Asianet Suvarna News Asianet Suvarna News

ಭೂಮಿ ಪೆಡ್ನೇಕರ್ ಕೈನಲ್ಲಿದ್ದ ಪರ್ಸ್ ಆಕಾರ ನೋಡಿದ್ರಾ? ಬೆಲೆ ಎಷ್ಟು ಗೊತ್ತಾ?

ಫ್ಯಾಷನ್ ಲೋಕದಲ್ಲಿ ಜನರು ಏನೆಲ್ಲ ಮಾಡ್ತಾರೆ. ಕೆಲವೊಂದು ಹುಬ್ಬೇರಿಸುವಂತಿರುತ್ತದೆ. ತಮ್ಮ ಲುಕ್ ಗೆ ತಕ್ಕಂತೆ ಆಭರಣ ಧರಿಸುವ ಸೆಲೆಬ್ರಿಟಿಗಳು, ಪರ್ಸ್, ಚಪ್ಪಲಿಗೂ ಮಹತ್ವ ನೀಡ್ತಾರೆ. ಸದ್ಯ ಭೂಮಿ ಪೆಡ್ನೇಕರ್ ಪರ್ಸ್ ಗಮನ ಸೆಳೆದಿದೆ.
 

Bhumi Pednekar Butt Purse Is An Impressive Shocker roo
Author
First Published Sep 29, 2023, 6:08 PM IST

ಫ್ಯಾಷನ್ ಜಗತ್ತು ಸಂಪೂರ್ಣ ಭಿನ್ನವಾಗಿದೆ. ಅದನ್ನು ಅದ್ಭುತಗಳಲ್ಲಿ ಅದ್ಭುತ ಎನ್ನಬಹುದು. ಈ ಫ್ಯಾಷನ್ ಜಗತ್ತಿನಲ್ಲಿ ಗುರುತಿಸಿಕೊಂಡವರ ಟೇಸ್ಟ್ ವಿಚಿತ್ರವಾಗಿರುತ್ತದೆ. ಕೆಲ ಬಟ್ಟೆ, ಪರ್ಸ್, ಆಭರಣ, ಶೂ ಹುಬ್ಬೇರಿಸುವಂತೆ ಮಾಡುತ್ತದೆ. ಅಬ್ಬಾ, ಇದೆಂಥ ಸ್ಟೈಲ್ ಗುರು ಎಂದು ಪ್ರಶ್ನೆ ಹುಟ್ಟುಹಾಕುತ್ತೆ. ಜನ ಏನೇ ಹೇಳಲಿ, ಫ್ಯಾಷನ್ ಲೋಕದ ಜನರು ತಮ್ಮ ಸ್ಟೈಲ್ ಬದಲಿಸೋದಿಲ್ಲ. ದಿನಕ್ಕೊಂದು ಹೊಸ ವಸ್ತುವನ್ನು ಜನರಿಗೆ ಪರಿಚಯಿಸ್ತಾರೆ. ಈಗ ನಾವು ಹೇಳ ಹೊರಟಿರುವ ಸುದ್ದಿ ಕೂಡ ಹಾಗೇ ಇದೆ. ಇಂಥ ವಸ್ತುವನ್ನೂ ಜನರು ಫ್ಯಾಷನ್ ಅಂಥ ಕೊಂಡೊಯ್ತಾರಾ ಎನ್ನಿಸಬಹುದು. ಅಂಥ ಭಿನ್ನವಾದ ಪರ್ಸ್ ಒಂದನ್ನು ನಾವು ಪರಿಚಯಿಸಲಿದ್ದೇವೆ. ನಟಿ ಭೂಮಿ ಪೆಡ್ನೇಕರ್ ಪಾರ್ಟಿಯೊಂದಕ್ಕೆ ಕೊಂಡೊಯ್ದಿದ್ದ ಪರ್ಸ್ ಎಲ್ಲರ ಗಮನ ಸೆಳೆದಿದೆ.

ನಟಿ ಭೂಮಿ ಪೆಡ್ನೇಕರ್ (Bhumi Pednekar)  ಫ್ಯಾಷನ್ ಲೋಕದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ.  ಭೂಮಿ ಪೆಡ್ನೇಕರ್ ಬಿ ಟೌನ್‌ನ ಅತ್ಯಂತ ಫ್ಯಾಷನ್ (Fashion) ನಟಿಯರಲ್ಲಿ ಒಬ್ಬರು. ತಮ್ಮ ಸ್ಟೈಲಿಂಗ್ ಲುಕ್ ಗೆ ಅವರು ಹೆಚ್ಚು ಆದ್ಯತೆ ನೀಡ್ತಾರೆ. ತಮ್ಮ ಫ್ಯಾಷನ್ ನಿಂದ ಜನರನ್ನು ಸೆಳೆಯುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಲುಕ್ ವೈರಲ್ (Viral) ಆಗ್ತಿರುತ್ತದೆ. 
ಇತ್ತೀಚಿಗೆ ಮುಂಬೈ ಮದುವೆ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಭೂಮಿ ಪೆಡ್ನೇಕರ್ ತಮ್ಮ ಲುಕ್ ಹಾಗೂ ಪರ್ಸ್ ನಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಹೊಸ ಫೋಟೋ ಶೂಟ್ ಮೂಲಕ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ಅಗ್ನಿಸಾಕ್ಷಿ ನಟಿ

ಭೂಮಿ ಪೆಡ್ನೇಕರ್ ಪಾರ್ಟಿಗೆ ಕಪ್ಪು ಬಣ್ಣದ ಗೌನ್ ಧರಿಸಿ ಬಂದಿದ್ದರು. ರಾಚೆಲ್ ಗಿಲ್ಬರ್ಟ್ ಕಲೆಕ್ಷನ್ ನಿಂದ ಖರೀದಿಸಿದ ಡ್ರೆಸ್ ಇದು. ಸ್ಯಾಟಿನ್ ಫ್ಯಾಬ್ರಿಕ್‌ನಿಂದ ತಯಾರಿಸಲಾದ ಸಿಂಗಲ್ ಡ್ರೆಸ್ ಇದಾಗಿದ್ದು, ಮುಂಭಾಗದಲ್ಲಿ ಸಣ್ಣ ಕಟ್ ಇದೆ. ಹಿಂಭಾಗ ಬ್ಯಾಕ್‌ಲೆಸ್ ವಿನ್ಯಾಸವನ್ನು ಹೊಂದಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಇದರ ಬೆಲೆ 1095 ಡಾಲರ್‌ ಎಂದು ನಮೂದಿಸಲಾಗಿದೆ. ಅಂದ್ರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 91,000 ರೂಪಾಯಿಯಾಗುತ್ತದೆ.

ಸಾಸಿವೆ ಎಣ್ಣೆಗೆ ಇವನ್ನ ಬೆರೆಸಿ ಕೂದಲಿಗೆ ಹಚ್ಚಿದ್ರೆ, ಯಾವುದೇ ಹೇರ್ ಡೈ ಇಲ್ಲದೇ ಕೂದಲು ಕಪ್ಪಾಗುತ್ತೆ

ಇಲ್ಲಿ ಗಮನ ಸೆಳೆದಿದ್ದು ಪರ್ಸ್ : ಪಾರ್ಟಿಯಲ್ಲಿ ಭೂಮಿ ಡ್ರೆಸ್ ಗಿಂತ ಪರ್ಸ್ ಹೆಚ್ಚು ಗಮನ ಸೆಳೆದಿದ್ದು ಸುಳ್ಳಲ್ಲ. ಭೂಮಿ ಅನನ್ಯ ವಿನ್ಯಾಸದ ಪರ್ಸ್ ಹಿಡಿದು ಪಾರ್ಟಿಗೆ ಬಂದಿದ್ದರು. ಭೂಮಿ ಒಯ್ಯುತ್ತಿದ್ದ ಪರ್ಸ್ ಪೃಷ್ಠದ ಆಕಾರದಲ್ಲಿದೆ. ಗ್ರೇಸ್ ಲಿಂಗ್ ಬ್ರ್ಯಾಂಡ್ ಪರ್ಸ್ ಇದು. ಈ ಕಂಪನಿ ವಿಭಿನ್ನ ಆಕಾರದ ಪರ್ಸ್ ಗಳಿಗೆ ಹೆಸರು ಪಡೆದಿದೆ.  ಬ್ಯಾಗ್‌ನ ಜನಪ್ರಿಯತೆ ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ಔಟ್ ಆಫ್ ಸ್ಟಾಕ್ ಆಗುತ್ತೆ.

ಪಸ್ ವಿಶೇಷತೆ ಏನು? : ಭೂಮಿ ಹೊತ್ತೊಯ್ದ ಪರ್ಸ್‌ನ ಗಾತ್ರವು 4.9 ಉದ್ದ ಮತ್ತು 4.3 ಎತ್ತರ ಮತ್ತು 3.7 ಅಗಲವಾಗಿದೆ. ಇದನ್ನು ಕ್ಲಚ್ ನಂತೆ ಅಥವಾ ಸ್ಲಿಂಗ್ ಬ್ಯಾಗ್‌ನಂತೆ ಕ್ಯಾರಿ ಮಾಡ್ಬಹುದು. 
ಈ ಬಟ್ ಬ್ಯಾಗ್ ಅನ್ನು ಉಕ್ಕಿನ ಬಾಡಿಯನ್ನು ಹೊಂದಿದೆ. ಇದೇ ಕಾರಣಕ್ಕೆ ಬ್ಯಾಗ್ ಭಾರವಾಗಿರುತ್ತದೆ. ಬ್ಯಾಗ್ ಒಳಗೆ ಕಪ್ಪು ಚರ್ಮವನ್ನು ಬಳಸಲಾಗಿದೆ. ನೀವು ಹಣ, ಕಾರ್ಡ್‌, ಲಿಪ್‌ಸ್ಟಿಕ್, ಏರ್‌ಪಾಡ್‌ಗಳಂತಹ ಸಣ್ಣ ವಸ್ತುಗಳನ್ನು ಇದ್ರಲ್ಲಿ ಆರಾಮವಾಗಿ ಕೊಂಡೊಯ್ಯಬಹುದು.  ಗ್ರೇಸ್ ಲಿಂಗ್ ವೆಬ್ಸೈಟ್ ಪ್ರಕಾರ, ಈ ಭಿನ್ನ ಪರ್ಸ್ ನ ಬೆಲೆ 83,800 ರೂಪಾಯಿ. 

ಭೂಮಿ ಪೆಡ್ನೇಕರ್, ಸದ್ಯ ತಮ್ಮ ಮುಂಬರುವ ಚಲನಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಥ್ಯಾಂಕ್ಯೂ ಫಾರ್ ಕಮಿಂಗ್, ಭೂಮಿ ನಟಿಸಿರುವ ಹೊಸ ಸಿನಿಮಾ. ಈ ಚಿತ್ರದ ಪ್ರಚಾರದ ವೇಳೆ ಭೂಮಿ ಸ್ಟೈಲಿಶ್, ಸೆಕ್ಸಿ ಡ್ರೆಸ್ ಗಳನ್ನು ಧರಿಸಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. 
 

Follow Us:
Download App:
  • android
  • ios