ಅತೀದೊಡ್ಡ ವಿಗ್ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯನ್ ಮಹಿಳೆ
ಇತ್ತೀಚೆಗೆ ಏನೇನೋ ವಿಚಿತ್ರ ವಿಚಿತ್ರ ದಾಖಲೆ ಮಾಡಿ ಜನ ಗಿನ್ನೆಸ್ ದಾಖಲೆ ಪುಟ ಸೇರುತ್ತಾರೆ. ಕೆಲದಿನಗಳ ಹಿಂದಷ್ಟೇ ಯುವಕನೋರ್ವ ನಿರಂತರವಾಗಿ 40 ಲಟಿಕೆ ಮುರಿದು ವಿಶ್ವ ದಾಖಲೆ ಪುಟ ಸೇರಿದ್ದ ಈಗ ಮಹಿಳೆಯೊಬ್ಬಳು ಅತೀದೊಡ್ಡ ವಿಗ್ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ಸಿಡ್ನಿ: ಇತ್ತೀಚೆಗೆ ಏನೇನೋ ವಿಚಿತ್ರ ವಿಚಿತ್ರ ದಾಖಲೆ ಮಾಡಿ ಜನ ಗಿನ್ನೆಸ್ ದಾಖಲೆ ಪುಟ ಸೇರುತ್ತಾರೆ. ಕೆಲದಿನಗಳ ಹಿಂದಷ್ಟೇ ಯುವಕನೋರ್ವ ನಿರಂತರವಾಗಿ 40 ಲಟಿಕೆ ಮುರಿದು ವಿಶ್ವ ದಾಖಲೆ ಪುಟ ಸೇರಿದ್ದ ಈಗ ಮಹಿಳೆಯೊಬ್ಬಳು ಅತೀದೊಡ್ಡ ವಿಗ್ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ಈ ವಿಡಿಯೋವನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಗ್ 8 ಅಡಿ ಉದ್ದವಿದೆ. ಈ ವಿಗ್ ತಯಾರಿಸಿದ ಕಲಾವಿದರು ಈ ಹಿಂದೆ ನಕಲಿ ಕೂದಲನ್ನು ಬಳಸಿ 7 ಅಡಿಗೂ ಉದ್ದದ ವಿಗ್ ತಯಾರಿಸಿದ ಡ್ರೂ ಬ್ಯಾರಿಮೋರ್ ಅವರಿಂದ ಸ್ಪೂರ್ತಿಗೊಳಗಾಗಿ ಈ 8 ಅಡಿ ಉದ್ದದ ವಿಗ್ ತಯಾರಿಸಿದ್ದಾರೆ.
ಆಸ್ಟ್ರೇಲಿಯಾದ (Australia) ಕಲಾವಿದೆ ಡ್ಯಾನಿ ರೆನಾಲ್ಡ್ಸ್ (Dani Reynold) ಅವರೇ ಹೀಗೆ ದೈತ್ಯ ಗಾತ್ರದ ವಿಗ್ ತಯಾರಿಸಿ ಗಿನ್ನೆಸ್ ವಿಶ್ವ ದಾಖಲೆ ಬ್ರೇಕ್ ಮಾಡಿದವರು. ಇವರು ದೈತ್ಯ ಗಾತ್ರದ ಗುಲಾಬಿ ಹೂಗಳ ಕ್ಲಿಪ್‌ನ್ನು ಒಳಗೊಂಡ 8 ಅಡಿ 6 ಇಂಚಿನ ಅಗಲದ ಫಾಕ್ಸ್ ಲಾಕ್ ಹೇರ್ ಸ್ಟೈಲ್ ಮಾಡಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆ (GWR)ವೆಬ್‌ಸೈಟ್‌ನ ಪ್ರಕಾರ, ಈ ವಿಗ್ ತಯಾರಿಸಿದ ಡ್ಯಾನಿ ರೆನಾಲ್ಡ್ಸ್ ಅವರು ಹಾಲಿವುಡ್ ನಟಿ ಡ್ರೂ ಬ್ಯಾರಿಮೋರ್ ಅವರಿಂದ ಸ್ಫೂರ್ತಿ ಪಡೆದಿದ್ದರಂತೆ. ಅವರು ಈ ಹಿಂದೆ ದಿ ಟುನೈಟ್ ಶೋ ವಿತ್ ಜಿಮ್ಮಿ ಫಾಲನ್‌ನಲ್ಲಿ 7 ಅಡಿಗಿಂತ ಹೆಚ್ಚು ಅಗಲವಾಗಿದ್ದ ನಕಲಿ ಹೇರ್‌ಪೀಸ್ ಧರಿಸಿ ವಿಶ್ವದಾಖಲೆ ಮಾಡಿದ್ದರು.
ಈಗ ಡ್ಯಾನಿ ರೆನಾಲ್ಡ್ಸ್ ಅವರು ವಿಗ್ ಅನ್ನು ಧರಿಸಿರುವ ವಿಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ತನ್ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಹಾಕಿಕೊಂಡಿದೆ. ಇದರಲ್ಲಿ ಮಿಸ್ ರೆನಾಲ್ಡ್ ಅವರು 8 ಅಡಿ 6 ಇಂಚಿನ ವಿಗ್ ಅನ್ನು ತೋರಿಸುತ್ತಿರುವುದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿ ಕ್ರೇನ್ ಒಂದರ ಸಹಾಯದಿಂದ ವಿಗ್ ಅನ್ನು ರೆನಾಲ್ಡ್ ತಲೆಗೆ ಹಾಕಲಾಗುತ್ತದೆ. ಅತ್ಯಂತ ಅಗಲವಾದ ವಿಗ್ 2.58 ಮೀಟರ್ (8 ft 6 in) ಉದ್ದವಿದೆ. ಒಟ್ಟಾರೆ ಹೇರ್‌ಪೀಸ್‌ನ ವಿನ್ಯಾಸವನ್ನು ಮಾಡಿದ ನಂತರ, ರೆನಾಲ್ಡ್ಸ್ ಸ್ಥಳೀಯ ಕಲಾವಿದ ಮೆಗ್ ವಿಲ್ಸನ್ ಅವರ ಸಹಾಯವನ್ನು ಈ ವಿಗ್ ತಯಾರಿಸುವುದಕ್ಕಾಗಿ ಪಡೆದುಕೊಂಡಿದ್ದಾರೆ.
ಹೀಗ್ಮಾಡಿದ್ರೂ ಸಾಧನೆನೇ ನೋಡಿ... ಮೈ ಮುರಿದೇ ವಿಶ್ವ ದಾಖಲೆ ಮಾಡಿದ ಯುವಕ...!
ಆದರೆ ಈ ವಿಗ್ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ. ಧರಿಸಲು ಸಾಧ್ಯವಿಲ್ಲದ ವಿಗ್ ತಯಾರಿಸಿ ಏನು ಫಲ ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಯಸುವವರು ಈ ವಿಗ್ ತಯಾರಿಸಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನು ಧರಿಸಿ ಸರಿಯಾಗಿ ನಿಲ್ಲಬೇಕಾದರೆ ಯಾರಾದದಾರು ಸಹಾಯ ಬೇಕು. ಹೀಗಾಗಿ ಇದು ವಿಗ್ ಅಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಟಿವಿ ರಿಮೋಟ್‌ಗಿಂತಲೂ ಸಣ್ಣ... ಇದು ವಿಶ್ವದ ಅತ್ಯಂತ ಪುಟಾಣಿ ನಾಯಿ
ಪುಟಾಣಿ ನಾಯಿಯೊಂದು ಗಾತ್ರದಿಂದಲೇ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದೆ. ಕೇವಲ ಒಂದು ಡಾಲರ್ ನೋಟಿಗಿಂತಲೂ ಸಣ್ಣ ಗಾತ್ರವನ್ನು ಇದು ಹೊಂದಿದ್ದು, ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದೆ. 2 ವರ್ಷದ ಈ ಪುಟಾಣಿ ಹೆಣ್ಣು ನಾಯಿ ಚಿಹುವಾ ತಳಿಗೆ ಸೇರಿದ್ದಾಗಿದ್ದು, ಪರ್ಲ್ ಎಂದು ಹೆಸರಿಡಲಾಗಿದೆ. 2020ರ ಸೆಪ್ಟೆಂಬರ್ ಒಂದರಂದು ಜನಿಸಿದ ಈ ಶ್ವಾನ ಈಗ ಜೀವಂತವಿರುವ ವಿಶ್ವದ ಅತ್ಯಂತ ಚಿಕ್ಕ ನಾಯಿ ಎಂಬ ಹೆಗ್ಗಳಿಕೆ ಗಳಿಸಿದೆ. 9.14 ಸೆಂಟಿ ಮೀಟರ್ ಉದ್ದದ ಈ ನಾಯಿ 12.7 ಸೆಂಟಿ ಮೀಟರ್ ಎತ್ತರ ಹೊಂದಿದೆ. ಅಂದರೆ ಪಾಪ್ಸಿಕಲ್ (ಐಸ್‌ಕ್ಯಾಂಡಿ) ಗಿಂತ ಚಿಕ್ಕ, ಟಿವಿ ರಿಮೋಟ್‌ಗಿಂದ ಸಣ್ಣ, ಹಾಗೆಯೇ ಡಾಲರ್ ನೋಟಿಗಿಂತ ಗಿಡ್ಡವಿದೆ.
ಅಬ್ಬಬ್ಬಾ..203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ದಾಖಲೆಗೆ ಸೇರಿದ 80 ವರ್ಷದ ಅಜ್ಜಿ!
ವಿಶ್ವದ ಅತ್ಯಂತ ಪುಟಾಣಿ ಶ್ವಾನ ಪರ್ಲ್‌ಗೆ ಹೆಲೋ ಹೇಳಿ ಎಂದು ಬರೆದು ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ಈ ಪುಟಾಣಿ ಶ್ವಾನ ಪರ್ಲ್‌ನ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆ (GWR) ಸಂಸ್ಥೆ ಪ್ರಕಾರ, ಪರ್ಲ್, ಮಿರಾಕಲ್ ಮಿಲ್ಲಿ ಎಂಬ ಶ್ವಾನದ ಮರಿಯಾಗಿದ್ದು, ಈ ಮಿರಾಕಲ್ ಮಿಲ್ಲಿ (Miracle Milly) ಕೂಡ ಈ ಹಿಂದೆ ವಿಶ್ವ ದಾಖಲೆ ನಿರ್ಮಿಸಿತ್ತು. 2011ರಲ್ಲಿ ಜನಿಸಿದ ಮಿರಾಕಲ್ ಮಿಲ್ಲಿ ಒಂದು ಪೌಂಡ್ ತೂಗುತ್ತಿತ್ತು. 9.65 ಸೆಂಟಿ ಮೀಟರ್ ಉದ್ದವಿದ್ದ ಇದು 3.8 ಇಂಚು ಎತ್ತರವಿತ್ತು. 2020ರಲ್ಲಿ ಇದು ಮೃತಪಟ್ಟಿತ್ತು.
ಈ ಮಿರಾಕಲ್ ಮಿಲ್ಲಿಯ ಮಗಳಾದ ಪರ್ಲ್ ಈಗ ತಾಯಿಯಂತೆ ತಾನೂ ವಿಶ್ವ ದಾಖಲೆ ನಿರ್ಮಿಸಿದೆ. ಇತ್ತೀಚೆಗೆ ಈ ಪರ್ಲ್ ಇಟಾಲಿಯನ್ ಟಿವಿ ಶೋ 'ಲೊ ಶೋ ಡೈ ರೆಕಾರ್ಡ್' ಎಂಬ ಶೋದಲ್ಲಿ ಭಾಗವಹಿಸಿತ್ತು. ಈ ಶೋದಲ್ಲಿ ಪರ್ಲ್‌ನ ಮಾಲಕಿ ವನೆಸಾ ಸ್ಮೆಲ್ಲರ್, ತನ್ನ ಪುಟಾಣಿ ಶ್ವಾನವನ್ನು ಶೋಗೆ ಕರೆದುಕೊಂಡು ಬಂದಿದ್ದರು. ಈಸ್ಟರ್ ಎಗ್ ಆಕಾರದ ಸೀಟಿನಲ್ಲಿ ಪರ್ಲ್‌ನನ್ನು ಕರೆತಂದಾಗ ಶೋದಲ್ಲಿದ್ದ ನೂರಾರು ಜನ ಚಪ್ಪಾಳೆ ತಟ್ಟಿ ಪರ್ಲ್ ಅನ್ನು ಸ್ವಾಗತಿಸಿದರು. ಈ ಚಿಹೋವಾ ತಳಿಯ ಪುಟಾಣಿ ಶ್ವಾನ ಶಾಂತ ಸ್ವಭಾವವನ್ನು ಹೊಂದಿದ್ದು, ದೊಡ್ಡ ಮಟ್ಟದಲ್ಲಿ ನೆರೆದಿದ್ದ ಪ್ರೇಕ್ಷಕರ ಮುಂದೆ ವೇದಿಕೆಯಲ್ಲಿ ನಿಲ್ಲಲ್ಲು ಯಾವುದೇ ಹಿಂಜರಿಕೆ ತೋರಿರಲಿಲ್ಲ ಎಂದು ಶ್ವಾನದ ಮಾಲಕಿ ಹೇಳಿದ್ದಾರೆ.