ಅನಿರೀಕ್ಷಿತವಾಗಿ ಗರ್ಭಧಾರಣೆಯ ಪರೀಕ್ಷೆ Positive ಬಂದರೆ ಸಂಗಾತಿಗೆ ಹೇಗೆ ತಿಳಿಸುತ್ತೀರಾ?
ನೀವು ಗರ್ಭಧಾರಣೆಯ ಪರೀಕ್ಷೆಯನ್ನು ಮಾಡಿಸಿ ಅದು ಪಾಸಿಟಿವ್ ಎಂದು ಬಂದಾಗ ನಿಮ್ಮ ಮನಸ್ಸಿನಲ್ಲಿ ಒಂದು ಟನ್ ಅಷ್ಟು ಆಲೋಚನೆಗಳು ಹುಟ್ಟಿಕೊಳ್ಳುತ್ತವೆ. ಇದು ಹೇಗೆ ಸಂಭವಿಸಿತು, ನಾನು ಏನು ಮಾಡಬೇಕು ಮತ್ತು ನಾನು ಗರ್ಭಿಣಿಯಾಗಿದ್ದೇನೆ ಎಂದು ತನ್ನ ಸಂಗಾತಿಗೆ ಹೇಗೆ ಹೇಳುವುದು? ಎಂದೆಲ್ಲಾ ನನ್ನ ರೀತಿಯ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತವೆ ಅದರಲ್ಲಿಯೂ, ಹೆಚ್ಚಿನ ಮಹಿಳೆಯರು ತಮ್ಮ ಸಂಗಾತಿಗೆ ತಾವು ಹೇಳುತ್ತಿರುವ ವಿಚಾರದಿಂದ ಆತ ಹೇಗೆ ಪ್ರತಿಕ್ರಿಸಬಹುದು ಎಂಬ ನಿರೀಕ್ಷೆಯಲ್ಲಿ ಹುಟ್ಟಿಕೊಳ್ಳುವ ಕಲ್ಪನೆಯನ್ನು ನೆನೆದೆ ಆತಂಕವನ್ನು ಅನುಭವಿಸುತ್ತಾರೆ.
ಒಂದು ವೇಳೆ ನೀವು ಗರ್ಭಿಣಿಯಾಗುವುದನ್ನು ನಿರೀಕ್ಷಿಸದೆ ಇದ್ದರೆ ಆಗ ನಿಮ್ಮ ಸಂಬಂಧವನ್ನು ಅವಲಂಬಿಸಿ ಆಶ್ಚರ್ಯದಿಂದ ನಿರಾಶೆಯಿಂದ ಕೋಪದವರೆಗೆ ಅವನ ಪ್ರತಿಕ್ರಿಯೆ ಹೇಗಿರಬಹುದೆಂಬ ಬಗ್ಗೆ ನೀವು ಭಯಪಡಬಹುದು. ನೀವು ಅನಿರೀಕ್ಷಿತವಾಗಿ ಗರ್ಭಿಣಿಯಾಗಿದ್ದೀರಿ ಎಂದು ನಿಮ್ಮ ಪಾಲುದಾರರಿಗೆ ತಿಳಿಸಲು ನಿಮಗೆ ಸಹಾಯ ಮಾಡಲು, ನಾವು ಕೆಲವು ಸಲಹೆಗಳನ್ನು ಸಿದ್ಧಪಡಿಸಿದ್ದೇವೆ.
ಸಾಧ್ಯವಾದಾಗ ವೈಯಕ್ತಿಕವಾಗಿ (personally) ಅವನಿಗೆ ತಿಳಿಸಿ:
ಇಮೇಲ್ ಅಥವಾ ಮೆಸೇಜ್ ಮೂಲಕ ಸಮೂಹನ ಮಾಡುವುದರಿಂದ ಕೆಲವು ತಪ್ಪುಗಳು ಸಂಭವಿಸಬಹುದು. ಅದಕ್ಕಾಗಿ ನೀವು ಮುಖಾಮುಖಿಯಾಗಿರುವಾಗ ಪರಸ್ಪರರ ಮುಖಭಾವಗಳು, ಧ್ವನಿ ಮತ್ತು ದೇಹ ಭಾಷೆಯನ್ನು ನೀವು ನೋಡಬಹುದು, ಹಾಗಾಗಿ ನೇರಾ ನೇರ ಸಂವಹನವು ಹೆಚ್ಚು ಸೂಕ್ತವಾಗಿರುತ್ತದೆ. ಈ ವಿಚಾರ ಮಾತನಾಡಲು ಸೂಕ್ತವಾದ ಸ್ಥಳವನ್ನು ಮತ್ತು ನಿಮಗೆ ಸಾಕಷ್ಟು ಸಮಯ (Time) ದೊರೆಯುವ ಯೋಜನೆಯನ್ನು ರೂಪಿಸಿಕೊಳ್ಳಿ ಏಕೆಂದರೆ, ನೀವು ಆತುರದಲ್ಲಿರುವಾಗ, ವಿಷಯ ಪ್ರಾರಂಭಿಸಲು ಇದು ಸಂಭಾಷಣೆಯಲ್ಲ, ಆದ್ದರಿಂದ ನೀವು ಸ್ವಲ್ಪ ಗೌಪ್ಯತೆಯನ್ನು ಹೊಂದಿರುವ ಸ್ಥಳದಲ್ಲಿ ಈ ಬಗ್ಗೆ ನಿಮ್ಮ ಸಂಗಾತಿಗೆ ನಿಧಾನದಿಂದ ತಿಳಿಸಿ. ಆದಾಗ್ಯೂ, ನೀವು ಅವರ ಪ್ರತಿಕ್ರಿಯೆಗೆ ಭಯಪಡುತ್ತಿದ್ದರೆ, ಸಾರ್ವಜನಿಕ ಸೆಟ್ಟಿಂಗ್‌ನಲ್ಲಿ ನಿಮ್ಮ ಸಂಗಾತಿಗೆ ತಿಳಿಸಲು ಹಿಂಜರಿಯಬೇಡಿ ಅಥವಾ ನಿಮ್ಮೊಂದಿಗೆ ಬೆಂಬಲ ವ್ಯಕ್ತಿಯನ್ನು ಕರೆತನ್ನಿ.
ಇದನ್ನೂ ಓದಿ: ಫಸ್ಟ್ ನೈಟ್ ದಿನ ಹುಡುಗರು ಈ ವಿಷ್ಯಗಳ ಬಗ್ಗೆ ಅಲರ್ಟ್ ಆಗಿರಬೇಕು…
ಪ್ರಾಮಾಣಿಕವಾಗಿರಿ (Sincere):
ಆರೋಗ್ಯಕರ ಸಂಬಂಧದಲ್ಲಿ ನಿಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುವುದು ಮುಖ್ಯ, ಆದರೆ, ಒಂದು ಭಯಾನಕ ಸುದ್ದಿ ಇದೆ ಎಂದು ಹೇಳುವ ಮೂಲಕ ಸಂಭಾಷಣೆಯನ್ನು ಪ್ರಾರಂಭಿಸಬೇಡಿ. ನಿಮ್ಮ ಗರ್ಭಧಾರಣೆಗೆ ನೀವು ಮಾತ್ರವೇ ಕಾರಣವಾಗಲಿಲ್ಲ ಎಂಬುದನ್ನು ನೆನಪಿಡಿ, ಆದ್ದರಿಂದ ನೀವು ಒಬ್ಬರೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿಲ್ಲ ಅಥವಾ ಆತನ (Partner) ಸಮಾಧಾನಕ್ಕಾಗಿ ಇಲ್ಲವೇ ಅವನ ಪ್ರತಿಕ್ರಿಯೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ನಿಮ್ಮ ಭಾವನೆಗಳನ್ನು ಸಕ್ಕರೆ ಲೇಪಿಸುವುವ ಕುರಿತಾಗಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನಿಮ್ಮಿಬ್ಬರಿಗೂ ಸಮಾನ ಜವಾಬ್ದಾರಿ ಹಾಗೂ ಹಕ್ಕುಗಳಿವೆ ಎಂಬುದು ನೆನಪಿಟ್ಟುಕೊಂಡು ಪ್ರಾಮಾಣಿಕವಾಗಿ ನಿಮ್ಮ ಮನದ ಭಾವನೆ ಹಂಚಿಕೊಳ್ಳಿ.
ಪ್ರತಿಕ್ರಿಯಿಸಲು (React) ಅವನಿಗೆ ಅವಕಾಶ ನೀಡಿ:
ನಿಮ್ಮ ಸಂಗಾತಿಗೆ ನೀವು ಗರ್ಭಿಣಿ ಎಂದು ಹೇಳಿದಾಗ, ಅವನ ನಿಜವಾದ ಭಾವನೆಗಳನ್ನು ಅನುಭವಿಸಲು ಸಮಯ ಮತ್ತು ಸ್ಥಳವನ್ನು ನೀಡಿ. ನಿಮ್ಮ ಆರಂಭಿಕ ಪ್ರತಿಕ್ರಿಯೆ ಹೇಗಿತ್ತು ಎಂದು ಯೋಚಿಸಿಕೊಳ್ಳಿ ಹಾಗೆಯೇ ನಿಮ್ಮ ಮುಂದೆ ತನ್ನ ಆರಂಭಿಕ ಪ್ರತಿಕ್ರಿಯೆಯನ್ನು ಅನುಭವಿಸಲು ಅವನಿಗೆ ಎಷ್ಟು ಕಷ್ಟವಾಗಬಹುದನ್ನೂ ಕೂಡಾ ಅರ್ಥಮಾಡಿಕೊಳ್ಳಿ. ಪುರುಷರು ಆಗಾಗ್ಗೆ ಆಶ್ಚರ್ಯ, ಕೋಪ, ನಿರಾಕರಣೆ, ಭಯ ಮತ್ತು ಸಂತೋಷದ ಸಂಕೀರ್ಣ ಮಿಶ್ರಣದಿಂದ ಪ್ರತಿಕ್ರಿಯಿಸುತ್ತಾರೆ. ಅವರು ನಿಮ್ಮ ಮುಟ್ಟಿನ ದಿನಾಂಕ (Date) ಅಥವಾ ನಿಮ್ಮ ಗರ್ಭಧಾರಣೆಯ ಹಂತದ ಬಗ್ಗೆ ಸಹ ವಿಚಾರಿಸಬಹುದು. ನಿಮ್ಮ ಸಂಗಾತಿಯು ಆರಂಭದಲ್ಲಿ ಹೇಗೆ ಪ್ರತಿಕ್ರಿಯಿಸಿದರೂ, ಬಳಿಕ ಗೌರವದಿಂದ ವರ್ತಿಸಲು ನೀವು ಅರ್ಹರಾಗಿರುತ್ತೀರಿ. ಹಾಗಾಗಿ ಭಯ ಬೇಡ.
ಇದನ್ನೂ ಓದಿ: ಹೆಂಡ್ತಿಯನ್ನ ಗೌರವಿಸಿ, ಸ್ಪೇಸ್ ಕೊಡಿ: ವಿವಾಹಿತರಿಗೆ ವಿಚ್ಛೇದಿತರ ಕಿವಿಮಾತು
ನಿಮ್ಮ ಅನಿರೀಕ್ಷಿತ ಗರ್ಭಧಾರಣೆ ನಿಭಾಯಿಸುವಲ್ಲಿ ಇತರರಿಂದ ಸಲಹೆ (Suggetion) ಮತ್ತು ಸಹಾಯ ಪಡೆದುಕೊಳ್ಳಿ
ನೀವು ಅನಿರೀಕ್ಷಿತವಾಗಿ ಗರ್ಭಿಣಿಯಾಗಿದ್ದೀರಿ ಎಂದು ನೀವು ಕಂಡುಕೊಂಡಾಗ ನಿಮಗೆ ಮೂರು ಆಯ್ಕೆಗಳಿವೆ ಒಂದು ಅದರ ಪಾಲನೆ (Parenting), ಇಲ್ಲವೇ ದತ್ತು (Adoption) ಕೊಡುವುದು ಅಥವಾ ಗರ್ಭಪಾತ (Abortion) ಮಾಡಿಸುವುದು. ನೀವು ಯಾವುದೇ ಆಯ್ಕೆಯನ್ನು ಆರಿಸಿಕೊಂಡರೂ, ಅದು ನಿಮ್ಮ ಮೇಲೆ ದೀರ್ಘಕಾಲೀನ ಪರಿಣಾಮವನ್ನು ಬೀರುವ ಮಹತ್ವದ ಆಯ್ಕೆ ಆಗಿರುತ್ತದೆ ಎಂಬುದು ಗಮನದಲ್ಲಿರಲಿ. ಒಳ್ಳೆಯ ಸುದ್ದಿ ಎಂದರೆ ನಿಮ್ಮ ಸಂಗಾತಿ ಅಥವಾ ಪ್ರೀತಿಪಾತ್ರರು ಮತ್ತು ನಿಮ್ಮ ಸ್ತ್ರೀರೋಗತಜ್ಞರ ಸಹಾಯದಿಂದ ನೀವು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು.