Asianet Suvarna News Asianet Suvarna News

Bengaluru Fashion Week:  ಮನಸು ಕದ್ದ ಮಕ್ಕಳ ರ‍್ಯಾಂಪ್ ವಾಕ್,  ಬೆಂಗಳೂರಲ್ಲಿ ಮಾಡೆಲ್ ಲೋಕ

* ದೊಡ್ಡವರ ನಡುವೆ ಆತ್ಮವಿಶ್ವಾಸದಲ್ಲಿ ಹೆಜ್ಜೆ ಹಾಕಿ ಮನಸು ಕದ್ದ ಪುಟಾಣಿ ಮಾಡೆಲ್ಸ್
* ಯಶ್ ಇಂಟರ್ ನ್ಯಾಷನಲ್ ಫ್ಯಾಷನ್ ವೀಕ್ ನಲ್ಲಿ ಮಿಸ್ಟರ್, ಮಿಸ್, ಮಿಸೆಸ್ ಮಾಡೆಲ್
*  ಪುಟಾಣಿ ಮಾಡೆಲ್ಸ್  ಮುದ್ದಾದ ರ‍್ಯಾಂಪ್ ವಾಕ್ 
* ಮಕ್ಕಳ ಹೆಜ್ಜೆಗೆ ಒಂದು ಲೈಕ್ ಕೊಡಲೇಬೇಕು

 

children s ramp walk in yash international fashion week in Bengaluru mah
Author
Bengaluru, First Published Dec 7, 2021, 2:47 AM IST

ಬೆಂಗಳೂರು(ಡಿ. 07) ಯಶ್ ಇಂಟರ್ ನ್ಯಾಷನಲ್ ಫ್ಯಾಷನ್ ವೀಕ್ ನಲ್ಲಿ (yash international fashion week in Bengaluru ) ಮಿಸ್ಟರ್, ಮಿಸ್, ಮಿಸೆಸ್ ಮಾಡೆಲ್ ಗಳ ನಡುವೆ ಪುಟಾಣಿ ಮಾಡೆಲ್ಸ್  ಮುದ್ದಾದ ರ‍್ಯಾಂಪ್ ವಾಕ್ (Ramp Walk) ನಿಂದ ನೆರೆದಿದ್ದವರ ಕಣ್ಮನ ತಣಿಸಿದರು. 

ನಗರದ ದಿ ಸಂಭ್ರಮ್ ರೂಕ್ ರೆಸಾರ್ಟ್ ನಡೆದ ಮಿಸ್ಟರ್, ಮಿಸ್, ಮಿಸೆಸ್, ಲಿಟಲ್  ಪ್ರಿನ್ಸ್, ಪ್ರಿನ್ಸೆಸ್ ಇಂಟರ್ನ್ಯಾಷನಲ್ -2021 ಫೈನಲ್ ಆವೃತ್ತಿಯಲ್ಲಿ ಕಂಡುಬಂದ ದೃಶ್ಯವಿದು.

ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಸಂಗೀತದ ಅಲೆಗೆ ತಕ್ಕಂತೆ ಎಲ್ಲಾ ಮಾಡೆಲ್ ಗಳು ಹೆಜ್ಜೆ ಹಾಕುವ ದೃಶ್ಯ ಜನರನ್ನು ಮಂತ್ರಮುಗ್ಧಗೊಳಿಸಿತು. ಎಲ್ಲ ವಯೋಮಾನದವರಿಗೂ ಈ ವೇದಿಕೆ ಮೇಲೆ ರ‍್ಯಾಂಪ್ ವಾಕ್  ಅವಕಾಶ ಮಾಡಿಕೊಟ್ಟಿತು.

ವೈವಿಧ್ಯಮಯ ವಸ್ತ್ರಗಳಲ್ಲಿ ಮುದ್ದು ಮುದ್ದಾಗಿ ಹೆಜ್ಜೆ ಇಡುತ್ತಾ ವೇದಿಗೆ ಬಂದ ಮಕ್ಕಳು (Childrens) ಸಂಗೀತದ ನಾದಕ್ಕೆ (Music) ಕ್ಕಂತೆ ಬಳುಕುವ ಹೆಜ್ಜೆ ಹಾಕಿ ವೀಕ್ಷಕರ ಮೊಗದಲ್ಲಿ ಕ್ಷಣ ಕಾಲ ನಗು ಮೂಡಿಸಿದರು. ತೀರ್ಪುಗಾರರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಯಾವುದೇ ಅಂಜಿಕೆ ಇಲ್ಲದೆ ಪಟಾಕಿ ಸಿಡಿದಂತೆ ಪಟ್ ಪಟ್ ಅಂತ ಉತ್ತರ ನೀಡುವ ಮೂಲಕ ಅವರನ್ನು ಬೆರಗುಗೊಳಿಸಿದರು. 

ಮದುವೆಯಾದ ಮೇಲೆ ಫ್ಯಾಷನ್ ಲೋಕ ನಮಗಲ್ಲ ಅದೇನಿದ್ದರೂ ತರುಣಿಯರಿಗೆ, ಬಳುಕುವ ಮೈಮಾಟ ಇರುವವರಿಗೆ ಎಂದು ತಿಳಿದ ಎಷ್ಟೋ ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ರೂಪದಲ್ಲಿ ವೇದಿಕೆ ಮೇಲೆ ಬಂದ ಮಹಿಳೆಯರು ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು. ಸಾಧನೆಗೆ ವಯಸ್ಸು ಹಾಗು ಕಪೋಕಲ್ಪಿತ ದೇಹದಾಕೃತಿ  ಬೇಕಾಗಿಲ್ಲ ಅದಕ್ಕೆ ಬೇಕಿರುವುದು ಕೇವಲ ಆತ್ಮವಿಶ್ವಾಸ ಹಾಗು ಸಾಧಿಸುವ ಛಲ ಮಾತ್ರ  ಎನ್ನುವುದನ್ನು ಈ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ  ಮಹಿಳೆಯರು ನಿರೂಪಿಸಿದರು. 

ದೆಹಲಿ, ಅಸ್ಸಾಂ, ಬಿಹಾರ, ತಮಿಳುನಾಡು, ಆಂಧ್ರಪ್ರದೇಶ.. ಹೀಗೆ ವಿವಿಧ ರಾಜ್ಯಗಳಿಂದ  ಸುಮಾರು 75ಕ್ಕೂ ಹೆಚ್ಚು ಸ್ಪರ್ಧಿಗಳು ಈ ಫ್ಯಾಷನ್ ಶೋ ಅಲ್ಲಿ ಭಾಗವಸಿದ್ದರು. 'ಕೊರೋನಾದಿಂದ ಮಂಕಾಗಿದಿದ್ದ ಫ್ಯಾಷನ್ ಲೋಕ ಮತ್ತೆ ಝಗಮಗಿಸಲು ಶುರುವಾಗಿದೆ. ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಆತಂಕದ ಮಧ್ಯೆಯೇ ಎಲ್ಲ ಸುರಕ್ಷತೆಗಳನ್ನು ಕೈಕೊಂಡು ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಇಲ್ಲಿ ಬರುತ್ತಿರುವ ಎಲ್ಲಾ ಮಕ್ಕಳ ಪೋಷಕರು ಲಸಿಕೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಂಡಿದ್ದೇವೆ' ಎನ್ನುತ್ತಾರೆ ಕಾರ್ಯಕ್ರಮ ಆಯೋಜಕರಾದ ಯಶ್.

ನಟಿಯರ ಬೋಲ್ಡ್ ಅವತಾರಗಳು.. ಒಮ್ಮೊಮ್ಮೆ ಸಂಕಷ್ಟ ತರಬಹುದು!

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಹಾಗೂ ರೂಪದರ್ಶಿ ಶುಭ ರಕ್ಷಾ, 'ಎಲ್ಲಾ ವರ್ಗದವರೂ ಭಾಗವಹಿಸುವಂತಹ ಅವಕಾಶ ಈ ಶೋ ನಲ್ಲಿ ನೀಡಲಾಗಿದೆ. ಮದುವೆಯಾದವರೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ವೇದಿಕೆ ಸಹಾಯವಾಗಲಿದೆ. ಸಾಕಷ್ಟು ಜನರ ಬದುಕಿಗೆ ಭರವಸೆಯನ್ನು ಮೂಡಿಸಲಿದೆ' ಎಂದು ಹೇಳಿದರು. 

children s ramp walk in yash international fashion week in Bengaluru mah

ವಿಜೇತರಾದವರಿಗೆ ಆಯೋಜಕ ಯಶ್ ಹಾಗೂ ಅತಿಥಿಗಳು ಕ್ರೌನ್ ತೊಡಿಸಿದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಂತೋಷ್ ರೆಡ್ಡಿ, ಸೀಮಾ ಇದ್ದರು. 

ವಿಜೇತರು: ಮಿಸ್ಟರ್ ಎಂಡ್ ಮಿಸ್ ಇಂಟರ್ನ್ಯಾಷನಲ್ ಕಿರೀಟ ಜೇಮ್ಸ್ ಪೌಲ್ ಹಾಗೂ ಎಸ್. ರೇಖಾ ಅವರಿಗೆ ಒಲಿದರೆ, ಮಿಸೆಸ್ ಇಂಟರ್ನ್ಯಾಷನಲ್ ಕಿರೀಟ ನೇಹಾ ಪಾಲಾಗಿದೆ.  ಇನ್ನು ಲಿಟಲ್ ಪ್ರಿನ್ಸ್ ಎಂಡ್ ಪ್ರಿನ್ಸೆಸ್ ಇಂಟರ್ನ್ಯಾಷನಲ್ ವಿಭಾಗದಲ್ಲಿ 3 ರಿಂದ 6 ವರ್ಷದ ಮಕ್ಕಳ ವರ್ಗದಲ್ಲಿ ಜತಿನ್ ತೇಜ್ ಹಾಗೂ ಪ್ರಾಧ್ಯಾನ್ಯಗೆ ಕಿರೀಟ ಲಭಿಸಿದರೆ, 7 ರಿಂದ 12 ವರ್ಷದ ವರ್ಗದಲ್ಲಿ ಮೋಕ್ಷ್ ಹಾಗೂ ಮೋನಿಷಾ ಮುಡಿಗೇರಿದೆ ಕಿರೀಟ. ಮಿಸ್ ಟೀನ್ ಇಂಟರ್ನ್ಯಾಷನಲ್ ಕಿರೀಟ ಧಾತ್ರಿ ಅವರಿಗೆ ಒಲಿದಿದೆ.

 

 

Follow Us:
Download App:
  • android
  • ios