#IndependenceDay ಸ್ವಾತಂತ್ರೋತ್ಸವಕ್ಕೆ ನಿಮ್‌ ಸ್ಟೈಲ್‌ ಹೇಗಿರ್ಬೇಕು, ಇಲ್ಲಿದೆ ಟಿಪ್ಸ್‌

ಸ್ವಾತಂತ್ರ್ಯೋತ್ಸವ ದಿನ ನಮ್ಮ ಉಡುಗೆ ತೊಡುಗೆಯಲ್ಲಿ ರಾಷ್ಟ್ರಪ್ರೇಮ ಎದ್ದು ಕಾಣುವಂತಿದ್ದರೆ ನಮ್ಮ ಸಂತಸ ಹೆಚ್ಚುವ ಜೊತೆಗೆ ಅದು ಇನ್ನೊಬ್ಬರಿಗೂ ಸ್ಫೂರ್ಥಿಯಾಗುತ್ತೆ. ತ್ರಿವರ್ಣವನ್ನಿಟ್ಟುಕೊಂಡು ಆ ದಿನದ ನಮ್ಮ ಡ್ರೆಸ್‌ ಅಕ್ಸೆಸರೀಸ್‌ಅನ್ನು ಹೇಗೆ ಸೆಟ್‌ ಮಾಡಬಹುದು ಅನ್ನೋ ಐಡಿಯಾಗಳು ಇಲ್ಲಿವೆ.

Celebrate independence day with your own style

ಸ್ವಾತಂತ್ರ್ಯೋತ್ಸವಕ್ಕೆ ಒಂದು ಘನತೆ ಇದೆ. ಅದರ ಹಿಂದೆ ದೊಡ್ಡ ಕಥೆ ಇದೆ, ಬಲಿದಾನ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಇಂದು ಇಷ್ಟು ನೆಮ್ಮದಿಯಾಗಿ ಬದುಕ್ತಿದ್ದೀವಿ ಅಂದರೆ ಅದಕ್ಕೆ ಕಾರಣ ನಮ್ಮ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ. ಈ ದಿನವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಬೇಕು. ನಮ್ಮ ಉಡುಗೆ ತೊಡುಗೆಯಲ್ಲಿ ರಾಷ್ಟ್ರಪ್ರೇಮ ಎದ್ದು ಕಾಣುವಂತಿದ್ದರೆ ನಮ್ಮ ಸಂತಸ ಹೆಚ್ಚುವ ಜೊತೆಗೆ ಅದು ಇನ್ನೊಬ್ಬರಿಗೂ ಸ್ಫೂರ್ತಿಯಾಗುತ್ತೆ. ಹೆಚ್ಚಿನವರು ಈ ದಿನ ಧ್ವಜಾರೋಹಣದಲ್ಲಿ ಭಾಗವಹಿಸೋದು, ದೇಶಭಕ್ತಿ ಗೀತೆ ಹಾಡೋದು, ಕೇಳೋದು, ದೇಶಭಕ್ತಿಯ ಸಿನಿಮಾಗಳನ್ನು ನೋಡೋದು ಇಂಥವೆಲ್ಲ ಮಾಡ್ತಾರೆ. ಇದು ನಮ್ಮ ದೇಶಪ್ರೇಮವನ್ನು ಉದ್ದೀಪಿಸುವ ಹಾಗಿರುತ್ತದೆ. ಸ್ವಾತಂತ್ರೋತ್ಸವ ಹತ್ತಿರ ಬರುತ್ತಿರುವ ಈ ಹೊತ್ತಲ್ಲಿ ಮೊದಲು ಆ ದಿನ ನಮ್ಮ ಔಟ್‌ಫಿಟ್‌ ಹೇಗಿರಬೇಕು ಅಂತ ನಿರ್ಧರಿಸುವ ಕೆಲಸ ಈಗಲೇ ಆಗಬೇಕು. ತ್ರಿವರ್ಣವನ್ನಿಟ್ಟುಕೊಂಡು ಆ ದಿನದ ನಮ್ಮ ಡ್ರೆಸ್‌, ಅಕ್ಸೆಸರೀಸ್‌ಅನ್ನು ಹೇಗೆ ಸೆಟ್‌ ಮಾಡಬಹುದು ಅನ್ನೋ ಐಡಿಯಾಗಳು ಇಲ್ಲಿವೆ.

1. ಕೇಸರಿ ಕುರ್ತಾದಲ್ಲಿ ಸಂಭ್ರಮಿಸಿ

ಕೇಸರಿ ಅಥವಾ ಆರೆಂಜ್‌ ಬಣ್ಣದ ಕುರ್ತಾ ಸ್ವಾತಂತ್ರ್ಯ ದಿನಕ್ಕೆ ಬೆಸ್ಟ್ ಆಯ್ಕೆ. ತುಂಬು ಕೊರಳಿನ ಅಂದರೆ ಕ್ಲೋಸ್ಡ್ ನೆಕ್ ಡಿಸೈನ್‌, ಮ್ಯಾನ್‌ಡ್ರೈನ್‌ ನೆಕ್‌ ವಿನ್ಯಾಸದ ಕುರ್ತಿಗಳು ಬೆಸ್ಟ್‌. ಈ ಕುರ್ತಾಗೆ ಪ್ಲೇನ್‌ ಬಿಳಿ ಬಣ್ಣದ ಬಾಟಮ್‌ ಇರಲಿ. ಹಸಿರು ಬಣ್ಣದ ದುಪ್ಪಟ್ಟಾ ಇದ್ರೆ ಪರ್ಫೆಕ್ಟ್‌ ಕಾಂಬಿನೇಶನ್‌. ಇದರ ಜೊತೆಗೆ ಟ್ರೈ ಕಲರ್‌ ಅಥವಾ ತ್ರಿವರ್ಣದ ಬಣ್ಣದ ಯಿಯರ್‌ ರಿಂಗ್‌ ಹಾಕ್ಕೊಳಬಹುದು. ಕೈಗಳಿಗೆ ಬ್ಯಾಂಡ್ ಹಾಕ್ಕೊಂಡರೂ ಚಂದ. ಹಾಕ್ಕೊಳ್ಳದೇ ಹಾಗೇ ಸಿಂಪಲ್ಲಾಗಿದ್ರೂ ಓಕೆ.

ಪ್ರಿಯಾಂಕ ಧರಿಸಿದ ಫ್ಲೋರಲ್ ಪ್ರಿಂಟ್ ಶರ್ಟ್, ಪ್ಯಾಂಟ್‌ಗೆ 70 ಸಾವಿರ..!

2. ಬಿಳಿ ಕೊಕ್ಕರೆ ಬಣ್ಣದ ಪ್ಲೇನ್‌ ಕುರ್ತಾ 

ಸ್ವಾತಂತ್ರೋತ್ಸವದಂದು ಹೆಚ್ಚಿನವರು ಧರಿಸೋ ಕುರ್ತಾ ಶುಭ್ರ ಬಿಳಿ ಬಣ್ಣದ್ದು. ಪರಿಶುದ್ಧತೆಯ ಪ್ರತೀಕದ ಹಾಗಿರುವ ಈ ಕುರ್ತಾವನ್ನು ನಿಮಗೆ ಬೇಕಾದ ಕಾಂಬಿನೇಶನ್‌ನಲ್ಲಿ ಧರಿಸಬಹುದು. ಬಿಳಿ ಕುರ್ತಾದ ಮೇಲ್ಭಾಗ ತ್ರಿವರ್ಣದ ಸ್ಟಿಕ್ಕರ್ ಅಂಟಿಸಿದರೆ ಚೆನ್ನ. ಇದಕ್ಕೆ ಆರೆಂಜ್‌ ತ್ರೀಫೋರ್ತ್ ಅಥವಾ ಲೆಗ್ಗಿಂಗ್ಸ್‌ ಧರಿಸಿ, ಹಸಿರು ದುಪ್ಪಟ್ಟ ಧರಿಸಿದ್ರೆ ಚೆನ್ನಾಗಿರುತ್ತೆ. ಇನ್ನೂ ಡಿಫರೆಂಟ್ ಕಾಣಬೇಕು ಅಂದ್ರೆ ತಲೆಯಿಂದ ಕಾಲಿನವರೆಗೂ ಬಿಳಿಯ ಡ್ರೆಸ್, ಅಕ್ಸೆಸರೀಸ್ ಧರಿಸಿ. ಅಥವಾ ನೀವು ಅಚ್ಚ ಬಳಿಯ ಕುರ್ತಾ, ಅದೇ ಬಣ್ಣದ ಪ್ಯಾಂಟ್‌ಗೆ ತ್ರಿವರ್ಣದ ದುಪ್ಪಟ್ಟಾ ಧರಿಸಿದರೂ ಸಖತ್. ಇದರ ಬದಲಿಗೆ ಬಿಳಿಗೆ ಕಾಂಬಿನೇಶನ್‌ ಆಗಿ ಹಸಿರು ಅಥವಾ ಕೆಸರಿ ದುಪ್ಪಟ್ಟಾವನ್ನೂ ಧರಿಸಬಹುದು.

ಒಲಿಂಪಿಕ್ಸ್ ಕಿವಿಯೋಲೆ: ಮೀರಾಬಾಯಿಗೆ ಅಮ್ಮನ ಗಿಫ್ಟ್

3. ಹಸಿರಿನ ಖಾದಿ ಕುರ್ತಾವೂ ಚೆಂದ

ಸ್ವಾತಂತ್ರೋತ್ಸವದಂದು ಖಾದಿ ಬಟ್ಟೆ ಧರಿಸೋದೂ ಅರ್ಥಪೂರ್ಣ. ಏಕೆಂದರೆ ಖಾದಿ ಸ್ವಾತಂತ್ರ್ಯ ಹೋರಾಟದ ದಿನಗಳನ್ನು ನೆನಪಿಸುವ ಬಟ್ಟೆ. ಹಸಿರು ಬಣ್ಣದ ಖಾದಿ ಕುರ್ತಾಗೆ ಎಲಿಗೆಂಟ್‌ ಲುಕ್‌ ಇದೆ. ಇದಕ್ಕೆ ಮ್ಯಾಚಿಂಗ್‌ ಆಗಿ ಪಲಾಝೋ ಪ್ಯಾಂಟ್‌ ತೊಟ್ಟರೆ ಸುಂದರವಾಗಿರುತ್ತೆ. ಬಿಳಿ ಬಣ್ಣದ ಪಲಾಝೋ ನಿಮಗೆ ಗ್ರೇಟ್‌ ಲುಕ್‌ ನೀಡಬಹುದು. ಇದಕ್ಕೆ ಟ್ರೆಡಿಶನಲ್‌ ಜ್ಯುವೆಲ್ಲರಿ ಧರಿಸಿ. ಮಣ್ಣಿನ ಯಿಯರ್‌ ರಿಂಗ್‌, ಕೊಲ್ಹಾಪುರಿ ಇಯರ್‌ರಿಂಗ್‌ಗಳು ಅದ್ಭುತ ಲುಕ್‌ ನೀಡುತ್ತವೆ. 

4. ಕುರ್ತಾ ಇಷ್ಟ ಇಲ್ಲದಿದ್ರೆ ಕ್ರಾಪ್‌ಟಾಪ್‌ 

ಯಾಕೋ ಕುರ್ತಾ ಧರಿಸೋದು ಬೋರು, ಪ್ರತೀ ಸಲ ಸ್ವಾತಂತ್ರೋತ್ಸವಕ್ಕೂ ಬರೀ ಕುರ್ತಾ ಧರಿಸೋದೇ ಆಯ್ತು. ಈ ಸಲ ಡಿಫರೆಂಟಾಗಿ ಸ್ಟೈಲ್‌ ಮಾಡಬೇಕು ಅಂದುಕೊಂಡರೆ ನೀವು ಕ್ರಾಪ್‌ ಟಾಪ್‌ ಧರಿಸಬಹುದು. ಈ ಕ್ರಾಪ್‌ಟಾಪ್‌ ಬಿಳಿ ಬಣ್ಣದಲ್ಲಿರಲಿ. ಇದಕ್ಕೆ ಕಾಂಬಿನೇಶನ್‌ ಆಗಿ ಹಸಿರು ಬಣ್ಣದ ಸ್ಕರ್ಟ್‌ ತೊಡಿ. ಇನ್ನೂ ಒಂಚೂರು ಜೀವ ತುಂಬಬೇಕು ಅನಿಸಿದ್ರೆ ಪ್ಯೂಜನ್‌ ಥರ ಯಿಯರ್‌ ರಿಂಗ್‌ ಧರಿಸಿ. ಇದರ ಜೊತೆಗೆ ಕೇಸರಿ ಬಣ್ಣದ ದುಪ್ಪಟ್ಟಾ ಧರಿಸಬಹುದು.  

100 ಕೆಜಿ ಲೆಹಂಗಾ ಧರಿಸಿದ ವಧು..! ಸ್ಟೇಜ್ ತುಂಬಾ ಹರಡಿತ್ತು ದುಬಾರಿ ಬಟ್ಟೆ

ಹೀಗೆ ನೀವು ಪ್ರಿಂಟೆಡ್‌ ಕುರ್ತಾವನ್ನೂ ಧರಿಸಬಹುದು. ಅದು ಆರೆಂಜ್‌ ಬಣ್ಣದಲ್ಲಿದ್ರೆ ಟೈಮ್ಲಿ ಅನಿಸಿಕೊಳ್ಳುತ್ತೆ. ಆದರೆ ಒಂದಂತೂ ಗಮನದಲ್ಲಿರಲಿ. ಸ್ವಾತಂತ್ರ್ಯವನ್ನು ಹೆಚ್ಚು ದಿನಗಳಿಲ್ಲ. ಈ ವೀಕೆಂಡ್‌ ಶಾಪಿಂಗ್‌ ಮಾಡದಿದ್ರೆ ಕೊನೇ ಕ್ಷಣದಲ್ಲಿ ಗಡಿಬಿಡಿ ಆಗಬಹುದು. ಮುಂಚಿತವಾಗಿ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ನಿಮ್ಮ ಈ ಬಾರಿ ಸೆಲೆಬ್ರೇಶನ್‌ ಅರ್ಥಪೂರ್ಣವಾಗಿದ್ದು, ಖುಷಿ ಹೆಚ್ಚಿಸಲಿ. 

Latest Videos
Follow Us:
Download App:
  • android
  • ios