Asianet Suvarna News Asianet Suvarna News
breaking news image

Fact Check: ಪ್ರಧಾನಿ ಮೋದಿ ಕೈ ತೊಳೆಯುತ್ತಿರುವ ಫೋಟೋ ಶೌಚಾಲಯದ್ದಲ್ಲ, ಗುರುದ್ವಾರ ಪ್ರವೇಶದ್ವಾರದ್ದು

PM Modi Washing Hands inside toilet Viral photo Fact Check: ಪ್ರಧಾನಿ ಮೋದಿ ವಾಶ್‌ಬೇಸಿನ್‌ನಲ್ಲಿ ಕೈತೊಳೆಯುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

PM Narendra Modi washing his hands at entrance of Gurudwara not inside a toilet mnj
Author
First Published Oct 21, 2022, 2:47 PM IST

ನವದೆಹಲಿ (ಅ. 21): ಪ್ರಧಾನಿ ಮೋದಿ (PM Narendra Modi) ವಾಶ್‌ಬೇಸಿನ್‌ನಲ್ಲಿ ಕೈತೊಳೆಯುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್‌ ಆಗಿದೆ. ಈ ಫೋಟೋ ಪ್ರಧಾನಿ ಮೋದಿ ಶೌಚಾಲಯದಲ್ಲಿ ಕೈತೊಳೆಯುವಾಗ ತೆಗೆದ ಫೋಟೋ ಎಂದು ವೈರಲ್‌ ಪೋಸ್ಟಿನಲ್ಲಿ ಹೇಳಲಾಗಿದೆ. ಆದರೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಫ್ಯಾಕ್ಟ್‌ ಚೆಕ್‌ (Fact Check) ನಡೆಸಿದಾಗ ಈ ಮಾಹಿತಿ ತಪ್ಪುದಾರಿಗೆಳಯುತ್ತಿರುವುದು ತಿಳಿದುಬಂದಿದೆ.  ದೆಹಲಿಯ (Delhi) ಗುರುದ್ವಾರವೊಂದರ ಪ್ರವೇಶದ್ವಾರದಲ್ಲಿ ಪ್ರಧಾನಿ ಮೋದಿ ಕೈ ತೊಳೆಯುತ್ತಿದ್ದಾಗ ಈ ಚಿತ್ರ ಕ್ಲಿಕ್ಕಿಸಲಾಗಿದೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದೆ. 

Claim: ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಹಂಚಿಕೊಂಡಿರುವ ಬಳಕೆದಾರರು ಪ್ರಧಾನಿ ಮೋದಿ ಶೌಚಾಲಯಕ್ಕೂ ಕ್ಯಾಮೆರಾ ಕೊಂಡೊಯ್ಯುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ವಿವಿಧ ಕ್ಯಾಪ್ಶನ್‌ಗಳೊಂದಿಗೆ ಅನೇಕ ಬಳಕೆದಾರರು ಈ ಫೋಟೋ ಪೋಸ್ಟ್‌ ಮಾಡಿದ್ದಾರೆ.  

PM Narendra Modi washing his hands at entrance of Gurudwara not inside a toilet mnj

Fact Check: ಈ ವೈರಲ್‌ ಚಿತ್ರದ ಸತ್ಯಾಸತ್ಯತೆ ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ (Google Reverse Image Search) ನಡೆಸಿದಾಗ ಹಲವು ವರದಿಗಳು ಲಭ್ಯವಾಗಿವೆ.  20 ಡಿಸೆಂಬರ್ 2020 ರಂದು 'ದಿ ಫ್ರೀ ಪ್ರೆಸ್ ಜರ್ನಲ್' (The Free Press Journal) ಪ್ರಕಟಿಸಿದ ಲೇಖನದಲ್ಲಿ ವೈರಲ್‌ ಆಗಿರುವ ಪ್ರಧಾನಿ ಮೋದಿ ಚಿತ್ರದ ಕ್ರಾಪ್ ಮಾಡದ ಆವೃತ್ತಿಯನ್ನು ಕಂಡುಕೊಂಡಿದ್ದೇವೆ. 

ಈ ಲೇಖನದ ಪ್ರಕಾರ, ವೈರಲ್ ಚಿತ್ರ ಪ್ರಧಾನಿ ಮೋದಿ ಗುರುದ್ವಾರಕ್ಕೆ ಭೇಟಿ ನೀಡಿದಾಗ ಕ್ಲಿಕ್ಕಿಸಿದ ಫೋಟೋ ಎಂದು ತಿಳಿದುಬಂದಿದೆ. ಗುರು ತೇಗ್ ಬಹದ್ದೂರ್ ಅವರ 400 ನೇ ಪ್ರಕಾಶ್ ಪರ್ವ್ ಸಂದರ್ಭದಲ್ಲಿ ದೆಹಲಿಯ ರಾಕಬ್ ಗಂಜ್ ಸಾಹಿಬ್ ಗುರುದ್ವಾರಕ್ಕೆ ಪ್ರಧಾನಿ ಭೇಟಿ ನೀಡಿದ ಸಂದರ್ಭದಲ್ಲಿ ಈ ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ. ಈ ಚಿತ್ರದಲ್ಲಿ ಮೋದಿ  ಕೈ ತೊಳೆಯುತ್ತಿರುವ ವಾಶ್‌ ಬೇಸಿನ್‌ ಪಕ್ಕದಲ್ಲಿ ಮೆಟ್ಟಿಲುಗಳನ್ನೂ ನೋಡಬಹುದು.

PM Narendra Modi washing his hands at entrance of Gurudwara not inside a toilet mnj

ಇನ್ನು ಈ ಬಗ್ಗೆ ಇತ್ತಷ್ಟು ತನಿಖೆಗಾಗಿ ಈ ಗುರುದ್ವಾರದ ದೃಶ್ಯಗಳನ್ನು ಗೂಗಲ್‌ ಇಮೇಜ್‌ ಸರ್ಚ್‌ (Image) ಮಾಡಿದಾಗ ಪ್ರವೇಶ ದ್ವಾರದ ಮೆಟ್ಟಿಲುಗಳ ಪಕ್ಕದಲ್ಲಿ ವಾಶ್ ಏರಿಯಾ ಇರುವ ಚಿತ್ರಗಳನ್ನು ನಾವು ಕಂಡುಕೊಂಡಿದ್ದೇವೆ. ಈ ಗುರುದ್ವಾರವನ್ನು ಪ್ರವೇಶಿಸುವ ಮೊದಲು ಭಕ್ತರು ತಮ್ಮ ಕೈಕಾಲುಗಳನ್ನು ತೊಳೆಯುವ ಸ್ಥಳವನ್ನು ಇಲ್ಲಿ ಕಾಣಬಹುದು. ಅಲ್ಲದೆ ಯಾವುದೇ ಗುರುದ್ವಾರವನ್ನು ಪ್ರವೇಶಿಸುವ ಮೊದಲು ಕೈ- ಕಾಳುಗಳನ್ನು ತೊಳೆಯುವುದು ಸಾಮಾನ್ಯ ಅಭ್ಯಾಸವಾಗಿದೆ.  ಹೀಗಾಗಿ ಪ್ರಧಾನಿ ಮೋದಿ ಗುರುದ್ವಾರದ ಪ್ರವೇಶದ್ವಾರದಲ್ಲಿ ಕೈ ತೊಳೆಯುತ್ತಿರುವ ಚಿತ್ರವನ್ನು ಶೌಚಾಲಯದಲ್ಲಿ ಕೈ ತೊಳೆಯುತ್ತಿರುಚ ಚಿತ್ರ ಎಂದು ವೈರಲ್‌ ಮಾಡಲಾಗಿದೆ.  

PM Narendra Modi washing his hands at entrance of Gurudwara not inside a toilet mnj

Conclusion: 2020ರ ಡಿಸೆಂಬರ್‌ನಲ್ಲಿ ದೆಹಲಿಯ ಗುರುದ್ವಾರ ರಕಬ್ ಗಂಜ್ ಸಾಹಿಬ್‌ನ ಪ್ರವೇಶದ್ವಾರದಲ್ಲಿ ಪ್ರಧಾನಿ ಮೋದಿ ಕೈ ತೊಳೆಯುತ್ತಿದ್ದಾಗ ಈ ಚಿತ್ರವನ್ನು ತೆಗೆಯಲಾಗಿದೆ.  ಇದು ಗುರುದ್ವಾರಕ್ಕೆ ಪ್ರವೇಶಿಸುವ ಮೊದಲು ಭಕ್ತರು ಕೈಕಾಲು ತೊಳೆಯುವ ಸ್ಥಳವಾಗಿದೆ. ಆದ್ದರಿಂದ ವೈರಲ್‌ ಪೋಸ್ಟ್‌ನಲ್ಲಿ ನೀಡಲಾಗಿರುವ ಮಾಹಿತಿ ತಪ್ಪುದಾರಿಗೆಳೆಯುತ್ತಿದೆ.  

Latest Videos
Follow Us:
Download App:
  • android
  • ios