Asianet Suvarna News Asianet Suvarna News

ಅಬ್ಬಬ್ಬಾ..ಜನನಾಂಗಕ್ಕೂ ಟ್ಯಾಟೂ ಹಾಕಿಸಿಕೊಂಡ ಮಹಿಳೆ!

ಟ್ಯಾಟೂ ಹಾಕಿಸಿಕೊಳ್ಳುವುದನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಕೈ, ಕಾಲು, ಎದೆಯ ಮೇಲೆ, ಬೆನ್ನಿನ ಮೇಲೆಲ್ಲಾ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಇದೆಲ್ಲಕ್ಕಿಂತ ವಿಚಿತ್ರವಾಗಿ ಜನನಾಂಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಅರೆ ಏನಿದು ವಿಚಿತ್ರ ಅನ್ಬೇಡಿ. ಹೆಚ್ಚಿನ ಮಾಹಿತಿ ಇಲ್ಲಿದೆ. 

Britains Most Tattooed Woman Becky Holt Sets New Record Vin
Author
Bengaluru, First Published Aug 9, 2022, 2:28 PM IST

ಟ್ಯಾಟೂ ಎಂದರೆ ಇತ್ತೀಚೆಗೆ ಯುವಕರು ಮಾತ್ರವಲ್ಲ ಹಿರಿಯರಲ್ಲೂ ಕ್ರೇಜ್ ಮೂಡಿಸುತ್ತಿದೆ. ಕೈ, ತೋಳು, ಕಾಲು, ಎದೆಯ ಮೇಲೆ, ಬೆನ್ನಿನ ಮೇಲೆಲ್ಲಾ ಟ್ಯಾಟೂ ಹಾಕಿಕೊಳ್ಳುತ್ತಾರೆ. ಟ್ಯಾಟೂ ಹುಚ್ಚು ಹೆಚ್ಚಾಗಿರುವ ಕೆಲವರು ಮೈಯಲ್ಲಿ ಒಂದು ಇಂಚು ಜಾಗ ಬಿದೇ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಕೆಲವರು ತಮ್ಮ ಹೆಸರು, ಪ್ರೀತಿ ಪಾತ್ರರ ಹೆಸರು ಇಲ್ಲವೇ ತಮ್ಮಿಷ್ಟದ ಡಿಸೈನ್‍ಗಳ ಟ್ಯಾಟೂ ಹಾಕಿಸಿಕೊಂಡರೆ, ಇನ್ನು ಕೆಲವರು ದೇವರ ದೊಡ್ಡ ದೊಡ್ಡ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ನಟಿ ಟ್ಯಾಟೂ ಹಾಕಿಸಿಕೊಂಡಿರುವ ಜಾಗವನ್ನು ನೋಡಿದ್ರೆ ಎಲ್ಲರೂ ಹುಬ್ಬೇರಿಸುವುದು ಗ್ಯಾರೆಂಟಿ.

ಜನನಾಂಗಕ್ಕೂ  ಸ್ವಲ್ಪವೂ ಜಾಗ ಬಿಡದೇ ಟ್ಯಾಟೂ ಹಾಕಿಸಿಕೊಂಡ ಮಹಿಳೆ !
ಜನರು ಕೈ, ಬೆನ್ನಿನ ಮೇಲೆ ತಮ್ಮ ಪ್ರೇಮಿಯ ಹೆಸರನ್ನೋ ಅಥವಾ ಇಷ್ಟದ ಚಿತ್ರವನ್ನೋ ಟ್ಯಾಟೂ ಹಾಕಿಸಿಕೊಳ್ಳುವುದು ಸಾಮಾನ್ಯ. ಆದರೆ ಬ್ರಿಟನ್‌ ಮಹಿಳೆ (Woman) ಬೆಕ್ಕಿ ಹಾಲ್ಟ್‌ ತಮ್ಮ ಜನನಾಂಗಕ್ಕೂ ಟ್ಯಾಟೂ ಹಾಕಿಸಿಕೊಂಡು ಹೊಸ ದಾಖಲೆ ಸೃಷ್ಟಿಸಿದ್ದಾಳೆ. ಬ್ರಿಟನ್‍ನ 34 ವರ್ಷದ ಹಾಲಿವುಡ್ ನಟಿ ಬೆಕಿ ಹಾಲ್ಟ್ ತನ್ನ ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಈ ಮೂಲಕ ದಾಖಲೆ ಸೃಷ್ಟಿಸಿದ್ದಾಳೆ. ಆಕೆ ಎಷ್ಟರ ಮಟ್ಟಿಗೆ ಟ್ಯಾಟೂ ಪ್ರೇಮಿ ಎಂದರೇ ತನ್ನ ಖಾಸಗಿ ಅಂಗವಾದ ಜನನಾಂಗಕ್ಕೂ  ಸ್ವಲ್ಪವೂ ಜಾಗ ಬಿಡದೇ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಈ ಮೂಲಕ ಬೆಕಿ ಹಾಲ್ಟ್ ಹೊಸ ದಾಖಲೆ (New Record)ಯನ್ನು ಸ್ಥಾಪಿಸಿದ್ದಾಳೆ. ಹಚ್ಚೆ ಕಲಾವಿದರು ಸೂಕ್ಷ್ಮ ಪ್ರದೇಶದಲ್ಲಿ ಟ್ಯಾಟೂ ವಿನ್ಯಾಸ (Design)ವನ್ನು ಪೂರ್ಣಗೊಳಿಸಲು ಐದು ಪ್ರತ್ಯೇಕ ಅವಧಿಗಳನ್ನು ತೆಗೆದುಕೊಂಡರು.

ಅರೆ ಇದೆಂಥಾ ವಿಚಿತ್ರ, ಆಕಾರ ಬದಲಾಯಿಸುತ್ತೆ ಟ್ಯಾಟೂ !

 
 
 
 
 
 
 
 
 
 
 
 
 
 
 

A post shared by Becky Holt (@becky_holt_bolt)

 

33 ಲಕ್ಷಕ್ಕೂ ಹೆಚ್ಚಿನ ಹಣ ವ್ಯಯಿಸಿ ಟ್ಯಾಟೂ
34 ವರ್ಷದ ಈಕೆ ಸುಮಾರು 33 ಲಕ್ಷಕ್ಕೂ ಹೆಚ್ಚಿನ ಹಣ ವ್ಯಯಿಸಿ ಅಡಿಯಿಂದ ಮುಡಿವರೆಗೂ ಟ್ಯಾಟೂ ಹಾಕಿಸಿಕೊಂಡು ದಾಖಲೆ ಸ್ಥಾಪಿಸಿದ್ದಾಳೆ. ಬೆಕಿ ಹಾಲ್ಟ್ಗೆ ಅವರು ದೇಹ (Body) ಪೂರ್ತಿ ಟ್ಯಾಟೂ ಹಾಕಿಸಿಕೊಳ್ಳಲು ಒಂದು ವರ್ಷ ಸಮಯವನ್ನು ತೆಗೆದುಕೊಂಡಿದ್ದಾಳೆ ಎಂದು ಅವರೇ ಹೇಳಿಕೊಂಡಿದ್ದಾಳೆ. ಈಕೆ ಇದಕ್ಕಾಗಿ 42 ಸಾವಿರ ಡಾಲರ್ (ಸುಮಾರು 33.33 ಲಕ್ಷ ರೂಪಾಯಿ) ಖರ್ಚು ಮಾಡಿದ್ದಾಳಂತೆ.

ಹಾಲ್ಟ್ ಪ್ರಕಾರ, ತನ್ನ ಯೋನಿ ಮಡಿಕೆಗಳನ್ನು ಹಚ್ಚೆ ಹಾಕಿಸಿಕೊಂಡ ವಿಶ್ವದ ಕೆಲವೇ ಮಹಿಳೆಯರಲ್ಲಿ ಅವಳು ಒಬ್ಬಳು, ಮತ್ತು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದಂತೆ ಅಹಿತಕರ ಕಾರ್ಯವಿಧಾನದ ಮೂಲಕ ಸತತವಾಗಿ ಶ್ರಮಿಸಿದ್ದಕ್ಕಾಗಿ ಅಭಿಮಾನಿಗಳು ಅವಳನ್ನು ಹೊಗಳಿದ್ದಾರೆ. ಹಾಲ್ಟ್ ಅವರು ಟ್ಯಾಟೂ ಪಾರ್ಲರ್‌ಗೆ ಭೇಟಿ ನೀಡಿದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ (Social media) ಹಂಚಿಕೊಂಡಿದ್ದಾಳೆ. ಆಕೆ ಯಾವ ವಿನ್ಯಾಸವನ್ನು ತನ್ನ ಯೋನಿಯ ಮೇಲೆ ಶಾಶ್ವತವಾಗಿ ಅಂಟಿಸಲು ನಿರ್ಧರಿಸಿದ್ದಾಳೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದಳು.

ನಾಲಗೆಗೆ ಕತ್ತರಿ ಎದೆಗೆ ಸರ್ಜರಿ: ಈ ಟ್ಯಾಟೂ ಲೇಡಿ ದೇಹದಲ್ಲಿ ಜಾಗ ಇಲ್ಲ ಖಾಲಿ

ಟ್ಯಾಟೂ ಹಾಕಿಸಿಕೊಳ್ಳುವಾಗ ತುಂಬಾ ನೋವಾಯಿತು ಎಂದ ಬೆಕಿ
ಈ ಬಗ್ಗೆ ಹೇಳಿಕೊಂಡಿರುವ ಬೆಕಿ, ಜನನಾಂಗಕ್ಕೆ ನಾನು ಟ್ಯಾಟೂ ಹಾಕಿಸಿಕೊಳ್ಳುವಾಗ ತುಂಬಾ ಅಂದರೆ ತುಂಬಾ ನೋವಾಯಿತು. ಜೀವವೇ ಹೋದ ಅನುಭವವಾಯಿತು. ಆದರೆ ಜಗತ್ತಿನ ಕೆಲವೇ ಕೆಲವು ಮಹಿಳೆಯರು ಈ ಸಾಹಸ ಮಾಡುತ್ತಾರೆ. ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡಿರುವ ನಾನು ಆ ಜಾಗದಲ್ಲಿ ಬಿಟ್ಟರೆ ಅದು ದಾಖಲೆ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಷ್ಟೇ ನೋವಾದರೂ ಸಹಿಸಿಕೊಂಡು ತೀರಾ ಸೂಕ್ಷ್ಮಭಾಗದಲ್ಲಿಯೂ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದಿದ್ದಾಳೆ.

ಆ ಒಂದು ಭಾಗಕ್ಕೆ ಹಚ್ಚೆ ಹಾಕುವಾಗ ಐದು ಬಾರಿ ವಿಶ್ರಾಂತಿ ತೆಗೆದುಕೊಂಡೆ. ಶ್ರಮಪಟ್ಟು ಅಂತೂ ಇಂತೂ ಯಶಸ್ವಿಯಾಗಿ ಟ್ಯಾಟೂ ಹಾಕುವ ಕಾರ್ಯ ಪೂರ್ಣಗೊಂಡಿತು ಎಂದಿದ್ದಾಳೆ. ತಾವು ಟ್ಯಾಟೂ ಹಾಕಿಸಿಕೊಂಡಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ದಾಖಲೆಯನ್ನು ಬರೆದಿದ್ದಾಳೆ. ಯೋನಿಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಕ್ಕಾಗಿ ನಾನು ಎಷ್ಟು ಧೈರ್ಯಶಾಲಿ ಎಂದು ಜನರು ನಂಬುವುದಿಲ್ಲಎಂದು ಆಕೆ ಹೇಳಿದಳು. ಪ್ರಪಂಚದಲ್ಲಿ ಎಷ್ಟು ಜನರು ಈ ಹಚ್ಚೆ ಹೊಂದಿದ್ದಾರೆಂದು ನನಗೆ ಖಚಿತವಿಲ್ಲ, ಆದರೆ ನಾನು ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬನಾಗಿದ್ದೇನೆ ಎಂದು ನಾನು ಊಹಿಸುತ್ತೇನೆ ಎಂದು ಬೆಕಿ ಹಾಲ್ಟ್ಗೆ ತಿಳಿಸಿದ್ದಾಳೆ.

Follow Us:
Download App:
  • android
  • ios