ಚಳಿಗಾಲಕ್ಕೆ ರೆಡಿಯಾಯ್ತು ಸ್ಪೆಷಲ್ ಕ್ಯಾಬೇಜ್ ಜಾಕೆಟ್, ಬೆಲೆ ಕೇಳಿದ್ರೆ ದಂಗಾಗ್ತೀರಾ !

ಚಳಿಗಾಲ ಶುರುವಾಗಿದೆ. ಬೆಚ್ಚನೆಯ ಸ್ವೆಟ್ಟರ್‌, ಜಾಕೆಟ್ ಇಲ್ಲದೆ ಮನೆಯಿಂದ ಹೊರಗೆ ಕಾಲಿಡೋಕೆ ಆಗಲ್ಲ. ಹೀಗಾಗಿ ಎಲ್ರೂ ಇವುಗಳನ್ನು ಖರೀದಿಸುತ್ತಾರೆ. ಹೀಗಾಗಿ ಜಾಕೆಟ್‌ಗಳಲ್ಲೂ ಫ್ಯಾಷನ್ ಅಪ್‌ಡೇಟ್‌ ಆಗುತ್ತಲೇ ಇರುತ್ತದೆ. ಆದ್ರೆ ಇಲ್ಲೊಂದೆಡೆ ಗೋಬಿ ಜಾಕೆಟ್ ಎಲ್ಲರ ಗಮನ ಸೆಳೀತಿದೆ.

Diesels Rs 60,000 Winter Jacket Reminds People Of 'Gobhi Vin

ಫ್ಯಾಷನ್ ಉದ್ಯಮವು ಯಾವಾಗಲೂ ವಿಶಿಷ್ಟ ವಿನ್ಯಾಸಗಳೊಂದಿಗೆ ಬರುತ್ತದೆ. ಕೆಲವೊಮ್ಮೆ ವಾವ್ಹ್ ಅನಿಸಿದರೆ, ಇನ್ನು ಕೆಲವು ಅತಿರೇಕ ಅನಿಸುವಂತಿರುತ್ತದೆ. ಹಾಗೆಯೇ ಚಳಿಗಾಲ (Winter)ದಲ್ಲಿ ಬಳಸೋ ಜಾಕೆಟ್‌ನಲ್ಲೂ ಹೊಸ ಟ್ರೆಂಡ್ ಬಂದಿದ್ದು, ಹೊಸ ಡಿಸೈನ್ ಎಲ್ಲೆಡೆ ವೈರಲ್ ಆಗ್ತಿದೆ. ವಿಂಟರ್ ಅಂದ್ ಕೂಡ್ಲೇ ಎಲ್ಲರೂ ಸ್ವೆಟರ್, ಜಾಕೆಟ್ ಖರೀದಿಸುತ್ತಾರೆ. ಇದಕ್ಕಾಗಿ ಸಾವಿರದಿಂದ ಐದು ಸಾವಿರದ ವರೆಗೂ ಕೊಡಲು ರೆಡಿಯಿರುತ್ತಾರೆ. ಆದ್ರೆ ಇಲ್ಲೊಂದೆಡೆ ಟ್ರೆಂಡ್ ಆಗ್ತಿರೋ ಜಾಕೆಟ್ ಬೆಲೆ ಅಷ್ಟಿಷ್ಟಲ್ಲ. ಭರ್ತಿ 60,000 ರೂಪಾಯಿ. ಹಾಗಂತ ಇದು ನೋಡೋಕೆ ಸಿಕ್ಕಾಪಟ್ಟೆ ಟ್ರೆಂಡಿಯಾಗಿಯೂ ಇಲ್ಲ ಬದಲಾಗಿ ವಿಚಿತ್ರ (Weird)ವಾಗಿದೆ.

ಹೌದು, 60,000 ರೂ. ಬೆಲೆಯುಳ್ಳ ಈ ಜಾಕೆಟ್​ನ ವಿನ್ಯಾಸ ನೋಡಿದ ನೆಟ್ಟಿಗರು, ಇದೇನು ಕ್ಯಾಬೇಜ್​ನಂತೆ ಕಾಣುತ್ತಿದೆ ಎಂದು ಹೇಳುತ್ತಿದ್ದಾರೆ. ಜಾಕೆಟ್​ನ ಬೆಲೆ ಇಷ್ಟು ದುಬಾರಿಯಾಗಿದ್ದರೂ ವಿನ್ಯಾಸ (Design) ಮಾತ್ರ ಇಷ್ಟೊಂದು ಕೆಟ್ಟದಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಅಪ್​ಲೋಡ್ ಮಾಡಲಾದ ಈ ಪೋಸ್ಟ್​ ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ಬೆಲೆಯಲ್ಲಿ ಆಯಕ್ಟಿವಾ ಗಾಡಿ ಖರೀದಿಸಬಹುದಿತ್ತು. ಯಾರು ಇಷ್ಟು ದುಬಾರಿ ಜಾಕೆಟ್​ ಖರೀದಿಸುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.

ಯಾರು ನೋಡಲಿ ಸರಿಯಾಗಿ ನಿದ್ರೆ ಬರೋಲ್ಲ ಅಂತಾರೆ, ಅದಕ್ಕೆ ಈ ಟೀ ಬೆಸ್ಟ್!

ಕ್ಯಾಬೇಜ್‌ನಂತಿರೋ ಜಾಕೆಟ್ ಫೋಟೋ ವೈರಲ್‌
ರನ್ ವೇ ಫ್ಯಾಶನ್ ಹೆಸರಿನಲ್ಲಿ ಈ 60,000 ರೂಪಾಯಿಯ ಕ್ಯಾಬೇಜ್‌ನಂತೆ ಕಾಣುತ್ತಿರುವ ಜಾಕೆಟ್ ಮಾರಲಾಗ್ತಿದೆ. ಎಲೆಕೋಸು ಹೋಲುವ ಹಸಿರು ಜಾಕೆಟ್‌ನ ಫೋಟೋವನ್ನು ಅನು ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಈ ಜಾಕೆಟ್‌ ಗೋಬಿಯಂತೆ ಕಾಣುತ್ತಿದೆ, ಇದಕ್ಕೆ 60,000 ರೂಪಾಯಿನಾ' ಎಂದು ಶೀರ್ಷಿಕೆ ನೀಡಿದ್ದಾರೆ. ಡೀಸೆಲ್ ಎಂಬುದು ಐಷಾರಾಮಿ ಉಡುಪು ವ್ಯಾಪಾರದ ಬ್ರ್ಯಾಂಡ್ ಆಗಿದೆ. ಇದು ಆಗಾಗ ಅಸಂಬದ್ಧವಾಗಿರುವ ಡ್ರೆಸ್‌ಗಳನ್ನು ಮಾರಾಟಕ್ಕಿಡುತ್ತದೆ. ಅತಿರೇಕದ ಹೆಚ್ಚಿನ ಬೆಲೆಗಳೊಂದಿಗೆ ಆಗಾಗ ವಸ್ತುಗಳನ್ನು ಸೃಷ್ಟಿಸುತ್ತದೆ. ಈ ಹಿಂದೆ 82,000 ರೂಪಾಯಿಗಳ ಬೆಲೆಯವಿಚಿತ್ರವಾದ ಸ್ಕರ್ಟ್ ಪೋಟೋ ವೈರಲ್ ಆಗಿತ್ತು.

ಈ ಸಮಯದಲ್ಲಿ, ಡೀಸೆಲ್ ಜಾಕೆಟ್ ಅನ್ನು "ಕೆಟ್ಟ ಡೈ ಕೆಲಸ" ಎಂದು ವಿವರಿಸಿದ್ದಾರೆ. ಮತ್ತು ಟ್ವಿಟರ್ ಒಪ್ಪುತ್ತದೆ. ಫ್ಯಾಶನ್ ರಿಟೇಲ್ ವೆಬ್‌ಸೈಟ್‌ನಲ್ಲಿನ ಜಾಕೆಟ್‌ನ ವಿವರಣೆಯು ಹೀಗೆ ಹೇಳುತ್ತದೆ, "ಪ್ಯಾಡ್ಡ್ ಮರುಬಳಕೆಯ ರಿಪ್‌ಸ್ಟಾಪ್‌ನಲ್ಲಿ ಪುರುಷರ ಚಳಿಗಾಲದ ಜಾಕೆಟ್. ಕೆಟ್ಟ ಡೈ ಕೆಲಸವನ್ನು ಅನುಕರಿಸಲು ಓವರ್‌ಪ್ರಿಂಟ್ ಮಾಡಲಾಗಿದೆ, ಬಟ್ಟೆಯನ್ನು ಸ್ಮೋಕಿಂಗ್ ತಂತ್ರವನ್ನು ಬಳಸಿ ಸಂಗ್ರಹಿಸಲಾಗುತ್ತದೆ, ಪರಿಣಾಮವಾಗಿ ಉಬ್ಬುವ, ಬಾಕ್ಸ್ ತರಹದ ಮಾದರಿಯನ್ನು ಪಡೆಯಲಾಗುತ್ತದೆ. ಸಿಲೂಯೆಟ್ ಎತ್ತರದ, ಕವಚದ ಕಂಠರೇಖೆಯನ್ನು ಹೊಂದಿದೆ." ಜಾಕೆಟ್ ಎರಡು ಬಣ್ಣಗಳಲ್ಲಿ ಬರುತ್ತದೆ, ಅದರಲ್ಲಿ ಒಂದು ಎಲೆಯ ತರಕಾರಿಯನ್ನು ಹೋಲುವಂತೆ ಟ್ರೋಲ್ ಆಗುತ್ತಿದೆ.

ಚುಮು ಚುಮು ಚಳೀಲಿ ಸಂಗಾತಿ ಜೊತೆ ಇಂಥಾ Romantic Placeಗೆ ಹೋಗಿಲ್ಲಾಂದ್ರೆ ಹೇಗ್ ಹೇಳಿ

ವಿಚಿತ್ರ ಜಾಕೆಟ್‌ನ ಪೋಟೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ. ಟ್ವೀಟ್ ಜನರ ಗಮನವನ್ನು ಸೆಳೆದಿದೆ. ಹಲವರು ಟ್ವೀಟ್‌ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ತುಂಬಾ ಒಳ್ಳೆಯ ಮತ್ತು ಡಿಫರೆಂಟ್ ಜಾಕೆಟ್ ಎಂದು ಹೇಳಿದರೆ, ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬರು ಈ ಜಾಕೆಟ್‌ಗೆ 200 ರೂಪಾಯಿ ಕೂಡ ನೀಡುವುದಿಲ್ಲ ಎಂದು ಹೇಳಿದ್ದಾರೆ. 

ಕ್ಯಾಬೇಜಿನ ಎಲೆಗಳಂತೆ ಕಾಣುತ್ತಿರುವ ಈ ಜಾಕೆಟ್ಟಿಗೆ ರೂ. 60,000 ನಾ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೇ ಹಣದಲ್ಲಿ ಆಕ್ಟಿವಾ ಗಾಡಿ ಬರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದರ ವಿನ್ಯಾಸಕರು ಬಾಬಾ ರಾಮ್​ದೇವ್​ ಆಗಿರಬಹುದೇ ಎಂದು ಹಾಸ್ಯವಾಗಿ ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios