ಮೂರು ದಿನಗಳ ಕಾಲ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭ! ವಿವಾಹ ಯಾವಾಗ?
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭ ಜಾಮ್‌ನಗರದ ರಿಲಯನ್ಸ್ ಗ್ರೀನ್ಸ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಈ ಬಗ್ಗೆ ಆಮಂತ್ರಣ ಕಾರ್ಡ್ ವೈರಲ್ ಆಗಿದೆ.
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಅಪ್‌ಡೇಟ್ ಬಂದಿದೆ. ಈ ಜೋಡಿಯ ವಿವಾಹ ಪೂರ್ವದ ಸಂಭ್ರಮಾಚರಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರವೊಂದು ವೈರಲ್ ಆಗಿದೆ.
ವೈರಲ್ ಆಗಿರುವ ವಿವಾಹದ ಆಮಂತ್ರಣದಂತೆ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಗಳು ಮಾರ್ಚ್ 1, 2024 ರಂದು ಪ್ರಾರಂಭವಾಗಲಿದ್ದು, ಮಾರ್ಚ್ 3, 2024 ರವರೆಗೆ ಜಾಮ್‌ನಗರದ ರಿಲಯನ್ಸ್ ಗ್ರೀನ್ಸ್‌ನಲ್ಲಿ ನಡೆಯಲಿದೆ. ವಿವಾಹ ಯಾವಾಗ ಎಲ್ಲಿ ಎಂಬುದು ಇನ್ನೂ ಕೂಡ ಸ್ಪಷ್ಟವಾಗಿಲ್ಲ.
ಚೊಚ್ಚಲ ಸಿನೆಮಾದಿಂದ ಈ ನಟಿಗೆ ಸೂಪರ್ ಸ್ಟಾರ್ ಪಟ್ಟ, ಅಪಘಾತವಾಗಿ ಸೌಂದರ್ಯದ ಜತೆ ನೆನಪಿನ ಶಕ್ತಿಯೂ ಹೋಯ್ತು!
ಕಾರ್ಡ್ ಒಳಗೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಕೈಬರಹದ ಟಿಪ್ಪಣಿ ಕೂಡ ಇದ್ದು, ಗುಜರಾತ್‌ನ ಜಾಮ್‌ನಗರಕ್ಕೆ ಪ್ರಯಾಣಿಸುವ ಮೂಲಕ ಅನಂತ್ ಅಂಬಾನಿಯವರ ಹೊಸ ಜೀವನದ ಅಧ್ಯಾಯದ ಪ್ರಾರಂಭವನ್ನು ಗುರುತಿಸಲು ನಿರ್ಧರಿಸಿದ್ದೇವೆ ಎಂದು ಬರೆದಿದ್ದಾರೆ.
ಜನವರಿ 2023 ರಲ್ಲಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡರು. ಅವರ ನಿಶ್ಚಿತಾರ್ಥ ಸಮಾರಂಭವನ್ನು ಗುಜರಾತಿ ಆಚರಣೆಗಳ ಪ್ರಕಾರ ಮಾಡಲಾಯಿತು. ಚುನಾರಿ ವಿಧಿ ಮತ್ತು ಗೋಲ್ ಧನ ಸೇರಿದಂತೆ ಹಳೆಯ ಸಂಪ್ರದಾಯಗಳನ್ನು ಒಳಗೊಂಡಿತ್ತು. ಆ ಸಮಯದಲ್ಲಿ ಈವೆಂಟ್‌ನ ಅತ್ಯಂತ ಸ್ಮರಣೀಯ ಭಾಗವೆಂದರೆ ಅಂಬಾನಿಗಳು ಮಾಡಿದ ಆಶ್ಚರ್ಯಕರ ಪ್ರದರ್ಶನ. ಅನಂತ್ ಕಡು ನೀಲಿ ಬಣ್ಣದ ಕುರ್ತಾ ಪೈಜಾಮ ಧರಿಸಿದ್ದರು. ಆದರೆ ಮರ್ಚೆಂಟ್ ವಿಸ್ತೃತ ಕಸೂತಿ ಹೊಂದಿರುವ ಕ್ರೀಮ್ ಲೆಹೆಂಗಾವನ್ನು ಧರಿಸಿದ್ದರು.
ತನಗಿಂತ 26 ವರ್ಷದ ಹಿರಿಯ ನಿರ್ಮಾಪಕನನ್ನು ಮದುವೆಯಾಗಿ 17ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಸೂಪರ್ ಸ್ಟಾರ್ ನಟಿ!
ಈ ಜೋಡಿಯು ಜುಲೈ 2024 ರಲ್ಲಿ ವಿವಾಹವಾಗಲಿದ್ದಾರೆ ಎಂದು ಈ ಹಿಂದೆ ಸುದ್ದಿ ಹಬ್ಬಿತ್ತು. ಮದುವೆ ದಿನಾಂಕ ಮಾತ್ರ ಇನ್ನೂ ಕೂಡ ರಿವೀಲ್ ಆಗಿಲ್ಲ. ಮುಖೇಶ್ ಮತ್ತು ನೀತಾ ಅಂಬಾನಿ ಅವರ ಅವಳಿ ಮಕ್ಕಳಲ್ಲಿ ಆಕಾಶ್ ಅಂಬಾನಿ 2019ರಲ್ಲಿ ಮತ್ತು ಇಶಾ ಅಂಬಾನಿ 2020 ರಲ್ಲಿ ವಿವಾಹವಾದರು. ಇದೀಗ ಕೊನೆಯ ವಿವಾಹ ಅವರ ಮನೆಯಲ್ಲಿ ನಡೆಯುತ್ತಿದ್ದು, ಬಹಳ ಅದ್ಧೂರಿಯಿಂದ ನಡೆಯಲಿದೆ.
ರಾಧಿಕಾ ಮರ್ಚೆಂಟ್ ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ. ಎನ್ಕೋರ್ ಹೆಲ್ತ್‌ಕೇರ್‌ನ ನಿರ್ದೇಶಕ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಇನ್ನು ಬ್ರೌನ್ ವಿಶ್ವವಿದ್ಯಾನಿಲಯದ ಪದವೀಧರರಾದ ಅನಂತ್, ರಿಲಯನ್ಸ್ ರಿಟೇಲ್ ವೆಂಚರ್ಸ್ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳ ಮಂಡಳಿಗಳಲ್ಲಿ ನಿರ್ದೇಶಕರು ಸೇರಿದಂತೆ ಹಲವಾರು ಹುದ್ದೆಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗಾಗಿ ಕೆಲಸ ಮಾಡಿದ್ದಾರೆ.