ಮುಂಬೈ(ಮಾ.30): ಸುಳ್ಳು ಸುದ್ದಿ ಹಾಗೂ ಸಂದೇಶಗಳನ್ನು ತೇಲಿ ಬಿಡುವವರಿಗೆ ರಿಲಯನ್ಸ್ ಜಿಯೋ ಖಡಕ್ ಎಚ್ಚರಿಕೆ ನೀಡಿದೆ. ಸುಳ್ಳು ಸುದ್ದಿಗಳಿಗೆ ಮರುಳಾಗಬೇಡಿ ಎಂದು ಸ್ಪಷ್ಟ ಸಂದೇಶ ರವಾನಿಸಿದೆ. ಕಳೆದ ಕೆಲ ದಿನಗಳಿಂದ ರಿಲಯನ್ಸ್ ಜಿಯೋ 25 ಜಿಬಿ ಡಾಟಾ ಉಚಿತ ಡಾಟಾ ನೀಡುತ್ತಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದೀಗ ಜಿಯೋ ಟ್ವಿಟರ್ ಖಾತೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದೆ

ಆಫರ್ ಕುರಿತು ಜಿಯೋ ಯಾವುದೇ ರೀತಿ ಕರೆ ಹಾಗೂ ಸಂದೇಶ ರವಾನಿಸುವುದಿಲ್ಲ. ಜಿಯೋ ಕುರಿತು ಯಾವುದೇ ಆಫರ್‌‍ಗಳ ವಿವರ ಆ್ಯಪ್ ಮೂಲಕ ಅಧೀಕೃತ ವೆಸ್‌ಸೈಟ್ ಮೂಲಕ ಪ್ರಕಟಿಸುತ್ತದೆ ಎಂದು ಸ್ಪಷ್ಟಪಡಿಸಿದೆ. 

ಜಿಯೋ ಹಾಗೂ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಜೊತೆಯಾಗಿ 25 ಲಕ್ಷ ಲಾಟರಿ ಪ್ರಶಸ್ತಿ ನೀಡಲಾಗುತ್ತಿದೆ ಅನ್ನೋ ಸುಳ್ಳು ಸುದ್ದಿಗೂ ಸ್ಪಷ್ಟನೆ ನೀಡಿದೆ. ಹಲವು ಜಿಯೋ ಗ್ರಾಹಕರಿಗೆ ನೀವು 25 ಲಕ್ಷ ರೂಪಾಯಿ ಗೆದ್ದಿದ್ದೀರಿ ಎಂಬ ಸಂದೇಶಗಳು ಬರುತ್ತಿದೆ. ಹೀಗಾಗಿ ಈ ರೀತಿಯ ಸುಳ್ಳು ಸಂದೇಶಗಳಿಗೆ ಕಿವಿಗೊಡಬೇಡಿ ಎಂದು ರಿಲಯನ್ಸ್ ಜಿಯೋ ಹೇಳಿದೆ.