TRENDY BAGS: ಫ್ಯಾಷನ್ ಪ್ರಿಯ ಹುಡುಗಿಯರ ಹತ್ರ ಇರಲೇಕಾದ ಬ್ಯಾಗ್‌ಗಳಿವು
ಹುಡುಗಿಯರು (Girls) ಮನೆಯಿಂದ ಹೊರ ಹೋಗುವಾಗ ಏನಿಲ್ಲಾಂದ್ರೂ ಹೆಗಲಲ್ಲಿ ಒಂದು ಬ್ಯಾಗ್ (Bag) ಅಂತೂ ಇರ್ಲೇಬೇಕು. ಅದರಲ್ಲೂ ಹೆಗಲಲ್ಲಿ ನೇತಾಡುವ ಸ್ಲಿಂಗ್ ಬ್ಯಾಗ್ ಸದ್ಯದ ಫ್ಯಾಷನ್ (Fashion). ಆದರೆ, ಈ ಸ್ಲಿಂಗ್ ಬ್ಯಾಗ್‌ನಲ್ಲೂ ಹಲವು ವೆರೈಟಿ (Variety)ಗಳಿವೆ ಅನ್ನೋದು ಹಲವರಿಗೆ ತಿಳಿದಿರದ ವಿಷಯ. ಸೂಪರ್ ಕ್ಯೂಟ್ ಸ್ಲಿಂಗ್ ಬ್ಯಾಗ್ಸ್ ಬಗ್ಗೆ ಒಂದಷ್ಟು ವಿಚಾರ ತಿಳಿಯೋಣ..
ಹುಡುಗಿಯರು (Girls) ಮನೆಯಿಂದ ಹೊರ ಹೋಗುವಾಗ ಏನಿಲ್ಲಾಂದ್ರೂ ಹೆಗಲಲ್ಲಿ ಒಂದು ಬ್ಯಾಗ್ ಅಂತೂ ಇರ್ಲೇಬೇಕು. ಅದರಲ್ಲೂ ಹೆಗಲಲ್ಲಿ ನೇತಾಡುವ ಸ್ಲಿಂಗ್ ಬ್ಯಾಗ್ ಸದ್ಯದ ಫ್ಯಾಷನ್. ಆದರೆ, ಈ ಸ್ಲಿಂಗ್ ಬ್ಯಾಗ್‌ನಲ್ಲೂ ಹಲವು ವೆರೈಟಿಗಳಿವೆ ಅನ್ನೋದು ಹಲವರಿಗೆ ತಿಳಿದಿರದ ವಿಷಯ. ಸೂಪರ್ ಕ್ಯೂಟ್ ಸ್ಲಿಂಗ್ ಬ್ಯಾಗ್ಸ್ ಬಗ್ಗೆ ಒಂದಷ್ಟು ವಿಚಾರ ತಿಳಿಯೋಣ..
ಹೆಣ್ಮಕ್ಕಳ ಫ್ಯಾಷನ್ (Fashion) ಲೋಕದಲ್ಲಿ ಡ್ರೆಸ್‌ಗಳಿಗೆ ಇರುವಷ್ಟೇ ಮಹತ್ವ ಬ್ಯಾಗ್‌ಗಳಿಗೂ ಇದೆ. ಹೆಣ್ಣುಮಕ್ಕಳ ಕೈಯಲ್ಲಿರುವ ಬ್ಯಾಗ್ (Bag) ಎಂದರೆ ಅದೊಂದು ಪ್ರತ್ಯೇಕ ಲೋಕ. ಅಲ್ಲಿರದ ವಸ್ತುಗಳೇ ಇಲ್ಲ. ಸೇಫ್ಟಿ ಪಿನ್, ಕ್ಲಿಪ್, ಲಿಪ್ ಸ್ಟಿಕ್‌ನಿಂದ ಹಿಡಿದು ವಾಟರ್ ಬಾಟಲ್, ಬ್ಯಾಂಡೇಡ್, ಎಮರ್ಜೆನ್ಸಿಗೆಂದು ಟ್ಯಾಬ್ಲೆಟ್ಸ್‌ಗಳು ಅದರಲ್ಲಿರುತ್ತವೆ. ಮೊದಲೆಲ್ಲಾ ಹೆಣ್ಣು ಮಕ್ಕಳ ಹೆಗಲಲ್ಲಿ ದೊಡ್ಡ ದೊಡ್ಡ ಬ್ಯಾಗ್‌ಗಳು ನೇತಾಡುತ್ತಿದ್ದವು. ಆದರೆ ಈಗ ಸ್ಥಾನವನ್ನು ಪುಟ್ಟ ಪುಟ್ಟ ಸ್ಲಿಂಗ್ ಬ್ಯಾಗ್‌ಗಳು ಆಕ್ರಮಿಸಿಕೊಂಡಿವೆ. ಶಾಪಿಂಗ್‌ಗೆ (Shopping) ಹೋಗುವ, ಮದುವೆ ಮನೆಗೆ ಹೋಗುವ ಹೆಣ್ಣುಮಕ್ಕಳ ಹೆಗಲಲ್ಲಿ ಪುಟ್ಟ ಬ್ಯಾಗ್ ನೇತಾಡಿಕೊಂಡಿರುವುದು ಎಲ್ಲರೂ ನೋಡಿರಬಹುದು. ನಾನಾ ಡಿಸೈನ್‌ನಿಂದ ಕೂಡಿರುವಂತಹಾ ಈ ಸ್ಲಿಂಗ್ ಬ್ಯಾಗ್ ನೋಡಲು ಸಹ ಆಕರ್ಷಕ, ಕೊಂಡೊಯ್ಯಲು ಆರಾಮದಾಯಕವೂ ಹೌದು.
ಹುಡುಗೀರ ಹತ್ರ ಇರಲೇಬೇಕಾದ ಫ್ಯಾಷನ್ ಐಟಂಗಳು
ಸ್ಲಿಂಗ್ ಬ್ಯಾಗ್‌ಗಳು ಔಟಿಂಗ್, ವೆಡ್ಡಿಂಗ್, ಪಾರ್ಟಿ ಎಂದಾಗ ಕ್ಯಾರೀ ಮಾಡಲು ಚಂದ. ಆದರೆ, ದಿನನಿತ್ಯದ ಬಳಕೆಗೆ ಸೂಕ್ತವಲ್ಲ. ಯಾಕೆಂದರೆ ಸ್ಕೂಲ್, ಆಫೀಸ್ ಎಂದು ಹೋಗುವ ಮಹಿಳೆಯರಿಗೆ ಈ ಪುಟ್ಟ ಬ್ಯಾಗ್ ಸಾಕಾಗುವುದಿಲ್ಲ. ಕೇವಲ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಸಾಕಾಗುವಷ್ಟು ಜಾಗ ಮಾತ್ರ ಈ ಬ್ಯಾಗ್‌ನಲ್ಲಿದೆ. ಬ್ಯಾಗ್‌ನಲ್ಲಿ ದುಡ್ಡು, ಮೊಬೈಲ್, ಲಿಪ್‌ಸ್ಟಿಕ್, ಕರ್ಚೀಫ್ ಮೊದಲಾದ ಸಣ್ಣಪುಟ್ಟ ವಸ್ತುಗಳನ್ನು ಹಾಕಿಕೊಂಡು ಆರಾಮವಾಗಿ ಓಡಾಡಬಹುದು. ಸ್ಲಿಂಗ್ ಬ್ಯಾಗ್ ಕಂಫರ್ಟ್‌ಬಲ್ ಟು ಕ್ಯಾರಿ ಆಗಿರುವ ಕಾರಣ ಹೆಚ್ಚಿನ ಹೆಣ್ಣುಮಕ್ಕಳು ಇದನ್ನು ಇಷ್ಟಪಡುತ್ತಾರೆ.
ಬ್ಯಾಗ್‌ನ್ನು ಹೈಟ್‌ಗೆ ತಕ್ಕಂತೆ ಉದ್ದ, ಸಣ್ಣ ಮಾಡಿಕೊಳ್ಳಬಹುದಾದ ಕಾರಣ ಯಾರಿಗೂ ಕೂಡಾ ಇದನ್ನು ಕೊಂಡೊಯ್ಯಲು ಕಷ್ಟ ಅನಿಸದು. ಅತ್ಯಾಕರ್ಷಕವಾಗಿರುವ ಈ ಸ್ಲಿಂಗ್ ಬ್ಯಾಗ್ಸ್ ಕಡಿಮೆ ಬೆಲೆಯಿಂದ ಹಿಡಿದು ಎಲ್ಲಾ ರೀತಿಯ ರೇಂಜ್‌ನಲ್ಲೂ ಲಭ್ಯವಾಗುತ್ತವೆ. ಜೀನ್ಸ್, ಸಲ್ವಾರ್, ಕುರ್ತಾ, ಸ್ಯಾರಿ ಎಲ್ಲಾ ರೀತಿಯ ದಿರಿಸಿಗೂ ಈ ಸ್ಲಿಂಗ್ ಬ್ಯಾಗ್ ಹೊಂದಿಕೊಳ್ಳುತ್ತದೆ. ಆದರೆ ಈ ಸ್ಲಿಂಗ್ ಬ್ಯಾಗ್‌ನಲ್ಲೂ ಹಲವು ವೆರೈಟಿಗಳಿವೆ ಅನ್ನೋದು ಹಲವರಿಗೆ ತಿಳಿದಿರದ ವಿಷಯ.
ನಾಯಿನ ವಾಕ್‌ಗೆ ಕರೆದೊಯ್ಬೇಕಾದ್ರೆ ಮಲೈಕಾ ಬಳಸೋ ಬ್ಯಾಗ್ ಬೆಲೆ ಕೇಳಿದ್ರಾ..? ಮಾಲ್ಡೀವ್ಸ್ ಟ್ರಿಪ್ ಹೋಗ್ಬೋದು..!
ಹೌದು, ವ್ಯಾನಿಟಿ ಬ್ಯಾಗ್‌ಗಳ ಹಾಗೆಯೇ ಜೀನ್ಸ್, ಲೆದರ್, ಸೆಣಬು ಮೊದಲಾದ ಮೆಟೀರಿಯಲ್‌ಗಳಿಂದ ತಯಾರು ಮಾಡಿರುವಂತಹಾ ಸ್ಲಿಂಗ್ ಬ್ಯಾಗ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲಿ ಶುಗರ್ ಕ್ರಶ್ ಸ್ಲಿಂಗ್ ಬ್ಯಾಗ್, ಕ್ರಾಸ್ ಬಾಡಿ ಬ್ಯಾಗ್, ಸೈಡ್ ಸ್ಲಿಂಗ್ ಬ್ಯಾಗ್, ಕಾಪ್ರೀಸ್ ಮಹಿಳಾ ಸ್ಲಿಂಗ್ ಬ್ಯಾಗ್ ಹೆಚ್ಚು ಬಳಕೆಯಲ್ಲಿದೆ.
ಶುಗರ್ ಕ್ರಶ್ ಸ್ಲಿಂಗ್ ಬ್ಯಾಗ್
ಶುಗರ್ ಕ್ರಶ್ ಸ್ಲಿಂಗ್ ಬ್ಯಾಗ್, ಕಲರ್‌ಬ್ಲಾಕ್ ಮಾಡಲಾದ ವಿನ್ಯಾಸವನ್ನು ಒಳಗೊಂಡಿರುತ್ತದೆ. ಬ್ಯಾಗ್ ಕ್ಲಚ್‌ನ್ನು ಸಹ ಹೊಂದಿದ್ದು, ಡಿಟ್ಯಾಚೇಬಲ್ ಚೈನ್‌ನೊಂದಿಗೆ ಬರುತ್ತದೆ. ಅಗತ್ಯವಿದ್ದಲ್ಲಿ ಚೈನ್‌ನ್ನು ಅಳವಡಿಸಿ ಬ್ಯಾಗ್‌ನಂತೆ, ಇಲ್ಲದಿದ್ದಲ್ಲಿ ಇದನ್ನು ಕ್ಲಚ್‌ನಂತೆಯೂ ಬಳಸಬಹುದಾಗಿದೆ.
ಕ್ರಾಸ್ ಬಾಡಿ ಬ್ಯಾಗ್
ಈ ಸುಂದರವಾದ ಬ್ಯಾಗ್ ಏಕವರ್ಣದ ಶೈಲಿಯನ್ನು ಹೊಂದಿರುತ್ತದೆ. ಬ್ಯಾಗ್‌ಗೆ ಗ್ರ್ಯಾಂಡ್ ಲುಕ್ ಕೊಡುವುದಕ್ಕಾಗಿ ಹೆಚ್ಚುವರಿ ಟಾಪ್ ಹ್ಯಾಂಡಲ್‌ನ್ನು ಅಳವಡಿಸಿರುತ್ತಾರೆ. ಇದು ಡಿಟ್ಯಾಚೇಬಲ್ ಚೈನ್‌ನ್ನು ಹೊಂದಿದ್ದು, ಸಣ್ಣಪುಟ್ಟ ವಸ್ತುಗಳು ಬ್ಯಾಗ್‌ನಲ್ಲಿ ಇಡಲು ಸಾಧ್ಯವಾಗುತ್ತದೆ.
ಫ್ರಾಂಜಿ ಸ್ಲಿಂಗ್ ಹ್ಯಾಂಡ್‌ಬ್ಯಾಗ್
ಬೆರಗುಗೊಳಿಸುವ ಡ್ಯುಯಲ್ ಟೋನ್ ಶೈಲಿಯನ್ನು ಒಳಗೊಂಡಿರುವ ಫ್ರಾಂಜಿ ಸ್ಲಿಂಗ್ ಹ್ಯಾಂಡ್‌ಬ್ಯಾಗ್ ಟ್ರೆಂಡೀಯಾಗಿ ಕಾಣಿಸಿಕೊಳ್ಳಲು ಅತ್ಯುತ್ತಮ ಆಯ್ಕೆಯಾಗಿದೆ. ಇದು ನಿಜವಾದ ಲೆದರ್‌ನಿಂದ ಮಾಡಲ್ಪಟ್ಟಿದ್ದು, ಸುಲಭವಾಗಿ ಓಪನ್ ಮತ್ತು ಕ್ಲೋಸ್ ಮಾಡಲು ಇದರಲ್ಲಿ ಕ್ಲೋಶರ್‌ನ್ನು ಅಳವಡಿಸಿರಲಾಗಿರುತ್ತದೆ.
ಸೈಡ್ ಸ್ಲಿಂಗ್ ಬ್ಯಾಗ್
ಬೆರಗುಗೊಳಿಸುವ ಏಕವರ್ಣದ ಶೈಲಿಯನ್ನು ಒಳಗೊಂಡಿರುವ ಈ ಸ್ಲಿಂಗ್ ಬ್ಯಾಗ್ ಲೋಹದ ಸರಪಳಿಯೊಂದಿಗೆ ಬರುತ್ತದೆ. ಬಳಸಲು ಅನುಕೂಲವಾಗುಂತೆ ಕ್ಲೋಶರ್ ಅನ್ನು ಹೊಂದಿರುತ್ತದೆ. ಸೈಡ್ ಸ್ಲಿಂಗ್ ಬ್ಯಾಗ್ ಹಲವು ಡಿಸೈನ್, ಪ್ರಿಂಟ್‌ಗಳಲ್ಲಿ ಲಭ್ಯವಾಗುತ್ತದೆ.
ಕಾಪ್ರೀಸ್ ಸ್ಲಿಂಗ್ ಬ್ಯಾಗ್
ಕಾಪ್ರೀಸ್ ಸ್ಲಿಂಗ್ ಬ್ಯಾಗ್ ಕೃತಕ ಚರ್ಮದಿಂದ ಮಾಡಿರುವುದಾಗಿದೆ. ಬ್ಯಾಗ್‌ನ ಒಳಗೆ ಒಂದು ಕಂಪಾರ್ಟ್ ಮೆಂಟ್ ಹಾಗೂ ಜಿಪ್ ಬ್ಯಾಗ್‌ನ ಹೊರಗೆ ಸಹ ಒಂದು ಪುಟ್ಟ ಕಂಪಾರ್ಟ್ ಮೆಂಟ್ ಹಾಗೂ ಜಿಪ್‌ನ್ನು ಒಳಗೊಂಡಿರುತ್ತದೆ.