಆಕರ್ಷಕ ಚಿತ್ತಾರ ಬಿಡಿಸಿದ್ದ ಖ್ಯಾತಿ ಸೆಲೆಬ್ರಿಟಿ ಮೆಹೆಂದಿ ಕಲಾವಿದೆ ವೀನಾ ನಾಗ್ಡಾ ಅವರಿಗೆ ಸಲ್ಲುತ್ತದೆ. ಇವರೂ ಸಹ ಮದುಮಗ ವಿಕ್ಕಿ ಜೈನ್ ಅವರ ಹೆಸರನ್ನು ಕೈಗಳ ಮೇಲೆ ಹಾಕಿಸಿಕೊಂಡಿದ್ದರು. 

View post on Instagram

ಕತ್ರೀನಾ ಕೈಫ್ (Katrina Kaif)
ಡಿಸೆಂಬರ್ ನಲ್ಲಿ ಮದುವೆಯಾದ ಬಳಿಕ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮಾಲ್ಡೀವ್ಸ್ (Madlives) ಗೆ ಹನಿಮೂನ್ ಗಾಗಿ ತೆರಳಿದ್ದರು. ಅಲ್ಲಿನ ಬೀಚ್ ಗಳಲ್ಲಿ ವಿಹರಿಸಿದ್ದರು. ಅಂಥದ್ದೇ ಒಂದು ಘಳಿಗೆಯಲ್ಲಿ ಕತ್ರೀನಾ ತಮ್ಮ ಕೈಗಳಲ್ಲಿದ್ದ ಮೆಹೆಂದಿಯ ಚಿತ್ತಾರದ ಫೋಟೊವೊಂದನ್ನು ತಮ್ಮ ಇನ್ ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಅದ್ಭುತವಾದ ಡಿಸೈನ್ ಪಂಜಾಬಿ (Panjabi) ಸಂಸ್ಕೃತಿಯನ್ನು ಬಿಂಬಿಸುವಂತಿತ್ತು. ಸಣ್ಣ ಸಣ್ಣ ವೃತ್ತಗಳಲ್ಲಿ ವಿಕ್ಕಿಯ ಹೆಸರೂ ಸಹ ಬರೆದುಕೊಂಡಿತ್ತು. ಇದು ಕತ್ರೀನಾ ಮತ್ತು ವಿಕ್ಕಿ ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸಿತ್ತು. 



ಹನಿಮೂನಿಗೆ ಹೋಗಿ ಮೆಹಂದಿ ಕೈ ತೋರಿಸಿದ ಕತ್ರೀನಾ ಕೈಫ್

View post on Instagram

ಯಾಮಿ ಗೌತಮ್ (Yami Goutam)
ತಮ್ಮ ಮೆಹೆಂದಿ ಕಾರ್ಯಕ್ರಮದಲ್ಲಿ ಕೇಸರಿ ಬಣ್ಣದ ಸಲ್ವಾರ್ ಸೂಟ್ ನಲ್ಲಿ ಮಿಂಚಿದ್ದ ಯಾಮಿ ಗೌತಮ್, ಗ್ಲಾಮರಸ್ ಹೇರ್ ಸ್ಟೈಲ್ ಬದಲು ಕೂದಲನ್ನು ಕಟ್ಟಿಕೊಂಡು ಮಿಂಚಿದ್ದರು. ಅವರ ಮೆಹೆಂದಿ ಡಿಸೈನ್ ಕೂಡ ಅತ್ಯಂತ ಆಕರ್ಷಕವಾಗಿತ್ತು. ಹೆಚ್ಚು ವಿಸ್ತಾರವಾದ ಡಿಸೈನ್ ಗಿಂತ ಸೊಗಸಿನ ಕಡೆಗೆ ಯಾಮಿ ಗಮನ ನೀಡಿದ್ದರು.

View post on Instagram

ಪ್ರಿಯಾಂಕಾ ಚೋಪ್ರಾ (Priyanka Chopra)
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಮದುವೆಯಾಗಿ ಕೆಲವು ವರ್ಷಗಳೇ ಸಂದಿವೆ. ಆದರೂ ಈ ಜೋಡಿ ಇಂದಿಗೂ ಆಕಷರ್ಕವೆನಿಸುವುದಕ್ಕೆ ಹಲವು ಕಾರಣಗಳಿವೆ. ತಮ್ಮ ಮದುವೆಯ ಮೆಹೆಂದಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ನಿಕ್ ಗಾಗಿ ವಿಶೇಷ ಡಿಸೈನ್ ಬಗ್ಗೆ ಗಮನ ನೀಡಿದ್ದರು. ನಿಕ್ ಗೆ ವಿಶೇಷವೆನಿಸುವ ಸಂಗತಿಗಳ ಚಿತ್ತಾರ ಹಾಕಿಸಿಕೊಂಡಿದ್ದರು. ಅವರ ಕೈಗಳಲ್ಲಿ ಸಣ್ಣದೊಂದು ಗಿಟಾರ್ ಕೂಡ ಸ್ಥಾನ ಪಡೆದಿತ್ತು. ತನ್ನ ಸಂಗಾತಿಯ ವೃತ್ತಿಯನ್ನು ಪ್ರಿಯಾಂಕಾ ಈ ಮೂಲಕ ತೋರ್ಪಡಿಸಿಕೊಂಡಿದ್ದರು. 

View post on Instagram

ಸೋನಮ್ ಕಪೂರ್ ಅಹುಜಾ (Sonam Kapoor Ahuja)
ಸೋನಮ್ ಕಪೂರ್ ಮೆಹೆಂದಿ ಕಾರ್ಯಕ್ರಮದಂದು ಅಪ್ಸರೆಯಂತೆ ಕಂಗೊಳಿಸಿದ್ದರು. ದಟ್ಟವಾದ ಬ್ರೈಡಲ್ (Bridal) ಡಿಸೈನ್ ಹಾಕಿಸಿಕೊಂಡು ಮಿಂಚಿದ್ದರು. ಸಾಂಪ್ರದಾಯಿಕ ಜಾಲಿ ಮತ್ತು ಫ್ಲೋರಲ್ ಡಿಸೈನ್ ಹಾಕಿಸಿಕೊಂಡಿದ್ದರು. ಅಷ್ಟೇ ಅಲ್ಲ, ತಮ್ಮ ಪ್ರೀತಿಯ ಕಮಲದ ಹೂಗಳು ಹಾಗೂ ಆನೆಯ ಮಾದರಿಗಳನ್ನು ಬಿಡಿಸಿಕೊಂಡಿದ್ದರು. ಅವರ ಫೋಟೊವಂತೂ ಅಭಿಮಾನಿಗಳ ಮೈಮರೆಸುವಂತಿದೆ. 

View post on Instagram

ಅಂಕಿತಾ ಲೋಖಂಡೆ ಮೆಹಂದಿ ಕಾರ್ಯಕ್ರಮ ಹೀಗಿತ್ತು