ಸ್ಕ್ರಿಪ್ಟ್​ ಇಲ್ದೇ 10 ಗಂಟೆ ಷೋ ಮಾಡೋ ತಾಕತ್ತಿದೆ ಕಣ್ರೀ... ಕೊಂಕು ಮಾಡುವವರಿಗೆ ಅನುಶ್ರೀ ಕೊಟ್ಟ ತಿರುಗೇಟೇನು?

ರಿಯಾಲಿಟಿ ಷೋಗಳಲ್ಲಿ ಆ್ಯಂಕರಿಂಗ್ ಮಾಡಲು ಸಾಮಾನ್ಯವಾಗಿ ತಮ್ಮನ್ನೇ ಆಯ್ಕೆ ಮಾಡಿಕೊಳ್ಳುವ ಕಾರಣ,  ಕೊಂಕು ಮಾತನಾಡುವವರಿಗೆ ಅನುಶ್ರೀ ಹೇಳಿದ್ದೇನು?
 

Anchor Anushree tells she has ability to anchor without script and talkback for 10 hours suc

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುತ್ತಾರೆ. ಬಹುತೇಕ ಎಲ್ಲಾ ಚಾನೆಲ್​ಗಳ, ಎಲ್ಲಾ ರಿಯಾಲಿಟಿ ಷೋಗೂ ನಿರೂಪಣೆ ಎಂದು ಬಂದಾಗ ಅನುಶ್ರೀಯವರ ಹೆಸರೇ ಮೊದಲಿಗೆ ಬರುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿ.ವಿ ಷೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2023ರಲ್ಲಿ ಅನುಶ್ರೀ ಅವರಿಗೆ ಹಲವಾರು ಪ್ರಶಸ್ತಿಗಳೂ ಸಂದಿವೆ.

ಆದರೆ, ಕೆಲವರಿಗೆ ಕೆಲವರು ಎಲ್ಲೆಡೆ ಕಂಡುಬಂದರೆ ಸಹಿಸಿಕೊಳ್ಳಲು ಆಗುವುದಿಲ್ಲ. ಕನ್ನಡ ನಾಡು ಕಂಡ ಅಪರೂಪದ ನಿರೂಪಕಿ ಅಪರ್ಣಾ ಅವರ ವಿಷಯದಲ್ಲಿಯೂ ಹೀಗೆಯೇ ಆಗಿತ್ತು. ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಪರ್ಣಾ ಯಾಕೆ ಬೇಕು, ಬೇರೆಯವರು ಇಲ್ವಾ ಎಂದು ಬೇರೆ ನಿರೂಪಕರು ಕುಹಕವಾಡಿದ್ದರಂತೆ. ಈ ಬಗ್ಗೆ ಅವರ ನಿಧನದ ನಂತರ ಪತಿ ನಾಗರಾಜ್​ ವಸ್ತಾರೆ ಹೇಳಿದ್ದರು. ಇದೇ  ಕಾರಣಕ್ಕೆ ಅಪರ್ಣಾ ಕೊನೆಕೊನೆಗೆ ಯಾವುದೇ ಕಾರ್ಯಕ್ರಮ ಒಪ್ಪಿಕೊಳ್ಳುತ್ತಿರಲಿಲ್ಲ ಎಂದೂ ನೋವಿನಿಂದ ನುಡಿದಿದ್ದರು. ಇದೀಗ ಅದೇ ಮಾತನ್ನು ಅನುಶ್ರೀಯವರು ಬೇಸರದಿಂದ ನುಡಿದಿದ್ದಾರೆ. ಇವಳು ಬಿಟ್ಟರೆ ಬೇರೆ ಯಾರೂ ಆ್ಯಂಕರ್​ ಮಾಡುವವರು ಸಿಗುವುದಿಲ್ಲವಾ? ಇವಳೇ ಬೇಕಾ ಎಂದೆಲ್ಲಾ ಕೊಂಕು ಮಾತನಾಡುತ್ತಾರೆ ಎಂದು ಅನುಶ್ರೀ ಹೇಳಿದ್ದಾರೆ. anu.abhimani ಇನ್​ಸ್ಟಾಗ್ರಾಮ್​ ಪುಟದಲ್ಲಿ ಶೇರ್​ ಮಾಡಿಕೊಂಡಿರುವ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ರಿಷಬ್​ಗೆ ಒಮ್ಮೆಯೂ ಐ ಲವ್​ ಯೂ ಹೇಳ್ಲಿಲ್ಲ, ಮೊದಲು ಕಿಸ್​ ಕೊಟ್ಟಿದ್ದು.... ಆ್ಯಂಕರ್​ ಅನುಶ್ರೀ ಜೊತೆ ಪ್ರಗತಿ

ನೀವು ನಿಮ್ಮ ಕೆಲಸವನ್ನು ಗಮನವಿಟ್ಟು ಮಾಡಿದರೆ, ಯಾರಿಗಾದರೂ ಅವರು ಇಷ್ಟವಾಗುತ್ತಾರೆ, ಅವಕಾಶಗಳು ಹುಡುಕಿ ಬರುತ್ತವೆ ಎಂದಿರುವ ಅನುಶ್ರೀ, ನೋಡಿ ನನಗೆ ಟಾಕ್​ಬ್ಯಾಕ್​ ಕೊಡಬೇಡಿ, ನನಗೆ ಸ್ಕ್ರಿಪ್ಟ್​ ಕೊಡಬೇಡಿ... ಅಂದ್ರುನೂ ನಾನು 10 ಗಂಟೆ ಸ್ಟೇಜ್​ ಮೇಲೆ ಷೋ ಮಾಡುತ್ತೇನೆ. ಇದನ್ನು ನಾನು ಎಲ್ಲಿಯೂ ಹೇಳಿಕೊಂಡಿಲ್ಲ, ಎಲ್ಲೂ ಮಾತನಾಡಿಲ್ಲ. ಆ ಕಾರ್ಯಕ್ರಮಕ್ಕೆ ಯಾರು ಬರ್ತಾರೆ ಏನೂ ಹೇಳಬೇಡಿ... ಆದರೂ ಅಷ್ಟು ದೀರ್ಘ ಕಾಲ ನಾನು ಷೋ ಮಾಡಬಲ್ಲೆ. ಅದಕ್ಕಾಗಿಯೇ ಎಲ್ಲಾ ಚಾನೆಲ್​ನವರು ಅವಳು ಮಾಡ್ತಾಳೆ, ಏನಿಲ್ಲಾ ಅಂದ್ರೂ ಮಾಡ್ತಾಳೆ... ಅವಳನ್ನು ಹಾಕ್ಕೊಳ್ಳಿ ಅಂತಾರೆ ಎಂದು ಅನುಶ್ರೀ ತಮ್ಮನ್ನು ಮೂದಲಿಸುವವರಿಗೆ ತಿರುಗೇಟು ನೀಡಿದ್ದಾರೆ.

ಇದೇ ವೇಳೆ, ಮನೆಯಲ್ಲಿ ಕುಳಿತುಕೊಂಡು ಕಾರ್ಯಕ್ರಮ ನೋಡುವವರಿಗೆ ನಾನು ಏನು ಎನ್ನುವುದು ಗೊತ್ತಿದೆ, ಅವರು ಎಂಜಾಯ್​ ಮಾಡುತ್ತಾರೆ. ಆದರೆ ಈ ಮೊಬೈಲ್​ನಲ್ಲಿ ಮೆಸೇಜ್​ ಮಾಡುವವರಿಗೆ ಗೊತ್ತಿರಲಿಲ್ಲ. ಏಕೆಂದರೆ ಅವರಿಗೆ ಬೇರೆ ಕೆಲ್ಸ ಇರಲಿಲ್ಲ. ಒಮ್ಮೆ ಗೆದ್ದಿರೋರಿಗೆ ಬದುಕೇ ಇಲ್ಲ ರೀತಿ ಮಾತಾಡ್ತಾರೆ. ನಿಜ ಹೇಳಬೇಕು ಎಂದ್ರೆ ಗೆದ್ದಿರೋರಿಗೆ ಬದುಕೋದೇ ತುಂಬಾ  ಕಷ್ಟ ಎಂದು ನೋವಿನಿಂದ ನುಡಿದಿದ್ದಾರೆ ಆ್ಯಂಕರ್​ ಅನುಶ್ರೀ.  ಈ ಹಿಂದೆ ಕೂಡ ತಮ್ಮ ವಿರುದ್ಧ ಮಾತನಾಡುವವರ ಬಗ್ಗೆ ಅನುಶ್ರೀ ನೋವು ತೋಡಿಕೊಂಡಿದ್ದರು. ಖುಷಿಯಾಗಿದ್ದರೆ ಓವರ್​ ಆ್ಯಕ್ಟಿಂಗ್​ ಅಂತೀರಿ, ಸ್ವಲ್ಪ ಕಷ್ಟ ಹೇಳಿಕೊಂಡು ಕಣ್ಣೀರು ಹಾಕಿದರೆ ಅದಕ್ಕೂ ಓವರ್ ಆ್ಯಕ್ಟಿಂಗ್​ ಅಂತೀರಿ, ಏನನ್ನಾದರೂ ನೋಡಿ ಆಶ್ಚರ್ಯ ಪಟ್ಟರೆ ಅದಕ್ಕೂ ಹಾಗೆಯೇ ಹೇಳುತ್ತೀರಿ... ಸಾಧನೆಯನ್ನು ಹೊಗಳಿದರೆ ಬಕೆಟ್​ ಅಂತೀರಿ.  ಒಂದೊಂದು ಭಾವನೆಗೂ ಒಂದೊಂದು ಹೆಸರು ಕೊಡ್ತೀರಾ ಎಂದಿದ್ದರು.  ಇದೇ ವೇಳೆ ಇರಲಿ ಬಿಡಿ... ಹತ್ತು ಜನರು ಹೀಗೆಲ್ಲಾ ಹೇಳಿದ್ರೂ,  ಕೋಟ್ಯಂತರ ಮಂದಿ ಹರಸುವವರು ಇದ್ದಾರೆ. ಅವರ ಹೊಟ್ಟೆ ತಣ್ಣಗಾಗಿರಲಿ ಎಂದಿದ್ದಾರೆ. ಇದೇ ವೇಳೆ  ಯಾರನ್ನೂ ಹೇಟ್​ ಮಾಡಬೇಡಿ. ಯಾರಾದ್ರೂ ಇಷ್ಟ ಆಗಿಲ್ಲ ಅಂದ್ರೆ ಅವರ ಬಗ್ಗೆ ಏನೂ ಹೇಳಲೇಬೇಡಿ. ಹೊಗಳಲು ಆಗಿಲ್ಲ ಎಂದ್ರೆ  ಕೆಟ್ಟದ್ದನ್ನು ಹೇಳಬೇಡಿ ಎಂದಿದ್ದರು. 

ಐದಾರು ಮದ್ವೆ ಬೇಕಾದ್ರೂ ಆಗ್ಬೋದೆಂದು ತಮಾಷೆ ಮಾಡಿದ್ದ ಉಪೇಂದ್ರ UI ಚಿತ್ರದ ಬಗ್ಗೆ ಅನುಶ್ರೀ ಕಿವಿಯಲ್ಲಿ ಹೇಳಿದ್ದೇನು?

Latest Videos
Follow Us:
Download App:
  • android
  • ios