ಒಲಿಂಪಿಕ್ಸ್ ಕಿವಿಯೋಲೆ: ಮೀರಾಬಾಯಿಗೆ ಅಮ್ಮನ ಗಿಫ್ಟ್

  • ಮೀರಾಬಾಯಿ ಕಿವಿಯೋಲೆ ಡಿಸೈನ್ ವೈರಲ್
  • ಒಲಿಂಪಿಕ್ಸ್ ವಿನ್ಯಾಸದ ಕಿವಿಯೋಲೆ ಅಮ್ಮನ ಗಿಫ್ಟ್
Mirabai Chanu wore Olympic rings-shaped earrings gifted by mother at Tokyo Olympics dpl

ದೆಹಲಿ(ಜು.24): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿಯನ್ನು ಕಂಡಾಗ ಐತಿಹಾಸಿಕ ಬೆಳ್ಳಿ ಪದಕ ಮತ್ತು ಮನಸೋಲಿಸುವ ನಗು ಮಾತ್ರ  ಗಮನ ಸೆಳೆಯೋದಲ್ಲ. ಆಕೆಯ ಸುಂದರವಾದ ಕಿವಿಯೋಲೆ ಕೂಡಾ ಈಗ ನೆಟ್ಟಿಗೆ ಮನಸು ಗೆದ್ದಿದೆ. ಫ್ಯಾಷನ್ ಪ್ರಿಯರ ಕಣ್ಣು ನೆಟ್ಟಿದ್ದು ಮೀರಾಬಾಯಿಯ ಕಿವಿಯೋಲೆ ಮೇಲೆ.

5 ವರ್ಷದ ಹಿಂದೆ ತನ್ನ ಒಡವೆಯನ್ನು ಮಾರಿ ಮಗಳಿಗಾಗಿ ಒಲಿಂಪಿಕ್ಸ್ ಶೇಪ್‌ನ ಚಿನ್ನದ ಕಿವಿಯೋಲೆ ಖರೀದಿಸಿ ಉಡುಗೊರೆ ಕೊಟ್ಟಿದ್ದರು ಮೀರಾಬಾಯಿ ಅಮ್ಮ. ಈ ಕಿವಿಯೋಲೆ ಮಗಳಿಗೆ ಅದೃಷ್ಟ ತಂದುಕೊಡುತ್ತೆ ಎಂದು ನಂಬಿದ್ದರು ತಾಯಿ.

ಇದು 2016ರ ರಿಯೋ ಗೇಮ್ಸ್‌ನಲ್ಲಿ ನಡೆಯಲಿಲ್ಲ. ಆದರೆ ಅಮ್ಮನ ನಂಬಿಕೆ ಸುಳ್ಳಾಗಲಿಲ್ಲ. ಮೀರಾಬಾಯಿ ಭಾರತವೇ ಹೆಮ್ಮೆ ಪಡುವಂತೆ ಬೆಳ್ಳಿ ಪದಕ ಗೆದ್ದೇ ಬಿಟ್ಟರು.

ಟೋಕಿಯೋ ಒಲಿಂಪಿಕ್ಸ್‌ ಪದಕದವರೆಗೆ ಮಿರಾಬಾಯಿ ಚಾನು ಪಯಣ; ಚಿತ್ರಪಟಗಳಲ್ಲಿ

ನಾನು ಕಿವಿಯೋಲೆಗಳನ್ನು ಟಿವಿಯಲ್ಲಿ ನೋಡಿದೆ. ನಾನು ಅದನ್ನು 2016ರಲ್ಲಿ ರಿಯೋ ಒಲಿಂಪಿಕ್ಸ್‌ಗೂ ಮುನ್ನ ನೀಡಿದ್ದೆ. ನನ್ನ ಇದ್ದ ಒಡವೆ ಮಾರಿ, ನನ್ನ ಸಂಪಾದನೆಯನ್ನು ಒಟ್ಟು ಸೇರಿಸಿ ಅದೃಷ್ಟ ಮತ್ತು ಯಶಸ್ಸನ್ನು ತಂದುಕೊಡೋ ಆ ಕಿವಿಯೋಲೆಯನ್ನು ಆಕೆಗೆ ಉಡುಗೊರೆ ಕೊಟ್ಟಿದ್ದೆ ಎನ್ನುತ್ತಾರೆ ಓಂಗ್ಬೀ ಟೋಂಬಿ ಲೀಮಾ. ಮೀರಾ ಪದಕ ಗೆಲ್ಲುವಾಗ ಅದನ್ನು ನೋಡಿ ಖುಷಿಯಾಯಿತು ಎಂದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಸೈಕೋಮ್‌ ಮೀರಾಬಾಯಿ ಚಾನು

ಚನು ಅವರು ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮೀರಾಬಾಯಿ ಚಾನು, ಕರ್ಣಂ ಮಲ್ಲೇಶ್ವರಿ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ವೇಟ್‌ಲಿಫ್ಟರ್‌.

Latest Videos
Follow Us:
Download App:
  • android
  • ios