Fact Check: ಮಹಾರಾಷ್ಟ್ರದ ಅಂಬೋಲಿ ಜಲಪಾತ ಹೆಸರಲ್ಲಿ ಗುಜರಾತ್ ಜಲಪಾತದ ವಿಡಿಯೋ ವೈರಲ್
Fact Check: ಸಾಮಾಜಿಕ ಜಾಲತಾಣದಲ್ಲಿ ಜಲಪಾತವೊಂದರ ವಿಡಿಯೋ ವೈರಲ್ ಆಗಿದ್ದು, ಬಳಕೆದಾರರು ಇದನ್ನು ಮಹಾರಾಷ್ಟ್ರದ ಅಂಬೋಲಿ ಜಲಪಾತ ಎಂದು ಹೇಳಿಕೊಳ್ಳುತ್ತಿದ್ದಾರೆ
ನವದೆಹಲಿ (ಜು.20): ದೇಶಾದ್ಯಂತ ಮಳೆ ಆರ್ಭಟ ಮುಂದುವರೆದಿದೆ. ವರುಣನ ಅಬ್ಬರಿಂದ ಹಲವು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಮಳೆಗ ಸಂಬಂಧಿಸಿದ ಹಲವು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಜಲಪಾತವೊಂದರ ವಿಡಿಯೋ ವೈರಲ್ ಆಗಿದೆ. ವೀಡಿಯೊವನ್ನು ಹಂಚಿಕೊಳ್ಳುವಾಗ, ಬಳಕೆದಾರರು ಮಹಾರಾಷ್ಟ್ರದ ಅಂಬೋಲಿ ಜಲಪಾತ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ವೀಡಿಯೋ ಮಹಾರಾಷ್ಟ್ರದ ಅಂಬೋಲಿ ಜಲಪಾತದ್ದಲ್ಲ, ಬದಲಾಗಿ ಗುಜರಾತ್‌ನದ್ದು ಎಂದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದು ಬಂದಿದೆ.
Claim: ಸಾಮಾಜಿಕ ಜಾಲತಾಣದಲ್ಲಿ ಈ ವೈರಲ್ ಚಿತ್ರವನ್ನು ಪೋಸ್ಟ್ ಮಾಡಿ, 'ಡೆಡ್ಲಿ ಅಂಬೋಲಿ ಘಾಟ್ & ಫಾಲ್ಸ್' ಎಂದು ಬರೆಯಲಾಗಿದೆ. ಇದೇ ವೀಡಿಯೋ ಕೊಲ್ಹಾಪುರದ್ದು ಎಂಬ ಹೇಳಿಕೆಯೊಂದಿಗೆ ಕೂಡ ವೈರಲ್ ಆಗಿದೆ.
Fact Check: ಇನ್‌ವಿಡ್ (InVid) ಟೂಲ್‌ನ ಸಹಾಯದಿಂದ ವೈರಲ್ ವೀಡಿಯೊಗಳ ಕೆಲವು ಕೀಫ್ರೇಮ್‌ಗಳನ್ನು ಪಡೆದು ಮತ್ತು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಬಳಸಿದಾಗ ಪರೇಶ್ ದೇಶಮುಖ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ (Youtube) ಇದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಶೀರ್ಷಿಕೆಯ ಪ್ರಕಾರ, ವೀಡಿಯೊ ಗುಜರಾತ್‌ನ ದಂಗ್ ಜಿಲ್ಲೆಯ ಶಿವ ಘಾಟ್‌ನದ್ದಾಗಿದೆ.
ಇದೇ ವೀಡಿಯೊವನ್ನು 14ನೇ ಜುಲೈ 2022 ರಂದು ಮಹಾರಾಷ್ಟ್ರದ ಇಟಿವಿ ಭಾರತ್‌ನ (ETV Bharath) ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೊವನ್ನು ಗುಜರಾತ್‌ನ ದಾಂಗ್ ಜಿಲ್ಲೆ ಎಂದು ವಿವರಿಸಲಾಗಿದೆ.
ಕೀವರ್ಡ್‌ಗಳೊಂದಿಗೆ ಹುಡುಕುತ್ತಿರುವಾಗ ಇಟಿವಿ ಭಾರತ್ ಮಹಾರಾಷ್ಟ್ರ ವೆಬ್‌ಸೈಟ್‌ನಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಇದನ್ನು 13 ಜುಲೈ 2022 ರಂದು ಪ್ರಕಟಿಸಲಾಗಿದೆ. ಸುದ್ದಿಯ ಪ್ರಕಾರ, 'ಗುಜರಾತ್‌ನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಗುಜರಾತ್‌ನ ಏಳು ಜಿಲ್ಲೆಗಳು ಕೂಡ ಪ್ರವಾಹದ ಹಿಡಿತಕ್ಕೆ ಸಿಲುಕಿವೆ. ಖಾಪ್ರಿ, ಅಂಬಿಕಾ, ಪೂರ್ಣಾ ಮತ್ತು ಗಿರಾ ಮತ್ತು ಲೋಕಮಾತಾ ಜಲಪಾತಗಳು ಈಗ ದಾಂಗ್ ಜಿಲ್ಲೆಯಲ್ಲಿ ಧಾರಾಕಾರವಾಗಿ ಹರಿಯುತ್ತಿವೆ. 45 ಹಳ್ಳಿಗಳು ಈ ನೀರಿನಿಂದ ಪ್ರಭಾವಿತವಾಗಿವೆ (ಡಾಂಗ್ ಜಿಲ್ಲೆಯ ಜಲಪಾತಗಳು).
ಪತ್ರಕರ್ತರೊಬ್ಬರು ಕೂಡ ಟ್ವಿಟ್ಟರ್‌ನಲ್ಲಿ ಗ್ರೋಮ್ ಗುಜರಾತ್ ಎಂದು ಹೇಳುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಯೂಟ್ಯೂಬ್‌ನಲ್ಲಿ ಶಿವಘಾಟ್‌ನ ಕುರಿತು ಹುಡುಕಿದಾಗ ಅನೇಕ ರೀತಿಯ ವೀಡಿಯೊಗಳು (Video) ಕಂಡುಬಂದವು.
Conclusion: ಈ ವಿಡಿಯೋ ಮಹಾರಾಷ್ಟ್ರದ ಅಂಬೋಲಿ ಜಲಪಾತದಲ್ಲ, ಗುಜರಾತ್‌ನದ್ದು ಎಂದು ಫ್ಯಾಕ್ಟ್ ಚೆಕ್ ತನಿಖೆಯಲ್ಲಿ ಕಂಡು ಬಂದಿದೆ. ಗುಜರಾತಿನ ಈ ವೀಡಿಯೋ ತಪ್ಪುದಾರಿಗೆಳೆಯುವ ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ.