ವೈರಲ್‌ಚೆಕ್ : ದೇವಸ್ಥಾನಗಳಿಗೆ ಮಾತ್ರ ತೆರಿಗೆ?
ಭಾರತದಲ್ಲಿ ದೇವಸ್ಥಾನಗಳಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತಿದೆ ಎಂದು ಯುಟ್ಯುಬರ್ ಎಲ್ವಿಸ್ ಯಾದವ್ ಅವರು ಸೆ.26ರಂದು ಟ್ವೀಟ್ ಮಾಡಿದ್ದರು. ಇವರ ಟ್ವೀಟ್ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.
ನವದೆಹಲಿ (ಅ. 08): ಭಾರತದಲ್ಲಿ ದೇವಸ್ಥಾನಗಳಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತಿದೆ ಎಂದು ಯುಟ್ಯುಬರ್ ಎಲ್ವಿಸ್ ಯಾದವ್ ಅವರು ಸೆ.26ರಂದು ಟ್ವೀಟ್ ಮಾಡಿದ್ದರು. ಇವರ ಟ್ವೀಟ್ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಮಸೀದಿ, ಚಚ್‌ರ್‍ಗಳಿಗೆ ಇಲ್ಲದ ತೆರಿಗೆ ದೇವಸ್ಥಾನಗಳಿಗೆ ಏಕೆ? ಜಾತ್ಯತೀತ ದೇಶ ಎನಿಸಿಕೊಂಡಿರುವ ಭಾರತದಲ್ಲಿ ಎಲ್ಲರೂ ಧಾರ್ಮಿಕ ಸ್ವಾತಂತ್ರ್ಯ ಅನುಭವಿಸುತ್ತಿರುವಾಗ ದೇಗುಲಗಳಿಗೆ ಮಾತ್ರ ತೆರಿಗೆ ಏಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಏಕೆಂದರೆ 2017ರಲ್ಲಿಯೇ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಈ ವಿಚಾರ ಪ್ರಸ್ತಾಪಿಸಿದ್ದರು. ಜಿಎಸ್‌ಟಿಯಿಂದ ಚರ್ಚ್‌ಗಳಿಗೆ ಏಕೆ ವಿನಾಯ್ತಿ ಎಂದು ಪ್ರಶ್ನಿಸಿದ್ದರು. ಆಗ ಕೇಂದ್ರ ಸರ್ಕಾರ ಇದು ಸುಳ್ಳು ಮಾಹಿತಿ ಎಂದು ಸ್ಪಷ್ಟನೆ ನೀಡಿತ್ತು.
ದೇವಸ್ಥಾನಗಳಿಗೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತಿದೆ ಎಂಬುದು ತಪ್ಪು ಮಾಹಿತಿ. ಧರ್ಮದ ಆಧಾರದಲ್ಲಿ ತಾರತಮ್ಯ ಇಲ್ಲ ಎಂದು ತಿಳಿಸಿತ್ತು. ಹಾಗಾಗಿ ವೈರಲ್ ಸುದ್ದಿ ಸುಳ್ಳು.
- ವೈರಲ್ ಚೆಕ್