Asianet Suvarna News Asianet Suvarna News

ರಿಬ್ಬನ್‌ನಂಥಾ ಬಟ್ಟೆಚೂರು: 'ಸಾಶ್‌' ಫ್ಯಾಷನ್‌ ಟ್ರೆಂಡ್‌ ಶುರು ಮಾಡಿದ ತಾರೆಯರು!

ಕೊರೋನ ಹವಾ ಹೆಚ್ಚಿ ಚಿಕ್‌ ಚಿಕ್ಕ ಮಕ್ಕಳೆಲ್ಲ ಮನೆಯಲ್ಲೇ ಕವಾ ಕವಾ ಅನ್ತಿರೋ ಹೊತ್ತಿಗೆ ಸಾಶ್‌ ಅನ್ನೋ ಸ್ಟೈಲ್‌ ವೈರಸ್‌ಗಿಂತ ಪಾಸ್ಟ್‌ ಆಗಿ ಹಬ್ಬುತ್ತಿದೆ. ಒಂದು ಅಂಗೈ ಅಗಲದ ರಿಬ್ಬನ್‌ ಒಂದು ಜನರೇಶನ್‌ನ ಟ್ರೆಂಡ್‌ ಸೆಟ್ಟರ್‌ ಆಗಿ ಮಿಂಚುತ್ತಿರೋದು ಸದ್ಯ ಸಣ್‌ ಸುದ್ದಿಯಾಗಿ ಏನೂ ಉಳಿದಿಲ್ಲ.

Bollywood actress in Sash fashion trend of 2020
Author
Bangalore, First Published Mar 12, 2020, 9:39 AM IST

 ನಿಶಾಂತ ಕಮ್ಮರಡಿ

ನಿಮ್ಮ ಬಾಲ್ಯ ನೆನಪಿಸಿಕೊಳ್ಳಿ. ಇನ್ನೂ ಬೇಸಿಕ್‌ ಸೆಟ್ಟೂಅಷ್ಟಾಗಿ ಬಳಕೆಯಲ್ಲಿಲ್ಲ ಆ ಕಾಲದಲ್ಲಿ ಬೆಳಗಾತ ಪೇಪರ್‌ ಓದೋದು, ಟಿವಿ ನೋಡೋ ಖಯಾಲಿ ಹೆಚ್ಚೇ ಇತ್ತು. ಹಾಗಿದ್ದ ಒಂದು ದಿನ ಪ್ರಿಯಾಂಕ ಚೋಪ್ರಾ ವಿಶ್ವ ಸುಂದರಿಯಾದ ಸುದ್ದಿ ಬರುತ್ತೆ. ಮಿರ ಮಿರ ಮಿಂಚುವ ಗೌನ್‌ ತೊಟ್ಟು ನಸು ನಗುತ್ತಿದ್ದ ಪ್ರಿಯಾಂಕಾ ಚೋಪ್ರಾ ಅನ್ನುವ ನಸುಗಪ್ಪಿನ ಸುಂದರಿಗೆ ತಲೆಗೆ ನೀಲಿ ಹರಳಿನ ಕಿರೀಟ ತೊಡಿಸಿ ಜನಿವಾರದ ಥರ ರಿಬ್ಬನ್‌ ಅನ್ನು ಭುಜದ ಒಂದು ಬದಿಯಿಂದ ಇಳಿಬಿಟ್ಟಾಗ ಝಗ್ಗನೆ ಮಿನುಗುವ ಫ್ಲ್ಯಾಶ್‌! ಬಹುಶಃ ಆಗ ಅವಳ ಸೌಂದರ್ಯವನ್ನೂ, ಮೋಹಕ ಕಿರೀಟವನ್ನೂ ಕಣ್ಣು ಬಾಯಿ ಬಿಟ್ಟು ನೋಡುವ ನಮ್ಮ ನಿಮ್ಮಂಥವರಿಗೆ, ಭುಜದಿಂದ ಇಳಿಬಿಟ್ಟಆ ರಿಬ್ಬನ್‌ನೆಡೆಗೆ ಲುಕ್‌ ಹೋಗೋದು ಕಡಿಮೆ. ಆದರೆ ಈ ರಿಬ್ಬನ್‌ ಇಲ್ಲದೇ ವಿಶ್ವಸುಂದರಿಯ ಬಗ್ಗೆ ಚಿಂತಿಸಿ. ಒಂದು ಕಂಪ್ಲೀಟ್‌ನೆಸ್‌ ಕಾಣಲ್ಲ. ಫ್ಯಾಶನ್‌ನಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೂ ಎಷ್ಟುಮಹತ್ವ ಇರುತ್ತೆ ಅನ್ನೋದು ಇದರಿಂದ ಸಾಬೀತಾಗುತ್ತೆ.

ಮೊಗ್ಗಿನ ಜಡೆಯಲ್ಲಿ ನೋಡವಳಂದಾವ, ಡಿಫರೆಂಟ್ ಡಿಸೈನ್ಸ್‌ ಇಲ್ಲಿವೆ ಕಾಣ!

ಈಗ ವಿಷ್ಯ ಅದಲ್ಲ, ಏನೂ ಅಲ್ದೇ ಇದ್ದ ಆ ಚಿಕ್ಕ ರಿಬ್ಬನ್‌ ಹೇಗೆ ಒಂದು ಫ್ಯಾಶನ್‌ ಟ್ರೆಂಡ್‌ ಆಗಿ ಹವಾ ಎಬ್ಬಿಸುತ್ತಿದೆ ಅನ್ನೋದರ ಬಗ್ಗೆ. ವಿಶ್ವ ಸುಂದರಿಯ ಭುಜವನ್ನು ಬಳಸಿ ನಡುವನ್ನು ಸವರುವ ಅದೇ ರಿಬ್ಬನ್‌ಗೆ ಸ್ಟೈಲಿಶ್‌ ಆಗಿ ಸಾಶ್‌ ಅಂತಾರೆ. ಈ ಪುಟಾಣಿ ವಸ್ತ್ರದ ವ್ಯಾಪ್ತಿ ಹೆಚ್ಚಿದೆ. ಇದೀಗ ಮಾನಿನಿಯ ಸೊಂಟವನ್ನು ತಬ್ಬಿ ನಿಲ್ಲ ಹೊರಟಿದೆ. ಸೊಂಟ ಬಳಸುವ ಸಾಶ್‌ ಸಖತ್‌ ಟ್ರೆಂಡಿಯಾಗುತ್ತಿದೆ.

ಟಿಫ್ಸ್‌

- ನೀವು ಟ್ರೆಂಡ್‌ ಫಾಲೋ ಮಾಡ್ತೀದ್ರೆ ಫಸ್ಟ್‌ ಈ ಸ್ಟೈಲ್‌ ಫಾಲೋ ಮಾಡಿ. ಬೇರಾರ‍ಯವುದೇ ಡಿಸೈನ್‌ಗಳಿಲ್ಲದ ಪ್ಲೇನ್‌ ಜಂಪ್‌ಸೂಟ್‌ ಮೇಲೆ ಈ ಸಾಶ್‌ ಧರಿಸಿ.

- ಕಪ್ಪು ಬಣ್ಣದ ಜಂಪ್‌ ಸೂಟ್‌ ಅಥವಾ ಸಪರೇಟ್ಸ್‌ ಧರಿಸಿ, ಸೊಂಟದ ಭಾಗಕ್ಕೆ ಈ ಸಾಶ್‌ಅನ್ನು ಚೆಂದಕ್ಕೆ ಸುತ್ತಿ.

- ಇಲ್ಲಿ ಡ್ರೆಸ್‌ ಸಿಂಪಲ್‌ ಹಾಗೂ ಗಾರ್ಜಿಯಸ್‌ ಆಗಿರೋದರಿಂದ ಮೇಕಪ್‌ನಲ್ಲಿ ಕಣ್ಣನ್ನು ಹೈಲೈಟ್‌ ಮಾಡಿ.

- ಬೇಕಿದ್ದರೆ ಯಿಯರ್‌ರಿಂಗ್‌ ಧರಿಸಬಹುದು. ಬೇರೆಲ್ಲ ಆ್ಯಕ್ಸೆಸರೀಸ್‌ ಸ್ಟ್ರಿಕ್ಟ್ ಲೀ ಪ್ರಾಹಿಬಿಟೆಡ್‌.

- ಜೊತೆಗೆ ಪಾದಗಳಿಗೆ ಸ್ಟಿಲೆಟೋಸ್‌ ಧರಿಸಿದರೆ ಸ್ಟೈಲ್‌ನಲ್ಲಿ ನಿಮ್ಮನ್ನು ಮೀರಿಸೋರು ಇರಲ್ಲ.

ಮಿಶೆಲ್‌ ಒಬಾಮಾ ಅವರಿಗೆ ಇದು ಆಲ್‌ ಟೈಮ್‌ ಫೇವರೆಟ್‌. ಹಿಟರಿ ಕ್ಲಿಂಟನ್‌ಗೂ ಈ ಸ್ಟೈಲ್‌ ಸಖತ್‌ ಇಷ್ಟ. ಮೆಲಾನಿಯಾ ಟ್ರಂಪ್‌ ಏರ್‌ಪೋರ್ಟ್‌ನಲ್ಲಿ ಇದೇ ಬಗೆಯ ಉಡುಗೆ ಧರಿಸಿ ಓಡಾಡೋದನ್ನು ಅನೇಕ ಪಾಪರಾಜಿಗಳು ಕ್ಲಿಕ್‌ ಮಾಡಿದ್ದಾರೆ.

ಅದೇ ಸ್ಟೈಲ್‌ ಅನ್ನು ಕಳೆದ ವರ್ಷ ಶಿಲ್ಪಾ ಶೆಟ್ಟಿಫಾಲೋ ಮಾಡಿದರು. ಪುಣೆಯಲ್ಲಿ ನಡೆದ ಇವೆಂಟ್‌ವೊಂದಕ್ಕೆ ಜಂಪ್‌ಸೂಟ್‌ ಧರಿಸಿ ಬಳುಕುವ ಸೊಂಟದ ಭಾಗಕ್ಕೆ ಈ ಸಾಶ್‌ಅನ್ನು ಸುತ್ತಿಕೊಂಡು ಹೋದರು. ಆಗ ಬಾಲಿವುಡ್‌ ಮಾತ್ರವಲ್ಲ, ಹಾಲಿವುಡ್‌ ಫ್ಯಾಶನ್‌ ಮಂದಿಯೂ, ಇದು ಸಖತ್‌ ಕ್ಯೂಟ್‌ ಆಗಿದೆಯಲ್ಲಾ.. ಬ್ಯುಸಿನೆಸ್‌ ವುಮೆನ್‌ ಲುಕ್‌ ಬರುವ ಜೊತೆಗೆ ಆ ಫಾರ್ಮಲ್‌ ಡ್ರೆಸ್‌ನ ಏಕತಾನತೆಯನ್ನು ಮುರಿಯುವಲ್ಲಿ ಈ ಸಾಶ್‌ ಸಕ್ಸಸ್‌ ಆಯ್ತು.

ಇನ್ನೂ ಹಿಂದೆ ಹೋದರೆ ನಮ್ಮ ಬಾರ್ಡರ್‌ ಕಲ್ಪನೆಗೆ ಪರಾರ‍ಯಯವಾದದ್ದೇ ಈ ಸಾಶ್‌ ಅನಿಸುತ್ತೆ. ಸೀರೆಗೆ ಬಾರ್ಡರ್‌ ಇದ್ದ ಹಾಗೆ ಆಧುನಿಕ ಡ್ರೆಸ್‌ಗಳಿಗೆ ಈ ಸಾಶ್‌ ಇದೆ ಅನ್ನಬಹುದೇನೋ.

ಹಿಸ್ಟರಿ ಎಲ್ಲ ಬದಿಗಿಡಿ. ವರ್ತಮಾನದಲ್ಲಿ ನಿಂತು ಮಾತಾಡಿ ಅನ್ನೋದು ಈಗಿನ ಯಂಗ್‌ ಜನರೇಶನ್‌ ನಂಬಿರುವ ತತ್ವ. ಅದೇ ವರ್ತಮಾನದಲ್ಲಿ ನಿಂತು ಸಾಶ್‌ ಎಲ್ಲಿದೆ ಎಂದರೆ, ನನ್‌ ಹತ್ರ ಇದೆ ಅಂತ ಸೊಂಟ ಕುಣಿಸ್ತಾರೆ ಕೃತಿ ಸನೂನ್‌. ಗಾಢ ಕರಿಬಣ್ಣದ ಡ್ರೆಸ್‌ ಮೇಲೆ ಪಿಂಕಿ ಪಿಂಕಿ ಬಣ್ಣದ ಸಾಶ್‌ ಸುತ್ತಿಕೊಂಡು ಮಾದಕ ಫೋಸ್‌ ಕೊಡುವ ಕೃತಿ ನೆಕ್ಸ್ಟ್‌ಜನರೇಶನ್‌ ಹುಡುಗೀರನ್ನ ಇನ್‌ಸ್ಪೈರ್‌ ಮಾಡೋದರಲ್ಲಿ ನೋ ಡೌಟ್‌.

ಮಿಣ ಮಿಣ ಮಿಂಚುತ್ತಿತ್ತ, ಮೂಡುತ್ತಿತ್ತ ಮುಳುಗತ್ತಿತ್ತ! ಬೇಸಿಗೆಯ ಪಾಸ್ಟಲ್‌ ಟ್ರೆಂಡ್

ಇದನ್ನು ಕರೀನಾ ಕಪೂರ್‌ ಸಹ ಧರಿಸಿದ್ದಾರೆ. ಕಡುಗಪ್ಪು ಬಣ್ಣದ ಡ್ರೆಸ್‌ಗೆ ಗಿಳಿ ಹಸಿರು ಬಣ್ಣದ ಸಾಶ್‌ ಧರಿಸಿ ಫೋಟೋಗೆ ಪೋಸ್‌ ನೀಡಿದ್ದಾರೆ. ಈಕೆ ಧರಿಸಿರೋ ಸಾಶ್‌ ಮಾಮೂಲಿ ಸಾಶ್‌ಗಿಂತ ತುಸು ಅಗಲವಾಗಿ ಹುಡುಗೀರು ಜೀನ್ಸ್‌ ಮೇಲೆ ಧರಿಸೋ ಸ್ಟೋಲ್‌ನ ಗಾತ್ರದಲ್ಲಿದೆ.

ಸಾಶ್‌ ಹುಟ್ಟಿನ ಕತೆ

ಈ ಸಾಶ್‌ನ ಹಿಂದೆ ಒಂದು ಚೆಂದದ ಹಿನ್ನೆಲೆಯಿದೆ. ಫ್ಯಾಶನ್‌ ಜಗತ್ತಿನ ದಂತಕತೆ ಫ್ರೆಂಚ್‌ ಡಿಸೈನರ್‌ ವೈವಸ್‌ ಸೈಂಟ್‌ ಲಾರೆಂಟ್‌ ಅವರ ಬಗೆಗಿನ ಬಯೋಪಿಕ್‌ನಲ್ಲಿ ಒಂದು ದೃಶ್ಯ ಬರುತ್ತೆ. ಅದರಲ್ಲಿ ಒಬ್ಬ ಮಾಡೆಲ್‌ಗೆ ತಾನು ಧರಿಸಿದ ಡ್ರೆಸ್‌ ಬಗ್ಗೆ ಅಷ್ಟುಸಮಾಧಾನ ಇರಲಿಲ್ಲ. ಆಕೆ ರಾರ‍ಯಂಪ್‌ ವಾಕ್‌ ಮಾಡಬೇಕಿತ್ತು. ಸಣ್ಣ ಸಿಡಿಮಿಡಿಯಲ್ಲಿ ಆಕೆ ನಿಂತಿದ್ದಾಗ ಲಾರೆಂಟ್‌ ಗಮನಕ್ಕೆ ಅದು ಬಂತು. ಅಲ್ಲೇ ಇದ್ದ ಒಬ್ಬ ಸಾಶ್‌ಅನ್ನು ಅವಳ ನಡುವಿಗೆ ಸ್ಟೈಲಿಶ್‌ ಆಗಿ ಸುತ್ತಿ ಕನ್ನಡಿ ಮುಂದೆ ತಂದು ನಿಲ್ಲಿಸಿದರು. ಆ ರೂಪದರ್ಶಿ ಮುಖದಲ್ಲಿ ಅಚ್ಚರಿ ಬೆರೆತ ನಗು ಹರಡಿಕೊಂಡಿತ್ತು. ಅಲ್ಲಿಂದಲೇ ಸಾಶ್‌ ಸ್ಟೈಲ್‌ ಶುರುವಾಯ್ತು ಅನ್ನೋ ನಂಬಿಕೆ ಫ್ಯಾಶನ್‌ ಜಗತ್ತಿನಲ್ಲಿದೆ.

Follow Us:
Download App:
  • android
  • ios