Asianet Suvarna News Asianet Suvarna News

ಐಫಾದಲ್ಲಿ ವಿಚಿತ್ರ ಡ್ರೆಸ್ಸಿಂಗ್‌ ಸ್ಟೈಲ್‌: ನಟಿ ಭೂಮಿನಾ, ಬಿಚ್ಚಮ್ಮ ಉರ್ಫಿಗೆ ಹೋಲಿಸಿದ ನೆಟ್ಟಿಗರು

ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೂಮಿ ಪಡ್ನೇಕರ್ ಅವರ ಡ್ರೆಸ್ಸಿಂಗ್ ಸ್ಟೈಲ್ ನೆಟ್ಟಿಗರಿಗೆ ಇಷ್ಟವಾಗಲಿಲ್ಲ. ಅವರನ್ನು ನಾಗಿಣಿ ಮತ್ತು ಉರ್ಫಿ ಜಾವೇದ್‌ಗೆ ಹೋಲಿಸಿ ಟ್ರೋಲ್ ಮಾಡಲಾಗಿದೆ.

Bhumi Pednekar Trolled for Bold Glass Armour Saree Look
Author
First Published Sep 28, 2024, 10:05 PM IST | Last Updated Sep 28, 2024, 10:05 PM IST

ಅಬುಧಾಬಿಯಲ್ಲಿ  ಐಫಾ ಉತ್ಸವಂ ನಡೆಯುತ್ತಿದೆ. ದಕ್ಷಿಣ ಭಾರತದ ಈ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ತಾರೆಯರೆಲ್ಲರೂ ವಿವಿಧ ಡಿಸೈನರ್‌ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಬಾಲಿವುಡ್ ನಟಿ ಭೂಮಿ ಪಡ್ನೇಕರ್‌ ಕೂಡ ಕೂಡ ಗಾಜಿನ ರಕ್ಷಕವಚದಂತಹ ಬ್ಲೌಸ್‌ ಮೇಲೆ ಸೀರೆಯುಟ್ಟು, ಫೋಸ್ ಕೊಟ್ಟಿದ್ದಾರೆ. ಆದರೆ ಇವರ ಡ್ರೆಸ್ಸಿಂಗ್ ಸ್ಟೈಲ್ ನೆಟ್ಟಿಜನ್ಸ್‌ಗೆ ಮಾತ್ರ ಇಷ್ಟವಾಗಿಲ್ಲ. ಈ ಕಾರಣಕ್ಕೆ ಸಖತ್ ಟ್ರೋಲ್ ಆಗಿದ್ದಾರೆ ನಟಿ ಭೂಮಿ ಪಡ್ನೇಕರ್‌. 

ಅಬುಧಾಬಿಯಲ್ಲಿ ಇಂಟರ್‌ನ್ಯಾಷನಲ್ ಇಂಡಿಯಾ ಫಿಲಂ ಫೆಸ್ಟಿವಲ್‌ನಲ್ಲಿ ಭೂಮಿ ಪಡ್ನೇಕರ್‌, ಬಿಳಿ ಬಣ್ಣದ ಲಂಗದ ಮೇಲೆ ಎದೆಭಾಗವನ್ನು ಮುಚ್ಚವಂತೆ ಲಂಗಕ್ಕೆ ಮ್ಯಾಚ್ ಆಗುವಂತಹ ಬಟ್ಟೆ ಧರಿಸಿ ಉದ್ದನೇಯ ಶಾಲೊಂದನ್ನು ಹಿಂಬದಿಯಿಂದ ತಂದು ಎರಡು ಕೈಗಳಿಗೆ ಸುತ್ತಿಕೊಂಡಿದ್ದಾರೆ. ಅಲ್ಲದೇ ಎದೆಭಾಗಕ್ಕೆ ಗಾಜಿನ ರಕ್ಷಕವಚದ  ತೊಟ್ಟಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇದನ್ನು ನಾಗಿಣಿಗೆ ಹೋಲಿಸಿದ್ದಾರೆ. ಅಲ್ಲದೇ ಆಕೆಯನ್ನು ಮತ್ತೊಬ್ಬ ಬಿಚ್ಚಮ್ಮ  ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಉರ್ಫಿ ಜಾವೇದ್‌ಗೆ ಹೋಲಿಸಿದ್ದಾರೆ. 

ಭೂಮಿ ಪಡ್ನೇಕರ್ ಫ್ಯಾಷನ್‌ನಲ್ಲಿ ಎಕ್ಸ್‌ಪೆರಿಮೆಂಟ್‌ ಮಾಡಲು ಯಾವಾಗಲೂ ಹಿಂದೆ ಮುಂದೆ ನೋಡಲ್ಲ, ಯಾವಾಗಲೂ ಬೋಲ್ಡ್ & ಬ್ಯೂಟಿಫುಲ್ ಅಗಿ ಕಂಗೊಳಿಸುವ ಭೂಮಿ ನೋಡುಗರ ಕಣ್ಣಿಗೆ ತಮ್ಮ ಫ್ಯಾಷನ್ ಸ್ಟೈಲ್‌ನಿಂದ ರಸದೌತಣ ನೀಡುತ್ತಾರೆ. ಆದರೆ ಈ ಬಾರಿ ಮಾತ್ರ ಅವರ ಫ್ಯಾಷನ್ ಯಾರಿಗೂ ಇಷ್ಟವಾಗಿಲ್ಲ, ಹೀಗಾಗಿ ಅವರನ್ನು ನಾಗಿಣಿ ಮಾತ್ರವಲ್ಲದೇ ಪ್ರಗ್ನೆನ್ಸಿ ಔಟ್‌ಫಿಟ್‌ ತೊಟ್ಟು ಹೋಗಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಗ್ಲಾಸ್‌ನಂತಹ ಈ ಎದೆಕವಚದಲ್ಲಿ ಹೊಟ್ಟೆ ಉಬ್ಬಿರುವುದು ಇದಕ್ಕೆ ಕಾರಣ. ಅಲ್ಲದೇ ಈ ಡ್ರೆಸ್ಸಿಂಗ್ ಸ್ಟೈಲ್‌ನ್ನು ವಿಚಿತ್ರ ಡ್ರೆಸ್ಸಿಂಗ್‌ ಸ್ಟೈಲ್ ಹಾಗೂ ಫ್ಯಾಷನ್ ಸ್ಟೈಲ್‌ಗೆ ಹೆಸರಾದ ಉರ್ಫಿ ಜಾವೇದ್‌ ಡಿಸೈನ್ ಮಾಡಿದ್ದ ಎಂದು ಕೆಲವರು ಪ್ರಶ್ನಿಸಿದ್ದಾರೆ. 

 

ಭೂಮಿ ಪಡ್ನೇಕರ್ ಅವರು ಕಚ್ಚಾ ಮ್ಯಾಂಗೋ ರೀತಿಯ ರಕ್ಷಾ ಕವಚದ ಸಾರಿ ತೊಟ್ಟು ಮಿಂಚಿದ್ದಾರೆ ಎಂದು ವೀಡಿಯೋ ಪೋಸ್ಟ್ ಮಾಡಿ ವಿವರಿಸಲಾಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ವಿವರಿಸಿರುವಂತೆ ಈ ಬಟ್ಟೆಯನ್ನು  ಕೇರಳದಲ್ಲಿ ತೈಯಂ ನೃತ್ಯಕಾರರು ಧರಿಸುವ ಬಟ್ಟೆ ಎಂದು ವಿವರಿಸಲಾಗಿದೆ. ಅವರು ದೈವಿಕ ಧ್ವನಿ ಮತ್ತು ಚೈತನ್ಯವನ್ನು ಪ್ರಸಾರ ಮಾಡಲು ವಿಸ್ತಾರವಾದ ವೇಷಭೂಷಣಗಳು ಮತ್ತು ಆಭರಣಗಳನ್ನು ಧರಿಸುತ್ತಾರೆ. ಸಾಂಪ್ರದಾಯಿಕವಾಗಿ ಹಿತ್ತಾಳೆಯಲ್ಲಿ ಎರಕಹೊಯ್ದ, ಭೂತ ಕನ್ನಡಿಯಿಂದ ಈ ಕವಚವನ್ನು ಮಾಡಲ್ಪಟ್ಟಿದೆ ಎಂದು ವಿವರಿಸಲಾಗಿದೆ.

 

Latest Videos
Follow Us:
Download App:
  • android
  • ios