ದಿನನಿತ್ಯ ಧರಿಸಲು ಹಗುರವಾದ ಮತ್ತು ಸ್ಟೈಲಿಶ್ ಕಾಲ್ಗೆಜ್ಜೆ ಹುಡುಕುತ್ತಿದ್ದರೆ ಬೆಳ್ಳಿಯ ಈ ಪಾಯಲ್ ಡಿಸೈನ್ಸ್ ನಿಮಗೆ ಇಷ್ಟವಾಗಬಹುದು. ಇವು ಕೇವಲ 6 ಗ್ರಾಂ ತೂಕದಲ್ಲಿ ಲಭ್ಯ.
fashion Feb 14 2026
Author: Ashwini HR Image Credits:instagram
Kannada
ಮಿನಿಮಲ್ ಡಿಸೈನ್
ಈ ಮಾಡರ್ನ್ ಸಿಲ್ವರ್ ಪಾಯಲ್ ಮಿನಿಮಲ್ ಡಿಸೈನ್‌ನಲ್ಲಿದ್ದು, ನೋಡಲು ತುಂಬಾ ಎಲಿಗೆಂಟ್ ಲುಕ್ ಕೊಡುತ್ತೆ. ಸಿಂಪಲ್ ಮತ್ತು ಕ್ಲಾಸಿ ಸ್ಟೈಲ್‌ನ ಈ ಗೆಜ್ಜೆ ಎಲ್ಲಾ ಡ್ರೆಸ್‌ಗೂ ಹೊಂದುತ್ತದೆ.
Image credits: instagram
Kannada
ಬೀಡ್ಸ್ ಪಾಯಲ್
ಈ ಕಾಲ್ಗೆಜ್ಜೆಯನ್ನ ತೆಳುವಾದ ಚೈನ್‌ನಿಂದ ಮಾಡಲಾಗಿದೆ. ಚೈನ್‌ನ ಮಧ್ಯೆ ಮಧ್ಯೆ ಬೆಳ್ಳಿಯ ಮಣಿಗಳನ್ನು ಪೋಣಿಸಲಾಗಿದ್ದು, ಹೃದಯದ ಆಕಾರದ ಪೆಂಡೆಂಟ್ ನೀಡಲಾಗಿದೆ. ದಿನನಿತ್ಯದ ಬಳಕೆಗೆ ಈ ಡಿಸೈನ್ ಪರ್ಫೆಕ್ಟ್ ಆಗಿದೆ.
Image credits: instagram
Kannada
ನಜರ್‌ಬಟ್ಟು ಪಾಯಲ್
ನಜರ್‌ಬಟ್ಟು (ದೃಷ್ಟಿ ತಾಗದಿರಲಿ ಎಂದು ಹಾಕುವ ಕಪ್ಪು ಮಣಿ) ಡಿಸೈನ್ ಹೊಂದಿರುವ ಈ ಸಿಲ್ವರ್ ಪಾಯಲ್, ಸಿಂಪಲ್ ಆಗಿದ್ದರೂ ತುಂಬಾ ಟ್ರೆಂಡಿ. ಇದರಲ್ಲಿರುವ ನೀಲಿ ಮಣಿಯ ಡೀಟೇಲಿಂಗ್ ಇದಕ್ಕೆ ಒಂದು ವಿಶೇಷ ಟಚ್ ನೀಡುತ್ತೆ.
Image credits: instagram
Kannada
ಪೈಪ್ ಪಾಯಲ್
ಈ ಪಾಯಲ್ ಅನ್ನು ಚೈನ್‌ನಿಂದ ಮಾಡಿಲ್ಲ, ಬದಲಾಗಿ ಬೆಳ್ಳಿಯ ಪೈಪ್‌ಗಳನ್ನು ಜೋಡಿಸಿ ತಯಾರಿಸಲಾಗಿದೆ. ಈ ವಿಶಿಷ್ಟ ಡಿಸೈನ್‌ನ ಗೆಜ್ಜೆಯನ್ನು ನೀವು ಹಬ್ಬಗಳಿಂದ ಹಿಡಿದು ಮದುವೆ ಸಮಾರಂಭಗಳವರೆಗೂ ಟ್ರೈ ಮಾಡಬಹುದು.
Image credits: SILVER ANKLETS by Anumeha/instagram
Kannada
ಕಲರ್‌ಫುಲ್ ಬೀಡ್ಸ್ ಸಿಲ್ವರ್ ಪಾಯಲ್
ಸಣ್ಣ ಬಣ್ಣಬಣ್ಣದ ಮಣಿಗಳಿಂದ ಅಲಂಕರಿಸಲ್ಪಟ್ಟ ಈ ಸಿಲ್ವರ್ ಪಾಯಲ್, ಕಾಲುಗಳಿಗೆ ತುಂಬಾ ಆಕರ್ಷಕ ನೋಟ ನೀಡುತ್ತದೆ. ಪ್ರತಿ ಹೆಜ್ಜೆಗೂ ಕುಣಿಯುವ ಇದರ ಡೀಟೇಲಿಂಗ್, ಸಾಂಪ್ರದಾಯಿಕ ಉಡುಗೆಗಳಿಗೆ ವಿಶೇಷ ಹೊಳಪನ್ನು ನೀಡುತ್ತೆ.
Image credits: SILVER ANKLETS by Anumeha/instagram
Kannada
6 ಗ್ರಾಂ ಪಾಯಲ್ ಬೆಲೆ
6 ಗ್ರಾಂ ತೂಕದ ಬೆಳ್ಳಿಯ ಪಾಯಲ್ ನಿಮಗೆ ಸುಮಾರು 1700 ರೂಪಾಯಿ ಒಳಗೆ ಸಿಗುತ್ತದೆ. ಈ ಡಿಸೈನ್‌ಗಳಿಂದ ನಿಮ್ಮಿಷ್ಟದ ಗೆಜ್ಜೆಯನ್ನು ಆಯ್ಕೆ ಮಾಡಿಕೊಂಡು ಮಾಡಿಸಿಕೊಳ್ಳಬಹುದು.