ಹೆಣ್ಣಿಗೂ, ಫ್ಯಾಷನ್‌ಗೂ ಬಿಡಿಸಲಾಗದ ಅನುಬಂಧ. ವಿವಿಧ ಆ್ಯಕ್ಸೆಸರಿಗಳನ್ನು ಬಳಸಿ, ಚೆಂದ ಕಾಣಬೇಕೆಂದು ಪ್ರತಿ ಹೆಣ್ಣೂ ಬಯಸುತ್ತಾಳೆ. ಅಷ್ಟಕ್ಕೂ ಅವಳ ಬಳಿ ಏನೀದ್ದರೆ ಚೆಂದ? ವಾರ್ಡ್ರೋಬ್‌ನಲ್ಲಿ ಏನಿರಬೇಕು?
ಹುಡುಗಿಯರು ಎಂದರೆ ಫ್ಯಾಷನ್ ಪ್ರಿಯರು. ಹೊಸದಾಗಿ ಬಂದ ಎಲ್ಲ ವಸ್ತುಗಳೂ ತಮ್ಮ ಬಳಿ ಇರಲೇಬೇಕು ಎಂದು ಬಯಸುತ್ತಾರೆ. ಟ್ರೆಂಡ್‌ನಲ್ಲಿರುವ ಫ್ಯಾಷನ್ ಆಕ್ಸೆಸರೀಸ್ ಇದ್ದಷ್ಟೂ ಹೆಣ್ಣಿಗೆ ಆನಂದ. ಇವುಗಳು ಪ್ರತಿಯೊಬ್ಬರ ವಾರ್ಡ್ ರೋಬ್‌ನಲ್ಲಿದ್ದರೆ ಬೆಸ್ಟ್. ಅಂಥ ವಸ್ತುಗಳು ಯಾವುವು ಇರಬೇಕು?
* ನಾಲ್ಕು ಫಿಂಗರ್ ರಿಂಗ್: ಇದೀಗ ಫ್ಯಾಷನ್ ಟ್ರೆಂಡ್ ಆಗಿದೆ. ನಾಲ್ಕು ಬೆರಳುಗಳಿಗೆ ಬೇರೆ ಬೇರೆ ಡಿಸೈನ್ ರಿಂಗ್ ಧರಿಸಬಹುದು ಅಥವಾ ನಾಲ್ಕು ಜಾಯಿಂಟ್ ಆಗಿರುವಂಥ ರಿಂಗ್ ಧರಿಸಬಹುದು. ಇದು ಹುಡುಗಿಯರಿಗೆ ಬೋಲ್ಡ್ ಲುಕ್ ನೀಡುತ್ತದೆ.
* ಸ್ಲಿಂಗ್ ಬ್ಯಾಗ್: ಇಂಥ ಬ್ಯಾಗ್ ಇಲ್ಲವೆಂದರೆ, ಸ್ಟೈಲಿಶ್ ಅಲ್ಲವೆಂದರ್ಥ. ಇದು 2018ರ ಹಾಟೆಸ್ಟ್ ಟ್ರೆಂಡ್. ಸ್ಲಿಂಗ್ ಬ್ಯಾಗ್ ಎಂದರೆ ಕತ್ತರಿಸಿದ ಲೇಯರ್‌ಗಳುಳ್ಳ ಬ್ಯಾಗ್.
* ಕ್ಲಚ್: ಕ್ಲಚ್‌ಗಳಂತೂ ಸದಾ ಟ್ರೆಂಡ್‌ನಲ್ಲಿರುತ್ತವೆ. ಡ್ರೆಸ್ ಅಥವಾ ಸೀರೆಗೆ ಮ್ಯಾಚಿಂಗ್ ಆಗುವಂತೆ ಅಥವಾ ಅದಕ್ಕೆ ಕಾಂಟ್ರಾಸ್ಟ್ ಬಣ್ಣದ ಪರ್ಸ್ ಅಥವಾ ಕ್ಲಚ್ ಇದ್ದರೆ ಉತ್ತಮ. ವೈಲ್ಡ್ ಪ್ರಿಂಟ್, ನ್ಯೂಟ್ರಲ್ ಬಣ್ಣದ ಕ್ಲಚ್ ಸ್ಟೈಲಿಶ್ ಲುಕ್ ನೀಡುತ್ತದೆ.
* ಬ್ಲೂ ಜೀನ್ಸ್ : ಜೀನ್ಸ್ ಎವರ್‌ಗ್ರೀನ್ ಔಟ್‌ಫಿಟ್. ಈ ಫ್ಯಾಷನ್ ಯಾವತ್ತೂ ಹಳೆಯದಾಗೋದಿಲ್ಲ. ಇದನ್ನು ಯಾವ ಡ್ರೆಸ್ ಟಾಪ್, ಶರ್ಟ್ ಜೊತೆಯೂ ಧರಿಸಬಹುದು.
* ಫ್ಲೋರಲ್ ಡಿಸೈನ್: ಅದು ಡ್ರೆಸ್ ಆಗಿರಲಿ ಅಥವಾ ಯಾವುದೇ ಆಕ್ಸೆಸರಿಯಾಗಲಿ ಫ್ಲೋರಲ್ ಡಿಸೈನ್ ಇದ್ದರೆ, ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಫ್ಲೋರಲ್ ಡಿಸೈನ್ ಉಳ್ಳ ವಾಚ್, ಬಳೆ , ನೆಕ್ ಪೀಸ್ ವಾವ್ ಚೆನ್ನಾಗಿರುತ್ತದೆ.
* ವೈಟ್ ಶರ್ಟ್: ವೈಟ್ ಶರ್ಟ್‌ನ್ನು ಜೀನ್ಸ್, ಪಲಾಜೋ, ಪ್ಯಾಂಟ್, ಲೆಗ್ಗಿಂಗ್ಸ್ ಅಥವಾ ಸ್ಕರ್ಟ್ ಜೊತೆಗೂ ಧರಿಸಬಹುದು. ಇದು ಸ್ಟೈಲಿಶ್ ಲುಕ್ ನೀಡುತ್ತದೆ.
* ಸನ್ ಗ್ಲಾಸಸ್: ಇದು ಪ್ರತಿಯೊಬ್ಬರ ಬಳಿಯೂ ಇರಲೇಬೇಕಾದ ಒಂದು ಮುಖ್ಯ ವಸ್ತು. ಬೀಚ್‌ಗೂ ಹೋಗುವುದಾದರೆ ಅಥವಾ ಬಿಸಿಲಿನ ಸಂದರ್ಭದಲ್ಲಿ ಇದು ಬೇಕಾಗುತ್ತದೆ. ಅಷ್ಟೇ ಅಲ್ಲ ಇದು ಹುಡುಗಿಗೆ ಫ್ಯಾಷನಬಲ್ ಲುಕ್ ನೀಡುತ್ತದೆ.
* ಸ್ಟೋಲ್: ಸಿಂಪಲ್ ಟೀ ಶರ್ಟ್, ಶರ್ಟ್ ಮತ್ತು ಕುರ್ತಾ ಸ್ಟೈಲಿಶ್ ಆಗಿ ಕಾಣಲು ಸ್ಟೋಲ್ ಟ್ರೈ ಮಾಡಬಹುದು. ಸ್ಟೋಲ್ ಸಿಂಪಲ್ ಡ್ರೆಸ್‌ಗೆ ಸ್ಟೈಲಿಶ್ ಲುಕ್ ನೀಡುತ್ತದೆ.